Hair Style: ಹೇರ್ ಸ್ಟೈಲ್ ಸ್ವಲ್ಪ ಬದಲಾಯಿಸಿ! ಸಾಂಪ್ರದಾಯಿಕ ಧಿರಿಸುಗಳಿಗೆ ಹೊಸ ಹೇರ್ ಸ್ಟೈಲ್ ಹೀಗಿರಲಿ

ಕೇಶವಿನ್ಯಾಸವು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ನಿಮ್ಮ ಕೂದಲು ಎಷ್ಟೆ ಉದ್ದವಿರಲಿ ಅದನ್ನು ಅತ್ಯಂತ ಸುಂದರವಾಗಿ ಕಾಣಲು ಸಾಂಪ್ರದಾಯಿಕ ಶೈಲಿಗೆ ಆಧುನಿಕ ಶೈಲಿಯನ್ನು ನೀಡುವ ಮತ್ತು ಈ ಮದುವೆ ಸೀಸನ್‌ನಲ್ಲಿ ಕೆಲವು ಮ್ಯಾಜಿಕಲ್‌ ಕೇಶವಿನ್ಯಾಸಗಳು ನಿಮಗಾಗಿ ಇಲ್ಲಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಸೀರೆ (Saree) ನಮ್ಮ ಭಾರತೀಯ ಸಂಸ್ಕೃತಿಯನ್ನು (Indian Culture) ಸಾರುವ ಒಂದು ಉಡುಗೆ ಆಗಿದೆ. ಇದನ್ನು ನಾವು ಒಂಬತ್ತು ಗಜಗಳ ಸೊಬಗಿನ ಸೀರೆ ಎನ್ನುತ್ತೆವೆ. ನಮ್ಮ ಹಿರಿಯರು ಸೀರೆಗಳನ್ನು ತಮ್ಮ ದೈನಂದಿನ ಉಡುಗೆಗಳಾಗಿ (Gift) ಬಳಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ರೇಷ್ಮೆ ಸೀರೆಗಳನ್ನು ಬಳಸಿದರೆ, ದಿನನಿತ್ಯ ಆರಾಮದಾಯಕ ಹತ್ತಿ ಬಟ್ಟೆಗಳನ್ನು ಬಳಸುತ್ತಿದ್ದರು. ಈ ಆಧುನಿಕ ಕಾಲದಲ್ಲಿ, ಸೀರೆ ಧರಿಸುವುದು ಒಂದು ಫ್ಯಾಶನ್‌ ಆಗಿ (Fashion) ಹೊರ ಹೊಮ್ಮಿದೆ. ಈಗ ಸೀರೆಗಳು ಅನೇಕ ವಿಶಿಷ್ಟವಾದ ಪ್ರಿಂಟ್‌ಗಳನ್ನು ಹೊಂದಿರುವುದಲ್ಲದೇ, ಅವುಗಳಿಗೆ ಮ್ಯಾಚಿಂಗ್‌ ಕುಪ್ಪಸವನ್ನು (Matching Blouse) ಚೆಂದಗೊಳಿಸುವುದು, ಸೀರೆಯ ಹೊಸ ಆವೃತ್ತಿಯು ಗಮನಾರ್ಹವಾಗಿದೆ.

ಹಳೆ ಕಾಲದ ಸೀರೆ
ಸೀರೆ ಭಾರತೀಯ ಫ್ಯಾಷನ್‌ನಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸಿದೆ. ಸಮಯ ಕಳೆದಂತೆ, ಇದು ಮುಖ್ಯವಾಗಿ ಮದುವೆಗಳಂತಹ ವಿಶೇಷ ಕಾರ್ಯಕ್ರಮಗಳಿಗೆ ಧರಿಸುವ ಶೈಲಿಯಾಯಿತು. ಆದರೆ ಕೆಲವು ವರ್ಷಗಳ ಕಾಲ ಸೀರೆ ತನ್ನ ಆಕರ್ಷಣೆಯನ್ನು ಕಳೆದುಕೊಂಡಿತ್ತು. ಆದರೆ ಈಗ ಯುವಜನರಲ್ಲಿ ಸೀರೆ ಉಡುವುದು ಒಂದು ಟ್ರೆಂಡ್‌ ಆಗಿ ಬದಲಾಗಿದೆ. ತಮ್ಮ ತಾಯಿಯ ಹಳೆ ಕಾಲದ ಸೀರೆಯನ್ನು ಮತ್ತೆ ಧರಿಸಿ ಅದರ ಸೌಂದರ್ಯವನ್ನು ಮರು ಸೃಷ್ಟಿಸುತ್ತಿರುವ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: Garlic in haircare: ಕೂದಲ ಸಮಸ್ಯೆಗೆ ಬೆಳ್ಳುಳ್ಳಿ ಎಣ್ಣೆ ಬಳಸಿ, ಮಳೆಗಾಲದಲ್ಲಿ ಕೂದಲ ಆರೈಕೆಗೆ ಇದು ಬೆಸ್ಟ್​!

ಭಾರತದಲ್ಲಿ ಕೇಶವಿನ್ಯಾಸವು ಸೌಂದರ್ಯದ ಆದ್ಯತೆ ಮತ್ತು ಪ್ರಾಯೋಗಿಕ ಪರಿಗಣನೆಗೆ ಸಂಬಂಧಿಸಿದೆ. ಭಾರತದಲ್ಲಿನ ಅನೇಕ ಆಧುನಿಕ ಪ್ರವೃತ್ತಿಗಳು ಹಾಲಿವುಡ್ ಮತ್ತು ಬಾಲಿವುಡ್ ತಾರೆಗಳಿಂದ ಸ್ಫೂರ್ತಿ ಪಡೆದಿದ್ದರೂ, ಅನೇಕ ಸಾಂಪ್ರದಾಯಿಕ ಶೈಲಿಗಳು ಮತ್ತು ತಂತ್ರಗಳು ಭಾರತೀಯ ಮಹಿಳೆಯರಲ್ಲಿ ಇನ್ನೂ ಜನಪ್ರಿಯವಾಗಿವೆ.

ಸಾಂಪ್ರದಾಯಿಕ ಸೀರೆಗಳಿಗೆ ಆಧುನಿಕ ಕೇಶ ವಿನ್ಯಾಸಗಳಲ್ಲಿ ಕೆಲವು ಇಲ್ಲಿವೆ:
ಕೇಶವಿನ್ಯಾಸವು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ. ನಿಮ್ಮ ಕೂದಲು ಎಷ್ಟೆ ಉದ್ದವಿರಲಿ ಅದನ್ನು ಅತ್ಯಂತ ಸುಂದರವಾಗಿ ಕಾಣಲು ಸಾಂಪ್ರದಾಯಿಕ ಶೈಲಿಗೆ ಆಧುನಿಕ ಶೈಲಿಯನ್ನು ನೀಡುವ ಮತ್ತು ಈ ಮದುವೆ ಸೀಸನ್‌ನಲ್ಲಿ ಕೆಲವು ಮ್ಯಾಜಿಕಲ್‌ ಕೇಶವಿನ್ಯಾಸಗಳು ನಿಮಗಾಗಿ ಇಲ್ಲಿವೆ.

 1) ಹಾಫ್ ಟ್ವಿಸ್ಟೆಡ್ ಮೆಸ್ಸಿ ನಾಟ್‌ ಹೇರ್‌ ಸ್ಟೈಲ್‌: ನಿಮ್ಮ ಕೂದಲಿನ ವಿನ್ಯಾಸವು ನೈಸರ್ಗಿಕವಾಗಿ ಅಲೆ-ಅಲೆಯಾಗಿದ್ದರೆ ಈ ಕೇಶ ವಿನ್ಯಾಸ ನಿಮಗೆ ಸೂಪರ್‌ ಆಗಿ ಹೊಂದುತ್ತದೆ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಿಲ್ಲ. ಜಸ್ಟ್‌. ಕೂದಲನ್ನು ಅರ್ಧ ಗಂಟು ಹಾಕಿ ಅದನ್ನು ಒಂದು ಸುತ್ತು ಹಾಕಿ ಪಿನ್‌ ಹಾಕಿದರೆ ಮುಗೀತು. ಹಾಫ್‌ ಟ್ವಿಸ್ಟೆಡ್‌ ಮೆಸ್ಸಿ ನಾಟ್‌ ಹೇರ್‌ಸ್ಟೈಲ್‌ ಸಿದ್ಧವಾಗುತ್ತದೆ.

2) ಹೂಪ್ಡ್ ಲೋ ಬನ್ ಹೇರ್‌ ಸ್ಟೈಲ್‌: ಈ ಹೇರ್‌ಸ್ಟೈಲ್‌ ಸಾಂಪ್ರದಾಯಿಕ ಬಿಗಿಯಾದ ಬನ್‌ಗೆ ಸವಾಲು ನೀಡುವ ಆಗೆ ಅತ್ಯಂತ ಸುಲಭವಾಗಿ ಈ ಕೇಶ ವಿನ್ಯಾಸ ಮಾಡಿಕೊಳ್ಳಬಹುದು. ಈ ಹೂಪ್ಡ್‌ ಲೋ ಬನ್‌ ಹೇರ್‌ಸ್ಟೈಲ್‌ ಬಹಳ ಸಮಯದವರೆಗೆ ತುಂಬಾ ನೀಟಾಗಿ ಇರುತ್ತದೆ ಮತ್ತು ಬಿಸಿಲಿನ ಕಾಲದ ಕಾರ್ಯಕ್ರಮಗಳಿಗೆ ಇದು ಹೇಳಿ ಮಾಡಿಸಿದ ಕೇಶ ವಿನ್ಯಾಸ ಆಗಿದೆ.

ಇದನ್ನೂ ಓದಿ: Eye Care: ನಟಿ ಕಾಜೊಲ್‌ರಂತೆ ಹೊಳೆಯುವ ಕಣ್ಣು ನಿಮ್ಮದಾಗಬೇಕೆ? ಇಲ್ಲಿದೆ ಸಿಂಪಲ್ ಟಿಪ್ಸ್

3) ರೌಡೆಂಡ್‌ ಹಾಫ್‌ ನಾಟ್‌ ಹೇರ್‌ಸ್ಟೈಲ್‌: ನಿಮ್ಮ ಕೂದಲ ಅರ್ಧ ಭಾಗವನ್ನು ತೆಗೆದುಕೊಂಡು ಸುತ್ತಿ ಅರ್ಧ ಗಂಟು ಹಾಕಿ. ಇದನ್ನು ಮಾಡಲು ಸ್ಟೈಲಿಂಗ್ ಉಪಕರಣ ಇದ್ದರೆ ತಂಬಾ ಒಳಿತು. ಆಗ ನೀವು ಯಾವುದೇ ಸಮಯದಲ್ಲಿ ಈ ಹೇರ್‌ಸ್ಟೈಲ್‌ ಮಾಡಿಕೊಳ್ಳಬಹುದು.

ಈ ಎಲ್ಲ ಹೇರ್‌ಸ್ಟೈಲ್‌ಗಳನ್ನು ನೀವು ಸಾಂಪ್ರದಾಯಿಕ ಉಡುಗೆಗಳಿಗೆ ಮಾಡಿಕೊಂಡರೆ ನಿಮ್ಮ ಅಂದ ಮತ್ತಷ್ಟು ಹೆಚ್ಚುವುದರಲ್ಲಿ ಸಂಶಯವಿಲ್ಲ. ಸೀರೆಗೆ ಹೇಗೆ ಮ್ಯಾಚಿಂಗ್‌ ಬ್ಲೌಸ್‌ಗಳು ಮುಖ್ಯವೋ ಹಾಗೆಯೇ ಕೂದಲಿಗೆ ತಕ್ಕ ಹಾಗೆ ಕೇಶವಿನ್ಯಾಸ ಮಾಡುವುದು ತುಂಬಾ ಮುಖ್ಯ. ಮೇಲಿನ ಕೇಶ ವಿನ್ಯಾಸಗಳು ಎಲ್ಲ ಬಗೆಯ ಅಂದರೆ ಉದ್ದ ಕೂದಲಿನ, ಮಧ್ಯ ಮತ್ತು ಚಿಕ್ಕ ಕೂದಲಿನ ಎಲ್ಲರಿಗೂ ಸೂಕ್ತವಾಗಿ ಒಪ್ಪುವ ಕೇಶವಿನ್ಯಾಸಗಳು ಇವಾಗಿವೆ. ಈಗ ಹಬ್ಬದ ಸಮಯ ಆದ್ದರಿಂದ ನೀವು ಈ ಕೇಶ ವಿನ್ಯಾಸಗಳನ್ನು ಒಮ್ಮೆ ಟ್ರೈ ಮಾಡಬಹುದು.
Published by:Ashwini Prabhu
First published: