Weak Bones: ಕೈ ಕಾಲು ನೋವಿನಿಂದ ಬಳಲುತ್ತಿದ್ದೀರಾ? ಹಾಗಾದ್ರೆ ಈ ತಪ್ಪುಗಳೇ ನೋವಿಗೆ ಕಾರಣ ನೋಡಿ!

ಮೂಳೆಗಳು ದುರ್ಬಲಗೊಳ್ಳಲು ನಾವು ಮಾಡುವ ಕೆಲವೊಂದು ಅಭ್ಯಾಸಗಳೇ ಕಾರಣವಾಗುತ್ತದೆ. ಅದು ನಮ್ಮ ದೈನಂದಿನ ಜೀವನದಲ್ಲಿ ಕೂಡ ಪರಿಣಾಮ ಬೀರುತ್ತದೆ. ಮೂಳೆಗಳು ದುರ್ಬಲಗೊಳ್ಳಲು ಇವುಗಳೇ ಮುಖ್ಯ ಕಾರಣ

ಮೂಳೆಗಳು ದುರ್ಬಲಗೊಳ್ಳುವಿಕೆ

ಮೂಳೆಗಳು ದುರ್ಬಲಗೊಳ್ಳುವಿಕೆ

  • Share this:
    ಮೂಳೆಗಳು (Bones) ದುರ್ಬಲಗೊಳ್ಳಲು ನಾವು ಮಾಡುವ ಕೆಲವೊಂದು ಅಭ್ಯಾಸಗಳೇ (Habits) ಕಾರಣವಾಗುತ್ತದೆ. ಅದು ನಮ್ಮ ದೈನಂದಿನ ಜೀವನದಲ್ಲಿ (Everyday Life) ಕೂಡ ಪರಿಣಾಮ ಬೀರುತ್ತದೆ. ಇದರಿಂದ ಕೆಲವು ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ. ಇದಕ್ಕೆ ಮುಖ್ಯವಾಗಿ ನಾವು ಸೇವಿಸುವ ಆಹಾರಕ್ರಮದಿಂದಲೂ (Diet) ದೇಹ ದುರ್ಬಲಗೊಳಿಸಲು ಪ್ರಾರಂಭಿಸುತ್ತದೆ. ಹಾಗಾಗಿಯೇ ಸಣ್ಣ-ಪುಟ್ಟ ಕೆಲಸ (Work) ಮಾಡಿದರೂ ಕೈ ಕಾಲು ನೋವು (Pain) ಕಾಡಬಹುದು. ಇದಕ್ಕೆ ಕಾರಣ ಮೂಳೆಗಳ ದುರ್ಬಲಗೊಳ್ಳುವಿಕೆ. ಅಂತಹ ಪರಿಸ್ಥಿತಿಯಲ್ಲಿ, ಇವುಗಳ ಮೂಲ ಎಲ್ಲಿದೆ ಎಂದು ಮೊದಲಿಗೆ ತಿಳಿದುಕೊಳ್ಳಬೇಕು. ತಪ್ಪುಗಳು ಎಲ್ಲಿ ಸಂಭವಿಸುತ್ತಿವೆ ಎಂಬುದನ್ನು ನೀವು ತಿಳಿದಿರುವುದು ಮುಖ್ಯ. ಇದರಿಂದ ನಮ್ಮ ಮೂಳೆಗಳ ಆರೋಗ್ಯವನ್ನು (Health) ಕಾಪಾಡಿಕೊಳ್ಳಬಹುದು.

    ಮೂಳೆಗಳು ದುರ್ಬಲಗೊಳ್ಳಲು ಈ ಐದು ಅಭ್ಯಾಸಗಳೇ ಕಾರಣ

    ನಾವು ದಿನವೂ ಮಾಡುವ ಈ ತಪ್ಪುಗಳೇ ಮೂಳೆಗಳು ದುರ್ಬಲಗೊಳ್ಳಲುಕಾರಣವಾಗುತ್ತದೆ. ಆ ಸಮಯದಲ್ಲಿ ನಮಗೆ ಮೂಳೆಗಳ ಆರೋಗ್ಯಕ್ಕೆ ಇದು ಎಷ್ಟು ಅಪಾಯಕಾರಿ ಎಂದು ತಿಳಿದಿರುವುದಿಲ್ಲ. ಜೀವನ ಶೈಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ದೇಹವನ್ನು ಸದೃಢಗೊಳಿಸಬಹುದು. ಹಾಗಾದರೆ ಆ ಐದು ತಪ್ಪುಗಳು ಯಾವುವು ನೀವೇ ನೋಡಿ

    ವಿಟಮಿನ್ ಡಿ ಕೊರತೆ
    ಸೂರ್ಯನ ಬೆಳಕು ಸರಿಯಾಗಿ ತಲುಪದ ಸ್ಥಳಗಳಲ್ಲಿ ವಾಸಿಸುತ್ತಿದ್ದಾರೆ ಇಂತಹ ಸಮಸ್ಯೆಗಳು ಕಾಣುತ್ತವೆ. ಲಾಕ್‌ಡೌನ್‌ನಿಂದ ನೀವು ಮನೆಯಿಂದ ಹೊರಬರುವುದನ್ನು ತಪ್ಪಿಸಿದರೆ ಅಥವಾ ಮನೆಯಿಂದ ಕೆಲಸ ಮಾಡುತ್ತಿದ್ದು ಸೂರ್ಯನ ಬೆಳಕಿನಿಂದ ಪಡೆಯಬಹುದಾದ ವಿಟಮಿನ್ ಡಿ ನಿಮ್ಮ ದೇಹವನ್ನು ತಲುಪುವುದಿಲ್ಲ, ಇದರಿಂದಾಗಿ ಮೂಳೆಗಳು ದುರ್ಬಲಗೊಳ್ಳುತ್ತವೆ. ಮಕ್ಕಳಿಗೆ ಸರಿಯಾದ ಪ್ರಮಾಣದಲ್ಲಿ ಸೂರ್ಯನ ಬೆಳಕು ಸಿಗದಿದ್ದರೆ, ರಿಕೆಟ್ಸ್ನಂತಹ ರೋಗವು ಉಂಟಾಗಬಹುದು.

     ಅತಿಯಾದ ಉಪ್ಪಿನ ಬಳಕೆ
    ಉಪ್ಪು ತಿನ್ನಲು ಇಷ್ಟಪಡುತ್ತಿದ್ದರೆ ಈ ಅಭ್ಯಾಸವು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಉಪ್ಪಿನಲ್ಲಿ ಸೋಡಿಯಂ ಪ್ರಮಾಣವು ತುಂಬಾ ಹೆಚ್ಚಾಗಿರುತ್ತದೆ, ಇದರಿಂದಾಗಿ ಕ್ಯಾಲ್ಸಿಯಂ ದೇಹದಿಂದ ಕಡಿಮೆಯಾಗಲು ಪ್ರಾರಂಭಿಸುತ್ತದೆ, ಈ ಪೋಷಕಾಂಶವು ಮೂಳೆಗಳ ಬಲಕ್ಕೆ ದೊಡ್ಡ ಅಂಶವಾಗಿದೆ.

    ಇದನ್ನೂ ಓದಿ: Weight loss Tips: ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೀರಾ? ಹಾಗಿದ್ರೆ ಈ ಸಲಹೆಗಳನ್ನು ಮರೆಯದಿರಿ

    ಸೋಮಾರಿತನ
    ನೀವು ದೇಹದ ಚಟುವಟಿಕೆಗಳನ್ನು ಕಡಿಮೆ ಮಾಡಿದರೆ ಅಥವಾ ಹೆಚ್ಚು ಸೋಮಾರಿತನವನ್ನು ಮಾಡಿದರೆ, ಮೂಳೆಗಳು ದುರ್ಬಲಗೊಳ್ಳಲು ಇದು ಒಂದು ದೊಡ್ಡ ಕಾರಣವಾಗಿದೆ. ಇದಕ್ಕಾಗಿ ನಡಿಗೆಯೊಂದಿಗೆ ವ್ಯಾಯಾಮವನ್ನು ಮುಂದುವರಿಸುವುದು ಉತ್ತಮ, ಇಲ್ಲದಿದ್ದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಂಭವವಿದೆ.

    ಅತಿಯಾದ ಧೂಮಪಾನ
    ಅತಿಯಾದ ಧೂಮಪಾನವು ಶ್ವಾಸಕೋಶದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೆ ಇದು ಮೂಳೆಗಳನ್ನು ದುರ್ಬಲಗೊಳಿಸುತ್ತದೆ ಎಂಬ ವಿಷಯ ಕೆಲವರಿಗಷ್ಟೇ ತಿಳಿದಿರಬಹುದು. ನಿಮಗೂ ಈ ಅಭ್ಯಾಸ ಇದ್ದರೆ ಮೂಳೆಗಳ ಆರೋಗ್ಯಕ್ಕಾಗಿ ಇಂದೇ ಧೂಮಪಾನವನ್ನು ತ್ಯಜಿಸಿ.

    ಕಡಿಮೆ ನಿದ್ದೆ ಮಾಡುವುದು
    ಪ್ರತಿಯೊಬ್ಬರೂ ಉತ್ತಮ ಆರೋಗ್ಯವನ್ನು ಪಡೆಯಲು ಆಹಾರದ ಜೊತೆಗೆ ನಿತ್ಯ ಕನಿಷ್ಠ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವುದು ಅಗತ್ಯ. ನಿದ್ರೆಯ ಕೊರತೆಯಿಂದ ಮೂಳೆಗಳು ಬಲಹೀನವಾಗುತ್ತವೆ ಎಂದು ಹೇಳಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ 7ರಿಂದ 8 ಗಂಟೆ ನಿದ್ದೆ ಮಾಡದಿದ್ದರೆ ಮೂಳೆಗಳು ದುರ್ಬಲವಾಗಿ ಹಲವು ಸಮಸ್ಯೆಗಳು ಎದುರಾಗಬಹುದು.

    ಇದನ್ನೂ ಓದಿ: Health Tips: ಪ್ರತಿನಿತ್ಯ 8 ರಿಂದ 10 ಗ್ಲಾಸ್ ನೀರು ಕುಡಿಯದಿದ್ದರೆ ಈ ಆರೋಗ್ಯ ಸಮಸ್ಯೆಗಳು ಕಾಡುತ್ತೆ

    ಮೂಳೆಗಳು ಗಟ್ಟಿ ಇರಬೇಕಾದರೆ ನಿಮ್ಮ ಆಹಾರ ಕ್ರಮ ಹೀಗಿರಲಿ

    ಏಕ ದಳ ಧಾನ್ಯಗಳು
    ಏಕದಳ ಧಾನ್ಯಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು. ಗೋಧಿ, ಜೋಳ, ಮೆಕ್ಕೆಜೋಳ, ಬ್ರೌನ್ ರೈಸ್ ಇವುಗಳಲ್ಲಿ ಅಗತ್ಯ ವಿಟಮಿನ್ ಮತ್ತು ಫೈಬರ್ ಇರುತ್ತದೆ. ಇವು ಮೂಳೆಯನ್ನು ಬಲಿಷ್ಠಗೊಳಿಸಲು ಹಾಗೂ ಆರೋಗ್ಯವಾಗಿಡಲು ನೆರವಾಗುತ್ತದೆ.

    ಮೊಟ್ಟೆ
    ಮೊಟ್ಟೆಯಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಇರುವುದರಿಂದ ಇದು ಮೂಳೆಗಳನ್ನು ಬಲಿಷ್ಠಗೊಳಿಸುವಲ್ಲಿ ಸಹಕಾರಿಯಾಗಿದೆ.ಹಾಗೂ ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲ್ಸಿಯಂ ಇರುತ್ತದೆ.

    ಇದನ್ನೂ ಓದಿ: Forehead Tips: ಮುಖದ ಮೊಡವೆ, ಕಪ್ಪು ಕಲೆ ಹೋಗಲಾಡಿಸಲು ಈ ಟಿಪ್ಸ್ ಪಾಲಿಸಿ

    ಮೀನು
    ಮೀನಿನಲ್ಲಿ ಮಿಟಮಿನ್ ಡಿ ಹೇರಳವಾಗಿ ಇರುವುದರಿಂದ ಇದನ್ನು ಸೇವಿಸಿದರೆ ಮೂಳೆ ಬಲಿಷ್ಠವಾಗುತ್ತದೆ. ಮತ್ತು ಇದು ನಿಮ್ಮ ಡಯಟ್ ನಲ್ಲಿ ಇದ್ದರೆ ಉತ್ತಮ.

    ನೆಲ್ಲಿಕಾಯಿ
    ನೆಲ್ಲಿಕಾಯಿಯಲ್ಲಿ ಇರುವ ಔಷಧೀಯ ಗುಣದ ಬಗ್ಗೆ ಎಲ್ಲರಿಗೂ ತಿಳಿದಿರುವ ವಿಷಯವೇ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಇನ್ನಿತರ ಪೋಷಕಾಂಶಗಳು ಬೇಕಾದಷ್ಟು ಪ್ರಮಾಣದಲ್ಲಿ ಸಿಗುತ್ತವೆ. ಮೂಳೆ ಗಟ್ಟಿಯಾಗಬೇಕಾದರೆ ನೆಲ್ಲಿಯೂ ನಿಮ್ಮ ಡಯಟಿನಲ್ಲಿರಬೇಕು.
    Published by:Ashwini Prabhu
    First published: