Sleep: ಈ 5 ಸಂಕೇತಗಳು ನಿಮಗೆ ಹೆಚ್ಚು ನಿದ್ರೆಯ ಅವಶ್ಯಕತೆಯನ್ನು ತಿಳಿಸುತ್ತವೆ

ನಿದ್ರಾಹೀನತೆ ಉಂಟಾಗಿರುವ ಮತ್ತು ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ 5 ಚಿಹ್ನೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಬದಲಾವಣೆಗಳನ್ನು ನೀವು ಪ್ರತಿದಿನ ಅನುಭವಿಸುತ್ತಿದ್ದರೆ ಇದಕ್ಕೆ ನಿದ್ರೆಯ ಕೊರತೆಯೇ ಕಾರಣ ಎಂದರ್ಥ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಿದ್ರೆ ಒಬ್ಬ ಮನುಷ್ಯನಿಗೆ ಆಹಾರಕ್ಕಿಂತ (Food) ಅವಶ್ಯವಾಗಿರುವಂತದ್ದು. ದೈಹಿಕವಾಗಿ ಬೇಕಿರುವ ಶಕ್ತಿಯನ್ನು ಆಹಾರವು ಪೂರೈಸಿದರೆ, ಮಾನಸಿಕವಾಗಿ ಬಲಗೊಳ್ಳಲು ನಿದ್ರೆಯು ಅತ್ಯಂತ ಸಹಕಾರಿ. ಆರೋಗ್ಯಕರ ಜೀವನ (healthy life) ನಡೆಸಲು ಏಳೆಂಟು ತಾಸು ನಿದ್ರೆ ಅತ್ಯಗತ್ಯ. ದಿನದ ಎಲ್ಲಾ ಕೆಲಸಗಳನ್ನು ಪೂರೈಸಿ ರಾತ್ರಿ ಉತ್ತಮವಾಗಿ ನಿದ್ರೆ ಮಾಡಿದರೆ ಮತ್ತೆ ಬೆಳಗಿನ ಜಾವ ಅದೇ ಉತ್ಸಾಹದಿಂದ ನಮ್ಮ ದಿನವನ್ನು ಆರಂಭಿಸಬಹುದು. ಕೆಲವರದ್ದು ದಿನ ರಾತ್ರಿ ಹತ್ತು, ಹನ್ನೊಂದು ಗಂಟೆಗೆ ನಿದ್ರೆಯ (Sleep) ದಿನಚರಿ ಇರುತ್ತದೆ. ಆದಾಗ್ಯೂ ಕೆಲವೊಮ್ಮೆ ಬೇಗ ನಿಮ್ಮ ಕಣ್ಣು ಎಳೆಯಬಹುದು. ಬೇಗ ನಿದ್ರೆಗೆ ಜಾರಲು ದಣಿವು ಒಂದು ಕಾರಣವಾಗುವುದರ ಜೊತೆ ಇನ್ನೂ ಕೆಲವು ಕಾರಣಗಳಿವೆ. ಬಹುತೇಕರಿಗೆ ನಿದ್ರಾ ಹೀನತೆ (Insomnia) ಒಂದು ದೊಡ್ಡ ಸಮಸ್ಯೆಯಾಗಿದೆ.

ಕೆಲವರಿಗೆ ದಿಂಬಿಗೆ ತಲೆ ಕೊಟ್ಟರೆ ಸಾಕು, ಗೊರಕೆ ಹೊಡೆಯಲು ಪ್ರಾರಂಭಿಸುತ್ತಾರೆ. ಇನ್ನೂ ಕೆಲವರು ಅದೆಷ್ಟೋ ಹೊತ್ತು ಹಾಸಿಗೆಯಲ್ಲಿಯೇ ಆ ಕಡೆಯಿಂದ ಈ ಕಡೆ ಅಂತಾ ಹೊರಳಾಡಿಯೇ ಕಾಲ ಕಳೆಯುತ್ತಾರೆ. ಈ ನಿದ್ರಾಹೀನತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಚಾರ. ನಿದ್ರಾಹೀನತೆ ಉಂಟಾಗಿರುವ ಮತ್ತು ನೀವು ಹೆಚ್ಚು ನಿದ್ರೆ ಮಾಡಬೇಕೆಂದು ಸೂಚಿಸುವ 5 ಚಿಹ್ನೆಗಳ ಬಗ್ಗೆ ಇಲ್ಲಿದೆ ಮಾಹಿತಿ. ಈ ಬದಲಾವಣೆಗಳನ್ನು ನೀವು ಪ್ರತಿದಿನ ಅನುಭವಿಸುತ್ತಿದ್ದರೆ ಇದಕ್ಕೆ ನಿದ್ರೆಯ ಕೊರತೆಯೇ ಕಾರಣ ಎಂದರ್ಥ.

1) ಏಕಾಗ್ರತೆಯ ಸಮಸ್ಯೆ
ನಿಮಗೆ ಒಂದು ವಿಷಯದ ಬಗ್ಗೆ ಗಮನ ಕೇಂದ್ರೀಕರಿಸಲು ಕಷ್ಟವಾಗುತ್ತದೆ ಮತ್ತು ಯಾವ ವಿಚಾರದ ಬಗ್ಗೆಯೂ ಹಗನ ಕೊಡಲು ಸಾಧ್ಯವಾಗಿಲ್ಲ ಎಂದಾದರೆ ಅದು ನಿದ್ರಾ ಹೀನತೆಯ ಕೊರತೆಯನ್ನು ಸೂಚಿಸುತ್ತದೆ.

ಇದನ್ನೂ ಓದಿ: Eye Problem: ಕಣ್ಣುಗಳಲ್ಲಿ ಉಂಟಾಗುವ ಈ ಸಮಸ್ಯೆಗಳು ಗಂಭೀರ ತೊಂದರೆಗೆ ಕಾರಣವಾಗುತ್ತವೆ

2) ನಿರ್ಜಲೀಕರಣ ದೇಹ
ನಿಮ್ಮ ದೇಹ ನಿರ್ಜಲೀಕರಣಗೊಂಡಿದೆ ಎಂದು ನಿಮಗೆ ಅನಿಸಿದರೆ ಅದು ಕೂಡ ನಿದ್ರಾಹೀನತೆಯ ಮತ್ತೊಂದು ಚಿಹ್ನೆ. ಕಡಿಮೆ ನಿದ್ರೆಯ ಅವಧಿಯು ಅಸಮರ್ಪಕ ಜಲಸಂಚಯನದ ಹೆಚ್ಚಿನ ಅಪಾಯದೊಂದಿಗೆ ಸಂಬಂಧಿಸಿದೆ ಎಂದು ಕೆಲವು ಅಧ್ಯಯನವು ಕಂಡುಹಿಡಿದಿದೆ. ಇದಕ್ಕೆ ಹಾರ್ಮೋನ್ ವಾಸೊಪ್ರೆಸ್ಸಿನ್ ಕಾರಣವಾಗಬಹುದು. ಹೀಗಾಗಿ ನಿರ್ಜಲೀಕರಣ ಕಾಡುತ್ತದೆ. ಮತ್ತು ಇದಕ್ಕೆ ಮೂಲ ಕಾರಣ ನಿದ್ರೆಯ ಕೊರತೆ.

3) ದಿನ ಕಳೆಯಲು ಕೆಫಿನ್ ಸೇವನೆ
ಕೆಲವರು ಈ ಟೀ, ಕಾಫಿಯನ್ನು ಯಾವಾಗ ನೀಡಿದರೂ ಬೇಡ ಅನ್ನೋದೆ ಇಲ್ಲ.ಕೆಲಸ ಜಾಸ್ತಿ ಆದರೆ ಟೀ, ಒತ್ತಡ ಉಂಟಾದರೆ ಟೀ, ದಿನ ಕಳೆಯಲು ಸಹ ಕೆಫೀನ್ ಅನ್ನು ಅವಲಂಬಿಸುತ್ತಾರೆ. ನಿಮ್ಮ ದಿನವನ್ನು ಪ್ರಾರಂಭಿಸಲು ಒಂದು ಕಪ್ ಕಾಫಿ ಉತ್ತಮವಾಗಿದೆ, ಆದರೆ ಎಚ್ಚರವಾಗಿರಲು ನೀವು ಇಡೀ ದಿನ ಕೆಫೀನ್ ಅನ್ನು ಕುಡಿಯಬೇಕಾಗಿಲ್ಲ. ಕೆಲವರು ಕೆಫೀನ್ ಅನ್ನು ಅವಲಂಬಿಸಿರುತ್ತೀರಿ ಮತ್ತು ಆ ಅಭ್ಯಾಸವನ್ನು ನಿಲ್ಲಿಸಲು ಸಾಧ್ಯವಿಲ್ಲ. ರಾತ್ರಿ ನಿದ್ರೆ ಸರಿಯಾಗದಿರುವುದರಿಂದ ಹಗಲು ನಿದ್ರೆ ಬರಬಹುದು. ಈ ನಿದ್ರೆಯನ್ನು ತಡೆಯಲು ಹೆಚ್ಚಿನವರು ಕೆಫಿನ್ ಗೆ ಅವಲಂಬಿತರಾಗಿರುತ್ತಾರೆ.

4) ಮದ್ಯ ಸೇವನೆ
ಬೆಳಿಗ್ಗೆಯಿಂದ ಕೆಲಸ ಮಾಡಿ ದಣಿವಾಗಿ ಬಂದು ಮಲಗಿದರೆ ಕಣ್ಣಿಗೆ ನಿದ್ರೆಯೇ ಬರುವುದಿಲ್ಲ. ಹೀಗಾಗಿ ಅದೆಷ್ಟೋ ಮಂದಿ ಆಯಾಸ ಕಮ್ಮಿಯಾಗಿಸಲು ಮತ್ತು ವಿಶ್ರಾಂತಿ ಪಡೆದುಕೊಳ್ಳಲು ಹೆಚ್ಚಾಗಿ ಮದ್ಯಪಾನದಂತಹ ಕೆಟ್ಟ ಚಟಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ನೀವು ಅತಿಯಾಗಿ ಮದ್ಯಪಾನಕ್ಕೆ ಅವಲಂಬಿತರಾಗಿದ್ದರೆ ಅದಕ್ಕೆ ನಿದ್ರಾಹೀನತೆ ಕೂಡ ಕಾರಣವಾಗಿರಬಹುದು.

ಇದನ್ನೂ ಓದಿ: Health Tips: ಮಳೆಗಾಲದ ರೋಗ-ರುಜಿನಗಳನ್ನು ತಪ್ಪಿಸಲು ಈ 7 ಆರೋಗ್ಯ ಸಲಹೆಗಳನ್ನು ಪಾಲಿಸಿ

5) ಬೇಗ ಸಿಟ್ಟು ಬರುವಿಕೆ
ಸಣ್ಣ ವಿಚಾರಕ್ಕೂ ಬೇಗ ಕೋಪಬರುವುದು, ಬೇರೆಯವರ ಮೇಲೆ ಎಗರಾಡುವುದು ಸೇರಿ ಮನಸ್ಥಿತಿಯು ಹತೋಟಿಯಲ್ಲಿ ಇರದೇ ಇರುವುದು ನಿದ್ರೆ ನಿಮಗೆ ಇನ್ನೂ ಬೇಕು ಎಂದು ಸೂಚಿಸುವ ಅಂಶ, ನಿದ್ರೆ ಕೊರತೆಯಾದಾಗ ಈ ರೀತಿಯ ಸ್ವಭಾವ ಸಹಜ. ಈ ಸಂದರ್ಭದಲ್ಲಿ ನಿಮ್ಮ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನೀವು ಸಾಕಷ್ಟು ನಿದ್ರೆ ಪಡೆಯದಿದ್ದಾಗ ನೀವು ಖಿನ್ನತೆ, ಆತಂಕ ಅಥವಾ ಹತಾಶೆಯನ್ನು ಅನುಭವಿಸುವ ಸಾಧ್ಯತೆಯಿದೆ.
Published by:Ashwini Prabhu
First published: