Weight Loss Product Effects: ತೂಕ ಇಳಿಸುವ ಉತ್ಪನ್ನಗಳಿಂದ ಅಂಗಾಂಗ ವೈಫಲ್ಯ!? ವೈದ್ಯರು ಹೀಗಂತಾರೆ

Side Effects of Weight Loss Products: ತೂಕ ಇಳಿಸುಕೊಳ್ಳಲು ಪ್ರಯತ್ನ ಮಾಡಬೇಕು, ಕಷ್ಟಪಡಬೇಕು ಆದರೆ ಅದಕ್ಕಾಗಿ ನಮ್ಮ ಜೀವಕ್ಕೆ ತೊಂದರೆ ತಂದುಕೊಳ್ಳಬಾರದು. ನಾವು ಮಾಡುವ ಒಂದು ತಪ್ಪು ನಮ್ಮ ಜೀವಕ್ಕೆ ಕಂಟಕವಾಗಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸದ್ಯದ ತಾಂತ್ರಿಕ ಜೀವನದ (Lifestyle) ಪರಿಣಾಮ ಪ್ರತಿಯೊಬ್ಬರ ಆರೋಗ್ಯದ ಮೇಲೂ ಬೀರಿ. ಪ್ರತಿ ವ್ಯಕ್ತಿಯು ಒಂದೆಲ್ಲ ಒಂದು ಆರೋಗ್ಯ ಸಮಸ್ಯೆಯನ್ನು (Health problem)  ಎದುರಿಸುತ್ತಿದ್ದಾನೆ. ಹಾಗೆಯೇ ದೇಹದ ತೂಕ ಹೆಚ್ಚಾಗುವುದು ಒಂದು ದೊಡ್ಡ ಸಮಸ್ಯೆಯೇ ಸರಿ. ದೇಹದ ತೂಕ (Weight Gain) ಹೆಚ್ಚಾಗಲು ಹಲವಾರು ಕಾರಣಗಳಿರುತ್ತವೆ. ನಮ್ಮ ದೇಹಕ್ಕೆ ಸಿಗಬೇಕಾದ ಪೋಷಕಾಂಶಗಳು ಸಿಗದೇ ಇದ್ದಾಗ ಅಥವಾ ಆಹಾರದ ಕ್ರಮದಲ್ಲಿ (Food) ವ್ಯತ್ಯಾಸವಾದಾಗ ತೂಕ ಏರುವುದು ಸಾಮಾನ್ಯ. ಈ ಕೊರೊನಾ (Corona) ನಂತರ ತೂಕ ಹೆಚ್ಚಿಸಿಕೊಂಡವರ ಸಂಖ್ಯೆ ಬಹಳ ಆಗಿದೆ. ತೂಕ ಇಳಿಸಿಕೊಳ್ಳಲು ಜನ ಹಲವಾರು ಕಾರ್ಯವಿಧಾನಗಳನ್ನು ಬಳಸುತ್ತಿದ್ದಾರೆ. ಕೆಲವರು ಜಿಮ್ (Gym) ಸೇರಿಕೊಂಡರೆ, ಇನ್ನೂ ಕೆಲವರು ಡಯೆಟ್​ ಫಾಲೋ ಮಾಡುತ್ತಿದ್ದಾರೆ. ಆದರೆ ಇದೆಲ್ಲದಕ್ಕಿಂತ ಹೆಚ್ಚಾಗಿ ಕೆಲ ಜನರು ಆಯುರ್ವೇದ ಹೆಸರಿನ ಪ್ರಾಡೆಕ್ಟ್​ಗಳ ಹಿಂದೆ ಹೋಗುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಅಪಾಯವನ್ನು ತರುತ್ತದೆ ಎನ್ನುವ ಪರಿವು ಅನೇಕರಿಗಿಲ್ಲ.  

ಹೌದು, ತೂಕ ಇಳಿಸುಕೊಳ್ಳಲು ಪ್ರಯತ್ನ ಮಾಡಬೇಕು, ಕಷ್ಟಪಡಬೇಕು ಆದರೆ ಅದಕ್ಕಾಗಿ ನಮ್ಮ ಜೀವಕ್ಕೆ ತೊಂದರೆ ತಂದುಕೊಳ್ಳಬಾರದು. ನಾವು ಮಾಡುವ ಒಂದು ತಪ್ಪು ನಮ್ಮ ಜೀವಕ್ಕೆ ಕಂಟಕವಾಗಬಹುದು. ಕಳೆದ ಕೆಲ ವರ್ಷಗಳಿಂದ ತೂಕ ಇಳಿಸುವ ಆಹಾರದ ಹೆಸರಲ್ಲಿ ಕೆಲವರು ಕೇವಲ ವಿಷವನ್ನು ಮಾತ್ರ ದೇಹಕ್ಕೆ ಸೇರಿಸುತ್ತಿದ್ದಾರೆ.

ಇತ್ತೀಚೆಗೆ ಜನರಿಗೆ ಬೇಗ ತೂಕ ಇಳಿಸಿಕೊಳ್ಳಬೇಕು ಎನ್ನುವ ಆಸೆ ಇರುತ್ತದೆ. ಅದು ಹಲವಾರು ಜನರಿಗೆ ಬಂಡವಾಳವಾಗಿದ್ದು, ಅದರ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ. ಅದಕ್ಕೆ ಬಲಿಯಾಗುತ್ತಿರುವ ಜನರು ತಮ್ಮ ಆರೋಗ್ಯವನ್ನು ಕೈಯಾರೆ ಹಾಳು ಮಾಡಿಕೊಳ್ಳುತ್ತಿದ್ದಾರೆ.

ನಾವು, ನೀವಿಲ್ಲ ಕೇಳಿರಬಹುದು., ತೂಕ ಇಳಿಸಲು ಜಾಸ್ತಿ ಕಷ್ಟಪಡಬೇಕಿಲ್ಲ. ಅದೊಂದು ಪದಾರ್ಥವನ್ನು ಪ್ರತಿದಿನ ಕುಡಿದರೆ ಸಾಕು ತೂಕ ಬೇಗ ಇಳಿದು ಬಿಡುತ್ತೆ ಎಂಬ ಕಥೆಯನ್ನು. ಒಂದರ್ಥದಲ್ಲಿ ಇದು ಕಥೆಯಲ್ಲ. ಆ ಡ್ರಿಂಕ್ಸ್​ ಒಂದನ್ನ ಕುಡಿಯುವುದು ನಿಮ್ಮ ತೂಕ ಇಳಿಸಲು ಸಹಕಾರಿ, ಆದ್ರೆ ಆರೋಗ್ಯಕ್ಕೆ? ಸದ್ಯ ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ಇದನ್ನೂ ಓದಿ: ಹೆರಿಗೆಯ ನಂತ್ರ ಮಗು ಬಿಟ್ಟು ಆಫೀಸ್​ ಹೋಗುವ ಅಮ್ಮಂದಿರಿಗೆ ಈ ಟಿಪ್ಸ್

ತೂಕ ಇಳಿಸಲು ಮಾತ್ರ ಅಲ್ಲ, ನಾವು ಆರೋಗ್ಯದ ವಿಚಾರವಾಗಿ ಮಾಡುವ ತಪ್ಪು ಮುಂದಿನ ದಿನಗಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ಯೋಚನೆ ಮಾಡಬೇಕು. ನಿಮಗೆ ಆ ಪೌಡರ್ ಬಳಸಿ,ಈ ಜ್ಯೂಸ್​ ಬಳಸಿ ಎಂದು ಹೇಳಿದರೆ ಅದನ್ನು ಫಾಲೋ ಮಾಡುವ ಮುನ್ನ ಎಚ್ಚರವಾಗಿರಬೇಕು. ಈ ಪೌಡರ್​ಗಳು ನಿಮ್ಮ ದೇಹದಲ್ಲಿ ನಿಧಾನವಾಗಿ ಕೆಲಸ ಮಾಡಿ, ಅಪಾಯ ಉಂಟು ಮಾಡುತ್ತದೆ.

ಈ ರೀತಿ ಜಾಹೀರಾತಿನಲ್ಲಿ ತೋರಿಸುವ ಪದಾರ್ಥಗಳಿಂದ ಬೇಗ ತೂಕ ಇಳಿಯಲು ಕಾರಣ ಅದರಲ್ಲಿರುವ ಸ್ಟಿರೈಯ್ಡ್​ ​ಗಳು. ಇದು ನಮ್ಮ ದೇಹಕ್ಕೆ ಸ್ಲೋ ಪಾಯ್ಸನ್​. ಆರಂಭದಲ್ಲಿ ನಮ್ಮ ತೂಕ ಇಳಿದಾಗ ನಿಜಕ್ಕೂ ಸಂತೋಷವಾಗುತ್ತದೆ. ನಂತರ ಒಂದೆಲ್ಲಾ ಒಂದು ಆರೋಗ್ಯ ಸಮಸ್ಯೆಗಳು ಆರಂಭವಾಗುತ್ತದೆ.

ಕಳೆದ 10 ವರ್ಷಗಳಲ್ಲಿ ಈ ಉತ್ಪನ್ನಗಳ ಕಾರಣದಿಂದ ಲಿವರ್​ಗೆ  ಹಾನಿಯಾಗಿರುವ ಪ್ರಕರಣಗಳು ಹೆಚ್ಚಾಗಿದ್ದು, ಹಲವಾರು ಸಾವಿನ ಅಂಚಿಗೆ ಹೋಗಿ ಬಂದವರಿದ್ದಾರೆ. ಈ ಉತ್ಪನ್ನಗಳುಲಿವರ್ ಸಮಸ್ಯೆ, ಕಾಮಾಲೆ, ವಾಕರಿಕೆ, ಜೀರ್ಣಕ್ರಿಯೆ ಸಮಸ್ಯೆ, ಆಯಾಸ,  ಕಿಬ್ಬೊಟ್ಟೆಯ ನೋವಿನಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಸಾಬೀತಾಗಿದೆ. ಈ ಉತ್ಪನ್ನಗಳ ಸೇವನೆಯು ಸಾವಿಗೆ ಕಾರಣವಾಗುತ್ತದೆ ಎಂಬ ಆಘಾತಕಾರಿ ಅಂಶ ಕೂಡ ಬಯಲಾಗಿದೆ.

ಇದನ್ನೂ ಓದಿ: ಹೃದಯದ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ಈ ಆಹಾರಗಳಿಂದ ದೂರವಿರಿ

ಈ ಉತ್ಪನ್ನಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ ಕೆಲವು ದಿನಗಳಿಂದ 3 ವರ್ಷಗಳವರೆಗೆ ಈ ಅಡ್ಡ ಪರಿಣಾಮಗಳು ಕಾಣಿಸುವುದಿಲ್ಲ. ನಿಮಗೆ ಕೇವಲ ತೂಕ ಇಳಿಕೆಯಾಗಿರುವುದು ಕಾಣಿಸುತ್ತದೆ. ಹಾಗಾಗಿ ಈ ರೀತಿಯ ಯಾವುದೇ ಉತ್ಪನ್ನಗಳನ್ನು ಸೇವನೆ ಮಾಡದೇ ವ್ಯಾಯಾಮ, ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ ತೂಕ ಇಳಿಸಲು ಪ್ರಯತ್ನಿಸಿ, ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ.
Published by:Sandhya M
First published: