• Home
  • »
  • News
  • »
  • lifestyle
  • »
  • Hot Water Effect: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಬಿಸಿನೀರು ಕುಡಿಬೇಡಿ, ಇದರ ಅಡ್ಡಪರಿಣಾಮಗಳು ಒಂದೆರೆಡಲ್ಲ

Hot Water Effect: ಆರೋಗ್ಯಕ್ಕೆ ಒಳ್ಳೆಯದು ಅಂತ ಜಾಸ್ತಿ ಬಿಸಿನೀರು ಕುಡಿಬೇಡಿ, ಇದರ ಅಡ್ಡಪರಿಣಾಮಗಳು ಒಂದೆರೆಡಲ್ಲ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Side Effects Of Hot Water: ಒಟ್ಟಾರೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಶರೀರ ಬೆಚ್ಚಗಾಗುತ್ತೆ ಅನ್ನೋ ಕಾರಣದಿಂದ ಬಿಸಿನೀರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಬಿಸಿನೀರು ಕುಡಿಯುವ ಮುನ್ನ ಅದರಿಂದ ಆಗುವ ದುಷ್ಪರಿಣಾಮಗಳನ್ನೂ ಪರಿಗಣಿಸಬೇಕು ಅನ್ನೋದು ತಜ್ಞರ ಅಭಿಪ್ರಾಯ.

  • Share this:

ಆರೋಗ್ಯಕ್ಕೆ (Health) ಒಳ್ಳೆಯದು, ಜೀರ್ಣಕ್ರಿಯೆ (Digestion) ಚೆನ್ನಾಗಿ ಆಗುತ್ತದೆ ಅನ್ನೋ ಕಾರಣಕ್ಕೆ ಹೆಚ್ಚು ಬಿಸಿಯಾದ ನೀರನ್ನು (Hot Water) ಕುಡಿಯುತ್ತೀರಾ? ಹಾಗಿದ್ರೆ ನೀವು ಈ ಸ್ಟೋರಿಯನ್ನು ಓದಲೇ ಬೇಕು. ಹೆಚ್ಚು ಬಿಸಿಯಾದ ನೀರನ್ನು ಕುಡಿಯುವುದರಿಂದ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮಗಳಿವೆ (Side Effects). ನೀರು ಕುಡಿಯೋದು ಅನಿವಾರ್ಯ. ಆದ್ರೆ ರೂಂ ಟೆಂಪರೇಚರ್‌ ಗೆ ತಕ್ಕ ಹಾಗೆ ನೀವು ಬೆಚ್ಚಗಿನ ನೀರನ್ನು (Warm Water) ಕುಡಿಯಬಹುದು. ಆದರೆ ಬಿಸಿಯಾದ ನೀರನ್ನು ಕುಡಿಯುವುದು ವೈಜ್ಞಾನಿಕವಾಗಿ ಅಷ್ಟೊಂದು ಪ್ರಯೋಜನಕಾರಯಾಗಿಲ್ಲ. ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ (Health Problems) ಕಾರಣವಾಗಬಹುದು ಅಂತಾರೆ ತಜ್ಞರು.


ಬಿಸಿ ನೀರು ಕುಡಿಯುವುದರ ದುಷ್ಪರಿಣಾಮಗಳಿವು
ಬಿಸಿ ನೀರಿನಿಂದ ಆಂತರಿಕ ಉರಿ: ಬಿಸಿನೀರು ಕುಡಿಯುವುದರಿಂದ ದೇಹದಲ್ಲಿ ಆಂತರಿಕ ಉರಿ ಉಂಟಾಗಬಹುದು. ಒಂದು ಪ್ರಕರಣದಲ್ಲಿ ಬಿಸಿನೀರನ್ನು ಸೇವಿಸಿದ 61 ವರ್ಷದ ವ್ಯಕ್ತಿ (90o C ಎಂದು ಅಂದಾಜಿಸಲಾಗಿದೆ) ಲಾರಿಂಗೊಫಾರ್ನೆಕ್ಸ್ ಎಡಿಮಾವನ್ನು ಅನುಭವಿಸಿದರು. ಇದು ಅವರ ಉಸಿರಾಟವನ್ನು ಕಟ್ಟುವಂತೆ ಮಾಡಿತಲ್ಲದೇ ಉಸಿರಾಡಲು ತೊಂದರೆ ಅನುಭವಿಸುವಂತಾಯಿತು.


ಧ್ವನಿ ಪೆಟ್ಟಿಗೆಗೆ ಹಾನಿ: ಬಿಸಿನೀರು ಸೇರಿದಂತೆ ಅತಿಯಾದ ಬಿಸಿ ಆಹಾರಗಳ ಸೇವನೆಯಿಂದ ಲಾರಿಂಜಿಯಲ್ ಬರ್ನಿಂಗ್‌ ಇಂಜುರೀಸ್‌ ಅಥವಾ ಧ್ವನಿಪೆಟ್ಟಿಗೆಗಳಿಗೆ ಹಾನಿಯಾಗಬಹುದು. ಬಿಸಿ ನೀರು ಅಥವಾ ಅತಿಯಾಗಿ ಬಿಸಿಯಾದ ಪಾನೀಯಗಳು ಚರ್ಮದ ಸಂಪರ್ಕಕ್ಕೆ ಬಂದಾಗ ಅಲ್ಲಿರುವ ಜೀವಕೋಶಗಳು ಶಾಖದಿಂದ ಹಾನಿಗೊಳಗಾಗುತ್ತವೆ. ತೀವ್ರವಾದ ಶಾಖವು ಅಂಗಾಂಶಕ್ಕೆ ವ್ಯಾಪಕವಾದ ಹಾನಿಯನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ಹೇಳ್ತಾರೆ.


ಚರ್ಮಕ್ಕೆ ಹಾನಿ: ನೀರು ಕುದಿಯುತ್ತಿದ್ದರೆ ಅದು ಮೂರನೇ ಹಂತದ ಸುಡುವಿಕೆಗೆ ಕಾರಣವಾಗಬಹುದು. ನೀರು ನಿಮ್ಮ ಮೇಲೆ ಚೆಲ್ಲಿದರೆ ಇವು ಚರ್ಮದ ಸಂಪೂರ್ಣ ಆಳಕ್ಕೆ ಹೋಗಿ ನಾಶಪಡಿಸುತ್ತವೆ. ಇದು ಆಂತರಿಕವಾಗಿ ಹೆಚ್ಚಿನ ಹಾನಿಯನ್ನು ಉಂಟುಮಾಡುತ್ತದೆ.


ಹೆಚ್ಚು ಮಾಲಿನ್ಯಕಾರಕಗಳನ್ನು ಹೊಂದಿರಬಹುದು: ಈ ಅಂಶದ ಬಗ್ಗೆ ಕಡಿಮೆ ಸಂಶೋಧನೆ ಇದೆ. ಆದರೆ ಬಿಸಿ ನೀರು ಕಲ್ಮಶಗಳನ್ನು ಹೊಂದಿರಬಹುದು. ಬಾಯ್ಲರ್‌ ಗಳಂತಹ ಬಿಸಿನೀರಿನ ವ್ಯವಸ್ಥೆಗಳು ಲೋಹದ ಭಾಗಗಳನ್ನು ಹೊಂದಿರುತ್ತವೆ. ಇವು ತಮ್ಮಲ್ಲಿರುವ ನೀರನ್ನು ತುಕ್ಕು ಮಾಡಿ ಕಲುಷಿತಗೊಳಿಸಬಹುದು.


ಇದನ್ನೂ ಓದಿ: ನಿದ್ರಾಹೀನತೆ ಬರೀ ಹೃದಯಕ್ಕೆ ಅಪಾಯ ಮಾತ್ರ ಅಲ್ಲ, ಟೈಪ್ 2 ಡಯಾಬಿಟಿಸ್​ಗೂ ಕಾರಣವಾಗುತ್ತೆ


ಬಿಸಿನೀರು ಈ ಕಲ್ಮಶಗಳನ್ನು ತಣ್ಣೀರಿಗಿಂತ ವೇಗವಾಗಿ ಕರಗಿಸುತ್ತದೆ.ನೀರಿನ ಫಿಲ್ಟರ್‌ನಿಂದ ಬಿಸಿನೀರನ್ನು ಬಳಸುವುದು ಸುರಕ್ಷಿತ ಆಯ್ಕೆಯಾಗಿದ್ದರೂ, ಅಪಾಯವನ್ನು ಒಳಗೊಂಡಿರುತ್ತದೆ. ಬಿಸಿನೀರು ತಣ್ಣೀರಿಗಿಂತ ಹೆಚ್ಚು ವೇಗವಾಗಿ ಆಂತರಿಕ ವಸ್ತುಗಳನ್ನು ಕರಗಿಸುತ್ತದೆ. ಇದು ದೀರ್ಘಾವಧಿಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಬಿಸಿ ನೀರು ಕುಡಿಯುವ ಮುನ್ನ ಹೀಗೆ ಮಾಡಿ!


ನೀರನ್ನು ಕುದಿಸಬೇಡಿ: ನೀರನ್ನು ಕುದಿಸುವ ಅಗತ್ಯವಿಲ್ಲ. ಅದು ತಣ್ಣಗಾಗುವ ಮೊದಲು ನೀವು ಕಾಯಬೇಕಾಗಿ ಬರಬಹುದು. ಅಲ್ಲದೇ ಕುದಿಯುವ ನೀರಿನ ರುಚಿಯೂ ಬದಲಾಗಬಹುದು. ಹಾಗಾಗಿ ನೀವು ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಬಹುದು. ನೀರಿನಿಂದ ಉಗಿ ಹೊರಬರುವುದನ್ನು ಒಮ್ಮೆ ನೀವು ನೋಡಿದರೆ, ಅದು ಸರಿಯಾದ ತಾಪಮಾನದಲ್ಲಿದೆ ಎಂದು ನಿಮಗೆ ತಿಳಿಯುತ್ತದೆ. ಈ ಉದ್ದೇಶಕ್ಕಾಗಿ ನೀವು ಟೀ ಕೆಟಲ್ ಅನ್ನು ಸಹ ಬಳಸಬಹುದು.


ಹಬೆಯಿಂದ ದೂರವಿರಿ: ಬಿಸಿ ಉಗಿಯ ಉಷ್ಣದಿಂದಾಗಿ ಚರ್ಮ ಸುಡುತ್ತದೆ.ನೀರನ್ನು ಮಗ್ ಅಥವಾ ಟೀ ಕಪ್‌ ನಲ್ಲಿ ಹಾಕಿ. ಹೆಚ್ಚಿನ ರಕ್ಷಣೆಗಾಗಿ ಕೆಟಲ್ ಅನ್ನು ದಪ್ಪವಾದ ಟವೆಲ್ನಿಂದ ಹಿಡಿದುಕೊಳ್ಳಿ.ಅಲ್ಲದೇ ಮಗ್ ಅನ್ನು ಅತಿಯಾಗಿ ತುಂಬಬೇಡಿ ಎಂದು ನೆನಪಿಡಿ. ನೀರು ಉಕ್ಕಿ ಹರಿಯಬಹುದು ಮತ್ತು ಸುಟ್ಟಗಾಯಗಳಿಗೆ ಕಾರಣವಾಗಬಹುದು.


ಇದನ್ನೂ ಓದಿ: ತಲೆ ಬೋಳಾಗ್ತಿದೆ ಅಂತ ಚಿಂತೆ ಬಿಡಿ, ಇಲ್ಲೊಂದು ಗುಡ್​ ನ್ಯೂಸ್​ ಇದೆ


ಸ್ವಲ್ಪ ಹೊತ್ತು ಕಾಯಿರಿ: ನೀವು ಕುಡಿಯುವ ಮೊದಲು ನೀರು ಸ್ವಲ್ಪ ತಣ್ಣಗಾಗುವವರೆಗೆ ಕಾಯಿರಿ. ತಾಪಮಾನವನ್ನು ಪರೀಕ್ಷಿಸಲು ನಿಮ್ಮ ಬೆರಳನ್ನು ಬಳಸಬೇಡಿ. ನಿಮ್ಮ ಬೆರಳು ನಿಮ್ಮ ಬಾಯಿಗಿಂತ ಹೆಚ್ಚಿನ ತಾಪಮಾನವನ್ನು ತಡೆದುಕೊಳ್ಳಬಲ್ಲದು. ಸ್ವಲ್ಪ ಸಮಯ ಕಾಯಿರಿ ಮತ್ತು ನಿಧಾನವಾದ ಸಿಪ್‌ ನೊಂದಿಗೆ ಪ್ರಾರಂಭಿಸಿ.


ಒಟ್ಟಾರೆ, ಮಳೆಗಾಲ ಹಾಗೂ ಚಳಿಗಾಲದಲ್ಲಿ ಶರೀರ ಬೆಚ್ಚಗಾಗುತ್ತೆ ಅನ್ನೋ ಕಾರಣದಿಂದ ಬಿಸಿನೀರಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಬಿಸಿನೀರು ಕುಡಿಯುವ ಮುನ್ನ ಅದರಿಂದ ಆಗುವ ದುಷ್ಪರಿಣಾಮಗಳನ್ನೂ ಪರಿಗಣಿಸಬೇಕು ಅನ್ನೋದು ತಜ್ಞರ ಅಭಿಪ್ರಾಯ.

Published by:Sandhya M
First published: