• Home
  • »
  • News
  • »
  • lifestyle
  • »
  • Foods For Constipation: ಮಕ್ಕಳಲ್ಲಿ ಮಲದ್ದತೆ ಸಮಸ್ಯೆಗೆ ಈ ಆಹಾರಗಳೇ ಪರಿಹಾರವಂತೆ

Foods For Constipation: ಮಕ್ಕಳಲ್ಲಿ ಮಲದ್ದತೆ ಸಮಸ್ಯೆಗೆ ಈ ಆಹಾರಗಳೇ ಪರಿಹಾರವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Foods for Constipation: ಇಂದಿನ ಯುಗದಲ್ಲಿ ಡಯೆಟ್‌ ಹೆಸರಿನಲ್ಲಿ ಸರಿಯಾದ ಆಹಾರ ಸೇವಿಸುವುದಿಲ್ಲ. ಊಟವನ್ನು ಸ್ಕಿಪ್‌ ಮಾಡುವುದು, ಫೈಬರ್‌ಯುಕ್ತ ಆಹಾರವಾದ ಸೊಪ್ಪು, ತರಕಾರಿ, ಹಣ್ಣಿನ ಸೇವನೆ ಕಡಿಮೆಯಿಂದ ಹಾಗೂ ಕಡಿಮೆ ನೀರು ಸೇವನೆಯಿಂದಲೂ ಮಲಬದ್ಧತೆ ಆಗಲಿದೆ.

  • Share this:

ಮಕ್ಕಳು (Children) ಸೇವಿಸುವ ಆಹಾರ (Food) ಹಾಗೂ ಆಹಾರ ಕ್ರಮ ಸರಿಯಾಗಿಲ್ಲದಿದ್ದಾಗ ಮಕ್ಕಳು ಮಲವಿಸರ್ಜನೆ (Constipation) ಮಾಡದೇ ಮಲಬದ್ಧತೆಗೆ ಕಾರಣವಾಗಬಹುದು. ಸಾಕಷ್ಟು ಜನರಿಗೆ ಮಲಬದ್ಧತೆ ಬಗ್ಗೆ ಸೂಕ್ತ ತಿಳುವಳಿಕೆಯೇ ಇರುವುದಿಲ್ಲ. ಮಕ್ಕಳು ಪ್ರತಿನಿತ್ಯ ಮಲವಿಸರ್ಜನೆ ಮಾಡುತ್ತಿದ್ದಾರೆ ಇಲ್ಲವೇ ಎಂಬುದರ ಬಗ್ಗೆ ಗಮನ ವಹಿಸದೇ ಹೋದಲ್ಲಿ ಮುಂದೊಂದು ದಿನ ಇದು ಮೂಲವ್ಯಾದಿ ಅಥವಾ ಪೈಲ್ಸ್‌ ಆಗಿ ಪರಿಣಮಿಸಬಹುದು. ಹೀಗಾಗಿ ಮಕ್ಕಳು ಯಾವ ರೀತಿಯ ಆಹಾರ ಸೇವನೆ ಮಾಡುವುದರಿಂದ ಮಲಬದ್ಧತೆಯನ್ನು ಕಡಿಮೆ ಮಾಡಬಹುದು ಎಂಬುದರ ಬಗ್ಗೆ ಫೊರ್ಟಿಸ್‌ ಆಸ್ಪತ್ರೆಯ ಆಹಾರ ತಜ್ಞೆ ರಿಂಕಿ ಕುಮಾರಿ ಅವರು ತಿಳಿಸಿದ್ದಾರೆ.


ಮಲಬದ್ಧತೆ ಬಗ್ಗೆ ಮಾಹಿತಿ ಇರಲಿ
ಮಲಬದ್ಧತೆ ಎಂದರೆ ವಾರದಲ್ಲಿ ಕನಿಷ್ಠ 3 ಬಾರಿ ಮೋಷನ್‌ಗೆ ಹೋಗುವುದು ಅಥವಾ ಹೋಗದೇ ಇದ್ದರೆ ಅದೇ ಮಲಬದ್ಧತೆ. ಮಲಬದ್ಧತೆ ದೀರ್ಘಕಾಲದವರೆಗೂ ಇದ್ದರೆ ಪೈಲ್ಸ್‌ ಆಗಿ ಮಾರ್ಪಡುತ್ತದೆ. ಈ ಎರಡೂ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಮಲಬದ್ಧತೆಗೆ ಮೂಲ ಕಾರಣ ಜೀವನ ಶೈಲಿ ಹಾಗೂ ಅವೈಜ್ಞಾನಿಕ ಡಯೆಟ್‌.


ಇಂದಿನ ಯುಗದಲ್ಲಿ ಡಯೆಟ್‌ ಹೆಸರಿನಲ್ಲಿ ಸರಿಯಾದ ಆಹಾರ ಸೇವಿಸುವುದಿಲ್ಲ. ಊಟವನ್ನು ಸ್ಕಿಪ್‌ ಮಾಡುವುದು, ಫೈಬರ್‌ಯುಕ್ತ ಆಹಾರವಾದ ಸೊಪ್ಪು, ತರಕಾರಿ, ಹಣ್ಣಿನ ಸೇವನೆ ಕಡಿಮೆಯಿಂದ ಹಾಗೂ ಕಡಿಮೆ ನೀರು ಸೇವನೆಯಿಂದಲೂ ಮಲಬದ್ಧತೆ ಆಗಲಿದೆ. ಮಕ್ಕಳಲ್ಲಿ ಮೂಲವ್ಯಾದಿ ಇಲ್ಲದಿದ್ದರೂ ಮಲಬದ್ಧತೆ ಸರ್ವೇ ಸಾಮಾನ್ಯವಾಗಿದೆ.


ಪೋಷಕರ ಪಾತ್ರವೇನು?:
ಮಕ್ಕಳಿಗೆ ಈ ಮಲಬದ್ಧತೆ ಬಗ್ಗೆ ಸೂಕ್ತ ಮಾಹಿತಿ ಇರುವುದಿಲ್ಲ. ಹೀಗಾಗಿ ಪೋಷಕರು ಮಕ್ಕಳಿಗೆ ಪ್ರಾರಂಭದಿಂದಲೇ ಮಲವಿಸರ್ಜನೆ ಬಗ್ಗೆ ಮಾಹಿತಿ ನೀಡಬೇಕು. ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಟಾಯಿಲೆಟ್‌ ಟ್ರೈನಿಂಗ್‌ ನೀಡಿರಬೇಕು. ಇದು ಮಕ್ಕಳು ನಿತ್ಯ ಮಲವಿಸರ್ಜನೆಗೆ ಅಭ್ಯಾಸಕ್ಕೆ ಅಡಿಪಾಯವಾಗಲಿದೆ. ಪೋಷಕರು ಈ ವಿಚಾರವಾಗಿ ಮಕ್ಕಳ ಬಗ್ಗೆ ಗಮನ ನೀಡದೇ ಹೋದಲ್ಲಿ ಮಲಬದ್ಧತೆಗೆ ಕಾರಣವಾಗಬಹುದು.


ಮಕ್ಕಳ ಆಹಾರ ಕ್ರಮ ಹೀಗಿರಲಿದೆ:
ಕಾಳುಗಳ ಸೇವನೆ: ಕಿಡ್ನಿಬೀನ್ಸ್, ಸೋಯಾಬೀನ್, ಬಟಾಣಿ, ಕಡಲೆ ಮತ್ತು ಮಸೂರಗಳಂತಹ ಕಾಳುಗಳ ಸೇವನೆಯು ಜೀರ್ಣಕ್ರಿಯೆಗೆ ಹೆಚ್ಚು ಸಹಕಾರಿಯಾಗುವುದರಿಂದ ಮಕ್ಕಳಲ್ಲಿ ಮಲಬದ್ಧತೆ ಸಮಸ್ಯೆ ಉಂಟಾಗುವುದಿಲ್ಲ.


ಧಾನ್ಯಗಳು - ಓಟ್ ಮೀಲ್, ಗೋಧಿ ಬ್ರೆಡ್, ಬ್ರೌನ್ ರೈಸ್, ರಾಗಿಯಂತಹ ಧಾನ್ಯಗಳಲ್ಲಿ ಸಮೃದ್ಧ ಪ್ರೋಟಿನ್‌ ಇರಲಿದ್ದು, ಮಕ್ಕಳ ಆಹಾರದಲ್ಲಿ ಈ ಧಾನ್ಯಗಳು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಿ.


ಹಣ್ಣು ಮತ್ತು ತರಕಾರಿಗಳು: ಎಲ್ಲಾ ರೋಗಕ್ಕೂ ಹಣ್ಣೂ ಹಾಗೂ ತರಕಾರಿ ಮದ್ಧು. ಹೀಗಾಗಿ ಕಿತ್ತಳೆ, ಕೋಸುಗಡ್ಡೆ, ಕ್ಯಾರೆಟ್‌, ಸೇಬು ಸೇರಿದಂತೆ ಎಲ್ಲಾ ಬಗೆಯ ಹಣ್ಣು ತರಕಾರಿ ಸೇವನೆಯುವ ಕರುಳಿನ ಚಲನೆಗೆ ಹೆಚ್ಚು ಸಹಾಯ ಮಾಡಲಿದೆ.


ಇದನ್ನೂ ಓದಿ: ಯೀಸ್ಟ್ ಸೋಂಕು ಹೇಗೆ ಉಂಟಾಗುತ್ತದೆ? ತಡೆಯಲು ಏನು ಮಾಡ್ಬೇಕು?


ಬೀಜಗಳು- ಬಾದಾಮಿ, ಕಡಲೆಕಾಯಿ, ಗೋಡಂಬಿ, ಹಝಲ್ ನಟ್ಸ್ ಮುಂತಾದ ಬೀಜಗಳಲ್ಲಿ ಫೈಬರ್‌ ಸಮೃದ್ಧವಾಗಿವೆ. ಇವು ಮಲಬದ್ಧತೆ ಬಾರದಂತೆ ಕಾಪಾಡಲಿದೆ.
ನೀರು ಮತ್ತು ಹಣ್ಣಿನ ರಸ: ದೇಹಕ್ಕೆ ಆಹಾರದಷ್ಟೇ ನೀರು ಹೆಚ್ಚು ಮುಖ್ಯ.ಬೆಳಗ್ಗೆ ಎದ್ದ ಕೂಡಲೇ, ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರು ಕುಡಿಯುವುದರಿಂದ ಹೊಟ್ಟೆ ಸಂಪೂರ್ಣ ಸ್ವಚ್ಛವಾಗಲಿದೆ. ಈಗಾಗಲೇ ಮಲಬದ್ಧತೆಯಿಂದ ಮಲವಿಸರ್ಜನೆ ಸಾಧ್ಯವಾಗದೇ ಇದ್ದಲ್ಲಿ, ಹೆಚ್ಚು ನೀರು ಕುಡಿಯುವುದರಿಂದ ಕೂಡಲೇ ಮೋಷನ್‌ ಆಗಲಿದೆ. ಜೊತೆಗೆ ಹಣ್ಣಿನ ರಸಗಳು, ತೆಂಗಿನ ನೀರು, ಸ್ಮೂಥಿ ಕುಡಿಯುವುದು ಆರೋಗ್ಯಕರ.


ಈ ಆಹಾರದ ಮೇಲೆ ನಿಯಂತ್ರಣವಿರಲಿ:
ಜಂಕ್‌ಫುಡ್‌ - ಜಂಕ್‌ ಅಥವಾ ಫಾಸ್ಟ್‌ ಫುಡ್‌ ತಿನ್ನುವುದು ಅನಾರೋಗ್ಯಕರ ಆಹಾರವಾಗಿದೆ. ಇಂದಿನ ಮಕ್ಕಳು ಇಂತಹ ಆಹಾರಗಳಿಗೆ ಹೆಚ್ಚು ಒಗ್ಗಿಕೊಳ್ಳುತ್ತಿದ್ದಾರೆ. ಈ ಅಭ್ಯಾಸವನ್ನು ಇಂದಿನಿಂದಲೇ ಬಿಡಿಸುವುದು ಉತ್ತಮ.


ಜಂಕ್‌ ಫುಡ್‌ನಲ್ಲಿ ಹೆಚ್ಚು ಕೊಲೆಸ್ಟ್ರಾಲ್‌ ಇರಲಿದ್ದು, ಇದು ಮಲಬದ್ಧತೆಗೆ ಕಾರಣವಾಗಬಹುದು. ಅಷ್ಟೇ ಅಲ್ಲದೆ, ಮಕ್ಕಳಲ್ಲಿ ಬೊಜ್ಜು ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಯನ್ನು ಉಂಟು ಮಾಡಲಿದೆ.


ಕೆಫೀನ್


ಕೆಫೀನ್ ಮಕ್ಕಳಿಗೆ ಒಳ್ಳೆಯದಲ್ಲ. ಸೋಡಾ, ಚಹಾದಂತಹ ಕೆಫೀನ್-ಭರಿತ ಆಹಾರವನ್ನು ಕಡಿಮೆ ಮಾಡುವುದು ಅಥವಾ ತಪ್ಪಿಸುವುದು ಮಕ್ಕಳಿಗೆ ಮಲಬದ್ಧತೆಯನ್ನು ತಪ್ಪಿಸಲು ಸಹಾಯ ಮಾಡುತ್ತದೆ.


ಚೀಸ್ - ಚೀಸ್ ಕ್ಯಾಲ್ಸಿಯಂನ ಅತ್ಯುತ್ತಮ ಮೂಲವಾಗಿದ್ದರೂ, ಅದರ ಅತಿಯಾದ ಬಳಕೆಯು ಮಕ್ಕಳಲ್ಲಿ ಮಲಬದ್ಧತೆಯನ್ನು ಉಂಟುಮಾಡುತ್ತದೆ ಏಕೆಂದರೆ ಇದು ಕರುಳಿನ ಚಲನೆಯನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ: ಕೈಯಲ್ಲಿ ಉಳಿದ ಅರ್ಧಂಬರ್ಧ ಮೆಹೆಂದಿ ತೆಗೆಯಲು ಇಲ್ಲಿವೆ ಸಿಂಪಲ್ ಟಿಪ್ಸ್​


ಸಂಸ್ಕರಿಸಿದ ಮಾಂಸ - ಸಾಸೇಜ್‌ಗಳು, ಬೇಕನ್ ಇತ್ಯಾದಿಗಳಂತಹ ಸಂಸ್ಕರಿಸಿದ ಮಾಂಸದ ಆಯ್ಕೆಗಳಲ್ಲಿ ಫೈಬರ್ ಕಡಿಮೆ ಮತ್ತು ಕೊಬ್ಬಿನಾಂಶ, ಸೋಡಿಯಂ ಅಧಿಕವಾಗಿರುತ್ತದೆ. ಇದು ಕರುಳಿನ ಚಲನೆಯನ್ನು ನಿಧಾನಗೊಳಿಸಿ, ಅಜೀರ್ಣಕ್ಕೆ ಕಾರಣವಾಗಬಹುದು.

Published by:Sandhya M
First published: