Travel: ಜೀವನದಲ್ಲಿ ಒಮ್ಮೆಯಾದ್ರೂ ಪ್ರಯಾಣ ಮಾಡಲೇಬೇಕಾದ ಭಾರತದ 10 ಸುಂದರ ರೈಲು ಮಾರ್ಗಗಳಿವು

ಭಾರತದ ವಿಭಿನ್ನ ಸಂಸ್ಕೃತಿ , ಪಾರಂಪರಿಕ ತಾಣಗಳು, ಧಾರ್ಮಿಕ ಸ್ಥಳಗಳು, ಅಭಯಾರಣ್ಯಗಳು, ಸಮುದ್ರ ತೀರಗಳು , ಪರ್ವತ ಶ್ರೇಣಿಗಳು , ಸೇತುವೆಗಳು, ಸುರಂಗಗಳು, ಜಲಪಾತಗಳು , ಐತಿಹಾಸಿಕ ಸ್ಥಳಗಳು ಮುಂತಾದವುಗಳನ್ನೆಲ್ಲಾ ತೋರಿಸುವ ಅನೇಕ ರೈಲು ಮಾರ್ಗಗಳು ನಮ್ಮ ದೇಶದಲ್ಲಿವೆ. ಜೀವನದಲ್ಲಿ ಒಮ್ಮೆಯಾದರೂ, ಇಂತಹ ಮಾರ್ಗಗಳಲ್ಲಿ ಸಾಗುವ ರೈಲುಗಳಲ್ಲಿ ಪ್ರಯಾಣಿಸುವ ಅನುಭವ ಪಡೆಯಲೇಬೇಕು. ಅಂತಹ ಅವಿಸ್ಮರಣೀಯ ಅನುಭವ ನೀಡುವ ಭಾರತದ 10 ರೈಲು ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ರೈಲು ಪ್ರಯಾಣವನ್ನು (Travel by train) ಇಷ್ಟಪಡುತ್ತೀರಾ? ರೈಲಿನ ಮೂಲಕ ಭಾರತದ ಸುಂದರ ತಾಣಗಳನ್ನು ನೋಡಿಕೊಂಡು ಆಸೆ ನಿಮಗಿದೆಯೇ? ಹಾಗಿದ್ದರೆ ಅದು ಖಂಡಿತಾ ಸಾಧ್ಯವಿದೆ. ಏಕೆಂದರೆ, ಭಾರತದ ವಿಭಿನ್ನ ಸಂಸ್ಕೃತಿ, ಪಾರಂಪರಿಕ ತಾಣಗಳು, ಧಾರ್ಮಿಕ ಸ್ಥಳಗಳು, ಅಭಯಾರಣ್ಯಗಳು, ಸಮುದ್ರ ತೀರಗಳು, ಪರ್ವತ ಶ್ರೇಣಿಗಳು, ಸೇತುವೆಗಳು, ಸುರಂಗಗಳು, ಜಲಪಾತಗಳು, ಐತಿಹಾಸಿಕ ಸ್ಥಳಗಳು (Places) ಮುಂತಾದವುಗಳನ್ನೆಲ್ಲಾ ತೋರಿಸುವ ಅನೇಕ ರೈಲು ಮಾರ್ಗಗಳು ನಮ್ಮ ದೇಶದಲ್ಲಿವೆ. ಜೀವನದಲ್ಲಿ ಒಮ್ಮೆಯಾದರೂ, ಇಂತಹ ಮಾರ್ಗಗಳಲ್ಲಿ ಸಾಗುವ ರೈಲುಗಳಲ್ಲಿ ಪ್ರಯಾಣಿಸುವ ಅನುಭವ (Experience) ಪಡೆಯಲೇಬೇಕು. ಅಂತಹ ಅವಿಸ್ಮರಣೀಯ ಅನುಭವ ನೀಡುವ ಭಾರತದ 10 ರೈಲು ಮಾರ್ಗಗಳ ಕುರಿತ ಮಾಹಿತಿ ಇಲ್ಲಿದೆ.

1. ಹಿಮಾಲಯದ ರಾಣಿ : ಕಾಲ್ಕಾ - ಶಿಮ್ಲಾ
ಶಿಮ್ಲಾಗೆ ಪ್ರವಾಸ ಹೋಗಿದ್ದೀರಿ ಎಂದಾದರೆ, ನೀವು ಕಾಲ್ಕಾದಿಂದ ಶಿಮ್ಲಾಗೆ ಟಾಯ್ ಟ್ರೈನ್‍ನಲ್ಲಿ ಪ್ರಯಾಣ ಮಾಡದಿದ್ದರೆ, ಖಂಡಿತಾ ನಿಮ್ಮ ಪ್ರವಾಸ ಅಪೂರ್ಣವೆನಿಸಿಕೊಳ್ಳುತ್ತದೆ. ಅದು ಈಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವೆಂದು ಪರಿಗಣಿಸಲ್ಪಟ್ಟಿದೆ ಕೂಡ. ಕಾಲ್ಕಾದಿಂದ ಶಿಮ್ಲಾಗೆ ಸಾಗುವ ಈ ಐತಿಹಾಸಿಕ ಹಿಮಾಲಯನ್ ಕ್ವೀನ್ ರೈಲು ಪ್ರಯಾಣ , ನಿಮಗೆ ಶಿಮ್ಲಾವನ್ನು ಸುತ್ತುವರೆದಿರುವ ಸುಂದರ ಕಣಿವೆಗಳು ಮತ್ತು ಹುಲ್ಲುಗಾವಲುಗಳ ದರ್ಶನ ಮಾಡಿಸುತ್ತದೆ.

ಶಿಮ್ಲಾದ ಚುಮುಚುಮು ಚಳಿಗೆ ಬೆಟ್ಟದ ಮೇಲೆ ಸಾಗುವ ರೈಲಿನ ಮೂಲಕ ಪ್ರಯಾಣಿಸುತ್ತಾ, ಶಿಮ್ಲಾದ ನಿಸರ್ಗ ಸೌಂದರ್ಯವನ್ನು ಸವಿಯುವ ಅನುಭವ ಸದಾ ನೆನಪಿನಲ್ಲಿ ಉಳಿಯುತ್ತದೆ. ಇಂತಹ ಪ್ರಯಾಣದ ಅನುಭವ ನಮ್ಮ ದೇಶದಲ್ಲಿ ನಿಮಗೆ ಬೇರೆಲ್ಲೂ ಸಿಗುವುದಿಲ್ಲ. 96 ಕಿಮೀ ಸಾಗುವ ಈ ರೈಲು, ನಮ್ಮನ್ನು 102 ಸುರಂಗಗಳು ಮತ್ತು 82 ಸೇತುವೆಗಳ ಮೂಲಕ ಕರೆದುಕೊಂಡು ಹೋಗುತ್ತದೆ.

2. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೇ : ನ್ಯೂ ಜಲ್‍ಪೈಗುರಿ ಯಿಂದ ಡಾರ್ಜಿಲಿಂಗಿಗೆ
ಈ ರೈಲು ಪ್ರಯಾಣ ಈಗ ಯುನೆಸ್ಕೋ ವಿಶ್ವ ಪಾರಂಪರಿಕ ತಾಣದ ಪಟ್ಟಿಗೆ ಸೇರ್ಪಡೆಯಾಗಿದೆ. ನೀವು ಡಾರ್ಜಿಲಿಂಗ್ ಗಿರಿಧಾಮಕ್ಕೆ ಹೋಗುವಿರಿ ಎಂದಾದರೆ, ಈ ರೈಲು ಪ್ರಯಾಣದ ಅನುಭವನ್ನು ಪಡೆಯುವುದನ್ನು ತಪ್ಪಿಸಿಕೊಳ್ಳಲೇಬೇಡಿ. ಏಕೆಂದರೆ, ಜೀವನದಲ್ಲಿ ಒಮ್ಮೆಯಾದರೂ ಪಡೆಯಬೇಕಾದ ಅನುಭವ ಇದು.

78 ಕಿಮೀ ದೂರದ ನಿಧಾನ ಗತಿಯ ಪ್ರಯಾಣ ಇದಾಗಿದ್ದು, 8 ಗಂಟೆಗಳ ಅವಧಿಯನ್ನು ತೆಗೆದುಕೊಳ್ಳುತ್ತದೆ. ಸಿಲಿಗುರಿ ಪಟ್ಟಣ, ಸಿಲಿಗುರಿ ಜಂಕ್ಷನ್, ಸುಕ್ನಾ, ರ್ಯಾಂಗ್‍ಟಾಂಗ್, ತಿಂಧರಿಯಾ, ಮಹಾನದಿ, ಕುರ್ಸಿಯಾಂಗ್, ತುಂಗ್, ಘುಮ್, ರೋಂಗ್ಬುಲ್, ಜೋರೆಬಂಗ್ಲೋ ಮತ್ತು ಬಟಾಸಿಯಾ ಲೂಪ್ ಮೂಲಕ ಈ ರೈಲು ಹಾದು ಹೋಗುತ್ತದೆ. ನೀವು ಡಾರ್ಜಿಲಿಂಗ್ ಟಾಯ್ ರೈಲಿನ ಬಗ್ಗೆ ಸಾಕಷ್ಟು ಕೇಳಿರಬಹುದು. ಒಮ್ಮೆ ಖಂಡಿತಾ, ಅದರ ಅನುಭವನ್ನು ಕೂಡ ಪಡೆದು ನೋಡಿ, ಆ ಮೂಲಕ ಡಾರ್ಜಿಲಿಂಗ್‍ನ ಸುಂದರ ಬೆಟ್ಟಗಳ ನೋಟವನ್ನು ಕಣ್ತುಂಬಿಸಿಕೊಳ್ಳಿ.

3. ಮಹರಾಜರಎಕ್ಸ್ ಪ್ರೆಸ್: ದೆಹಲಿಯಿಂದ ಮುಂಬೈಗೆ
ದೆಹಲಿಯಿಂದ ಮುಂಬೈಗೆ ಸಾಗುವ ಈ ವೈಭವೋಪಿತ ಮಹಾರಾಜ ಎಕ್ಸ್ ಪ್ರೆಸ್ರೈಲು ದೇಶದ ಐದು ವಿಭಿನ್ನ ರಾಜ್ಯಗಳ ಮೂಲಕ ಹಾದು ಹೋಗುತ್ತವೆ. ಈ ರೈಲಿನ ಮೂಲಕ ಪ್ರಯಾಣಿಸಿದರೆ ನೀವು ರಾಜಸ್ಥಾನ್, ಉತ್ತರ ಪ್ರದೇಶ್, ಗುಜರಾತ್, ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶದ ಸ್ಥಳಗಳನ್ನು ವೀಕ್ಷಿಸುವ ಅವಕಾಶ ನಿಮ್ಮದಾಗುತ್ತದೆ.

ಇದನ್ನೂ ಓದಿ: Indian Tourism: ಮಳೆಗಾಲದಲ್ಲಿ ಟೂರ್ ಹೋಗಲು ಪ್ಲ್ಯಾನ್ ಮಾಡ್ತಾ ಇದ್ರೆ ಈ ಪ್ರವಾಸಿ ತಾಣಗಳಿಗೆ ಹೋಗಿ ಬನ್ನಿ

ಈ ರೈಲಿನ ಪ್ರವಾಸ ಎಂದರೆ 5 ರಾಜ್ಯಗಳ ಒಂದು ಪ್ರವಾಸ ಎಂದು ಭಾವಿಸಿಕೊಳ್ಳಬಹುದು. ಏಕೆಂದರೆ, 6 ರಾತ್ರಿ ಮತ್ತು 7 ಹಗಲುಗಳ ಈ ಪ್ರಯಾಣದಲ್ಲಿ ನಿಮಗೆ ಉತ್ತಮ ವಸತಿ ಸೌಲಭ್ಯ ಮತ್ತು ಆಹಾರವನ್ನು ಒದಗಿಸಲಾಗುತ್ತದೆ. ದೆಹಲಿ, ಆಗ್ರಾ, ರಣತಂಬೋರ್, ಜೈಪುರ, ಬಿಕನೇರ್, ಜೋಧ್‍ಪುರ, ಉದಯಪುರ ಮತ್ತು ಮುಂಬೈನಂತಹ ಸ್ಥಳಗಳ ವೀಕ್ಷಣೆಗೂ ಅವಕಾಶ ಇರುತ್ತದೆ.

4. ಮಾಂಡೋವಿಎಕ್ಸ್ ಪ್ರೆಸ್: ಮುಂಬೈ – ಗೋವಾ
ಮುಂಬೈನಿಂದ ಗೋವಾಗೆ ಪ್ರಯಾಣಿಸುವ ಮಾಂಡೋವಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣ ಮಾಡುವಿರಿ ಎಂದಾದಲ್ಲಿ, ಆ ಪ್ರಯಾಣ ಮುಗಿಯುವಷ್ಟರಲ್ಲಿ ನೀವು ಸಹ್ಯಾದ್ರಿ ಬೆಟ್ಟಗಳ ಸೌಂದರ್ಯಕ್ಕೆ ಸಂಪೂರ್ಣವಾಗಿ ಮಾರು ಹೋಗುವುದಂತೂ ಸತ್ಯ. ಏಕೆಂದರೆ, ಮಾಂಡೋವಿಎಕ್ಸ್ ಪ್ರೆಸ್ರೈಲು ತನ್ನ ದಾರಿಯುದ್ದಕ್ಕೂ ನಿಮಗೆ ಸಹ್ಯಾದ್ರಿ ಬೆಟ್ಟಗಳ ವಿಹಂಗಮ ನೋಟ ಮತ್ತು ಅರೇಬಿಯನ್ ಸಮುದ್ರದ ಸುಂದರ ದೃಶ್ಯಗಳನ್ನು ನಿಮಗೆ ತೋರಿಸುತ್ತದೆ. ಮಾಂಡೋವಿಎಕ್ಸ್ ಪ್ರೆಸ್ಕೊಂಕಣ ರೈಲ್ವೇಯ ಒಂದು ಭಾಗವಾಗಿದೆ.

5. ವಾಸ್ಕೋ ಡ ಗಾಮ ಮಾರ್ಗ : ಹುಬ್ಬಳ್ಳಿ –ಮಡ್ಗಾಂವ್
ನಿಮ್ಮ ಜೀವನದ ಅತ್ಯಂತ ರೋಮಾಂಚನಕಾರಿ ರೈಲು ಪ್ರಯಾಣವನ್ನು ಮಾಡಬೇಕು ಎಂದಾದಲ್ಲಿ ನೀವು ಈ ಮಾರ್ಗದಲ್ಲಿ ಪ್ರಯಾಣಿಸಬೇಕು. ಒಂದು ವೇಳೆ ನೀವು ಗೋವಾ ಲಿಂಕ್ಎಕ್ಸ್ ಪ್ರೆಸ್ಅಥವಾ ಯಶವಂತಪುರ ಎಕ್ಸ್‍ಪ್ರೆಸ್ ಪ್ರಯಾಣವನ್ನು ಆಯ್ಕೆ ಮಾಡಿಕೊಂಡರೆ ಇದು ಸಾಧ್ಯ. ಏಕೆಂದರೆ, ಹುಬ್ಬಳ್ಳಿ –ಮಡಗಾಂವ್ ಮಾರ್ಗದಲ್ಲಿ , ನಿಮಗೆ ಅತ್ಯಂತ ಜನಪ್ರಿಯ ಮತ್ತು ಸುಂದರ ದೂಧ್ ಸಾಗರ ಜಲಪಾತದ ನೋಟವನ್ನು ಕಾಣುವ ಅವಕಾಶ ಸಿಗುತ್ತದೆ.

ಆ ಅವಕಾಶವನ್ನು ನಿಮ್ಮದಾಗಿಸಿಕೊಳ್ಳುವ ಬಯಕೆ ಇದ್ದಲ್ಲಿ, ನೀವು ಲೊಂಡಾ ಜಂಕ್ಷನ್‍ನಲ್ಲಿ ಇಳಿಯಬೇಕಾಗುತ್ತದೆ. ಇದು ದೂಧ್ ಸಾಗರ ಜಲಪಾತಕ್ಕೆ ಅತ್ಯಂತ ಹತ್ತಿರದ ರೈಲು ನಿಲ್ದಾಣವಾಗಿದೆ.

6. ದ ಡೆಕ್ಕನ್ ಒಡಿಸ್ಸಿ : ಮುಂಬೈ – ಡೆಲ್ಲಿ
ಮಹಾರಾಷ್ಟ್ರ ಮತ್ತು ಗೋವಾದ ಅತ್ಯುತ್ತಮ ಸ್ಥಳಗಳನ್ನು ನೋಡುವ ಆಸೆ ನಿಮಗಿದೆಯೇ? ಹಾಗಿದ್ದರೆ, ವೈಭವೋಪಿತ ಡೆಕ್ಕನ್ ಒಡಿಸ್ಸಿ ರೈಲನ್ನು ಹತ್ತಿರಿ. ಈ ರೈಲಿನ ಪ್ರಯಾಣದ ನಿಮಗೆ ಆ ಎರಡೂ ರಾಜ್ಯಗಳ ಪ್ರವಾಸ ಮಾಡಿಸುತ್ತದೆ.

ಮುಂಬೈನಿಂದ ಹೊರಡುವ ಡೆಕ್ಕನ್ ಒಡಿಸ್ಸಿ ರೈಲು , ಸಿಂಧೂ ದುರ್ಗಾ, ಗೋವಾ, ಗೋವಾ- ವಾಸ್ಕೋ, ಕೋಲ್ಹಾಪುರ, ಔರಂಗಾಬಾದ್, ನಾಸಿಕ್ ಮಾರ್ಗವಾಗಿ ಪ್ರಯಾಣಿಸಿ ಅಂತಿಮವಾಗಿ ದೆಹಲಿಯನ್ನು ತಲುಪುತ್ತದೆ. ಇನ್ನೊಂದು ವಿಶೇಷವೆಂದರೆ, ಈ ರೈಲಿನಲ್ಲಿ ನಿಮಗೆ ಉನ್ನತ ದರ್ಜೆಯ ಆಯುರ್ವೇದ ಸ್ಪಾ ಮತ್ತು ಸ್ಟೀಮ್ ಬಾತ್‍ಗಳ ಅನುಭವ ಪಡೆಯುವ ಅವಕಾಶವೂ ಲಭ್ಯವಿದೆ.

7. ಸೇತು ಎಕ್ಸ್ ಪ್ರೆಸ್: ಚೆನ್ನೈನಿಂದ ರಾಮೇಶ್ವರ
ಭಾರತದ ಜನಪ್ರಿಯ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ರಾಮೇಶ್ವರಂಗೆ ಹೋಗಬೇಕು ಎಂಬ ಇಚ್ಚೆ ಇದ್ದಲ್ಲಿ, ನೀವು ಸೇತು ಎಕ್ಸ್ ಪ್ರೆಸ್ನಲ್ಲಿ ಪ್ರಯಾಣಿಸಬೇಕು. ಇದರ ಮೂಲಕ ಕೇವಲ ಪುಣ್ಯ ಕ್ಷೇತ್ರಕ್ಕೆ ಪ್ರಯಾಣಿಸುತ್ತಿದ್ದೀರಿ ಎಂಬ ನೆಮ್ಮದಿ ಮಾತ್ರವಲ್ಲ, ವಿಭಿನ್ನ ಬಗೆ ರೋಚಕ ಪ್ರಯಾಣದ ಅನುಭವ ಕೂಡ ಸಿಗುತ್ತದೆ.

ಈ ಪ್ರಯಾಣ ತಮಿಳುನಾಡಿನ ಚೆನ್ನೈನಿಂದ ಆರಂಭವಾಗುತ್ತದೆ, ಮತ್ತು ಚೆನ್ನೈ ಮುಖ್ಯಭೂಮಿಯ ಮೂಲಕ ಮತ್ತು ಪಾಲ್ಕ್ ಜಲ ಸಂಧಿಯ ಮೇಲಿಂದ , ಪಂಬನ್ ದ್ವೀಪದ ರಾಮೇಶ್ವರಂಗೆ ಕರೆದುಕೊಂಡು ಹೋಗುತ್ತದೆ. ಸಮುದ್ರದ ಮೇಲಿನ ಪಂಬನ್ ರೈಲ್ವೇ ಸೇತುವೆಯ ಪ್ರಯಾಣ ಅತ್ಯಂತ ರೋಚಕವಾಗಿರುತ್ತದೆ. ಅದು 1988 ರಲ್ಲಿ ನಿರ್ಮಿಸಲಾದ ರಸ್ತೆ ಸೇತುವೆಗೆ ಸಮಾನಾಂತರವಾಗಿ ಸಾಗುತ್ತದೆ. ಆ ರಸ್ತೆ ಸೇತುವೆಯನ್ನು ನಿರ್ಮಿಸುವ ಮೊದಲು, ಈ ಸಮುದ್ರ ಸೇತುವೆ ಪಂಬನ್ ದ್ವೀಪ ತಲುಪಲು ಏಕೈಕ ಮಾರ್ಗವಾಗಿತ್ತು.

8. ಕಾಶ್ಮೀರ್ ರೈಲ್ವೇ : ಜಮ್ಮುವಿನಿಂದ ಉಧಮ್‍ಪುರ
ಜಮ್ಮು ಮತ್ತು ಕಾಶ್ಮೀರದ ಸೌಂದರ್ಯದ ಬಗ್ಗೆ ತಿಳಿಯದವರು ಯಾರೂ ಇಲ್ಲ. ವಿಡಿಯೋ ಮತ್ತು ಫೋಟೋಗಳಲ್ಲಷ್ಟೇ ಕಾಶ್ಮೀರವನ್ನು ನೋಡಿದ್ದು ಸಾಕು, ಖುದ್ದಾಗಿ ಹೋಗಬೇಕು ಎಂದು ನೀವು ನಿರ್ಧರಿಸಿದ್ದರೆ, ಅಲ್ಲಿಗೆ ಹೋದಾಗ ಜಮ್ಮುವಿನಿಂದ ಉಧಮ್‍ಪುರ ಸಾಗುವ ರೈಲು ಅನುಭವ ಪಡೆಯಲು ಮರೆಯದಿರಿ.

ಇದನ್ನೂ ಓದಿ: Beauty Tips: ಬಿಸಿಲಿನಿಂದ ಚರ್ಮದ ಮೇಲೆ ಬಿದ್ದ ಕಲೆ ತೆಗೆಯಲು ಎಲ್ಲೂ ಹೋಗಬೇಡಿ! ಮನೆಯಲ್ಲಿಯೇ ಈ ಮದ್ದು ಮಾಡಿ, ಕಡಿಮೆಯಾಗುತ್ತೆ ನೋಡಿ

ಈ ರೈಲು ಕಾಶ್ಮೀರ ಕಣಿವೆಯ ಕೆಲವು ಅತ್ಯುತ್ತಮ ದೃಶ್ಯಗಳನ್ನು ಪ್ರದರ್ಶಿಸುವ ಶಿವಾಲಿಕ್ ಪರ್ವತ ಶ್ರೇಣಿಗಳ ಮೂಲಕ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಈ ಮಾರ್ಗದಲ್ಲಿ 20 ಸುರಂಗಗಳು, 158 ಸೇತುವೆಗಳು ಮತ್ತು ಕೆಲವು ಸುಂದರವಾದ ನದಿಗಳನ್ನು ಕಾಣಬಹುದು.

9. ಐಲ್ಯಾಂಡ್ಎಕ್ಸ್ ಪ್ರೆಸ್ : ಕನ್ಯಾಕುಮಾರಿಯಿಂದ ತಿರುವನಂತಪುರಂ
ಕನ್ಯಾಕುಮಾರಿಯಿಂದ ತಿರುವನಂತಪುರಂಗೆ ಸಾಗುವ ಈ ರೈಲಿನ ಪ್ರಯಾಣದ ಅವಧಿ ಎರಡು ಗಂಟೆ. ದಟ್ಟವಾದ ಅರಣ್ಯ ಪ್ರದೇಶಗಳು ಮತ್ತು ತಾಳೆ ಮರಗಳ ಮಾರ್ಗಗಳ ಉದ್ದಕ್ಕೂ ಚಲಿಸುವ ಈ ರೈಲಿನ ಪ್ರಯಾಣದಲ್ಲಿ ನೀವು ಹಚ್ಚ ಹಸಿರಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು.

10. ಗೋಲ್ಡನ್ ಚಾರಿಯೆಟ್ : ಬೆಂಗಳೂರಿನಿಂದ ಗೋವಾ
ಈ ಐóóಷಾರಾಮಿ ರೈಲಿನ ಪ್ರಯಾಣದಲ್ಲಿ ನೀವು ದಕ್ಷಿಣ ಭಾರತದ ಕೆಲವು ಸುಂದರ ತಾಣಗಳನ್ನು ನೋಡಬಹುದು. ಗೋಲ್ಡನ್ ಚಾರಿಯೆಟ್ ರೈಲು ಹತ್ತಿದರೆ, ಕಬಿನಿ ವನ್ಯಜೀವಿ ಅಭಯಾರಣ್ಯ, ಹಂಪಿ ಮತ್ತು ಬಾದಾಮಿಯ ಪಾರಂಪರಿಕ ತಾಣಗಳು, ಮರಳುಗಲ್ಲಿನ ಸುಂದರ ಗುಹೆಗಳು, ಪುರಾತನ ದೇವಾಲಯಗಳ ಅವಶೇಷಗಳು ಮತ್ತು ಗೋವಾದ ಕಾಡಿನ ಸೌಂದರ್ಯವನ್ನು ಕಾಣಬಹುದು. ಈ ಐಷಾರಾಮಿ ರೈಲಿನ ಅನುಭವ ಪ್ರತಿಯೊಬ್ಬ ವ್ಯಕ್ತಿ ಒಮ್ಮೆಯಾದರೂ ಪಡೆಯಲೇಬೇಕು ಎಂಬಂತಿರುತ್ತದೆ.
Published by:Ashwini Prabhu
First published: