• Home
  • »
  • News
  • »
  • lifestyle
  • »
  • Mouth Ulcer: ಬಾಯಿ ಹುಣ್ಣುಗಳಿಗೆ ನೀವು ಮಾಡುವ ಈ ಐದು ತಪ್ಪುಗಳೇ ಕಾರಣ

Mouth Ulcer: ಬಾಯಿ ಹುಣ್ಣುಗಳಿಗೆ ನೀವು ಮಾಡುವ ಈ ಐದು ತಪ್ಪುಗಳೇ ಕಾರಣ

ಬಾಯಿ ಹುಣ್ಣುಗಳು

ಬಾಯಿ ಹುಣ್ಣುಗಳು

ಬಾಯಿಯಲ್ಲಿ ಹುಣ್ಣುಗಳಾದರೆ ತುಂಬಾನೇ ನೋವಾಗುತ್ತದೆ. ಏಕೆಂದರೆ ಯಾವುದೇ ಆಹಾರವನ್ನು ಸೇವಿಸಿದರೂ ಮತ್ತು ಯಾವುದೇ ಪಾನೀಯವನ್ನು ಸಹ ಕುಡಿದರೂ ಸಹ ಆ ಹುಣ್ಣುಗಳಿಗೆ ತಗುಲಿ ಬೆಂಕಿಯ ಶಾಖದಂತೆ ಉರಿಯಲು ಶುರುವಾಗುತ್ತದೆ. ಬಾಯಿಯು ತುಂಬಾನೇ ಸೂಕ್ಷ್ಮವಾದದ್ದು ಎಂದು ಹೇಳಬಹುದು. ಯಾವುದೇ ಹುಣ್ಣುಗಳಾದರೂ ಸಹ ತುಂಬಾನೇ ನೋವು ಅನುಭವಿಸಬೇಕಾಗುತ್ತದೆ.

ಮುಂದೆ ಓದಿ ...
  • Share this:

ದೇಹದ (Body) ಯಾವುದೇ ಅಂಗಾಂಗಗಳಿಗೆ (Body Parts) ಗಾಯ (Injury) ಅಥವಾ ಹುಣ್ಣುಗಳಾದರೆ ಕೊಂಚ ಮಟ್ಟಿಗೆ ಆ ನೋವನ್ನು (Pain) ನಾವು ತಡೆದು ಕೊಳ್ಳಬಹುದು, ಆದರೆ ಬಾಯಿಯಲ್ಲಿ (Mouth) ಹುಣ್ಣುಗಳಾದರೆ (Ulcer) ತುಂಬಾನೇ ನೋವಾಗುತ್ತದೆ, ಏಕೆಂದರೆ ಯಾವುದೇ ಆಹಾರವನ್ನು (any Food) ಸೇವಿಸಿದರೂ ಮತ್ತು ಯಾವುದೇ ಪಾನೀಯವನ್ನು (Any Drinks) ಸಹ ಕುಡಿದರೂ ಸಹ ಆ ಹುಣ್ಣುಗಳಿಗೆ ತಗುಲಿ ಬೆಂಕಿಯ (Fire) ಶಾಖದಂತೆ ಉರಿಯಲು (Inflamed) ಶುರುವಾಗುತ್ತದೆ. ಬಾಯಿಯು ತುಂಬಾನೇ ಸೂಕ್ಷ್ಮವಾದದ್ದು (Subtle) ಎಂದು ಹೇಳಬಹುದು, ಯಾವುದೇ ಹುಣ್ಣುಗಳಾದರೂ ಸಹ ತುಂಬಾನೇ ನೋವು ಅನುಭವಿಸಬೇಕಾಗುತ್ತದೆ.


ಬಾಯಿಯನ್ನು ಸ್ವಚ್ಚವಾಗಿ ಇರಿಸಿಕೊಳ್ಳುವುದು ತುಂಬಾನೇ ಅತ್ಯಗತ್ಯವಾಗಿದೆ. ಗಮನಾರ್ಹ ಆರೋಗ್ಯ ಸಮಸ್ಯೆಗಳ ಮೇಲೆ ಗಮನ ಹರಿಸುವಾಗ, ನಾವು ಆಗಾಗ್ಗೆ ಸಣ್ಣದನ್ನು ನಿರ್ಲಕ್ಷಿಸುತ್ತೇವೆ. ಅವುಗಳಲ್ಲಿ ಬಾಯಿ ಹುಣ್ಣುಗಳು ಕೂಡ ಒಂದು. ಇದು ಬಾಯಿಯ ಸೂಕ್ಷ್ಮವಾದ ಒಳಪದರ ಅಂಗಾಂಶದ ನಷ್ಟ ಅಥವಾ ಸವೆತದಿಂದ ಉಂಟಾಗುವ ಒಂದು ಸಾಮಾನ್ಯ ಕಾಯಿಲೆಯಾಗಿದ್ದು, ಇದು ಒಂದು ಹಂತದಲ್ಲಿ ಅನೇಕ ಜನರನ್ನು ಬಾಧಿಸುತ್ತದೆ.


ನೋವಿನಿಂದ ಕೂಡಿರುವ ಬಾಯಿ ಹುಣ್ಣುಗಳು
ಹೆಚ್ಚಿನ ಬಾಯಿ ಹುಣ್ಣುಗಳು ಸಾಮಾನ್ಯವಾಗಿ ನಿರುಪದ್ರವಿ, ಆದರೆ ಅವು ತುಂಬಾ ನೋವಿನಿಂದ ಕೂಡಿರುತ್ತವೆ ಮತ್ತು ಆಹಾರ ತಿನ್ನಲು, ಪಾನೀಯಗಳನ್ನು ಕುಡಿಯಲು ಮತ್ತು ಹಲ್ಲುಜ್ಜಲು ಸಹ ಒಮ್ಮೊಮ್ಮೆ ಕಷ್ಟವಾಗಬಹುದು. ಬಾಯಿ ಹುಣ್ಣುಗಳಿಂದ ಬಳಲುತ್ತಿರುವ ಜನರಿಗೆ ಆಹಾರ ಅಗಿಯುವುದು ಅಥವಾ ಹಲ್ಲುಜ್ಜುವ ಸಮಸ್ಯೆ, ಉಪ್ಪು, ಮಸಾಲೆಯುಕ್ತ ಅಥವಾ ಹುಳಿ ಆಹಾರಗಳಿಂದ ಇನ್ನಷ್ಟು ಕಿರಿಕಿರಿ ಆಗುತ್ತದೆ.


ಇದನ್ನೂ ಓದಿ : Food for Diabetics: ಮಧುಮೇಹಿಗಳ ಆರೋಗ್ಯಕ್ಕೆ ಒಳ್ಳೆಯದಂತೆ ಈ ತಿಂಡಿಗಳು


ಈ ರೀತಿಯ ಬಾಯಿಯಲ್ಲಿ ಆಗುವ ಹುಣ್ಣುಗಳನ್ನು ಕ್ಯಾಂಕರ್ ಹುಣ್ಣುಗಳು ಎಂದೂ ಸಹ ಕರೆಯಲಾಗುತ್ತದೆ ಮತ್ತು ಸಾಮಾನ್ಯವಾಗಿ ಒಂದು ಅಥವಾ ಎರಡು ವಾರಗಳ ನಂತರ ತನ್ನಷ್ಟಕ್ಕೆ ತಾನೇ ಅವುಗಳು ವಾಸಿಯಾಗುತ್ತವೆ. ಆದಾಗ್ಯೂ, ಇದು ಗುಣಪಡಿಸದೆ ದೀರ್ಘಕಾಲದವರೆಗೆ ಮುಂದುವರಿದರೆ, ನೀವು ವೈದ್ಯರನ್ನು ಸಂಪರ್ಕಿಸಲೇ ಬೇಕಾಗಿ ಬರಬಹುದು.


ಬಾಯಿ ಹುಣ್ಣುಗಳಿಗೆ ಕೆಲವು ಸಾಮಾನ್ಯ ಕಾರಣಗಳು ಇಲ್ಲಿವೆ ನೋಡಿ:


1. ಕಳಪೆ ಬಾಯಿಯ ನೈರ್ಮಲ್ಯ:
ಬಾಯಿ ಹುಣ್ಣುಗಳಿಗೆ ಸಾಮಾನ್ಯ ಕಾರಣಗಳಲ್ಲಿ ಮುಖ್ಯವಾದದ್ದು ಎಂದರೆ ಅದು ಸರಿಯಾದ ಬಾಯಿಯ ನೈರ್ಮಲ್ಯದ ಕೊರತೆ ಎಂದು ಹೇಳಲಾಗುತ್ತದೆ. ಅನುಚಿತ ಅಥವಾ ಅತಿಯಾದ ಹಲ್ಲುಜ್ಜುವಿಕೆಯಂತಹ ಅಂಶಗಳಿಂದ ಸಹ ಇದು ಉಂಟಾಗಬಹುದು.


ಇದಲ್ಲದೆ, ಟೂತ್ಪೇಸ್ಟ್ ಅಥವಾ ಮೌತ್ ವಾಶ್ ನಲ್ಲಿ ಸೋಡಿಯಂ ಲಾರಿಲ್ ಸಲ್ಫೇಟ್ ನಂತಹ ಕೆಲವು ಪದಾರ್ಥಗಳ ಉಪಸ್ಥಿತಿಯು ಪುನರಾವರ್ತಿತ ಬಾಯಿ ಹುಣ್ಣುಗಳ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.


2. ಪೌಷ್ಠಿಕಾಂಶದ ಕೊರತೆಗಳು:
ಕಬ್ಬಿಣ, ವಿಟಮಿನ್ ಬಿ-12, ಸತು ಮತ್ತು ಫೋಲೇಟ್ ನಂತಹ ಖನಿಜಗಳು ಮತ್ತು ಜೀವಸತ್ವಗಳಲ್ಲಿನ ಪೌಷ್ಟಿಕಾಂಶದ ಕೊರತೆಯಿಂದಾಗಿ ಬಾಯಿ ಹುಣ್ಣುಗಳು ಉಂಟಾಗಬಹುದು.


3. ಅತಿಯಾದ ತಂಬಾಕಿನ ಬಳಕೆ:
ತಂಬಾಕಿನಲ್ಲಿ ಕಂಡು ಬರುವ ಹಾನಿಕಾರಕ ರಾಸಾಯನಿಕಗಳು ಮತ್ತು ವಿಷಗಳಿಂದಾಗಿ ತಂಬಾಕಿನ ಬಳಕೆಯು ಬಾಯಿ ಹುಣ್ಣುಗಳಿಗೆ ಕಾರಣವಾಗುತ್ತದೆ. ಇದಲ್ಲದೆ, ತಂಬಾಕಿನಲ್ಲಿರುವ ಕಿರಿಕಿರಿಗಳು ಬಾಯಿ ಮತ್ತು ಬಾಯಿ ಕ್ಯಾನ್ಸರ್ ನ ನಿಮ್ಮ ಅಪಾಯವನ್ನು ಹೆಚ್ಚಿಸಬಹುದು.


ಇದನ್ನೂ ಓದಿ : Calcium Deficiency: ಕ್ಯಾಲ್ಸಿಯಂ ಕೊರತೆಯಿಂದ ಕೂದಲ ಮೇಲೆ ಪರಿಣಾಮ! ಇದು ನಿಮ್ಮ ದೇಹಕ್ಕೆ ಅಗತ್ಯ


4. ಬಾಯಿಯಲ್ಲಿನ ಸೋಂಕುಗಳು:
ಒತ್ತಡ ಅಥವಾ ಆತಂಕದ ಪರಿಣಾಮವಾಗಿ ದೇಹದಲ್ಲಿ ದುರ್ಬಲವಾದ ಪ್ರತಿರಕ್ಷಣಾ ವ್ಯವಸ್ಥೆ ಅಥವಾ ಹಾರ್ಮೋನುಗಳ ಬದಲಾವಣೆಗಳು ಬಾಯಿಯಲ್ಲಿ ಆಗುವ ಹುಣ್ಣುಗಳಿಗೆ ಪ್ರಮುಖ ಕಾರಣವಾಗಿವೆ ಎಂದು ಹೇಳಲಾಗುತ್ತದೆ.


5. ಗಾಯಗಳು ಮತ್ತು ಇಂಪ್ಲಾಂಟ್ ಗಳು:
ಹಲ್ಲುಗಳು, ಒಸಡುಗಳು, ತುಟಿಗಳು ಮತ್ತು ಕೆನ್ನೆಗಳನ್ನು ಒಳಗೊಂಡಿರುವ ಬಾಯಿಯ ಕುಹರಕ್ಕೆ ಗಾಯದಿಂದ ಬಾಯಿ ಹುಣ್ಣುಗಳು ಪ್ರತಿಕೂಲ ಪರಿಣಾಮ ಬೀರಬಹುದು. ಇದು ತುಟಿ ಕಚ್ಚುವುದು ಮತ್ತು ಮುರಿದ ಹಲ್ಲುಗಳಂತಹ ಅಭ್ಯಾಸಗಳನ್ನು ಒಳಗೊಂಡಿರಬಹುದು. ಇದಲ್ಲದೆ, ಅಸಮರ್ಪಕವಾಗಿ ಅಳವಡಿಸಿದ ಹಲ್ಲುಗಳು ಅಥವಾ ಬ್ರೇಸ್ ಗಳು ಸಹ ಅದನ್ನು ಪ್ರಚೋದಿಸಬಹುದು.


ಇದನ್ನೂ ಓದಿ :Health Tips: ಹೊಟ್ಟೆ ನೋವು ಕಾಡ್ತಿದ್ಯಾ? ಅಜೀರ್ಣ ಸಮಸ್ಯೆಗೆ ಇಲ್ಲಿದೆ ಸೂಪರ್ ಮನೆಮದ್ದು


ಇವೆಲ್ಲಾ ಕಾರಣಗಳಿಂದಾಗಿ ಬಾಯಲ್ಲಿ ಅನೇಕ ರೀತಿಯ ಹುಣ್ಣುಗಳು ಆಗುವುದನ್ನು ನಾವು ನೋಡುತ್ತೇವೆ. ಈ ಹುಣ್ಣುಗಳು ನಮ್ಮನ್ನು ಕಾಡಬಾರದು ಎಂದರೆ ನಮ್ಮ ಬಾಯಿಯನ್ನು ಸ್ವಚ್ಚವಾಗಿ ಇರಿಸಿಕೊಳ್ಳಬೇಕು.

Published by:Ashwini Prabhu
First published: