Ginger: ಕಾಯಿಲೆಗಳನ್ನು ಗುಣಪಡಿಸುವ ಶುಂಠಿಯಲ್ಲೂ ಇದೆ ಈ ಐದು ಅಡ್ಡ ಪರಿಣಾಮಗಳು

ಇತರೆ ಮಸಾಲಾ ಪದಾರ್ಥಗಳಂತೆ ಶುಂಠಿ ಸಹ ಜನಪ್ರಿಯ ಮಸಾಲೆಯಾಗಿದೆ. ಈ ಬೇರಿನ ತರಕಾರಿಯು ಅದರ ಪರಿಮಳ, ರುಚಿ ಜೊತೆಗೆ ಅನೇಕ ಚಿಕಿತ್ಸಕ ಗುಣಲಕ್ಷಣಗಳನ್ನು ಸಹ ಹೊಂದಿದೆ. ನೆಗಡಿ , ಕೆಮ್ಮು, ಜೀರ್ಣಕ್ರಿಯೆ ಸಮಸ್ಯೆಗಳು, ಹೊಟ್ಟೆ ನೋವು ಮತ್ತು ದೈಹಿಕ ನೋವುಗಳು ಮತ್ತು ಇತರ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸಲು ಶುಂಠಿಯನ್ನು ಅನೇಕ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ.

ಶುಂಠಿ

ಶುಂಠಿ

  • Share this:
ಸಾಮಾನ್ಯವಾಗಿ ಬೆಳಗ್ಗಿನ ಟೀ (Tea) ಅಥವಾ ಚಹಾಕ್ಕೆ ಸ್ವಲ್ಪ ಶುಂಠಿ (Ginger) ಬೆರೆಸಿ ಮಾಡಿದರೆ ಆಹಾ ಅದರ ರುಚಿಯೇ ಬೇರೆ. ಕೆಲವು ಅಡುಗೆಗಳಿಗೆ ಶುಂಠಿ ಇಲ್ಲದೇ ಅದು ಅಪೂರ್ಣ ಎನಿಸುತ್ತದೆ. ಭಾರತೀಯ ಅಡುಗೆಯಲ್ಲಿ (Indian cooking) ಶುಂಠಿಯನ್ನು ವಿವಿಧ ಪಾಕಪದ್ಧತಿಗಳಲ್ಲಿ ಬಳಸಲಾಗುತ್ತದೆ. ಇತರೆ ಮಸಾಲಾ ಪದಾರ್ಥಗಳಂತೆ ಶುಂಠಿ ಸಹ ಜನಪ್ರಿಯ ಮಸಾಲೆಯಾಗಿದೆ. ಈ ಬೇರಿನ ತರಕಾರಿಯು (Root vegetable) ಅದರ ಪರಿಮಳ, ರುಚಿ ಜೊತೆಗೆ ಅನೇಕ ಚಿಕಿತ್ಸಕ ಗುಣಲಕ್ಷಣಗಳನ್ನು ಸಹ ಹೊಂದಿದೆ. ನೆಗಡಿ (Cold), ಕೆಮ್ಮು (Cough), ಜೀರ್ಣಕ್ರಿಯೆ (Digestion) ಸಮಸ್ಯೆಗಳು, ಹೊಟ್ಟೆ ನೋವು ಮತ್ತು ದೈಹಿಕ ನೋವುಗಳು ಮತ್ತು ಇತರ ಸಾಮಾನ್ಯ ಕಾಯಿಲೆಗಳನ್ನು ಗುಣಪಡಿಸಲು ಶುಂಠಿಯನ್ನು ಅನೇಕ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ.

ಆದಾಗ್ಯೂ, ಅನೇಕ ಜನರು ಶುಂಠಿಯನ್ನು ಹೆಚ್ಚು ಸೇವಿಸುತ್ತಾರೆ, ಆರೋಗ್ಯದ ಜೊತೆಗೆ ಇದು ಪ್ರಮುಖ ಅನಾರೋಗ್ಯ ಸಮಸ್ಯೆಗಳಿಗೂ ಸಹ ಕಾರಣವಾಗಬಹುದು. ಅತಿಯಾದ ಶುಂಠಿಯ ಬಳಕೆಯು ಹೃದಯದ ಸಮಸ್ಯೆಗಳು, ಅತಿಸಾರಕ್ಕೆ ಕಾರಣವಾಗಬಹುದು ಮತ್ತು ಗರ್ಭಪಾತದ ಅಪಾಯವನ್ನು ಹೆಚ್ಚಿಸಬಹುದು. ಗಿಡಮೂಲಿಕೆ ತಜ್ಞರು ಒಂದೇ ದಿನದಲ್ಲಿ ನಾಲ್ಕು ಗ್ರಾಂಗಿಂತ ಹೆಚ್ಚು ಶುಂಠಿಯನ್ನು ಸೇವಿಸಬಾರದು ಎಂದು ಹೇಳುತ್ತಾರೆ.

ಅತಿಯಾಗಿ ಶುಂಠಿ ಸೇವನೆ ಮಾಡಿದರೆ ಏನಾಗಬಹುದು?
ಹೆಚ್ಚಿನ ಪ್ರಮಾಣದಲ್ಲಿ ಶುಂಠಿಯನ್ನು ಸೇವಿಸಿದಾಗ, ಶುಂಠಿಯು ಎದೆಯುರಿ, ಗ್ಯಾಸ್, ಹೊಟ್ಟೆ ಉಬ್ಬರ, ವಾಕರಿಕೆ ಮತ್ತು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟು ಮಾಡಬಹುದು. ಆದಾಗ್ಯೂ, ನಮ್ಮಲ್ಲಿ ಅನೇಕರು ಈ ಸುಂದರವಾದ ಗಿಡಮೂಲಿಕೆಯ ಸಂಭಾವ್ಯ ನಕಾರಾತ್ಮಕ ಪರಿಣಾಮಗಳ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರುವುದಿಲ್ಲ. ಶುಂಠಿಯ ಹೆಚ್ಚುವರಿ ಸೇವನೆಯ ಕೆಲ ಅಡ್ಡಪರಿಣಾಮಗಳು ಹೀಗಿವೆ.

ಶುಂಠಿಯ 5 ಅಡ್ಡಪರಿಣಾಮಗಳು
1) ಹೃದಯದ ಸಮಸ್ಯೆಗಳು:
ಹೃದಯದ ಬಡಿತವು ಹೆಚ್ಚಾಗುವುದು ಹೃದಯದ ಮೇಲೆ ಶುಂಠಿಯ ನಕಾರಾತ್ಮಕ ಪರಿಣಾಮಗಳಲ್ಲಿ ಒಂದಾಗಿದೆ. ಶುಂಠಿಯು ಹೃದಯದ ಬಡಿತ ಹೆಚ್ಚು ಮಾಡುವುದು, ಮಸುಕಾದ ದೃಷ್ಟಿ ಮತ್ತು ಹೆಚ್ಚಿನ ಪ್ರಮಾಣದಲ್ಲಿ ನಿದ್ರಾಹೀನತೆಗೆ ಕಾರಣವಾಗುತ್ತದೆ ಎಂದು ತಿಳಿದುಬಂದಿದೆ. ಇದು ಕಡಿಮೆ ರಕ್ತದೊತ್ತಡಕ್ಕೆ ಮತ್ತು ಒಮ್ಮೊಮ್ಮೆ ಹೃದಯಾಘಾತಕ್ಕೂ ಕಾರಣವಾಗಬಹುದು. ಈ ಬೇರನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುವುದು ಹೆಚ್ಚು ಒಳ್ಳೆಯದು.

ಇದನ್ನೂ ಓದಿ: Health Tips: ಅನೇಕ ಆರೋಗ್ಯ ಸಮಸ್ಯೆಗಳಿಗೆ ಈ ಕರ್ಬೂಜ ಹಣ್ಣೇ ಮದ್ದು; ಇದರ ಪ್ರಯೋಜನ ಪಡೆದುಕೊಳ್ಳಿ

2) ಗರ್ಭಿಣಿಯರು ಇದನ್ನು ಸೇವಿಸಬಾರದು:
ಗರ್ಭಾವಸ್ಥೆಯಲ್ಲಿ ಗರ್ಭಾಶಯದ ಸಂಕೋಚನಗಳು ಶುಂಠಿಯ ನಕಾರಾತ್ಮಕ ಪರಿಣಾಮವಾಗಿದ್ದು, ಇದನ್ನು ಗರ್ಭಾವಸ್ಥೆಯಲ್ಲಿದ್ದಾಗ ಮಹಿಳೆಯರು ಸೇವಿಸಬಾರದು. ಅತಿಯಾದ ಶುಂಠಿಯು ಗರ್ಭಾವಸ್ಥೆಯಲ್ಲಿ ತೀವ್ರವಾದ ಎದೆಯುರಿ ಮತ್ತು ಆಸಿಡ್ ರಿಫ್ಲಕ್ಸ್ ಗೆ ಕಾರಣವಾಗಬಹುದು. ಹುಟ್ಟಲಿರುವ ಮಗುವಿನ ಮೇಲೆ ಶುಂಠಿಯು ಹೇಗೆ ನಕಾರಾತ್ಮಕ ಪರಿಣಾಮಗಳು ಬೀರಬಹುದು ಎಂದು ಇನ್ನೂ ಸಾಬೀತಾಗಿಲ್ಲ.

3) ಮಧುಮೇಹ ರೋಗಿಗಳಿಗೆ ಒಳ್ಳೆಯದಲ್ಲ:
ಶುಂಠಿಯ ಅತಿಯಾದ ಸೇವನೆಯು ಮಧುಮೇಹ ರೋಗಿಗಳಿಗೆ ಹಾನಿಕಾರಕವಾಗಿದೆ. ಇದು ದೇಹದಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ, ಅದು ತಲೆತಿರುಗುವಿಕೆ ಮತ್ತು ಆಯಾಸಕ್ಕೆ ಕಾರಣವಾಗಬಹುದು. ಹೆಚ್ಚಿನ ಶುಂಠಿ, ಇತರ ಮಧುಮೇಹ ಔಷಧಿಗಳೊಂದಿಗೆ ಸಂಯೋಜಿಸಲ್ಪಟ್ಟರೆ, ಸಾಕಷ್ಟು ಅಪಾಯಕಾರಿಯಾಗಬಹುದು. ಶುಂಠಿಯನ್ನು ತೆಗೆದುಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ಪಡೆಯುವುದು ಒಳ್ಳೆಯದು.

4) ಹೊಟ್ಟೆಯ ಅಸ್ವಸ್ಥತೆ:
ಶುಂಠಿಯು ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಆದಾಗ್ಯೂ, ನಿಮ್ಮ ಹೊಟ್ಟೆ ಖಾಲಿಯಾಗಿದ್ದರೆ, ಇದು ಅತಿಯಾದ ಗ್ಯಾಸ್ಟ್ರಿಕ್ ಪ್ರಚೋದನೆಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ಜೀರ್ಣಕಾರಿ ಕಿರಿಕಿರಿ ಮತ್ತು ಹೊಟ್ಟೆಯುಬ್ಬರಕ್ಕೆ ಕಾರಣವಾಗಬಹುದು. ಶುಂಠಿಯಲ್ಲಿರುವ ಸಕ್ರಿಯ ಘಟಕಾಂಶವು ಹೊಟ್ಟೆಯನ್ನು ಕಿರಿಕಿರಿಗೊಳಿಸುತ್ತದೆ ಎಂದು ಪರಿಗಣಿಸಲಾಗುತ್ತದೆ, ಇದು ಹೆಚ್ಚು ಆಮ್ಲವನ್ನು ಸೃಷ್ಟಿಸುತ್ತದೆ. ಇದು ನಿಮಗೆ ಅಹಿತಕರ ಭಾವನೆಯನ್ನು ಉಂಟು ಮಾಡಬಹುದು.

ಇದನ್ನೂ ಓದಿ: Stress Relief Tea: ನಿತ್ಯ ಕಾಡೋ ಒತ್ತಡ, ಸುಸ್ತನ್ನು ಕಡಿಮೆ ಮಾಡಲು ಈ ಚಹಾ ಕುಡಿಯಿರಿ

5) ಚರ್ಮ ಮತ್ತು ಕಣ್ಣಿನ ಅಲರ್ಜಿಗೆ ಕಾರಣವಾಗುತ್ತದೆ:
ಕೆಲವು ಸಂದರ್ಭಗಳಲ್ಲಿ, ಅತಿಯಾದ ಶುಂಠಿಯು ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಚರ್ಮದ ಮೇಲೆ ದದ್ದುಗಳು, ಕಣ್ಣುಗಳಲ್ಲಿ ಕೆಂಪಾಗುವುದು, ತುರಿಕೆ, ಉಬ್ಬಿದ ತುಟಿಗಳು, ತುರಿಕೆ ಕಣ್ಣುಗಳು ಮತ್ತು ಗಂಟಲು ಅಸ್ವಸ್ಥತೆ ಈ ಸ್ಥಿತಿಯ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ. ಅಂತಹ ಸಂದರ್ಭಗಳಲ್ಲಿ ನೀವೇ ಸ್ವತಃ ಮನೆಯಲ್ಲಿ ಔಷಧಿಗಳನ್ನು ತೆಗೆದುಕೊಳ್ಳದೆ, ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತವಾದ ಸಲಹೆ ಪಡೆಯಿರಿ.

ಒಟ್ಟಿನಲ್ಲಿ ಹೇಳುವುದಾದರೆ ಶುಂಠಿಯನ್ನು ಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಈ ತೊಡಕುಗಳನ್ನು ತಪ್ಪಿಸಬಹುದು.
Published by:Ashwini Prabhu
First published: