• Home
  • »
  • News
  • »
  • lifestyle
  • »
  • Night Cough Remedy: ರಾತ್ರಿ ಕಾಡುವ ಕೆಮ್ಮಿಗೆ ಈ ಮನೆಮದ್ದುಗಳನ್ನು ಬಳಸಿ ಸಾಕು

Night Cough Remedy: ರಾತ್ರಿ ಕಾಡುವ ಕೆಮ್ಮಿಗೆ ಈ ಮನೆಮದ್ದುಗಳನ್ನು ಬಳಸಿ ಸಾಕು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Remedies For Night Cough: ಕೆಮ್ಮು ಸೈನಸ್, ಮಾಲಿನ್ಯ, ಅಲರ್ಜಿಗಳು ಅಥವಾ ಬ್ಯಾಕ್ಟೀರಿಯಾದ ಸೋಂಕಿನಂತಹ ಅನೇಕ ಕಾರಣಗಳನ್ನು ಹೊಂದಿರಬಹುದು. ಅಲ್ಲದೇ ಹೆಚ್ಚಾಗಿ, ಇದು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಯನ್ನು ಹೆಚ್ಚು ಮಾಡಬಹುದು

  • Share this:

ಹಗಲಿನ ಕೆಮ್ಮುಗಿಂತ (Cough) ರಾತ್ರಿ ಕೆಮ್ಮು (Night Cough) ಹೆಚ್ಚು ಕಿರಿಕಿರಿ ಮತ್ತು ನೋವು ಉಂಟು ಮಾಡುತ್ತದೆ. ರಾತ್ರಿಯ ನಿದ್ರೆಯ (Sleep)  ಸಮಯದಲ್ಲಿ ಕೆಮ್ಮು ಹೆಚ್ಚಾಗಿ ಜನರನ್ನು ಕಾಡುತ್ತದೆ. ಇದು ಉಸಿರಾಟದ ತೊಂದರೆ, ಎದೆ ನೋವು ಮತ್ತು ಬಿಗಿತವನ್ನು ಉಂಟುಮಾಡುತ್ತದೆ. ಇದರಿಂದ ವ್ಯಕ್ತಿಯು ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡದೇ ಇರುತ್ತಾನೆ ಮತ್ತು ಗಂಟಲಿನಲ್ಲಿ ಲೋಳೆ ಅಥವಾ ಕಫವು ಸಿಲುಕಿಕೊಳ್ಳುವುದರಿಂದ ರಾತ್ರಿಯಲ್ಲಿ ಕೆಮ್ಮು ಹೆಚ್ಚಾಗುತ್ತದೆ. ಕೆಮ್ಮು ಸೈನಸ್, ಮಾಲಿನ್ಯ, ಅಲರ್ಜಿಗಳು ಅಥವಾ ಬ್ಯಾಕ್ಟೀರಿಯಾದ ಸೋಂಕಿನಂತಹ ಅನೇಕ ಕಾರಣಗಳನ್ನು ಹೊಂದಿರಬಹುದು. ಅಲ್ಲದೇ ಹೆಚ್ಚಾಗಿ, ಇದು ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆಯನ್ನು (Health Problem) ಹೆಚ್ಚು ಮಾಡಬಹುದು, ಹಾಗಾಗಿ ಅದರ ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ.


ಪೋಸ್ಟ್‌ನಾಸಲ್ ಡ್ರಿಪ್‌

ಪೋಸ್ಟ್‌ನಾಸಲ್ ಡ್ರಿಪ್‌ ಅಥವಾ ಮೂಗಿನ ಹನಿಗಳನ್ನು ಮೇಲ್ಭಾಗದ ಶ್ವಾಸನಾಳದ ಕೆಮ್ಮು ಸಿಂಡ್ರೋಮ್ ಎಂದೂ ಕರೆಯುತ್ತಾರೆ. ಇದು ದೀರ್ಘಕಾಲದ ಕೆಮ್ಮಿನ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಗಂಟಲಿನಲ್ಲಿ ಅಂಟಿಕೊಂಡಿರುವ ಲೋಳೆಯ ಹನಿಗಳಿಂದ ಈ ಕೆಮ್ಮು ಉಂಟಾಗುತ್ತದೆ. ಇದು ಗಂಟಲಿನಲ್ಲಿ ಟಿಕ್ಲಿಂಗ್ ಅನ್ನು ಉಂಟುಮಾಡುತ್ತದೆ ಮತ್ತು ನಿರಂತರ ಕೆಮ್ಮುವಿಕೆಗೆ ಕಾರಣವಾಗಬಹುದು. ಕಣ್ಣುಗಳ ತುರಿಕೆ, ಸೀನು ಮತ್ತು ಮೂಗು ಕಟ್ಟುವುದು ಈ  ಪೋಸ್ಟ್‌ನಾಸಲ್ ಡ್ರಿಪ್‌ನ ಲಕ್ಷಣಗಳು.



ಉಬ್ಬಸ 

ಅಸ್ತಮಾ ಇರುವವರು ತಮ್ಮ ಶ್ವಾಸನಾಳದಲ್ಲಿ ಉರಿಯೂತ ಸಮಸ್ಯೆಯನ್ನು ಹೊಂದಿರುತ್ತಾರೆ. ಇದು ಉಬ್ಬಸ ಮತ್ತು ಕೆಮ್ಮುವಿಕೆಯೊಂದಿಗೆ ಉಸಿರಾಟದ ತೊಂದರೆಗೆ ಕಾರಣವಾಗಬಹುದು. ಆಸ್ತಮಾದಲ್ಲಿ ಕೆಮ್ಮು ರಾತ್ರಿ ಮತ್ತು ಬೆಳಗ್ಗೆ ಅತಿಯಾಗಿರುತ್ತದೆ ಹಾಗೂ ಬಹಳ ಹಿಂಸೆ ನೀಡುತ್ತದೆ. ಕೆಮ್ಮಿನ ಜೊತೆಗೆ, ಉಸಿರಾಟದ ತೊಂದರೆ ಮತ್ತು ಬಿಗಿತವನ್ನು ಸಹ ಈ ಸಮಸ್ಯೆ ಇರುವವರು ಅನುಭವಿಸುತ್ತಾರೆ.




ಜಠರ ಹಿಮ್ಮುಖ ಹರಿವು ರೋಗ 



ಹೊಟ್ಟೆಯ ಆಮ್ಲವು ನಿಮ್ಮ ಅನ್ನನಾಳಕ್ಕೆ ಹಿಂತಿರುಗಿದಾಗ GRD ಸಂಭವಿಸುತ್ತದೆ. ಕೆಮ್ಮು ರಾತ್ರಿಯಲ್ಲಿ ಮಾತ್ರ ಕಾಡಿದರೆ, ಇದು ಆಸಿಡ್ ರಿಫ್ಲಕ್ಸ್ ಕಾರಣವಾಗಬಹುದು. ನಾವು ರಾತ್ರಿಯಲ್ಲಿ ಮಲಗಿದ್ದಾಗ, ಹೊಟ್ಟೆಯ ಆಮ್ಲ ಹಿಮ್ಮುಖ ಹರಿವು ಉಂಟಾಗುತ್ತದೆ ಮತ್ತು ಗಂಟಲಿನ ರಕ್ತನಾಳಗಳಲ್ಲಿ ಸೇರಿ, ಅದು ಕೆಮ್ಮು ಉಂಟಾಗಲು ಕಾರಣವಾಗುತ್ತದೆ. ಈ ಸ್ಥಿತಿಯು ಉಸಿರಾಟದ ತೊಂದರೆ ಮತ್ತು ಎದೆ ನೋವನ್ನು ಉಂಟುಮಾಡಬಹುದು ಎನ್ನುತ್ತಾರೆ ತಜ್ಞರು.




ನ್ಯುಮೋನಿಯಾ 


ನ್ಯುಮೋನಿಯಾ ಕೆಲವೊಮ್ಮೆ ರಾತ್ರಿಯಲ್ಲಿ ಕೆಮ್ಮಿನ ಸಮಸ್ಯೆಗೆ ಕಾರಣವಾಗಬಹುದು. ನ್ಯುಮೋನಿಯಾ ಜ್ವರ, ಶೀತ, ಉಸಿರಾಟದ ತೊಂದರೆ ಮತ್ತು ಎದೆನೋವಿಗೆ ಕಾರಣವಾಗಬಹುದು. ನ್ಯುಮೋನಿಯಾ ದೇಹದಲ್ಲಿ ನಿಧಾನವಾಗಿ ಬೆಳೆಯುವ ಬ್ಯಾಕ್ಟೀರಿಯಾದ ಸೋಂಕು. ನ್ಯುಮೋನಿಯಾ ವಿವಿಧ ಬ್ಯಾಕ್ಟೀರಿಯಾ ಮತ್ತು ವೈರಸ್ಗಳಿಂದ ಉಂಟಾಗುತ್ತದೆ, ಇದು ಒಮ್ಮೆ ಬಂದರೆ ಹೋಗಲಾಡಿಸಲು ಪರದಾಡಬೇಕಾಗುತ್ತದೆ. ಆಸ್ಪತ್ರೆ, ಮಾತ್ರೆ ಹಾಗೂ ಔಷಧಿ ಅಂತ ಒದ್ದಾಡಬೇಕಾಗುತ್ತದೆ.




ರಾತ್ರಿ ಕೆಮ್ಮಿಗೆ ಇಲ್ಲಿದೆ ಮನೆಮದ್ದುಗಳು


ಜೇನುತುಪ್ಪ ಮತ್ತು ಶುಂಠಿಯ ರಸವನ್ನು ಸೇವಿಸಿ


ಬಿಸಿ ನೀರು ಕುಡಿಯಿರಿ


ಕೆಮ್ಮು ಸಿರಪ್ ತೆಗೆದುಕೊಳ್ಳಿ


ತೆರೆದ ಗಾಳಿಯಲ್ಲಿ ವಾಕಿಂಗ್ ಮಾಡುವುದು


ನೆಬ್ಯುಲೈಸರ್ ಬಳಸಿ


ದಿನಕ್ಕೆ 3 ಬಾರಿ ಸ್ಟೀಮಿಂಗ್ ತೆಗೆದುಕೊಳ್ಳಿ


ಲವಂಗವನ್ನು ತಿನ್ನಿ




ಇದನ್ನೂ ಓದಿ: ಈ ಎರಡು ವಸ್ತುಗಳಿದ್ರೆ ಸಾಕು ಶ್ವಾಸಕೋಶದ ಸೋಂಕು ಹತ್ತಿರವೂ ಸುಳಿಯಲ್ಲ


ರಾತ್ರಿಯ ಸಮಯದಲ್ಲಿ ಕೆಮ್ಮು ಬರುವುದು ಸಹಜ, ಆದರೆ ಅತಿಯಾದ ಕೆಮ್ಮು ಕಾಣಿಸಿಕೊಂಡರೆ, ಅದಕ್ಕೆ  ಸರಿಯಾಗಿ ಚಿಕಿತ್ಸೆ ಪಡೆಯಬೇಕು. ರಾತ್ರಿ ಕೆಮ್ಮು ಮಿತಿಯಲ್ಲಿದ್ದರೆ, ಆ  ಸಂದರ್ಭದಲ್ಲಿ ಮೇಲಿನ ಮನೆಮದ್ದುಗಳನ್ನೂ ಸೇವಿಸಬಹುದು. ಆದರೆ, ಹೆಚ್ಚಾಗಿ ಕಾಣಿಸಿಕೊಂಡರೆ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.


Published by:Sandhya M
First published: