ಅಡುಗೆಮನೆ ವ್ಯವಸ್ಥಿತವಾಗಿಡಲು ಮಿತವ್ಯಯಕಾರಿ ಮತ್ತು ಸುಲಭ ಉಪಾಯಗಳು

ಸರಿಯಾದ ಉಪಾಯ ಬಳಸಿ ಅಡುಗೆಮನೆಯನ್ನು ಸರಳವಾಗಿ ಸ್ವಚ್ಛಗೊಳಿಸಬಹುದು. ಇಲ್ಲಿ ನಿಮ್ಮ ಅಡಿಗೆಮನೆ ವ್ಯವಸ್ಥಿತವಾಗಿಡಲು ಕೆಲವು ಸುಲಭ ಮತ್ತು ಮಿತವ್ಯಯಕಾರಿ ಸಲಹೆಗಳನ್ನು ನೀಡಲಾಗಿದೆ.

news18
Updated:July 16, 2019, 4:37 PM IST
ಅಡುಗೆಮನೆ ವ್ಯವಸ್ಥಿತವಾಗಿಡಲು ಮಿತವ್ಯಯಕಾರಿ ಮತ್ತು ಸುಲಭ ಉಪಾಯಗಳು
ಅಡಿಗೆಮನೆ
  • News18
  • Last Updated: July 16, 2019, 4:37 PM IST
  • Share this:
ಅಡಿಗೆಮನೆಯ ವ್ಯವಸ್ಥೆ ನೀವಂದುಕೊಂಡಷ್ಟು ದುಬಾರಿಯಲ್ಲ. ಇದನ್ನು ಸರಿಯಾದ ಉಪಾಯ ಬಳಸಿ ಸರಳವಾಗಿ ಸ್ವಚ್ಛಗೊಳಿಸಬಹುದು. ಇಲ್ಲಿ ನಿಮ್ಮ ಅಡಿಗೆಮನೆ ವ್ಯವಸ್ಥಿತವಾಗಿಡಲು ಕೆಲವು ಸುಲಭ ಮತ್ತು ಮಿತವ್ಯಯಕಾರಿ ಸಲಹೆಗಳನ್ನು ನೀಡಲಾಗಿದೆ.

ಫ್ರೀಸ್ಟ್ಯಾಂಡಿಂಗ್ ಶೆಲ್ಫ್ ಗಳು

ನಿಮ್ಮ ಅಡಿಗೆಮನೆಯಲ್ಲಿ ಸಂಗ್ರಹ ಸ್ಥಳ ಕಡಿಮೆ ಇದ್ದರೆ, ಫ್ರೀಸ್ಟ್ಯಾಂಡಿಂಗ್ ಶೆಲ್ಫ್ ಗಳು ಉಪಯುಕ್ತ. ಹಳೆಯ ಪುಸ್ತಕದ ಸ್ಟ್ಯಾಂಡ್ ನಿಂದ ಸರಳವಾದ ಫ್ರೀಸ್ಟ್ಯಾಂಡಿಂಗ್ ಶೆಲ್ಫ್ ಗಳವರೆಗೆ ಮಾರುಕಟ್ಟೆಯಲ್ಲಿ ನೀವು ಖರೀದಿಸಬಹುದಾಗಿದ್ದು, ಇದರಲ್ಲಿ ಅನೇಕ ಆಯ್ಕೆಗಳು ಲಭ್ಯವಿದೆ ಮತ್ತು ನಿಮ್ಮ ಅಡಿಗೆಮನೆಯ ಸಂಗ್ರಹ ಸ್ಥಳ ಹೆಚ್ಚಿಸಬಹುದಾಗಿದೆ.ಹ್ಯಾಂಗ್ ಬ್ಯಾಸ್ಕೆಟ್ ಗಳು
ಹ್ಯಾಂಗ್ ಬ್ಯಾಸ್ಕೆಟ್ ಗಳು ನಿಮ್ಮ ಹಣ್ಣುಗಳನ್ನು ಸಂಗ್ರಹಿಸಲು ಅತ್ಯುತ್ತಮ ಮತ್ತು ಮಿತವ್ಯಯಕಾರಿ ಆಯ್ಕೆಯಾಗಿದೆ. ಇವು ನಿಮ್ಮ ಅಗತ್ಯಕ್ಕೆ ಹೊಂದುವಂತೆ ವಿವಿಧ ಗಾತ್ರಗಳಲ್ಲಿ ಲಭ್ಯ.

ವಾಲ್ ಫೈಲ್
ವಾಲ್ ಫೈಲ್ ತೆಗೆದುಕೊಳ್ಳಿ ಮತ್ತು ಅದರಲ್ಲಿ ಕಂಟೈನರ್ ನ ಎಲ್ಲಾ ಮುಚ್ಚಳಗಳನ್ನಿಡಿ. ಈ ಮೂಲಕ ನಿಮ್ಮ ಅಡಿಗೆಮನೆ ಇಕ್ಕಟ್ಟಾಗಿ ಕಾಣದಂತೆ ಮಾಡಬಹುದು ಮತ್ತು ಮುಚ್ಚಳಗಳನ್ನು ಸುಲಭವಾಗಿ ಹುಡುಕಬಹುದು.


Image source

ಫ್ಲೋಟಿಂಗ್ ಶೆಲ್ಫ್ ಗಳು
ನಿಮ್ಮ ಅಡಿಗೆಮನೆಯಲ್ಲಿ ಹೆಚ್ಚುವರಿ ಸ್ಥಳವಿದ್ದರೆ, ನೀವು ಈ ಫ್ಲೋಟಿಂಗ್ ಶೆಲ್ಫ್ ಗಳನ್ನು ಸೇರಿಸಬಹುದು. ಇವು ಅನೇಕ ವಸ್ತುಗಳನ್ನು ಸಂಗ್ರಹಿಸಬಹುದಾಗಿದ್ದು ಒಂದೇ ಬಾರಿಗೆ ಶೆಲ್ಫ್ ನಲ್ಲಿ ಹೆಚ್ಚಿನ ವಸ್ತು ಸೇರಿಸಬಹುದು.Image Source

ಚಾಕು ಹಿಡಿದಿಡಲು ಮ್ಯಾಗ್ನೆಟ್ ಗಳು
ನುಣುಪಾದ ಫಿನಿಶಿಂಗ್ ಇರುವ ಆಕರ್ಷಕವಾದ ಮರದ ಬೋರ್ಡ್ ತೆಗೆದುಕೊಳ್ಳಿ. ನೀವು ನಿಮ್ಮ ಮರದ ಚಾಪಿಂಗ್ ಬೋರ್ಡ್ ತೆಗೆದುಕೊಂಡು ಅದರ ಮೇಲೆ ಪೇಂಟ್ ಮಾಡಬಹುದು. ಬೋರ್ಡ್ ಗೆ ಮ್ಯಾಗ್ನೆಟಿಕ್ ಸ್ಟ್ರಿಪ್ ಅಂಟಿಸಿ ಚಾಕುಗಳನ್ನು ಅದಕ್ಕೆ ಅಂಟಿಸಿ.Image Source

ಚಾಕು ಹಿಡಿದಿಡಲು ಮ್ಯಾಗ್ನೆಟ್ ಗಳು

ಇವು ನಿಮ್ಮ ಜೇಬಿಗೆ ಕತ್ತರಿ ಹಾಕದ ಕೆಲವು ಸರಳವಾದ ಮತ್ತು ಉತ್ತಮವಾದ ಅಡಿಗೆಮನೆ ವ್ಯವಸ್ಥಿತವಾಗಿಡುವ ಸಲಹೆಗಳು.
First published: July 16, 2019, 4:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading