Burning Feet Syndrome: ನಿಮ್ಮ ಪಾದಗಳು ಅತಿಯಾಗಿ ಉರಿಯುತ್ತಿವೆಯೇ? ಇದು ಈ ರೋಗದ ಲಕ್ಷಣವಾಗಿರಬಹುದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಕೆಲವೊಮ್ಮೆ ಪಾದಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಯನ್ನು ಅನೇಕರು ಅನುಭವಿಸುತ್ತಾರೆ. ಇದೇಕೆ ಹೀಗೆ? ಏನಿದು ಸಮಸ್ಯೆ ಅಂತ ನೀವು ಹುಡುಕಿಕೊಂಡು ಹೋದರೆ ನಿಮಗೆ ಸಾಮಾನ್ಯವಾಗಿ ಸಿಗುವ ಒಂದು ರೋಗದ ಹೆಸರು ‘ಬರ್ನಿಂಗ್ ಫೀಟ್ ಸಿಂಡ್ರೋಮ್’ ಇದರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ವಿವರ...

ಮುಂದೆ ಓದಿ ...
  • Share this:

ಕೆಲವು ಜನರು ಮುಂಜಾನೆಯಿಂದ ಸಂಜೆಯವರೆಗೆ ಸ್ವಲ್ಪವೂ ಕುಳಿತುಕೊಳ್ಳದೆ ಓಡಾಡಿಕೊಂಡು ಇದ್ದರೂ ಸಹ ಅವರಿಗೆ ಪಾದಗಳಲ್ಲಿ (Feet) ಮತ್ತು ಕಾಲುಗಳಲ್ಲಿ ಸ್ವಲ್ಪವೂ ನೋವು ಕಾಣಿಸುವುದಿಲ್ಲ. ಆದರೆ ಇನ್ನೂ ಕೆಲವರಿಗೆ ದಿನಪೂರ್ತಿ ಕುಳಿತುಕೊಂಡಿದ್ದರೂ ಸಹ ಅವರ ಪಾದಗಳು ಮತ್ತು ಕಾಲುಗಳು ತುಂಬಾನೇ ನೋಯುತ್ತವೆ (Pain) ಅಂತ ಹೇಳುವುದನ್ನು ನಾವು ಮನೆಯಲ್ಲಿ (Home) ಹಿರಿಯರಿಂದ ಕೇಳಿರುತ್ತೇವೆ. ಅದರಲ್ಲೂ ಸ್ವಲ್ಪ ಜನರು ತಮ್ಮ ಪಾದಗಳು ಬಿಟ್ಟುಬಿಡದೆ ಉರಿಯುತ್ತಿವೆ ಅಂತ ಹೇಳುವುದನ್ನು ಕೇಳಿರುತ್ತೇವೆ. ಕೆಲವೊಮ್ಮೆ ಪಾದಗಳಲ್ಲಿ ಜುಮ್ಮೆನಿಸುವಿಕೆ ಮತ್ತು ಮರಗಟ್ಟುವಿಕೆಯೂ ಸಹ ಅನೇಕರು ಅನುಭವಿಸುತ್ತಾರೆ ಎಂದು ಹೇಳಬಹುದು. ಇದೇಕೆ ಹೀಗೆ? ಏನಿದು ಸಮಸ್ಯೆ ಅಂತ ನೀವು ಹುಡುಕಿಕೊಂಡು ಹೋದರೆ ನಿಮಗೆ ಸಾಮಾನ್ಯವಾಗಿ ಸಿಗುವ ಒಂದು ರೋಗದ ಹೆಸರು ‘ಬರ್ನಿಂಗ್ ಫೀಟ್ ಸಿಂಡ್ರೋಮ್’ (Burning feet syndrome).


ಈ ಬರ್ನಿಂಗ್ ಫೀಟ್ ಸಿಂಡ್ರೋಮ್ ಎಂದು ಕರೆಯಲ್ಪಡುವ ಈ ಸುಡುವ ಸಂವೇದನೆಯು ಸಾಮಾನ್ಯವಾಗಿ ಹಲವಾರು ಕಾರಣಗಳಿಂದ ಉಂಟಾಗುತ್ತದೆ, ಅವುಗಳನ್ನು ಸರಿಯಾದ ಸಮಯಕ್ಕೆ ಗುರುತಿಸದೇ ಹಾಗೆಯೇ ಬಿಟ್ಟರೆ ಇವು ಮಾರಣಾಂತಿಕ ಸಹ ಆಗಬಹುದು.


ಬರ್ನಿಂಗ್ ಫೀಟ್ ಸಿಂಡ್ರೋಮ್ ಅನ್ನು ಗ್ರಿಯರ್ಸನ್-ಗೋಪಾಲನ್ ಸಿಂಡ್ರೋಮ್ ಎಂದೂ ಸಹ ಕರೆಯಲಾಗುತ್ತದೆ, ಇದು ಹಗಲಿನಲ್ಲಿ ಸ್ವಲ್ಪ ಮಟ್ಟಿಗೆ ಇದ್ದು ರಾತ್ರಿ ಹೊತ್ತಿನಲ್ಲಿ ಈ ಉರಿಯುವ ಸಂವೇದನೆ ತುಂಬಾನೇ ತೀವ್ರವಾಗುತ್ತದೆ. ತೀವ್ರವಾದ ಶಾಖ ಮತ್ತು ನೋವು ಪಾದಗಳ ಅಂಗಾಲುಗಳಿಗೆ ಸೀಮಿತವಾಗಿರಬಹುದು, ಆದರೆ ಮೇಲ್ಭಾಗದ ಪ್ರದೇಶ, ಪಾದಗಳು ಮತ್ತು ಕಾಲುಗಳ ಕೆಲವು ಭಾಗಗಳ ಮೇಲೂ ಸಹ ಇದು ಪರಿಣಾಮ ಬೀರಬಹುದು.


ಇದನ್ನೂ ಓದಿ:  Milk: ಹಾಲಿನಂತಾ ಬಿಳುಪಿನ ತ್ವಚೆ ಬೇಕೆ? ಹಾಗಾದರೆ ಸ್ನಾನಕ್ಕೆ ಹಾಲನ್ನೇ ಬಳಸಿ!


ಪಾದಗಳಲ್ಲಿ ಉರಿಯುವ ಸಂವೇದನೆಯ ಕೆಲವು ಪ್ರಮುಖ ಕಾರಣಗಳೆಂದರೆ:


1. ಜೀವಸತ್ವಗಳ ಕೊರತೆ
ಕೆಲವೊಮ್ಮೆ ನಮ್ಮ ದೇಹದಲ್ಲಿ ವಿಟಮಿನ್ ಬಿ12, ಬಿ6 ಮತ್ತು ಬಿ9 ಗಳ ಕೊರತೆಯು ನಮ್ಮ ಪಾದಗಳಲ್ಲಿ ಸುಡುವ ಸಂವೇದನೆಯನ್ನು ಉಂಟು ಮಾಡಬಹುದು.


2. ಪೆರಿಫೆರಲ್ ನ್ಯೂರೋಪತಿ
ಇದು ಬರ್ನಿಂಗ್ ಫೀಟ್ ಸಿಂಡ್ರೋಮ್ ನ ಅತ್ಯಂತ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಬೆನ್ನುಹುರಿಯನ್ನು ದೇಹದ ಉಳಿದ ಭಾಗಗಳಿಗೆ ಸಂಪರ್ಕಿಸುವ ನರಗಳು ಹಾನಿಗೊಳಗಾದಾಗ ಇದು ಸಂಭವಿಸುತ್ತದೆ. ಇದು ಹೆಚ್ಚಾಗಿ ಮಧುಮೇಹ ಹೊಂದಿರುವ ಜನರಲ್ಲಿ ಕಂಡು ಬರುತ್ತದೆ ಮತ್ತು ರೋಗಲಕ್ಷಣಗಳು ಸಮಯದೊಂದಿಗೆ ಇನ್ನೂ ಹದಗೆಡುತ್ತವೆ. ಅಲ್ಲದೆ, ಕೀಮೋಥೆರಪಿಗೆ ಒಳಗಾದ ಜನರು, ಆನುವಂಶಿಕ ಕಾಯಿಲೆಗಳು, ಸ್ವಯಂ-ಪ್ರತಿರಕ್ಷಣಾ ಅಸ್ವಸ್ಥತೆಗಳು, ಮೂತ್ರಪಿಂಡದ ಸಮಸ್ಯೆಗಳು ಮತ್ತು ಮದ್ಯವ್ಯಸನಿಗಳು ಇದರಿಂದ ಹೆಚ್ಚು ಬಾಧಿತರಾಗುತ್ತಾರೆ ಎಂದು ಹೇಳಲಾಗುತ್ತದೆ.


3. ಹೈಪೋಥೈರಾಯ್ಡಿಸಮ್
ಥೈರಾಯ್ಡ್ ಕಡಿಮೆಯಿರಲಿ ಅಥವಾ ಹೆಚ್ಚಿರಲಿ, ಅದು ದೇಹದ ಮೇಲೆ ಗ್ಯಾರೆಂಟಿ ಪರಿಣಾಮ ಬೀರುತ್ತದೆ. ಹಾರ್ಮೋನುಗಳ ಹೆಚ್ಚಿನ ಉತ್ಪಾದನೆಯಿಂದಾಗಿ ಹೈಪೋಥೈರಾಯ್ಡಿಸಮ್ ಪಾದಗಳಲ್ಲಿ ಸುಡುವ ಸಂವೇದನೆಯನ್ನು ಉಂಟು ಮಾಡುತ್ತದೆ.


ಇದನ್ನೂ ಓದಿ:  Knee Pain: ಹಿಂಸೆ ನೀಡುವ ಮೊಣಕಾಲು ನೋವಿಗೆ ಕಾರಣಗಳೇನು? ಪರಿಹಾರಗಳೇನು?


4. ಮಧುಮೇಹದಿಂದ ಸಹ ಈ ರೀತಿ ಆಗುತ್ತದೆ
ಟೈಪ್ 1 ಮತ್ತು 2 ಮಧುಮೇಹವು ದೇಹದ ಬಾಹ್ಯ ನರಗಳ ಮೇಲೂ ಪರಿಣಾಮ ಬೀರಿ ಪಾದಗಳಲ್ಲಿ ಸುಡುವ ಸಂವೇದನೆಯನ್ನು ಉಂಟು ಮಾಡಬಹುದು. ಸರಿಯಾಗಿ ನಿರ್ವಹಿಸದ ಮಧುಮೇಹ ಅಥವಾ ಹೆಚ್ಚಿನ ಗ್ಲೂಕೋಸ್ ಮಟ್ಟಗಳು ನರಗಳಿಂದ ಸಂಕೇತಗಳ ಪ್ರಸರಣದ ಮೇಲೆ ಪರಿಣಾಮ ಬೀರುತ್ತವೆ ಮತ್ತು ರಕ್ತನಾಳಗಳನ್ನು ದುರ್ಬಲಗೊಳಿಸುತ್ತವೆ.


ಬರ್ನಿಂಗ್ ಫುಟ್ ಸಿಂಡ್ರೋಮ್ ನ ಅತ್ಯಂತ ಸಾಮಾನ್ಯ ಲಕ್ಷಣಗಳೆಂದರೆ:


  • ಪಾದಗಳಲ್ಲಿ ಮರಗಟ್ಟುವಿಕೆ

  • ಪಾದಗಳಲ್ಲಿ ಜುಮ್ಮೆನಿಸುವ ಸಂವೇದನೆ

  • ಪಾದಗಳಲ್ಲಿ ತೀಕ್ಷ್ಣವಾದ ನೋವು

  • ಕಾಲುಗಳ ಚರ್ಮ ಕೆಂಪಾಗುವುದು


ಬರ್ನಿಂಗ್ ಫುಟ್ ಸಿಂಡ್ರೋಮ್ ಗೆ ಚಿಕಿತ್ಸೆ ನೀಡುವುದು ಹೇಗೆ?
ಬರ್ನಿಂಗ್ ಫುಟ್ ಸಿಂಡ್ರೋಮ್ ಗೆ ಚಿಕಿತ್ಸೆ ನೀಡಲು ಮತ್ತು ಗುಣಪಡಿಸಲು ಕೆಲವು ಸುಲಭ ಮಾರ್ಗಗಳೆಂದರೆ:

  • ಪ್ರತಿದಿನ ಕನಿಷ್ಠ 15 ರಿಂದ 20 ನಿಮಿಷಗಳ ಕಾಲ ನಿಮ್ಮ ಪಾದಗಳನ್ನು ತಣ್ಣೀರಿನಲ್ಲಿ ನೆನೆಸಿಡುವುದು.

  • ನಿಮ್ಮ ಕಾಲುಗಳು ಮತ್ತು ಪಾದಗಳನ್ನು ಸ್ವಲ್ಪ ಸಮಯದವರೆಗೆ ಮೇಲಕ್ಕೆತ್ತುವುದು.

  • ನೋವು ನಿವಾರಕಗಳನ್ನು ತೆಗೆದುಕೊಳ್ಳುವುದು.

  • ನಿಮ್ಮ ಪಾದಗಳನ್ನು ಹೆಚ್ಚು ಶಾಖಕ್ಕೆ ಒಡ್ಡುವುದನ್ನು ತಪ್ಪಿಸಿ.

Published by:Ashwini Prabhu
First published: