ನೈಲ್ ಪಾಲಿಶ್ ಅಂದರೆ ಯಾವ ಹುಡುಗಿಯರು ತಾನೇ ಇಷ್ಟಪಡಲ್ದ. ನೈಲ್ ಪಾಲಿಶ್ ಹಚ್ಚುವುದು ಅವರ ಬಹಳ ಇಷ್ಟದ ಕೆಲಸ. ತಮ್ಮ ಸುಂದರ ಉಗುರುಗಳಿಗೆ ಬಣ್ಣವನ್ನು ಹಚ್ಚಿ ಇನ್ನು ಸುಂದರಗೊಳಿಸುವುದು ಅವರಿಗೂ ಇಷ್ಟ. ಆದರೆ ಕೆಲವೊಮ್ಮೆ ನೈಲ್ ಪಾಲಿಶ್ ಹಚ್ಚುವಾಗ ಅಥವಾ ಖರೀದಿ ಮಾಡುವಾಗ ಹಲವಾರು ತಪ್ಪುಗಳನ್ನು ಮಾಡುತ್ತಾರೆ. ನೈಲ್ ಪಾಲಿಶ್ ಆಯ್ಕೆ ಮಾಡುವಾಗ ಮಾಡುವ ತಪ್ಪುಗಳು ನಿಮ್ಮ ಉಗುರಿನ ಅಂದವನ್ನು ಮತ್ತು ಆರೋಗ್ಯವನ್ನು ಹಾಳು ಮಾಡುತ್ತದೆ.
ಹಾಗಾದ್ರೆ ನೈಲ್ ಪಾಲಿಶ್ ಆಯ್ಕೆ ಮಾಡುವಾಗ ಮತ್ತೆ ಹಚ್ಚುವಾಗ ಗಮನದಲ್ಲಿಟ್ಟುಕೊಳ್ಳ ಬೇಕಾಗಿರುವ ಅಂಶಗಳು ಇಲ್ಲಿದೆ.
ಹುಡುಗಿಯರು ಉಗುರು ಬಣ್ಣವನ್ನು ಆರಿಸುವಾಗ ಮಾಡುವ ದೊಡ್ಡ ತಪ್ಪು ಎಂದರೆ ಅವರು ಧರಿಸಿರುವ ಉಡುಗೆಗೆ ಮ್ಯಾಚ್ ಆಗುವ ನೈಲ್ ಪಾಲಿಶ್ ಸೆಲೆಕ್ಟ್ ಮಾಡಿಕೊಳ್ಳುತ್ತಾರೆ. ಅದೇ ಅವರ ಉಗುರಿನ ಅಂದವನ್ನು ಹಾಳು ಮಾಡುತ್ತದೆ. ಯಾವಾಗಲೂ ನಿಮ್ಮ ಚರ್ಮದ ಬಣ್ಣಕ್ಕೆ ಹೊಂದುವಂತ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬೇಕು. ಆಗ ನಿಮ್ಮ ಉಗುರಿಗೆ ಒಂದು ಕಳೆ ಬರುತ್ತದೆ. ಅಲ್ಲದೇ ಬಟ್ಟೆಯ ಜೊತೆ ನೈಲ್ ಪಾಲಿಶ್ ಮ್ಯಾಚ್ ಮಾಡುವುದು ಸಾಮಾನ್ಯ ಮತ್ತು ಕೆಲವೊಮ್ಮೆ ಆಭಾಸವಾಗುವ ಸಾಧ್ಯತೆ ಇರುತ್ತದೆ. ನಿಮ್ಮ ಚರ್ಮದ ಬಣ್ಣ ಮತ್ತು ಬಟ್ಟೆಯ ಬಣ್ಣ ತುಂಬಾ ವ್ಯತ್ಯಾಸವಿದ್ದಲ್ಲಿ , ನೀವು ಹಚ್ಚಿರುವ ನೈಲ್ ಪಾಲಿಶ್ ಸಹ ಚನ್ನಾಗಿ ಕಾಣುವುದಿಲ್ಲ. ಹೇಗೆ ನೀವು ನಿಮ್ಮ ಚರ್ಮದ ಬಣ್ಣವನ್ನು ಗಮನದಲ್ಲಿಟ್ಟುಕೊಂಡು ಹೇರ್ ಕಲ್ಲರ್ ಮತ್ತು ಲಿಪ್ಸ್ಟಿಕ್ ಅಥವಾ ಇತರ ಮೇಕಪ್ ಸಾಮಾಗ್ರಿಗಳನ್ನು ತೆಗೆದುಕೊಳ್ಳುತ್ತೀರೋ ಹಾಗೆಯೆ ನೈಲ್ ಪಾಲಿಶ್ ಕೂಡಾ ನಿಮ್ಮ ಚರ್ಮದ ಬಣ್ಣಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಿ.
ಇದನ್ನೂ ಓದಿ: ಉಗುರಿನ ಆರೋಗ್ಯ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ
ಚರ್ಮದ ಟೋನ್ಗಳಲ್ಲಿ ಹಲವು ವಿಧಗಳಿವೆ ಎಂಬುದು ನಿಮಗೆ ಅರಿವಿದೆ. ಚರ್ಮದ ಬಣ್ಣವು ಹಲವು ವಿಭಿನ್ನ ಛಾಯೆಗಳನ್ನು ಹೊಂದಿರುತ್ತದೆ. ಹಾಗಾಗಿ ನಿಮ್ಮ ಸ್ಕಿನ್ ಟೋನ್ ಅನುಗುಣವಾಗಿ ನೈಲ್ ಪಾಲಿಶ್ ಆಯ್ಕೆ ಮಾಡಿಕೊಳ್ಳಬೇಕು. ನೀವು ಎಷ್ಟೇ ಬಿಳಿಯ ಚರ್ಮದವರಾಗಿರಲಿ ನಿಮ್ಮ ಟೋನ್ಗೆ ಎಲ್ಲ ಡಾರ್ಕ್ ನೈಲ್ ಪಾಲಿಶ್ಗಳು ಹೊಂದುವುದಿಲ್ಲ. ಹಾಗೆಯೇ ನಿಮ್ಮ ಬಣ್ಣ ಗಾಢವಾಗಿದ್ದಲ್ಲಿ ಲೈಟ್ ಕಲ್ಲರ್ ನೈಲ್ ಪಾಲಿಶ್ ಸೂಕ್ತ ಎಂದುಕೊಳ್ಳುವುದು ತಪ್ಪು. ನೀವು ಹೇಗೆ ನಿಮ್ಮ ಸ್ಕಿನ್ ಟೋನ್ ಅನುಗುಣವಾಗಿ ಪೌಂಡೇಷನ್ ಕ್ರೀಮ್ ತೆಗೆದುಕೊಳ್ಳುತ್ತೀರೊ ಹಾಗೆಯೇ ಇದು ಕೂಡ. ಯಾವಾಗಲೂ ನೈಲ್ ಪಾಲಿಶ್ ಆಯ್ಕೆ ಮಾಡುವಾಗ ಎಚ್ಚರದಿಂದಿರಿ.
ಇನ್ನು ನೈಲ್ ಪಾಲಿಶ್ ಹಚ್ಚುವಾಗ ಸಹ ಹಲವು ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಾಮಾನ್ಯವಾಗಿ ನೈಲ್ ಪಾಲಿಶ್ ಹಚ್ಚುವಾಗ ಎರಡು ಕೊಟ್ ಹಚ್ಚುತ್ತೇವೆ. ಅದಕ್ಕೆ ಕಾರಣ ಮೊದಲ ಕೋಟ್ ಹಚ್ಚಿದ ಬಳಿಕ ಕೂಡ ಉಗುರು ಕಾಣಿಸುತ್ತಿದ್ದರೆ, ಆಗ ಎರಡನೆ ಕೋಟ್ ಹಚ್ಚುತ್ತಿವೆ. ಆದರೆ ಇತ್ತೀಚೆಗೆ ಸುಮ್ಮನೆ ಎರಡು ಕೋಟ್ಗಳನ್ನು ಹಚ್ಚುತ್ತಿದ್ದಾರೆ. ಅದು ತಪ್ಪು. ನೀವು ಕಾರಣವೇ ಇಲ್ಲದೇ ಎರೆಡು ಕೊಟ್ ಹಚ್ಚಿದರೆ, ನೀವು ಹಚ್ಚಿರುವ ನೈಲ್ ಪಾಲಿಶ್ ಬಹು ಬೇಗನೆ ಉದುರಿ ಹೋಗುತ್ತದೆ. ಅಲ್ಲದೆ ಅದು ನಿಮ್ಮ ಉಗುರುಗಳ ಮೇಲೆ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು.
ನೈಲ್ ಪಾಲಿಶ್ ಯಾವಾಗಲೂ ಉತ್ತಮ ಗುಣಮಟ್ಟದ ಒಳ್ಳೆಯ ಕಂಪನಿಯದನ್ನು ಆಯ್ಕೆ ಮಾಡಿ. ಅಲ್ಲದೇ ನೈಲ್ ಪಾಲಿಶ್ ರಿಮೋವರ್ ಕೂಡ ಒಳ್ಳೆಯದನ್ನೇ ಆರಿಸಿಕೊಳ್ಳಿ. ಇನ್ನು ನೀವು ಖರೀದಿಸಿದ ನೈಲ್ ಪಾಲಿಶ್ ಹಚ್ಚಿದ ನಂತರ ನಿಮ್ಮ ಉಗುರು ಒಣಗಿದಂತೆ ಭಾಸವಾದರೆ ಆ ನೈಲ್ ಪಾಲಿಶ್ ಹಚ್ಚುವುದನ್ನು ನಿಲ್ಲಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ