Weight Gain: ಅಯ್ಯೋ ತುಂಬಾ ತೆಳ್ಳಗಿನಿದ್ದೀನಿ ಅನ್ನೋ ಚಿಂತೆ ಬಿಡಿ ದಪ್ಪಗಾಗೋಕೆ ಹೀಗೆ ಮಾಡಿ

Weight Gain: ದಿನೇ ದಿನೇ ಬದಲಾಗುತ್ತಿರುವ ಬದುಕಿನಲ್ಲಿ ತೂಕ ಇಳಿಕೆ ತೂಕ ಏರಿಕೆ ಇವೆರಡೂ ದೊಡ್ಡ ಪ್ರಾಮುಖ್ಯತೆಯಾಗಿ ಪರಿವರ್ತನೆಯಾಗುತ್ತಿದೆ ಫಿಟ್‍ನೆಸ್ ಉತ್ಸಾಹಿಗಳು ಮಧುಮೇಹಿಗಳು ಅಥವಾ ಹೃದ್ರೋಗಿಗಳು ಸ್ಥೂಲಕಾಯದ ಜನರು ಹೀಗೆ ಹೆಚ್ಚಿನವರಿಗೆ ತೂಕ ಇಳಿಕೆಯೇ ಆದ್ಯತೆಯಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನೀವು ತೆಳ್ಳಗಿನ ದೇಹದ(thin body) ಸಮಸ್ಯೆಗೆ ಒಳಗಾಗಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮ್ಮಗೆ ತುಂಬಾ ಉಪಯುಕ್ತವಾಗಿದೆ. ಅಂತಹ ಕೆಲವು ಸಲಹೆಗಳನ್ನು ನಾವು ನಿಮಗಾಗಿ ತಂದಿದ್ದೇವೆ, ಇದರ ಸಹಾಯದಿಂದ ನೀವು ತೂಕವನ್ನು ಹೆಚ್ಚಿಸಿಕೊಳ್ಳಬಹುದು. ವಾಸ್ತವವಾಗಿ, ಅನೇಕ ಜನರು ವೇಗವಾಗಿ ಹೆಚ್ಚುತ್ತಿರುವ (increasing)ದೇಹ ತೂಕದ ಬಗ್ಗೆ ಚಿಂತಿತರಾಗಿದ್ದು ಮತ್ತು ತೂಕ ಇಳಿಸಿಕೊಳ್ಳಲು ಜಿಮ್‌ಗೆ ಹೋಗುತ್ತಾರೆ. ಅದೇ ರೀತಿ, ಕೆಲವು ಜನರು ದೌರ್ಬಲ್ಯದ (weakness)ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ (headache)ಮತ್ತು ತೂಕ ಹೆಚ್ಚಿಸಲು (Weight Gain)ಹಗಲು ರಾತ್ರಿ ವರ್ಕ್ ಔಟ್ ಮಾಡುತ್ತಾರೆ.

ದಿನೇ ದಿನೇ ಬದಲಾಗುತ್ತಿರುವ ಬದುಕಿನಲ್ಲಿ ತೂಕ ಇಳಿಕೆ, ತೂಕ ಏರಿಕೆ ಇವೆರಡೂ ದೊಡ್ಡ ಪ್ರಾಮುಖ್ಯತೆಯಾಗಿ ಪರಿವರ್ತನೆಯಾಗುತ್ತಿದೆ. ಫಿಟ್‍ನೆಸ್ ಉತ್ಸಾಹಿಗಳು, ಮಧುಮೇಹಿಗಳು ಅಥವಾ ಹೃದ್ರೋಗಿಗಳು, ಸ್ಥೂಲಕಾಯದ ಜನರು ಹೀಗೆ ಹೆಚ್ಚಿನವರಿಗೆ ತೂಕ ಇಳಿಕೆಯೇ ಆದ್ಯತೆಯಾಗಿದೆ. ಆದರೂ, ಕೆಲವು ಜನರು ಕಡಿಮೆ ತೂಕ ಹೆಚ್ಚಿಸಿಕೊಳ್ಳುವುದಕ್ಕೆ ಹೋರಾಡುತ್ತಿದ್ದಾರೆ. ಅಂದರೆ ಆರೋಗ್ಯಕರ ರೀತಿಯಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲದೇ ತೂಕ ಗಳಿಕೆ ಮಾಡುವುದೇ ದೊಡ್ಡ ಸವಾಲಾಗುತ್ತಿದೆ.

ಇದನ್ನೂ ಓದಿ: Weight Gain Tips: ಬಹುಬೇಗನೆ ತೂಕ ಹೆಚ್ಚಿಸಿಕೊಳ್ಳಬೇಕಾ? ಹಾಗಿದ್ದರೆ ಈ ಆರೋಗ್ಯಕರ ವಿಧಾನ ಅನುಸರಿಸಿ

ಅನೇಕರಿಗೆ ತೂಕ ಹೆಚ್ಚಿಸುವುದು ಸುಲಭದ ಕೆಲಸದಂತೆ ತೋರುತ್ತಿದ್ದರೂ, ಆರೋಗ್ಯಕರ ತೂಕ ಹೆಚ್ಚಾಗುವಿಕೆಯು ಸರಿಯಾದ ಪ್ರಮಾಣದಲ್ಲಿ ಸರಿಯಾದ ಆಹಾರವನ್ನು ಸೇವಿಸುವ ಕ್ರಮದೊಂದಿಗೆ ಸಂಯೋಜಿಸಲ್ಪಟ್ಟಿದೆ. ಹಾಗಾಗಿ ನಿಮ್ಮ ಆರೋಗ್ಯದ ಮೇಲೆ ರಾಜಿ ಮಾಡಿಕೊಳ್ಳದೆ ಅಥವಾ ಸ್ಥೂಲಕಾಯತೆಗೆ ಒಳಗಾಗದೇ ದಪ್ಪಗಾಗಲು ಕೆಲವು ಮಾರ್ಗಗಳಿವೆ. ಆದರೆ ಅದನ್ನು ಸರಿಯಾದ ಕ್ರಮದಲ್ಲಿ ರೂಢಿಸಿಕೊಳ್ಳಬೇಕಷ್ಟೇ.

ಸರಳ ಕಾರ್ಬೋಹೈಡ್ರೇಟ್‍ಗಳನ್ನು ಯಥೇಚ್ಛವಾಗಿ ಸೇವಿಸಿ
ಸಾಮಾನ್ಯವಾಗಿ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಕಾರ್ಬೋಹೈಟ್ರೇಟ್‍ಗಳಿಂದ ದೂರವಿರುವಂತೆ ಸೂಚಿಸಲಾಗುತ್ತದೆ. ಆದರೆ ತೂಕ ಏರಿಸಿಕೊಳ್ಳುವವರು ಯಥೇಚ್ಛವಾಗಿ ಆಲೂಗೆಡ್ಡೆ, ಹಣ್ಣುಗಳು, ಹಾಲು, ಹಾಲಿನ ಪದಾರ್ಥಗಳನ್ನು ಸೇವಿಸುವಂತೆ ಸಲಹೆ ನೀಡಲಾಗುತ್ತದೆ. ಪಿಷ್ಟಯುಕ್ತ ಆಹಾರಗಳು, ಧಾನ್ಯಗಳು, ಕ್ಯಾಲೋರಿಯುಕ್ತ ಆಹಾರ ಸೇವಿಸಬಹುದಾಗಿದೆ.

ನಿಮ್ಮ ಊಟದಲ್ಲಿರಲಿ ಆರೋಗ್ಯಕರ ಕೊಬ್ಬಿನಾಂಶ
ಆಲಿವ್ ಎಣ್ಣೆ, ದೇಸಿ ತುಪ್ಪ, ಬೀಜಗಳು, ನಟ್ಸ್‌ನಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳು ವ್ಯಕ್ತಿಯನ್ನು ಅನಾರೋಗ್ಯಕರದಿಂದ ದೂರವಿರಿಸುತ್ತದೆ ಮತ್ತು ಕಡಿಮೆ ತೂಕದ ಜನರು ತೂಕ ಹೆಚ್ಚಿಸಿಕೊಳ್ಳಲು ಸುರಕ್ಷಿತವಾದ ಪದಾರ್ಥಗಳಾಗಿವೆ. ಈ ಆಹಾರಗಳು, ತೂಕ ಹೆಚ್ಚಿಸಲು ಸಹಾಯ ಮಾಡುವುದರ ಜೊತೆಗೆ, ಕೊಲೆಸ್ಟ್ರಾಲ್ ನಿಯಂತ್ರಕಗಳು ಎಂದು ಕರೆಯಲ್ಪಡುತ್ತವೆ ಮತ್ತು ಮೂಳೆ ಹಾಗೂ ಹೃದಯದ ಆರೋಗ್ಯಕ್ಕೂ ಇದು ಪ್ರಯೋಜನಕಾರಿಯಾಗಿದೆ.

ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಿ
ಆಶ್ಚರ್ಯವಾದರೂ ಸತ್ಯ. ವ್ಯಾಯಾಮವು ತೂಕ ಇಳಿಕೆಯಲ್ಲಿ ಎಷ್ಟು ಮುಖ್ಯವೋ ತೂಕ ಏರಿಕೆಯಲ್ಲೂ ಸಹ ಅಷ್ಟೇ ಮುಖ್ಯ ಪಾತ್ರ ವಹಿಸುತ್ತದೆ. ತೂಕ ಏರಿಕೆ ಎಂದರೆ ಆಹಾರ ತಿನ್ನುವುದರಿಂದ ಹೆಚ್ಚುವುದಲ್ಲ. ಇದು ಸ್ನಾಯುಗಳ ದ್ರವ್ಯರಾಶಿ ಹೆಚ್ಚಿಸಿಕೊಳ್ಳುವುದಾಗಿದೆ. ಸ್ನಾಯುವಿನ ದ್ರವ್ಯರಾಶಿ ಹೆಚ್ಚಿಸಲು ಶಕ್ತಿ ತರಬೇತಿಯ ಮೇಲೆ ಗಮನಹರಿಸಬೇಕೆ ವಿನಃ ಕಾರ್ಡಿಯೋದ ಮೇಲಲ್ಲ ಎಂಬುದನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

ನಾಲ್ಕು ಗಂಟೆಗೊಮ್ಮೆ ಆಹಾರ ಸೇವಿಸುವುದು ಮರೆಯಬೇಡಿ
ಆರೋಗ್ಯಕರ ತೂಕ ಹೆಚ್ಚಾಗಲು, ದೀರ್ಘಕಾಲ ಹಸಿವಿನಿಂದ ದೂರವಿರುವುದು ಮುಖ್ಯ. ಆರೋಗ್ಯಕರವಾಗಿ ತೂಕವನ್ನು ಹೆಚ್ಚಿಸಲು ಸಣ್ಣ, ಸಮೃದ್ಧ ಮತ್ತು ಆಗಾಗ್ಗೆ ಊಟವನ್ನು ಸೇವಿಸುವುದು ಅತ್ಯಗತ್ಯ. ಮಾನವ ದೇಹವು ಹಸಿವಿನಿಂದ ಬಳಲುತ್ತಿರುವಾಗ, ಶಕ್ತಿಯ ಉತ್ಪಾದನೆಗೆ ಪ್ರಸ್ತುತ ಮೂಲಗಳನ್ನು ನಾಶಪಡಿಸುತ್ತದೆ.

ಇದನ್ನೂ ಓದಿ:Weight Loss Tips: ನೀವು ಬೆಳಗ್ಗೆ ಮಾಡುವ ಈ ತಪ್ಪುಗಳು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು ಎಚ್ಚರ

ಇದರಿಂದಾಗಿ ತೂಕ ನಷ್ಟ ಉಂಟಾಗುತ್ತದೆ. ಆದ್ದರಿಂದ, ನಿಮ್ಮ ಗುರಿಗಳನ್ನು ಸಾಧಿಸಲು ಪ್ರತಿದಿನ 4 ಗಂಟೆಗೊಮ್ಮೆ ಪಿಷ್ಟಯುಕ್ತ, ಕೊಬ್ಬಿನಾಂಶ ಯಥೇಚ್ಛವಾಗಿರುವ, ಕಾರ್ಬೋಹೈಡ್ರೇಟ್‍ಗಳನ್ನೊಳಗೊಂಡಿರುವ ಆಹಾರವನ್ನು ಸೇವಿಸಿ.

ಮೇಲಿನ ಎಲ್ಲಾ ನಾಲ್ಕು ಹಂತಗಳನ್ನು ಸಮರ್ಪಕವಾಗಿ ಪಾಲಿಸಿದರೆ ದೇಹಕ್ಕೆ ಯಾವುದೇ ಹಾನಿಯಿಲ್ಲದೇ ತೂಕವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
Published by:vanithasanjevani vanithasanjevani
First published: