ಉಗುರು ನಮ್ಮ ಆರೋಗ್ಯ ಮತ್ತು ಸೌಂದರ್ಯದ ಸಂಕೇತ. ಹೆಚ್ಚಿನ ಮಹಿಳೆಯರು ತ್ವಚೆಯ ಅಂದದ ಜೊತೆ ಉಗುರಿನ ಅಂದದ ಬಗ್ಗೆ ಸಹ ಕಾಳಜಿವಹಿಸುತ್ತಾರೆ. ನಮ್ಮ ಅಂದವನ್ನು ಹೆಚ್ಚಿಸುವಲ್ಲಿ ಉಗುರು ಬಹಳ ಮುಖ್ಯವಾಗುತ್ತದೆ. ಉದ್ದವಾದ ಮತ್ತು ಶಕ್ತಿಯುತವಾದ ಉಗುರು ಕೈಗಳ ಅಂದವನ್ನು ಹೆಚ್ಚು ಮಾಡುತ್ತದೆ. ಆದರೆ ಕೆಲವೊಮ್ಮೆ ಕೆಲವರ ಉಗುರು ಬಹು ಬೇಗನೆ ಮುರಿದು ಹೋಗುತ್ತದೆ. ಇನ್ನು ಕೆಲವರದ್ದು ಉದ್ದ ಬೆಳೆಯುವುದಿಲ್ಲ. ಇದಕ್ಕೆ ಕಾರಣ ನಮ್ಮ ಆರೋಗ್ಯ ಸಮಸ್ಯೆಗಳು ಎಂದು ಹೇಳುತ್ತಾರೆ. ಹೌದು, ನಮ್ಮನ್ನ ಕಾಡುವ ಹಲವು ಆರೋಗ್ಯ ಸಮಸ್ಯೆಗಳು ನಮ್ಮ ಉಗುರುಗನ್ನು ದುರ್ಬಲ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೆಲವರಿಗೆ ಉದ್ದನೆಯ ಉಗುರುಗಳನ್ನು ಅದೆಷ್ಟೇ ಪ್ರಯತ್ನಿಸಿದರೂ ಬೆಳಸಲಾಗುವುದಿಲ್ಲ. ಸ್ವಲ್ಪ ಉದ್ದ ಬೆಳೆದಾಗ ದುರ್ಬಲಗೊಂಡು ಮುರಿದು ಬಿಡುತ್ತವೆ. ಇಲ್ಲ ಇನ್ನು ಕೆಲವರಿಗೆ ಉಗುರುಗಳನ್ನು ಕಚ್ಚುವ ಅಭ್ಯಾಸವಿದ್ದಲ್ಲಿ ಅದು ವೇಗವಾಗಿ ಬೆಳೆಯುವುದಿಲ್ಲ. ನಿಮ್ಮ ಆರೋಗ್ಯ ಸಮಸ್ಯೆಯಿಂದ ಉಗುರು ಬೆಳೆಯುತ್ತಿಲ್ಲ ಎಂದಾದಲ್ಲಿ ನೀವು ಪೋಷಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು.
ಮೇಕಪ್ ಹೆಚ್ಚು ಕಾಲ ಉಳಿಯಲು ನಿಮ್ಮ ಮುಖವನ್ನು ಪ್ರೈಮ್ ಮಾಡುವುದು ಅತ್ಯಂತ ಮಹತ್ವದ ಕೆಲಸ. ಹಾಗೆಯೇ , ನಿಮ್ಮ ಉಗುರು ಬಣ್ಣವನ್ನು ದೀರ್ಘಕಾಲ ಉಳಿಯುವಂತೆ ಮಾಡಲು ಬೇಸ್ ಕೋಟ್ ಹಾಕುವುದನ್ನ ಮರೆಯಬೇಡಿ. ಯಾವುದೇ ನೈಲ್ ಪಾಲಿಶ್ ಹಾಕುವ ಮೊದಲು, ಬೇಸ್ ಕೋಟ್ ಅನ್ನು ಅನ್ವಯಿಸುವುದು ಕಡ್ಡಾಯ. ಇದು ನಿಮ್ಮ ಉಗುರುಗಳಿಗೆ ರಕ್ಷಣಾತ್ಮಕ ಪದರವನ್ನು ಒದಗಿಸುತ್ತದೆ ಮತ್ತು ನಿಮ್ಮ ಉಗುರುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿ ಮಾಡಲು ಸಹಾಯ ಮಾಡುತ್ತದೆ.
ಇನ್ನು ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ಉಗುರುಗಳು ಮತ್ತು ಕೂದಲಿನ ಆರೋಗ್ಯಕರ ಬೆಳವಣಿಗೆಗೆ ಉತ್ತಮವಾಗಿದೆ. ನಿಂಬೆಹಣ್ಣುಗಳನ್ನು ಉಗುರುಗಳ ಮೇಲೆ ನಿಯಮಿತವಾಗಿ ಬಳಸುವುದರಿಂದ, ನೀವು ಉಗುರಿನಲ್ಲಿರುವ ಕಲೆಗಳನ್ನು ಸಹ ತೆಗೆದುಹಾಕಬಹುದು. ಏಕೆಂದರೆ ನಿಂಬೆಹಣ್ಣುಗಳು ಬ್ಲೀಚಿಂಗ್ ಗುಣಲಕ್ಷಣಗಳನ್ನು ಹೊಂದಿರುತ್ತದೆ.
ನೀವು ಮಾಡಬೇಕಾಗಿರುವುದು ಇಷ್ಟೇ, ನಿಂಬೆಹಣ್ಣಿನ ಸ್ಲೈಸ್ ಅನ್ನು ನಿಮ್ಮ ಬೆರಳು ಮತ್ತು ಕಾಲ್ಬೆರಳ ಉಗುರುಗಳಿಗೆ ಸುಮಾರು 5 ನಿಮಿಷಗಳ ಕಾಲ ಉಜ್ಜಿಕೊಳ್ಳಿ ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದನ್ನು ನೀವು ದಿನ ನಿತ್ಯ ಮಾಡುವುದರಿಂದ ಉಗುರುಗಳು ಉದ್ದವಾಗಿ ಬೆಳೆಯುತ್ತವೆ ಮತ್ತು ದುರ್ಬಲಗೊಳ್ಳುವುದಿಲ್ಲ.
ಇದನ್ನೂ ಓದಿ: ಅಡುಗೆಯಲ್ಲಿ ಯೀಸ್ಟ್ ಬದಲು ಈ 3 ಪದಾರ್ಥಗಳನ್ನು ಬಳಸಿ
ವಿಟಮಿನ್ ಇ ಮತ್ತು ಆ್ಯಂಟಿ ಆ್ಯಕ್ಸಿಡೆಂಟ್ ತುಂಬಿರುವ ತೆಂಗಿನ ಎಣ್ಣೆಯು ಉಗುರುಗಳು ಮತ್ತು ಕೂದಲಿಗೆ ತೇವಾಂಶವನ್ನು ನೀಡುತ್ತದೆ. ತೆಂಗಿನ ಎಣ್ಣೆ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ.
ಒಂದು ಬಟ್ಟಲಿನಲ್ಲಿ ತೆಂಗಿನ ಎಣ್ಣೆಯನ್ನು ಬೆಚ್ಚಗಾಗುವಷ್ಟು ಬಿಸಿ ಮಾಡಿ ಅದನ್ನು ನಿಮ್ಮ ಉಗುರುಗಳು ಮತ್ತು ಬೆರಳುಗಳಿಗೆ ಮಸಾಜ್ ಮಾಡಿ. ವೃತ್ತಾಕಾರವಾಗಿ ಮಸಾಜ್ ಮಾಡಿ. ಇದು ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ, ಇದು ಉಗುರು ಬೆಳವಣಿಗೆಗೆ ಸಹಾಯ ಮಾಡುತ್ತದೆ.
ನಿಂಬೆಹಣ್ಣಿನಂತೆ ಕಿತ್ತಳೆ ಕೂಡ ವಿಟಮಿನ್ ಸಿ ಮತ್ತು ಫೋಲಿಕ್ನ ಉತ್ತಮ ಮೂಲವಾಗಿದೆ, ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಕಾಲಜನ್ ಉಗುರು ಬೆಳವಣಿಗೆಗೆ ಸಹಾಯ ಮಾಡುತ್ತದೆ ಮತ್ತು ಉಗುರುಗಳ ಚೈತನ್ಯವನ್ನು ಹೆಚ್ಚಿಸುತ್ತದೆ. ಕಿತ್ತಳೆಯಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ಯಾವುದೇ ಸೋಂಕುಗಳನ್ನು ದೂರವಿರಿಸುತ್ತದೆ.
ಒಂದು ಬಟ್ಟಲಿನಲ್ಲಿ ಸ್ವಲ್ಪ ಕಿತ್ತಳೆ ರಸವನ್ನು ತೆಗೆದುಕೊಂಡು ನಿಮ್ಮ ಉಗುರುಗಳನ್ನು ಸುಮಾರು 10 ನಿಮಿಷಗಳ ಕಾಲ ನೆನೆಸಿಡಿ. ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಇದು ನಿಮ್ಮ ಉಗುರುಗಳಲ್ಲಿ ಯಾವುದೇ ಸೋಂಕಿದ್ದಲ್ಲಿ ಗುಣಪಡಿಸಿ, ಉಗುರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ