Health Tips: ಮಹಿಳೆಯರೇ ಈ ಲಕ್ಷಣ ಕಂಡು ಬಂದ್ರೆ ನಿಮ್ಮ Menopause ಹತ್ತಿರವಾಗುತ್ತಿದೆ ಎಂದರ್ಥ

Menopause: ಋತುಬಂಧವು ಮಹಿಳೆಯ ಋತುಚಕ್ರದ ಅಂತ್ಯವನ್ನು ಗುರುತಿಸುವ ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. 43 ವರ್ಷದಿಂದ 53 ವರ್ಷದ ಈ ಅವಧಿಯಲ್ಲಿ ಯಾವ ಸಂದರ್ಭದಲ್ಲಾದರೂ ಮುಟ್ಟು ನಿಲ್ಲಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಹೆಣ್ತನಕ್ಕೆ ಕಳಶಪ್ರಾಯವೆಂದರೆ ಋತುಚಕ್ರ (Menstrual Cycle) . ಪ್ರತಿಯೊಂದು ಹೆಣ್ಣು (Women)  ಋತುಚಕ್ರ ಪ್ರಾರಂಭವಾಗಿ ಅದು ಮುಕ್ತಾಯವಾಗುವವರೆಗೂ ಪ್ರತಿ ತಿಂಗಳ ಈ ವೇಧನೆಯನ್ನು ಅನುಭವಿಸುವುದು ಸಾಮಾನ್ಯ. ಆದರೆ, 50 ವರ್ಷ ಆಸುಪಾಸಿನಲ್ಲಿ ಮುಟ್ಟು ನಿಲ್ಲುವ (Menopause) ಈ ಲಕ್ಷಣಗಳ ಬಗ್ಗೆ ಮಹಿಳೆಯರು ಅರಿವು ಹೊಂದಿರಬೇಕು. ಮುಟ್ಟು ನಿಲ್ಲುವ ಈ ವೇಳೆ ದೇಹದಲ್ಲಾಗುವ ಲಕ್ಷಣಗಳ ಬಗ್ಗೆ ಫೋರ್ಟಿಸ್‌ ಆಸ್ಪತ್ರೆ ಸ್ತ್ರೀರೋಗ ತಜ್ಞೆಯಾದ ಡಾ. ಮನೀಶಾ ಸಿಂಗ್‌ ಅವರು ವಿವರಿಸಿದ್ದಾರೆ.

  ಋತುಬಂಧವು ಮಹಿಳೆಯ ಋತುಚಕ್ರದ ಅಂತ್ಯವನ್ನು ಗುರುತಿಸುವ ನೈಸರ್ಗಿಕ ಜೈವಿಕ ಪ್ರಕ್ರಿಯೆಯಾಗಿದೆ. 43 ವರ್ಷದಿಂದ 53 ವರ್ಷದ ಈ ಅವಧಿಯಲ್ಲಿ ಯಾವ ಸಂದರ್ಭದಲ್ಲಾದರೂ ಮುಟ್ಟು ನಿಲ್ಲಬಹುದು. ಇದರರ್ಥ ಅಂಡಾಶಯದಲ್ಲಿ ಬಿಡುಗಡೆಯಾಗುವ ಎಗ್ (ಮೊಟ್ಟೆ) ಉತ್ಪತ್ತಿಯಾಗುವುದನ್ನು ನಿಲ್ಲಿಸುವ ಮೂಲಕ ಗರ್ಭಧಾರಣೆ ಹೊಂದುವುದನ್ನು ಕೊನೆಗೊಳಿಸುವ ಪ್ರಕ್ರಿಯೆಯಾಗಿದೆ.

  ಅನಿಯಮಿತ ಮುಟ್ಟಾಗುವುದು:
  ಮುಟ್ಟು ನಿಲ್ಲುವ ವೇಳೆ ಆಗುವ ಬದಲಾವಣೆಗಳಲ್ಲಿ ಪ್ರಮುಖವಾಗಿ ಅನಿಯಮಿತ ಪೀರಿಯಡ್‌ ಆಗುವುದು. ಹೌದು, ಪ್ರತಿ ತಿಂಗಳು 28 ಅಥವಾ 30 ದಿನಗಳ ಈ ಅವಧಿಯಲ್ಲಿ ಆಗುತ್ತಿದ್ದ ಮುಟ್ಟು 15 ದಿನಗಳಿಗೊಮ್ಮೆ ಅಥವಾ ಒಂದೂವರೆ ಎರಡು ತಿಂಗಳಿಗೊಮ್ಮೆ ಆಗಲು ಪ್ರಾರಂಭವಾಗುತ್ತದೆ. ದೇಹದಲ್ಲಾಗುವ ಹಾರ್ಮೋನ್ (Hormone) ಬದಲಾವಣೆಗಳಿಂದ ಪೀರಿಯಡ್‌ ಏರುಪೇರಾಗುವುದು ಸಹಜ. ಜೊತೆಗೆ ಕೆಲವರಿಗೆ ಹೆಚ್ಚು ರಕ್ತಸ್ರಾವವಾಗಬಹುದು ಅಥವಾ ರಕ್ತಸ್ರಾವದ ಕೊರತೆಯಾಗಬಹುದು. ಇದಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಈ ಲಕ್ಷಣ ನಿಯಂತ್ರಣಕ್ಕೆ ಸಿಗದೇ ಹೋದಾಗ ಮಾತ್ರ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯಬಹುದು.

  ಲೈಂಗಿಕತೆ ಮೇಲೆ ಆಸಕ್ತಿ ಕುಸಿತ
  ಮುಟ್ಟಿನ ಏರುಪೇರಿನಿಂದ ನಿಮಗೆ ಲೈಂಗಿಕತೆಯ ಮೇಲೂ ಆಸಕ್ತಿ ಕೊರತೆ ಮೂಡಬಹುದು. ಸಂಗಾತಿಯೊಂದಿಗೆ ಅನ್ಯೂನತೆಯಿಂದರಲೂ ಈ ಲಕ್ಷಣ ಅನುವು ಮಾಡಿಕೊಡದೇ ಮಾನಸಿಕ ನೆಮ್ಮದಿ ಕಸಿಯಬಹುದು.
  ಇದಕ್ಕೆ ಕಾರಣ ಈಸ್ಟ್ರೊಜೆನ್ ಅಥವಾ ಟೆಸ್ಟೋಸ್ಟೆರಾನ್ ಮಟ್ಟಗಳಲ್ಲಿನ ಕುಸಿತ. ಈ ದೇಹ ಹಾಗೂ ಮನಸ್ಸಿನಲ್ಲಾಗುತ್ತಿರುವ ಬದಲಾವಣೆ ಕುರಿತು ನಿಮ್ಮ ಸಂಗಾತಿಯೊಂದಿಗೆ ಹಂಚಿಕೊಳ್ಳಿ. ಇದರಿಂದ ಇಬ್ಬರಲ್ಲೂ ಬಾಂಧವ್ಯ ಗಟ್ಟಿಯಾಗಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಾಂಸಾರಿಕ ತೊಡಕುಗಳಿಗೆ ಕಾರಣವಾಗಬಹುದು.

  ತೂಕ ಹೆಚ್ಚಳ
  ನೀವು ಸಮಪ್ರಮಾಣದಲ್ಲಿಯೇ ಆಹಾರ ಸೇವಿಸುತ್ತಿದ್ದರೂ ಮುಟ್ಟು ನಿಲ್ಲುವ ವೇಳೆ ಚಯಾಪಚಯ ಕ್ರಿಯೆ ನಿಧಾನಗೊಂಡು ನಿಮ್ಮ ತೂಕ ದಿಢೀರ್‌ ಏರಿಕೆ ಕಾಣಬಹುದು. ಈ ವೇಳೆ ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗುತ್ತವೆ, ಹೃದ್ರೋಗದ ಅಪಾಯಗಳನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಈ ಸಂದಭದಲ್ಲಿ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವ ಜೊತೆಗೆ ಹೆಚ್ಚು ಕ್ಯಾಲೋರಿಯುಕ್ತ ಆಹಾರ ಸೇವನೆಯ ಮೇಲೆ ನಿಯಂತ್ರಣ ಮಾಡಿಕೊಳ್ಳಿ. ಇದು ನಿಮ್ಮ ತೂಕ ಹೆಚ್ಚಳವನ್ನು ನಿಯಂತ್ರಣದಲ್ಲಿ ಇಡಲಿದೆ.

  ಒಣಚರ್ಮ:
  ಮುಟ್ಟು ನಿಲ್ಲುವ ವೇಳೆ ದೇಹ ಸಂಪೂರ್ಣ ಶುಷ್ಕವಾಗಬಹುದು. ಜೊತೆಗೆ ನಿಮ್ಮ ಖಾಸಗಿ ಅಂಗವು ಸಹ ಶುಷ್ಕವಾಗಿರಲಿದೆ. ಈ ಸಂದಭದಲ್ಲಿ ದೇಹಕ್ಕೆ ಹರಳೆಣ್ಣೆ ಸ್ನಾನ ಒಳ್ಳೆಯದು. ದೇಹ ಒಣಗದಂತೆ ನೋಡಿಕೊಳ್ಳುವುದರಿಂದ ಒಣಚರ್ಮದಿಂದ ಮುಕ್ತಿ ಪಡೆಯಬಹುದು.

  ಇದನ್ನೂ ಓದಿ: ಈ ಸಮಸ್ಯೆಗಳು ಬಾಯಿಯ ಕ್ಯಾನ್ಸರ್​ ಲಕ್ಷಣವಂತೆ - ತಕ್ಷಣ ವೈದ್ಯರನ್ನು ಭೇಟಿ ಮಾಡಿ

  ರಾತ್ರಿ ಬೆವರುವಿಕೆ
  ಈ ಸಂದರ್ಭದಲ್ಲಿ ರಾತ್ರಿ ಬೆವರುವುದು ಹೆಚ್ಚಳವಾಗಬಹುದು. ದೇಹದಲ್ಲಿನ ಶಾಖ ವಿಪರೀತವಾಗಬಹುದು. ರಾತ್ರಿ ಅತಿಯಾದ ಆಯಾಸ ಹಾಗೂ ಬೆವರುವಿಕೆ ಇದ್ದರೆ ನೀರು ಕುಡಿಯವ ಹವ್ಯಾಸ ಬೆಳೆಸಿಕೊಳ್ಳಿ. ಈ ಲಕ್ಷಣಗಳು 12 ರಿಂದ 18 ತಿಂಗಳವರೆಗೂ ನಿಮ್ಮನ್ನು ಕಾಡಬಹುದು.

  ಮರೆವು ಹೆಚ್ಚಾಗಬಹುದು
  ಋತುಬಂಧ ಸಮೀಪಿಸುತ್ತಿರುವ ಮಹಿಳೆಯರು ಸಾಮಾನ್ಯವಾಗಿ ಮರೆತುಹೋಗುವ ಮತ್ತು ಏಕಾಗ್ರತೆ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು. ಯಾವುದೇ ಒಂದು ಪದವನ್ನು ನೆನಪಿಸಿಕೊಳ್ಳಲು ಸಾಧ್ಯವಾಗದಿರುವುದು ಅಥವಾ ಇಟ್ಟ ವಸ್ತುವನ್ನು ಮರೆತುಬಿಡುವುದು, ಇದರಿಂದ ಮನೆಯವರು ಕಿರಿಕಿರಿಯಾಗುವ ಬದಲು ಅವರೊಂದಿಗೆ ಸೌಮ್ಯವಾಗಿ ನಡೆದುಕೊಳ್ಳಿ.

  ಇದನ್ನೂ ಓದಿ: ನಿಮ್ಗೆ ಇಡ್ಲಿ ಇಷ್ಟನಾ? ಬೆಂಗಳೂರಿನ ಈ ಸ್ಥಳಗಳಲ್ಲಿ ಇಡ್ಲಿ ಸಖತ್ ಫೇಮಸ್!

  ಮಾನಸಿಕ ಒತ್ತಡ:
  ಮುಟ್ಟು ನಿಲ್ಲುವ ಸಂದರ್ಭದಲ್ಲಿ ದೇಹದಲ್ಲಾಗುವ ಬದಲಾವಣೆಯಿಂದ ಮಹಿಳೆಯರು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅನಿಯಮಿತ ಮುಟ್ಟಾಗುವುದು, ರಕ್ತಸ್ರಾವ ಹೆಚ್ಚಳ, ಹೊಟ್ಟೆ ನೋವು, ತೂಕ ಹೆಚ್ಚಳ ಹೀಗೆ ಎಲ್ಲಾ ಸಮಸ್ಯೆಗಳನ್ನು ತಿಂಗಳಾನುಗಟ್ಟಲೆ ಅನುಭವಿಸುವ ವೇಳೆ ಮಹಿಳೆಯರು ಮಾನಸಿಕ ಹತೋಟಿ ಕಳೆದುಕೊಳ್ಳುತ್ತಾರೆ. ಸುಮ್ಮನೆ ಸಿಟ್ಟಾಗುವುದು, ಮಂಕಾಗಿರುವುದು, ಯಾವುದರಲ್ಲೂ ಆಸಕ್ತಿ ತೋರದೇ ಇರುವುದು, ಮೂಡ್‌ ಬದಲಾಗುವ ಸಮಸ್ಯೆ ಎದುರಿಸುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮನೆಯವರು ಇವರ ಮೇಲೆ ಹೆಚ್ಚು ಒತ್ತಡ ಹಾಕದೇ, ನೆಮ್ಮದಿಯಿಂದ ಇರಲು ಅನುವು ಮಾಡಿಕೊಡಿ.
  Published by:Sandhya M
  First published: