HOME » NEWS » Lifestyle » THESE ARE THE REASON WHICH STOPS A WOMAN TO BREAK HER COMPLICATED RELATIONSHIP VB

ಅಸಮಾಧಾನವಿದ್ದರೂ ತುಟಿ ಬಿಚ್ಚದೆ ಸಂಬಂಧ ನಿಭಾಯಿಸುತ್ತಿದ್ದಾರೆ ಅದೆಷ್ಟೋ ಮಹಿಳೆಯರು: ಕಾರಣವೇನು?

ಕೆಲ ಮಹಿಳೆಯರಿಗೆ ನೀವು ಅದೆಷ್ಟು ನಿಂದಿಸಿದರೂ, ನೋಯಿಸಿದರೂ, ಅವರನ್ನು ಅದೆಷ್ಟು ಕೀಳಾಗಿ ನೋಡಿ, ಹೀನಾಯವಾಗಿ ವ್ಯವಹರಿಸಿದರೂ ಕೆಲ ಹೊತ್ತು ಕೋಪಿಸಿಕೊಂಡು ಮತ್ತೆ ಶಾಂತರಾಗುತ್ತಾರೆ.

news18-kannada
Updated:April 7, 2020, 3:03 PM IST
ಅಸಮಾಧಾನವಿದ್ದರೂ ತುಟಿ ಬಿಚ್ಚದೆ ಸಂಬಂಧ ನಿಭಾಯಿಸುತ್ತಿದ್ದಾರೆ ಅದೆಷ್ಟೋ ಮಹಿಳೆಯರು: ಕಾರಣವೇನು?
ಪ್ರಾತಿನಿಧಿಕ ಚಿತ್ರ
  • Share this:
ನಿಮ್ಮ ಗೆಳತಿ ಮಾತುಕತೆ ನಡೆಸುವ ವೇಳೆ ತನ್ನ ಹಾಗೂ ಸಂಗಾತಿ ನಡುವಿನ ಸಂಬಂಧವನ್ನು ಹಲವು ಬಾರಿ ದೂರಿರಬಹುದು. ಅಸಮಾಧಾನ ವ್ಯಕ್ತಪಡಿಸಿರಬಹುದು. ಪ್ರತಿಯಾಗಿ ನೀವು ಕೂಡಾ 'ನೀನು ಖುಷಿಯಾಗಿಲ್ಲವೆಂದಾದರೆ ಈ ಸಂಬಂಧವನ್ನು ಮುರಿದು ದೂರವಿರು ಎಂಬ ಸಲಹೆಯನ್ನೂ ನೀಡಿರಬಹುದು.

ಹೀಗಿದ್ದರೂ ತನ್ನ ಸಂಬಂಧವನ್ನು ಆಕೆ ಮುಂದುವರೆಸಿಕೊಂಡು ಹೋಗುತ್ತಾಳೆ. ಆಕೆ ತಾನು ಸಮಾಧಾನವಿಲ್ಲದಿದ್ದರೂ ಈ ಸಂಬಂಧವನ್ನು ಮುರಿಯದೆ ಸಾಗಲು ಹಲವು ಕಾರಣಗಳಿವೆ. ಅಷ್ಟಕ್ಕೂ ಆಕೆಗೆ ತನ್ನ ಈ ಕ್ಲಿಷ್ಟಕರವಾದ ಸಂಬಂಧವನ್ನು ಮುಂದುವರೆಸಿಕೊಂಡು ಹೋಗುವುದೇಕೆ? ಇಲ್ಲಿವೆ 5 ಕಾರಣಗಳು.

1) ಬಹುಶಃ ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಬಹುದು ಎಂಬ ಆಶಾಕಿರಣ...

ತಾನು ಸಂತೋಷವಾಗಿಲ್ಲ ಎಂಬ ಕಾರಣಕ್ಕೆ ಮುರಿಯಲು ಬಯಸುವ ಸಂಬಂಧವೇ ಮಹಿಳೆಯರನ್ನು ಅತಿ ಹೆಚ್ಚು ಹುಡುಗಿಯರನ್ನು ಬಂಧಿಯನ್ನಾಗಿಸುತ್ತದೆ. ಇದಕ್ಕೆ ಮುಖ್ಯ ಕಾರಣ ಆಕೆ ಆಶಾವಾದಿಯಾಗಿರುವುದು. ಬಹುತೇಕ ಮಹಿಳೆಯರು ಮುಂಬರುವ ದಿನಗಳಲ್ಲಿ ತನ್ನ ಸಂಬಂಧ ಸರಿ ಹೋಗಬಹುದು ಎಂಬ ಚಿಕ್ಕ ನಂಬಿಕೆಯ ಮೇಲೆ ಈ ರೀತಿ ತನ್ನ ಸಂಬಂಧ ಮುರಿದುಕೊಳ್ಳುವುದಿಲ್ಲ. ಈ ನಂಬಿಕೆಯಿಂದಲೇ ಆಕೆ ಎಲ್ಲವನ್ನೂ ಸಹಿಸಿ ಮುಂದೆ ಸಾಗುತ್ತಾಳೆ. ಆದರೆ ಆಕೆಯ ಈ ನಿರ್ಧಾರವೇ ಆಕೆಗೆ ಮುಳುವಾಗಿ ನೋವು ನೀಡುತ್ತಿರುತ್ತದೆ.

ನಿಮ್ಮ ಕೂದಲು ಕಿತ್ತು ಬರುತ್ತಿದೆಯೇ?; ಹಾಗಾದ್ರೆ ಅದು ಕೂದಲು ಉದುರೋ ಸಮಸ್ಯೆ ಅಲ್ಲವೇ ಅಲ್ಲ

2) ಸಮಾಜ ತನ್ನನ್ನು ಯಾವ ದೃಷ್ಟಿಯಿಂದ ನೋಡಬಹುದು ಎಂಬ ಭಯ?

ಸಾಮಾನ್ಯವಾಗಿ ಬಹುತೇಕ ಮಹಿಳೆಯರು ತಮ್ಮ ಗೆಳೆಯರು, ಮನೆ ಮಂದಿ ಹಾಗೂ ಸಮಾಜಕ್ಕೆ ಅತ್ಯಂತ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಇದೇ ಕಾರಣದಿಂದ ಇವರೆಲ್ಲರೂ ತನ್ನ ಬಗ್ಗೆ ಕೆಟ್ಟದಾಗಿ ಯೋಚಿಸಬಾರದೆಂದು ತೀರಾ ಹದಗೆಟ್ಟ ಸಂಬಂಧವನ್ನೂ ಸಹಿಸಿಕೊಂಡು ಜೀವನ ಸಾಗಿಸುತ್ತಾರೆ. 'ಆಕೆ ಒಂದು ಸಂಬಂಧವನ್ನು ನಿಭಾಯಿಸಲೂ ಅಶಕ್ತಳು' ಎಂದು ಯಾರೂ ಯೋಚಿಸಬಾರದೆಂಬುದೇ ಆಕೆಯ ಉದ್ದೇಶವಾಗಿರುತ್ತದೆ.3) ಸಂಗಾತಿಯೊಡನೆ ಕಳೆದ ಕೆಲ ಸುಮಧುರ ಕ್ಷಣಗಳು ಆಕೆಯನ್ನು ತಡೆಯುತ್ತಿರುತ್ತವೆ

ಕೆಲ ಮಹಿಳೆಯರಿಗೆ ನೀವು ಅದೆಷ್ಟು ನಿಂದಿಸಿದರೂ, ನೋಯಿಸಿದರೂ, ಅವರನ್ನು ಅದೆಷ್ಟು ಕೀಳಾಗಿ ನೋಡಿ, ಹೀನಾಯವಾಗಿ ವ್ಯವಹರಿಸಿದರೂ ಕೆಲ ಹೊತ್ತು ಕೋಪಿಸಿಕೊಂಡು ಮತ್ತೆ ಶಾಂತರಾಗುತ್ತಾರೆ. ಕೆಲವೊಂದು ಬಾರಿ ತನ್ನ ತಪ್ಪಿರದಿದ್ದರೂ ಕಾರಣವಿಲ್ಲದೆ ತನಗೆ ಬೈದು ಕೋಪಿಸಿಕೊಂಡ ತನ್ನ ಸಂಗಾತಿಯ ಬಳಿ ತಾನೇ ಕ್ಷಮೆ ಯಾಚಿಸಿ ಮಾತನಾಡಿಸಲು ಯತ್ನಿಸುತ್ತಾರೆ.

World Health Day 2020: ಇಂದು ವಿಶ್ವ ಆರೋಗ್ಯ ದಿನ: ಭಾರತದ ಆರೋಗ್ಯ ಆರೋಗ್ಯಕರವಾಗಿಲ್ಲ..!

ಇಂತಹ ವ್ಯಕ್ತಿತ್ವದ ಮಹಿಳೆಯರು ತನ್ನ ಸಂಬಂಧದಲ್ಲಿ ಎಷ್ಟೇ ಸಮಸ್ಯೆ ಇರಲಿ, ಆದರೆ ಸಂಬಂಧ ಮುರಿಯುವ ಬಗ್ಗೆ ಯೋಚಿಸುವುದಿಲ್ಲ. ಯಾಕೆಂದರೆ ಮನದಲ್ಲಿರುವ ತನ್ನ ಸಂಗಾತಿಯೊಡನೆ ಕಳೆದ ಸುಮಧುರ ಕ್ಷಣಗಳು ಈ ಎಲ್ಲಾ ಕಹಿ ವಿಚಾರಗಳನ್ನು ಮರೆಯುವಂತೆ ಮಾಡುತ್ತವೆ. ಇದೇ ಕಾರಣದಿಂದ ಇಂತಹ ವ್ಯಕ್ತಿತ್ವದ ಮಹಿಳೆಯರು ಎಷ್ಟೇ ಸಮಸ್ಯೆಗಳಿದ್ದರೂ ಸವಿನೆನಪುಗಳೊಂದಿಗೆ ಜೀವನ ಸಾಗಿಸುತ್ತಾರೆ.

4) ಸಂಗಾತಿಯೊಡನೆ ಹಂಚಿಕೊಂಡ ತೀರಾ ಖಾಸಗಿ ವಿಚಾರಗಳು

ಹಲವು ಬಾರಿ ಸಂಬಂಧ ಮುಂದುವರೆಸಿಕೊಂಡು ಹೋಗುವುದು ಮಹಿಳೆ ಹಾಗೂ ಪುರುಷ ಇಬ್ಬರಿಗೂ ಬಹಳ ಕಠಿಣವೆನಿದಸುತ್ತದೆ. ಆದರೂ ಮಹಿಳೆಯರು ಸಂಬಂಧವನ್ನು ಮುರಿಯಲು ತಯಾರಿರುವುದಿಲ್ಲ, ಇದಕ್ಕೆ ಕಾರಣ ಸಂಗಾತಿಯ ಬಳಿ ಇರುವ ಸಂಪತ್ತು ಅಥವಾ ಇಬ್ಬರೂ ಒಂದಾಗಿ ಕಳೆದ ಸಿಹಿ ನೆನಪುಗಳು ಸಂತಂದುಕೊಂಡರೆ ಅದು ತಪ್ಪು. ವಾಸ್ತವವಾಗಿ ಮಹಿಳೆ ತನ್ನ ಸಂಗಾತಿಯೊಡನೆ ಹಂಚಿಕೊಂಡ ಕೆಲವು ತೀರಾ ಖಾಸಗಿ ವಿಚಾರಗಳೇ ಆಕೆಗೆ ತನ್ನ ಸಂಬಂಧವನ್ನು ಮುರಿಯಲು ಬಿಡದೆ ತಡೆಯುತ್ತವೆ. ತನ್ನಿಂದ ದೂರವಾದ ತನ್ನ ಸಂಗಾತಿ ತನ್ನ ಈ ಖಾಸಗಿ ವಿಚಾರಗಳನ್ನು ಹಾಗೂ ತಮ್ಮಿಬ್ಬರ ನಡುವಿನ ವೈಯುಕ್ತಿಕ ವಿಚಾರಗಳನ್ನು ಹೊರಗಿನ ಜಗತ್ತಿಗೆ ತಿಳಿಸಬಹುದು ಎಂಬ ಭಯವೇ ಇದಕ್ಕೆ ಕಾರಣವೆನ್ನಬಹುದು.

5) ಆತ್ಮವಿಶ್ವಾಸದ ಕೊರತೆ

ಕೆಲ ಮಹಿಳೆಯರು ಉದ್ಯೋಗಿಗಳಾಗಿರುತ್ತಾರೆ, ಕೊಂಚ ಸಂಪಾದನೆಯನ್ನೂ ಮಾಡುತ್ತಾರೆ, ಮನೆಯಿಂದ ದೂರ ಕೆಲಸ ಮಾಡುತ್ತಾರೆ. ಆದರೆ ಅವರಿಗೂ ತನಗೊಬ್ಬ ಗೆಳೆಯ ಬೇಕು, ಒಂದು ಆಸರೆ ಬೇಕು ಎಂಬ ಆಸೆ ಮನದಲ್ಲಿರುತ್ತದೆ. ಇಂತಹ ಮಹಿಳೆಯರು ತಮ್ಮ ಬಳಿ ಎಲ್ಲಾ ಇದ್ದರೂ, ಆತ್ಮವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ. ಈ ಈ ಕೊರತೆಯೇ ಅವರು ತೀರಾ ಹದಗೆಟ್ಟ ಸಂಬಂದವನ್ನು ಮುರಿಯದೆ ಅದನ್ನು ನಿಭಾಯಿಸಿಕೊಂಡು ಹೋಗುವಂತೆ ಮಾಡುತ್ತವೆ.ತಾವು ತನ್ನ ಜೊತೆಗಾರನನ್ನು ಬಿಟ್ಟು ಜೀವಿಸಲು ಸಅಧ್ಯ ಎಂಬ ವಿಶ್ವಾಸವನ್ನೇ ಅವರು ಕಳೆದುಕೊಂಡಿರುತ್ತಾರೆ.
Youtube Video
First published: April 7, 2020, 3:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories