Iron Content: ನಿಮ್ಮಲ್ಲಿ ಈ ಲಕ್ಷಣಗಳು ಕಾಣಿಸಿದ್ರೆ, ದೇಹದಲ್ಲಿ ಕಬ್ಬಿಣದ ಮಟ್ಟ ಕಡಿಮೆ ಆಗಿರ್ಬೋದು ಎಚ್ಚರ

Iron Deficiency Symptoms; ನಿಮ್ಮ ಬಾಯಿ ಮತ್ತು ನಾಲಿಗೆ ಕಬ್ಬಿಣಾಂಶದ ಕೊರತೆ ಸೂಚಿಸಲು ಅನೇಕ ಮಾರ್ಗಗಳಿವೆ. ನೀವು ಉರಿಯೂತ, ಊದಿಕೊಂಡ ನಾಲಿಗೆ ಅಥವಾ ಬಾಯಿ ಹೊಂದಿದ್ದರೆ, ನಿಮ್ಮ ದೇಹದಲ್ಲಿ ಸಾಕಷ್ಟು ಕಬ್ಬಿಣಾಂಶದ ಕೊರತೆ ಇರುವ ಸಾಧ್ಯತೆಗಳಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ನಮ್ಮ ದೇಹವು ಆರೋಗ್ಯಕರವಾಗಿರ ಬೇಕೆಂದರೆ ಅನೇಕ ಪೋಷಕಾಂಶಗಳು ಮತ್ತು ಖನಿಜಗಳು ಪ್ರಮುಖ ಪಾತ್ರ ವಹಿಸುತ್ತವೆ. ಅದರಲ್ಲೂ ನಮ್ಮ ದೇಹದಲ್ಲಿರುವ ಕಬ್ಬಿಣಾಂಶವು(Iron Content) ತುಂಬಾನೇ ಮುಖ್ಯವಾಗಿರುತ್ತದೆ. ಇದು ಪ್ರಾಥಮಿಕವಾಗಿ ಶ್ವಾಸಕೋಶದಿಂದ ಅಂಗಾಂಶಗಳಿಗೆ ಆಮ್ಲಜನಕವನ್ನು(Oxygen) ವರ್ಗಾಯಿಸಲು ಸಹಾಯ ಮಾಡುತ್ತದೆ ಮತ್ತು ದೇಹದ ಸರಿಯಾದ ಬೆಳವಣಿಗೆ ಮತ್ತು ಕಾರ್ಯನಿರ್ವಹಣೆ ನೋಡಿಕೊಳ್ಳುತ್ತದೆ.ದೇಹದಲ್ಲಿ ಕಬ್ಬಿಣಾಂಶದ ಕೊರತೆಯು ರಕ್ತಹೀನತೆಗೆ ಕಾರಣವಾಗುತ್ತದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಇದು ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರ ಮೇಲೆ ಪರಿಣಾಮ ಬೀರುವ ಗಂಭೀರ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ. WHO ಅಂದಾಜಿನ ಪ್ರಕಾರ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 42 ಪ್ರತಿಶತದಷ್ಟು ಮಕ್ಕಳು ಮತ್ತು ವಿಶ್ವದಾದ್ಯಂತ 40 ಪ್ರತಿಶತದಷ್ಟು ಗರ್ಭಿಣಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

    ದೇಹದಲ್ಲಿ ಈ ಕಬ್ಬಿಣಾಂಶದ ಪ್ರಯೋಜನಗಳು

    ಪ್ರಮುಖವಾಗಿ ನಮ್ಮ ದೇಹದಲ್ಲಿನ ಕಬ್ಬಿಣಾಂಶವು ಶ್ವಾಸಕೋಶದಿಂದ ಆಮ್ಲಜನಕವನ್ನು ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುವ ಕೆಂಪು ರಕ್ತ ಕಣಗಳಲ್ಲಿನ ಪ್ರೋಟೀನ್ ಹೀಮೋಗ್ಲೋಬಿನ್ ಉತ್ಪಾದಿಸುವ ಜೊತೆಗೆ, ಸ್ನಾಯುಗಳಿಗೆ ಆಮ್ಲಜನಕ ಒದಗಿಸುವ ಮಯೋಗ್ಲೋಬಿನ್ ಎಂಬ ಪ್ರೋಟೀನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ.

    ಹೆಚ್ಚುವರಿಯಾಗಿ, ದೇಹದಲ್ಲಿ ಸಾಕಷ್ಟು ಮಟ್ಟದ ಕಬ್ಬಿಣಾಂಶವು ರೋಗನಿರೋಧಕ ವ್ಯವಸ್ಥೆ ಬಲಪಡಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ರೋಗನಿರೋಧಕ ವ್ಯವಸ್ಥೆಯು ದೇಹ ಮತ್ತು ಮನಸ್ಸಿನ ಒಟ್ಟಾರೆ ಸ್ವಾಸ್ಥ್ಯ ಕಾಪಾಡುತ್ತದೆ. ತಜ್ಞರು ದೇಹದಲ್ಲಿ ಸ್ಥಿರವಾದ ಕಬ್ಬಿಣಾಂಶವು ಮೆದುಳಿನ ಕಾರ್ಯಗಳನ್ನು ಸುಧಾರಿಸುತ್ತದೆ ಮತ್ತು ಇದು ನೆನಪಿನ ಶಕ್ತಿಯನ್ನೂ ಹೆಚ್ಚಿಸುತ್ತದೆ.

    ಆದ್ದರಿಂದ ನೀವು ಪ್ರತಿದಿನ ಕಬ್ಬಿಣಾಂಶವಿರುವ ಆಹಾರ ಸೇವಿಸುವುದು ಮತ್ತು ದೇಹದಲ್ಲಿ ಕಡಿಮೆ ಕಬ್ಬಿಣಾಂಶದ ಮಟ್ಟ ಸೂಚಿಸುವ ಎಲ್ಲಾ ಲಕ್ಷಣಗಳ ಮೇಲೆ ಗಮನ ಹರಿಸುವುದು ತುಂಬಾನೇ ಮುಖ್ಯವಾಗುತ್ತದೆ.

    ಇದನ್ನೂ ಓದಿ: ಬಿಪಿ ಸಮಸ್ಯೆಗೆ ಬೀಟ್​ರೂಟ್​ ಜ್ಯೂಸ್ ಬೆಸ್ಟ್- ಇದರಲ್ಲಿ ಏನೆಲ್ಲಾ ಪ್ರಯೋಜನಗಳಿದೆ ನೋಡಿ

    ವಿಪರೀತ ಆಯಾಸವಾಗುವುದು

    ದೇಹದಲ್ಲಿ ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿರುವ ವ್ಯಕ್ತಿಯು ತುಂಬಾ ದಣಿದವರಂತೆ ಕಾಣಬಹುದು. ಕಬ್ಬಿಣಾಂಶವು ಹೀಮೋಗ್ಲೋಬಿನ್ ಅನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದು ದೇಹದ ವಿವಿಧ ಭಾಗಗಳಿಗೆ ಆಮ್ಲಜನಕ ಸಾಗಿಸಲು ಕಾರಣವಾಗಿದೆ. ಕಡಿಮೆ ಕಬ್ಬಿಣಾಂಶವು ಕಡಿಮೆ ಹೀಮೋಗ್ಲೋಬಿನ್ ಉತ್ಪಾದಿಸುತ್ತದೆ, ಅಂದರೆ ಕಡಿಮೆ ಆಮ್ಲಜನಕವು ನಿಮ್ಮ ಅಂಗಾಂಶಗಳು ಮತ್ತು ಸ್ನಾಯುಗಳನ್ನು ತಲುಪುತ್ತದೆ, ಇದರಿಂದ ನಿಮಗೆ ಶಕ್ತಿ ಇಲ್ಲದಂತಾಗಿ ವಿಪರೀತ ಆಯಾಸವಾಗುತ್ತದೆ.

    ಉಸಿರಾಟದ ತೊಂದರೆ

    ಮೇಲೆ ಹೇಳಿದಂತೆ, ಕಬ್ಬಿಣಾಂಶವು ಹೀಮೋಗ್ಲೋಬಿನ್ ಉತ್ಪಾದಿಸಲು ಸಹಾಯ ಮಾಡುತ್ತದೆ, ಇದು ದೇಹದ ವಿವಿಧ ಭಾಗಗಳಿಗೆ ಸಾಕಷ್ಟು ಆಮ್ಲಜನಕ ನೀಡುತ್ತದೆ. ಆದರೆ, ಕಬ್ಬಿಣಾಂಶ ಕಡಿಮೆಯಾದಾಗ, ಹೀಮೋಗ್ಲೋಬಿನ್ ಮತ್ತು ಆಮ್ಲಜನಕದ ಮಟ್ಟಗಳು ಸಹ ಕಡಿಮೆ ಆಗುತ್ತವೆ. ಸ್ನಾಯುಗಳಿಗೆ ಆಮ್ಲಜನಕದ ಕೊರತೆಯು ನಿಮ್ಮ ದೇಹವು ಹೆಚ್ಚು ಆಮ್ಲಜನಕ ಉತ್ಪಾದಿಸಲು ಹೆಚ್ಚು ಶ್ರಮಿಸುವಂತೆ ಮಾಡುತ್ತದೆ. ಇದು ನಿಮ್ಮ ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ.

    ಹೆಚ್ಚಿದ ಹೃದಯ ಬಡಿತ

    ದೇಹವು ಕಬ್ಬಿಣಾಂಶದ ಕೊರತೆಯಿಂದ ಮತ್ತು ಕಡಿಮೆ ಮಟ್ಟದ ಹೀಮೋಗ್ಲೋಬಿನ್‌ನೊಂದಿಗೆ ಬಳಲುತ್ತಿರುವಾಗ, ಹೃದಯವು ದೇಹದಾದ್ಯಂತ ಆಮ್ಲಜನಕ ಪಂಪ್ ಮಾಡಲು ಹೆಚ್ಚು ಶ್ರಮಿಸಬೇಕು. ಇದು ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗಬಹುದು ಅಥವಾ ಹೃದಯ ಬಡಿತ ಹೆಚ್ಚಳಕ್ಕೆ ಕಾರಣವಾಗಬಹುದು. ಹೀಗೆ ನಿಮಗೆ ಹೃದಯ ಬಡಿತ ಹೆಚ್ಚಾದಾಗ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು, ಏಕೆಂದರೆ ಇದು ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು.

    ತಲೆ ತಿರುಗುವಿಕೆ ಮತ್ತು ತಲೆನೋವು

    ಕಬ್ಬಿಣಾಂಶದ ಕೊರತೆಯು ಮೆದುಳಿಗೆ ಆಮ್ಲಜನಕದ ಹರಿವನ್ನು ಮಿತಿಗೊಳಿಸಬಹುದು, ಇದರಿಂದ ತಲೆನೋವು ಮತ್ತು ತಲೆತಿರುಗುವಿಕೆ ಬರಬಹುದು. ಕಬ್ಬಿಣಾಂಶದ ಕೊರತೆ ಮತ್ತು ತಲೆನೋವುಗಳ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಹೆಚ್ಚಿನ ಸಂಶೋಧನೆಯ ಅಗತ್ಯವಿದ್ದರೂ, ಮೆದುಳಿನಲ್ಲಿ ಆಮ್ಲಜನಕದ ಮಟ್ಟ ಕಡಿಮೆಯಾಗಿದ್ದು ತಲೆನೋವಿಗೆ ಕಾರಣವಾಗುವ ಸಾಮಾನ್ಯ ಅಂಶವಾಗಿರಬಹುದು.

    ಮಸುಕಾದ ಚರ್ಮ

    ಕೆಂಪು ರಕ್ತ ಕಣಗಳಲ್ಲಿನ ಹೀಮೋಗ್ಲೋಬಿನ್ ರಕ್ತಕ್ಕೆ ಕೆಂಪು ಬಣ್ಣ ನೀಡುತ್ತದೆ. ಒಬ್ಬ ವ್ಯಕ್ತಿಯು ಕಬ್ಬಿಣಾಂಶದ ಕೊರತೆ ಎದುರಿಸುತ್ತಿರುವಾಗ, ಹೀಮೋಗ್ಲೋಬಿನ್ ಉತ್ಪಾದನೆಯು ಈ ಪ್ರಕ್ರಿಯೆಯಲ್ಲಿ ನಿಧಾನವಾಗುತ್ತದೆ. ಇದರಿಂದ ಚರ್ಮವು ಗುಲಾಬಿ ಬಣ್ಣ ಕಳೆದುಕೊಳ್ಳುತ್ತದೆ. ಮುಖ, ಒಸಡು, ಉಗುರುಗಳು ಮತ್ತು ಕಣ್ಣಿನ ರೆಪ್ಪೆಯ ಒಳಭಾಗ ಮುಸುಕಾಗಿ ಕಾಣಬಹುದು. ಇದು ಮಧ್ಯಮ ಅಥವಾ ತೀವ್ರ ರಕ್ತಹೀನತೆಯಿಂದ ಬಳಲುತ್ತಿರುವ ಜನರಲ್ಲಿ ಹೆಚ್ಚಾಗಿ ಕಾಣಬಹುದು.

    ನಾಲಿಗೆ ಮತ್ತು ಬಾಯಿ ಊದಿಕೊಳ್ಳುವುದು

    ಇದನ್ನೂ ಓದಿ: ಕೂದಲಿನ ಸರ್ವ ಸಮಸ್ಯೆಗೆ ಕರಿಬೇವಿನ ಎಲೆಯಲ್ಲಿದೆ ಪರಿಹಾರ

    ನಿಮ್ಮ ಬಾಯಿ ಮತ್ತು ನಾಲಿಗೆ ಕಬ್ಬಿಣಾಂಶದ ಕೊರತೆ ಸೂಚಿಸಲು ಅನೇಕ ಮಾರ್ಗಗಳಿವೆ. ನೀವು ಉರಿಯೂತ, ಊದಿಕೊಂಡ ನಾಲಿಗೆ ಅಥವಾ ಬಾಯಿ ಹೊಂದಿದ್ದರೆ, ನಿಮ್ಮ ದೇಹದಲ್ಲಿ ಸಾಕಷ್ಟು ಕಬ್ಬಿಣಾಂಶದ ಕೊರತೆ ಇರುವ ಸಾಧ್ಯತೆಗಳಿವೆ. ಇತರ ರೋಗಲಕ್ಷಣಗಳಲ್ಲಿ ಬಾಯಿ ಒಣಗುವುದು, ಉರಿಯುವ ಸಂವೇದನೆ, ನಿಮ್ಮ ಬಾಯಿಯ ಬದಿಗಳಲ್ಲಿ ಕೆಂಪು ಬಿರುಕುಗಳು ಮತ್ತು ಬಾಯಿ ಹುಣ್ಣುಗಳು ಸೇರಿರಬಹುದು.
    Published by:Sandhya M
    First published: