Health Tips: ಪೋಷಕಾಂಶಗಳ ಕೊರತೆ ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಹೀಗೆ ಪರಿಣಾಮ ಬೀರುತ್ತಂತೆ

Effects of Nutrition Deficiency: ಸೂಕ್ಷ್ಮ ಪೋಷಕಾಂಶಗಳ ಕೊರತೆಯು ಹಸಿವಿನ ಕೊರತೆ, ನಿಧಾನ ಚಯಾಪಚಯ, ಮನಸ್ಥಿತಿ ಬದಲಾವಣೆಗಳು, ಕಡಿಮೆ ಏಕಾಗ್ರತೆ, ಕೂದಲು ಉದುರುವಿಕೆ, ಮರಗಟ್ಟುವಿಕೆ ಮತ್ತು ದೀರ್ಘಕಾಲದ ನೋವುಗಳು ಮತ್ತು ದೇಹದ ಭಾಗಗಳಲ್ಲಿ ಸ್ಟಿಫ್ ನೆಸ್ ಮೊದಲಾದ  ಲಕ್ಷಣಗಳನ್ನು ಉಂಟುಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ದೀರ್ಘಕಾಲ ಸುಸ್ತಾಗುವುದು ಅಥವಾ ಆಗಾಗ್ಗೆ ಅನಾರೋಗ್ಯಕ್ಕೆ (Health Problem) ಒಳಗಾಗುವುದು ಕಿರಿಕಿರಿ ಉಂಟು ಮಾಡುತ್ತದೆ. ಈ ರೋಗಲಕ್ಷಣಗಳು ದೂರವಾದರೂ ಅದರಿಂದ ಪೌಷ್ಟಿಕಾಂಶದ (Nutrient) ಕೊರತೆಯ ಮೇಲಾಗುವ ಪರಿಣಾಮ ಭೀಕರ ಎನ್ನಬಹುದು.  ಜೀವಸತ್ವಗಳು ಮತ್ತು ಖನಿಜಗಳು ದೇಹಕ್ಕೆ ಸಣ್ಣ ಪ್ರಮಾಣದಲ್ಲಿ ಸಾಕಾಗುತ್ತದೆ. ಆದರೆ ಆರೋಗ್ಯವನ್ನು ಕಾಪಾಡಲು ಹಾಗೂ ಹಲವು ಶಾರೀರಿಕ ಕ್ರಿಯೆಗಳಲ್ಲಿ ಸಹಾಯ ಮಾಡುವುದರಿಂದ ಅವುಗಳ ಪಾತ್ರ ನಿರ್ಣಾಯಕವಾಗುತ್ತವೆ. ವಿಟಮಿನ್ ಎ, ವಿಟಮಿನ್ ಬಿ, (Vitamin B) ವಿಟಮಿನ್ ಸಿ, ವಿಟಮಿನ್ ಡಿ, ವಿಟಮಿನ್ ಇ, ವಿಟಮಿನ್ ಕೆ, ಕ್ಯಾಲ್ಸಿಯಂ, ಕಬ್ಬಿಣ, ಸತು, ಸೆಲೆನಿಯಮ್ ಮತ್ತು ಕ್ರೋಮಿಯಂ ಇವುಗಳಲ್ಲಿ ಅವಶ್ಯಕವಾದುದು. ಹೀಗಿದ್ದೂ ಬದಲಾಗುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ, ಹೆಚ್ಚಿನ ಜನರು ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಲು ವಿಫಲರಾಗಿದ್ದಾರೆ. ಹಾಗಾಗಿ ಪೌಷ್ಠಿಕಾಂಶದ ಕೊರತೆ ಕಾಡುತ್ತದೆ. ಹಾಗಾದ್ರೆ ಪೌಷ್ಠಿಕಾಂಶದ ಕೊರತೆಯ ಚಿಹ್ನೆಗಳೇನು ಹಾಗೂ ನಿಮ್ಮ ರೋಗ ನಿರೋಧಕ ಶಕ್ತಿಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನ ಬ್ರೂಕ್ಫೀಲ್ಡ್ ಆಸ್ಪತ್ರೆಯ  ಹಿರಿಯ ಸಲಹೆಗಾರ ವೈದ್ಯ ಕಾರ್ಡಿಯೋ-ಡಯಾಬಿಟಾಲಜಿಸ್ಟ್, ವೈದ್ಯಕೀಯ ನಿರ್ದೇಶಕಡಾ. ಪ್ರದೀಪ್ ಕುಮಾರ್ ವಿವರಿಸಿದ್ದಾರೆ.

ಪೋಷಕಾಂಶಗಳ ಕೊರತೆ ಹಲವಾರು ಸಮಸ್ಯೆಗೆ ಕಾರಣ

ಭಾರತದಲ್ಲಿಲ್ಲೂ ಸೂಕ್ಷ್ಮ ಪೋಷಕಾಂಶಗಳ ಕೊರತೆ ಎಲ್ಲೆಡೆ ಕಂಡು ಬರುತ್ತಿದೆ. ಅನೇಕ ನಗರಗಳ ಆರೋಗ್ಯವಂತ ಭಾರತೀಯರು ವಿಟಮಿನ್ ಕೊರತೆಯಿಂದ ಬಳಲುತ್ತಿದ್ದಾರೆ ಎಂದು ಅಧ್ಯಯನಗಳು ಬಹಿರಂಗಪಡಿಸಿವೆ, ವಿಟಮಿನ್ ಬಿ 12 ಮತ್ತು ವಿಟಮಿನ್ ಡಿ ಕೊರತೆಯಿಂದ ರಕ್ತಹೀನತೆ ಹೆಚ್ಚುತ್ತಿದೆ. ಸತು ಮತ್ತು ಸೆಲೆನಿಯಮ್ ಗಳು ಸಹ ಅಗತ್ಯ ಖನಿಜಗಳಾಗಿವೆ. ಸಸ್ಯಾಹಾರಿಗಳು ಮತ್ತು ವೇಗನ್ ಗಳು ಹೆಚ್ಚಾಗಿ ಇದರ ಕೊರತೆ ಅನುಭವಿಸುತ್ತಾರೆ. ಜೀವನದ ಪ್ರತಿ ಹಂತದಲ್ಲೂ ವಿಭಿನ್ನ ಅವಶ್ಯಕತೆಗಳೊಂದಿಗೆ, ದೇಹ ಪರಿಣಾಮಕಾರಿ ಕಾರ್ಯನಿರ್ವಹಿಸಲು ಅತ್ಯುತ್ತಮ ಮಟ್ಟದ ಸೂಕ್ಷ್ಮ ಪೋಷಕಾಂಶಗಳ ಅಗತ್ಯವಿದೆ.

ಗರ್ಭಿಣಿಯರು, ವಯಸ್ಸಾದವರು, ದೀರ್ಘಕಾಲದ ಕಾಯಿಲೆಗಳಿಂದ ಬಳಲುವವರು ಅಥವಾ ಮಾಲಾಬ್ಸರ್ಪ್ಷನ್ನಿಂದ ಬಳಲುತ್ತಿರುವವರು ಬಹುಬೇಗ ವಿಟಮಿನ್ ಮತ್ತು ಖನಿಜಗಳ ಕೊರತೆಯ ಅಪಾಯಗಳಿಗೆ ಒಳಗಾಗುತ್ತಾರೆ. ಉದಾಹರಣೆಗೆ, ಮಧುಮೇಹ ಹೊಂದಿರುವವರು ವಿಟಮಿನ್ ಬಿ 12, ಸೆಲೆನಿಯಮ್ ಮತ್ತು ಕ್ರೋಮಿಯಂ ಪೂರಕಗಳಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಾರೆ. ಹಾಗಾಗಿ ಈ ಪೌಷ್ಠಿಕಾಂಶದ ಪ್ರಯೋಜನಗಳನ್ನು ಬಳಸಿಕೊಳ್ಳಲು ಸೂಕ್ತವಾದ ಮಲ್ಟಿವಿಟಮಿನ್ ಪೂರಕಗಳು ಅಗತ್ಯವಾಗಬಹುದು.

ಈ ಕೊರತೆಗಳು ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಬಹುದು ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಮತ್ತು ನಮ್ಮ ನರಮಂಡಲವನ್ನು ಆರೋಗ್ಯಕರವಾಗಿಡಲು ಅತ್ಯುತ್ತಮವಾದ ಮೈಕ್ರೋನ್ಯೂಟ್ರಿಯಂಟ್ ಗಳ ಅಗತ್ಯವಿದೆ. ವಿಟಮಿನ್ ಬಿ 9 (ಫೋಲಿಕ್ ಆಮ್ಲ), ವಿಟಮಿನ್ ಬಿ 12 (ಕೋಬಾಲಾಮಿನ್) ಮತ್ತು ವಿಟಮಿನ್ ಬಿ 6 (ಪಿರಿಡಾಕ್ಸಿನ್) ನಂತಹ ಬಿ ಗುಂಪಿನ ಜೀವಸತ್ವಗಳು, ಉದಾಹರಣೆಗೆ, ಆಹಾರದಿಂದ ಶಕ್ತಿಯನ್ನು ಬಿಡುಗಡೆ ಮಾಡಲು, ಆರೋಗ್ಯಕರ ಕೆಂಪು ರಕ್ತ ಕಣಗಳ ರಚನೆಗೆ ಮತ್ತು ಆರೋಗ್ಯಕರ ಚರ್ಮ ಮತ್ತು ನರಮಂಡಲದ ನಿರ್ವಹಣೆಗೆ ಅಗತ್ಯವಾಗಿವೆ.

ಇದನ್ನೂ ಓದಿ: ತೂಕ ಕಳೆದುಕೊಳ್ಳಲು ನಿಮ್ಮ ಡಯಟ್ ಪ್ಲಾನ್ ನಲ್ಲಿ ಫೈಬರ್ ಸಮೃದ್ಧ ಈ ಪದಾರ್ಥ ಸೇರಿಸಲು ಮರೆಯಬೇಡಿ

ಕೆಲವು ಜೀವಸತ್ವಗಳು ಮತ್ತು ಖನಿಜಗಳು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇವುಗಳ ಕೊರತೆಯಿಂದ ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ರೋಗಗಳ ಗುಣಪಡಿಸುವಿಕೆ ವಿಳಂಬಗೊಳ್ಳುತ್ತದೆ ಮತ್ತು ಹೆಚ್ಚು ಸೋಂಕುಗಳಿಗೆ ಒಳಗಾಗುವಂತೆ ಮಾಡುತ್ತದೆ.

ಸೂಕ್ಷ್ಮ ಪೋಷಕಾಂಶಗಳ ಕೊರತೆಯು ಹಸಿವಿನ ಕೊರತೆ, ನಿಧಾನ ಚಯಾಪಚಯ, ಮನಸ್ಥಿತಿ ಬದಲಾವಣೆಗಳು, ಕಡಿಮೆ ಏಕಾಗ್ರತೆ, ಕೂದಲು ಉದುರುವಿಕೆ, ಮರಗಟ್ಟುವಿಕೆ ಮತ್ತು ದೀರ್ಘಕಾಲದ ನೋವುಗಳು ಮತ್ತು ದೇಹದ ಭಾಗಗಳಲ್ಲಿ ಸ್ಟಿಫ್ ನೆಸ್ ಮೊದಲಾದ  ಲಕ್ಷಣಗಳನ್ನು ಉಂಟುಮಾಡಬಹುದು. ಹೀಗೆ ಸ್ಪಷ್ಟವಾಗಿ ಗೋಚರಿಸುವ ರೋಗಲಕ್ಷಣಗಳ ಜೊತೆಗೆ, ಕಣ್ಣಿಗೆ ಕಾಣಿಸದ ಹಲವು ಕೊರತೆಗಳು ಬದಲಾವಣೆಗಳನ್ನು ಉಂಟುಮಾಡಬಹುದು.

ಉದಾಹರಣೆಗೆ ಕಡಿಮೆಯಾಗುವ ಶಕ್ತಿಯ ಮಟ್ಟ, ಕಡಿಮೆಯಾಗುವ ಮಾನಸಿಕ ಸ್ಪಷ್ಟತೆ ಮತ್ತು ಉತ್ಪಾದಕತೆಯ ನಷ್ಟ ಹಲವು ಸಮಸ್ಯೆಗಳನ್ನು ಉಂಟು ಮಾಡಬಹುದು. ಈ ಕೊರತೆಗಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ದೊರೆಯದೆ ಹೋದಲ್ಲಿ ರೋಗಲಕ್ಷಣಗಳು ಹೆಚ್ಚು ತೀವ್ರವಾಗಬಹುದು. ವೈದ್ಯರೊಂದಿಗೆ ಸಮಾಲೋಚಿಸಿದ ಬಳಿಕ ಮಲ್ಟಿವಿಟಮಿನ್ ಕೋರ್ಸ್ ಅನ್ನು ಪ್ರಾರಂಭಿಸುವುದು ಸೂಕ್ತ. ಮಲ್ಟಿವಿಟಮಿನ್ ಪೂರಕಗಳು ಸಾಮಾನ್ಯವಾಗಿ ಮಾತ್ರೆಗಳ ರೂಪದಲ್ಲಿ ಲಭ್ಯವಿದೆ ಮತ್ತು ನಮ್ಮ ದಿನಚರಿಯಲ್ಲಿ ಸೇವಿಸುವುದು ಸುಲಭವಾಗುತ್ತದೆ.

ಇದನ್ನೂ ಓದಿ: ಬಂದೇ ಬಿಡ್ತು ಅಣ್ಣ-ತಂಗಿಯರ ನೆಚ್ಚಿನ ರಕ್ಷಾ ಬಂಧನ, ಎರಡು ದಿನ ಬಂದಿದೆಯೇ ಈ ಹಬ್ಬ?

ಮಾತ್ರೆಗಳನ್ನು ತೆಗೆದುಕೊಳ್ಳುವ ಮುನ್ನ ಎಚ್ಚರಿಕೆ ವಹಿಸಿ

ಹೆಚ್ಚಿನ ಪೂರಕಗಳು(ಸಪ್ಲಿಮೆಂಟ್ಸ್) ಆರೋಗ್ಯದ ಹೆಚ್ಚಿನ ಅಪಾಯಗಳನ್ನು ಉಂಟುಮಾಡುವುದಿಲ್ಲ. ಹೀಗಿದ್ದೂ ತಪ್ಪಾದ ರೀತಿಯಲ್ಲಿ ಬಳಸುವುದರಿಂದ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳಬಹುದು. ಇದನ್ನು ತಿಳಿದುಕೊಳ್ಳಲು ನಿಮ್ಮ ವಯಸ್ಸು ಮತ್ತು ಅವಶ್ಯಕತೆಗಳಿಗೆ ಅನುಗುಣವಾಗಿ ಉತ್ತಮ ಪೂರಕವನ್ನು ತೆಗೆದುಕೊಳ್ಳುವ ಮೊದಲು ನಿಮ್ಮ ಕುಟುಂಬದ ವೈದ್ಯರನ್ನು ಸಂಪರ್ಕಿಸಲು ಮರೆಯದಿರಿ.
Published by:Sandhya M
First published: