• Home
  • »
  • News
  • »
  • lifestyle
  • »
  • Monsoon Health Tips: ಮಳೆಗಾಲದಲ್ಲಿ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

Monsoon Health Tips: ಮಳೆಗಾಲದಲ್ಲಿ ಮೂಳೆಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Bone Health: ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಮೂಳೆಗಳ ಆರೋಗ್ಯ ಸುಧಾರಿಸಲು ಹಲವು ನೈಸರ್ಗಿಕ ಮಾರ್ಗಗಳಿವೆ.

  • Share this:

ಮಳೆಗಾಲದಲ್ಲಿ ನಮ್ಮ ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸ. ಈ ಸಮಮಯದಲ್ಲಿ ಹೆಚ್ಚು ರೋಗಗಳು ನಮ್ಮನ್ನ ಕಾಡುವ ಸಾಧ್ಯತೆ ಇರುತ್ತದೆ. ಅದರಲ್ಲೂ ಆರೋಗ್ಯಕರ ಮೂಳೆಗಳನ್ನು ಕಾಪಾಡಿಕೊಳ್ಳುವುದು ಕಷ್ಟದ ಕೆಲಸವಾಗಬಹುದು, ಆದರೆ ಇದು ಅತ್ಯಂತ ಮುಖ್ಯ. ಮೂಳೆಗಳು ದೇಹದ ಆಕಾರ, ರಚನೆಗೆ ಕೊಡುಗೆ ನೀಡುತ್ತದೆ. ನಮ್ಮ ಮೂಳೆಗಳು ಆರೋಗ್ಯವಾಗಿಲ್ಲದಿದ್ದಲ್ಲಿ ಹಲವಾರು ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅನಾರೋಗ್ಯಕರ ಮೂಳೆಗಳು ಆಸ್ಟಿಯೊಪೊರೋಸಿಸ್, ರಿಕೆಟ್ಸ್, ಮೂಳೆ ಕ್ಯಾನ್ಸರ್, ಮೂಳೆ ಸೋಂಕುಗಳು ಮತ್ತು ಮೂಳೆಯ ಪ್ಯಾಗೆಟ್ಸ್ ಕಾಯಿಲೆಗಳಿಗೆ ಕಾರಣವಾಗಬಹುದು. ಮೂಳೆಗಳ ಆರೋಗ್ಯವನ್ನು ವೃದ್ಧಿಸುವುದು ನಮ್ಮ ಕೈನಲ್ಲಿರುತ್ತದೆ. ದಿನನಿತ್ಯದ ಆಹಾರ ಪದ್ಧತಿ, ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಂಡು, ದೈಹಿಕವಾಗಿ ಸಕ್ರಿಯವಾಗಿ ಮತ್ತು ಅವಶ್ಯಕ ಕಾಳಜಿಯನ್ನು ತೆಗೆದುಕೊಳ್ಳುವುದು ಮುಂತಾದ ವಿವಿಧ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಇನ್ನು ನಿಮ್ಮ ಆಹಾರದಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ನಿಮ್ಮ ಮೂಳೆಗಳ ಆರೋಗ್ಯ ಸುಧಾರಿಸಲು ನೀವು ನೈಸರ್ಗಿಕ ಮಾರ್ಗಗಳನ್ನು ಹುಡುಕುತ್ತಿದ್ದರೆ ಇಲ್ಲಿದೆ ಪರಿಹಾರ.


ನಿಮ್ಮ ಮೂಳೆಯ ಆರೋಗ್ಯವನ್ನು ಹೆಚ್ಚಿಸಲು ನೀವು ಸೇವಿಸಬೇಕಾಗಿರುವ ಆಹಾರಗಳ ಪಟ್ಟಿ ಇಲ್ಲಿದೆ.


ಡ್ರೈ ಪ್ರೂಟ್ಸ್ : ಡ್ರೈ ಪ್ರೂಟ್ಸ್ ಎಂದರೆ ಬಹುತೇಕರಿಗೆ ಬಹಳ ಇಷ್ಟ. ಇದು ಆರೋಗ್ಯದ ದೃಷ್ಟಿಯಿಂದ ಉತ್ತಮವಾದ ಆಯ್ಕೆ. ನೀವು ವಾಲ್ನಟ್ಸ್, ಪೆಕನ್, ಬ್ರೆಜಿಲ್ ನಟ್ಸ್ ಮತ್ತು ಬಾದಾಮಿಗಳನ್ನು ಸೇವನೆ ಮಾಡುವುದು ನಿಮ್ಮ ಮೂಳೆಯ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಅವುಗಳಲ್ಲಿ ಮೂಳೆಯ ಆರೋಗ್ಯವನ್ನು ಹೆಚ್ಚಿಸುವ ಪೋಷಕಾಂಶಗಳಾದ ಕ್ಯಾಲ್ಸಿಯಂ, ಆಂಟಿಆಕ್ಸಿಡೆಂಟ್‌ಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ರಂಜಕಗಳಿಂದ ಸಮೃದ್ಧವಾಗಿದೆ. ನಿಮ್ಮ ಮೂಳೆಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಇವುಗಳನ್ನು ನೀವು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೇವಲ ಮೂಳೆಗಳ ಆರೋಗ್ಯ ಮಾತ್ರವಲ್ಲದೇ, ದೇಹದ ಬೇರೆ ಆರೋಗ್ಯ ಸಮಸ್ಯೆಗಳಿಗೆ ಸಹ ಪರಿಹಾರ ಒದಗಿಸುತ್ತದೆ.


ಸಾಲ್ಮನ್ ಮೀನು: ಈ ಮೀನುಗಳಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಒಮೆಗಾ-ಇ ಕೊಬ್ಬಿನ ಆಮ್ಲಗಳು ಮೂಳೆಯ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದಲ್ಲದೆ, ಈ ಮೀನುಗಳು ನಿಮ್ಮ ವಿಟಮಿನ್ ಡಿ ಅವಶ್ಯಕತೆಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಡಿ ಎರಡೂ ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಮೂಳೆಯ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗುತ್ತದೆ.


ಇದನ್ನೂ ಓದಿ:ಆಯಸ್ಸು ಹೆಚ್ಚಾಗಬೇಕಾ? ಹಾಗಾದ್ರೆ ಸ್ನೇಹಿತರ ಜೊತೆ ಒಳ್ಳೆ ಬಾಂಧವ್ಯ ಬೆಳೆಸಿಕೊಳ್ಳಿ


ಹಾಲು: ಮೂಳೆಗಳ ಆರೋಗ್ಯವನ್ನು ಸುಧಾರಿಸಲು ಕ್ಯಾಲ್ಸಿಯಂ ಅನ್ನು ಆಹಾರದಲ್ಲಿ ಸೇರಿಸಬೇಕು ಎಂಬುದು ಇತ್ತೀಚಿನ ಮಾತಲ್ಲ.. ಹಲವಾರು ವರ್ಷಗಳಿಂದ ಮೂಳೆಯ ಬೆಳವಣಿಗೆಗೆ ಕ್ಯಾಲ್ಸಿಯಂ ಹೆಚ್ಚು ಅಗತ್ಯ ಎಂದು ವೈದ್ಯರು ಹೇಳುತ್ತಲೇ ಬಂದಿದ್ದಾರೆ. ಹಾಗಾದರೇ ಕ್ಯಾಲ್ಸಿಯಂನ ಉತ್ತಮ ಮೂಲ ಯಾವುದು ಎಂದು ಹುಡುಕಿ ಹೊರಟರೆ ಅದು ಹಾಲು. ನೀವು ದಿನಿತ್ಯ ಹಾಲಿನ ಸೇವನೆ ಮಾಡುವುದು ಮೂಳೆಯ ಆರೋಗ್ಯವನ್ನು ಅಭಿವೃದ್ದಿ ಮಾಡುತ್ತದೆ. ಈಗಲೂ ಹಲವಾರು ಜನರು ಹಾಲನ್ನು ಸೇವಿಸಲು ಹಿಂದೆ ಮುಂದೆ ನೋಡುತ್ತಾರೆ, ಆದರೆ ಹಾಲಿನಲ್ಲಿರುವ ಆರೋಗ್ಯಯುತ ಅಂಶಗಳು ದೇಹದ ಆರೋಗ್ಯಕ್ಕೆ ಮುಖ್ಯವಾಗುತ್ತದೆ.


ಮೊಟ್ಟೆಗಳು: ದೇಹದಲ್ಲಿ ಕಡಿಮೆ ಪ್ರೋಟೀನ್ ಮಟ್ಟ ಮೂಳೆ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಆದ್ದರಿಂದ ಅಗತ್ಯ ಪ್ರಮಾಣದ ಪ್ರೋಟೀನ್ ಸೇವಿಸುವುದು ಮುಖ್ಯವಾಗುತ್ತದೆ. ಮೊಟ್ಟೆಯಲ್ಲಿ ಅಗತ್ಯವಾದ ಪ್ರೋಟೀನ್ ಅಂಶಗಳಿದ್ದು, ಅದನ್ನು ನಾವು ಆಹಾರದಲ್ಲಿ ಸೇರಿಸಿ ಸೇವನೆ ಮಾಡುವುದು ಮೂಳೆಯ ಆರೋಗ್ಯಕ್ಕೆ ಬಹಳ ಉತ್ತಮವಾಗುತ್ತದೆ. ಅಲ್ಲದೇ ದಿನನಿತ್ಯ ಒಂದು ಮೊಟ್ಟೆಯ ಸೇವನೆ ನಮ್ಮ ದೇಹದ ಆರೋಗ್ಯವನ್ನು ಸಹ ಚನ್ನಾಗಿ ನೋಡಿಕೊಳ್ಳಲು ಸಹಾಯವಾಗುತ್ತದೆ.


ಪಾಲಕ್ ಸೊಪ್ಪು: ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹಕ್ಕೆ ವಿಟಮಿನ್ ಕೆ ಅನ್ನು ಮುಖ್ಯವಾಗಿದೆ. ಪಾಲಕ್ ನಂತಹ ಹಸಿರು ಎಲೆಗಳ ತರಕಾರಿಗಳು ನಿಮ್ಮ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

Published by:Sandhya M
First published: