Mental Strength: ತಜ್ಞರ ಪ್ರಕಾರ ಯಶಸ್ವಿ ವ್ಯಕ್ತಿಯಾಗಲು ಅಗತ್ಯವಿರುವ 5 ಮಾನಸಿಕ ಸಾಮರ್ಥ್ಯಗಳು ಇದೇ ಅಂತೆ!

ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದಾದಲ್ಲಿ ಈ ಐದು ಪ್ರಮುಖ ಸ್ನಾಯುಗಳ ಬಗ್ಗೆ ನಿಮಗೆ ಅರಿವಿರಲೇಬೇಕು. ಹಾಗಿದ್ದರೆ ಆ ಸ್ನಾಯುಗಳು ಯಾವುವು ಮತ್ತು ಅವುಗಳನ್ನು ಇನ್ನಷ್ಟು ಪ್ರಯೋಜನಕಾರಿಯಾಗಿ ಹೇಗೆ ಮಾಡಬಹುದು ಎಂಬುದನ್ನು ಕಂಡುಕೊಳ್ಳೋಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಾವು ದೈಹಿಕವಾಗಿ ಸದೃಢರಾಗಲು ಬಯಸಿದಾಗ ಫಿಟ್‌ನೆಸ್‌ನತ್ತ (Fitness) ಹೆಚ್ಚು ಗಮನಹರಿಸುತ್ತೇವೆ. ಬೈಸೆಪ್ಸ್ ಅಥವಾ ಕ್ವಾಡ್‌ಗಳಂತ ನಿರ್ದಿಷ್ಟ ಸ್ನಾಯುಗಳ ಮೇಲೆ ಕೇಂದ್ರೀಕರಿಸುವ ವ್ಯಾಯಾಮಗಳನ್ನು (Exercise) ಮಾಡುತ್ತೇವೆ. ಇನ್ನು ಮಾನಸಿಕ ಆರೋಗ್ಯದ ವಿಷಯಕ್ಕೆ ಬಂದಾಗ ಸ್ನಾಯುಗಳ (Muscle) ಆರೋಗ್ಯಕ್ಕೆ ಅಗತ್ಯವಿರುವ ವ್ಯಾಯಾಮಗಳನ್ನು ದೈಹಿಕ ವ್ಯಾಯಾಮದಂತೆಯೇ ಮಾಡಬಹುದು ಎಂಬುದು ಮಾನಸಿಕ ತಜ್ಞರ ಅಭಿಪ್ರಾಯವಾಗಿದೆ. ಸಂಬಂಧಗಳನ್ನು ಗಟ್ಟಿಗೊಳಿಸಲು ಹಾಗೂ ಪರಸ್ಪರ ಬಾಂಧವ್ಯದೊಂದಿಗಿರಲು ಅಂತೆಯೇ ಅಭಿವೃದ್ಧಿಯ ಪಥದಲ್ಲಿ ಸಾಗಲು ನಮಗೆ ನೆರವಾಗುವ ಐದು ಪ್ರಮುಖ ಮಾನಸಿಕ ಸ್ನಾಯುಗಳಿವೆ  (Mental Muscle). ಹೆಚ್ಚಿನ ಯಶಸ್ವಿ ಜನರು ಈ ಸ್ನಾಯುಗಳ ಮೇಲೆ ತಮ್ಮ ಪ್ರಾಬಲ್ಯವನ್ನು ಸ್ಥಾಪಿಸಿದ್ದು ಹೆಚ್ಚಿನ ಜನರಿಗೆ ಈ ಸ್ನಾಯುಗಳ ಕುರಿತು ಅರಿವಿಲ್ಲ

ಮಾನಸಿಕ ಆರೋಗ್ಯದ ಐದು ಸ್ನಾಯುಗಳು
ನಿಮ್ಮ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದಾದಲ್ಲಿ ಈ ಐದು ಪ್ರಮುಖ ಸ್ನಾಯುಗಳ ಬಗ್ಗೆ ನಿಮಗೆ ಅರಿವಿರಲೇಬೇಕು. ಹಾಗಿದ್ದರೆ ಆ ಸ್ನಾಯುಗಳು ಯಾವುವು ಮತ್ತು ಅವುಗಳನ್ನು ಇನ್ನಷ್ಟು ಪ್ರಯೋಜನಕಾರಿಯಾಗಿ ಹೇಗೆ ಮಾಡಬಹುದು ಎಂಬುದನ್ನು ಕಂಡುಕೊಳ್ಳೋಣ
1) ಹೊಣೆಗಾರಿಕೆ
ಹೊಣೆಗಾರಿಕೆಯನ್ನು ಅದೆಷ್ಟೋ ಜನರು ಚೆನ್ನಾಗಿ ಕರಗತ ಮಾಡಿಕೊಂಡಿದ್ದರೂ ಇದು ಕೂಡ ಯಶಸ್ಸಿನೆಡೆಗೆ ದಾರಿಯಾಗಿರುವ ಸ್ನಾಯುವಾಗಿದೆ. ನಿಮ್ಮ ದೈನಂದಿನ ಚಟುವಟಿಕೆಗಳ ಮೂಲಕ ಈ ಹೊಣೆಗಾರಿಕೆಯನ್ನು ನಿಭಾಯಿಸುವುದು ಎಂದರ್ಥವಲ್ಲ.

  • ಇತರರನ್ನು ದೂಷಿಸುವುದು ಹಾಗೂ ಸಮಸ್ಯೆಗೆ ಸ್ಪಂದಿಸುವ ನಿಮ್ಮ ಸ್ವಭಾವದಲ್ಲಿ ಬದಲಾವಣೆ.

  • ನಿಮ್ಮ ಯಶಸ್ಸಿಗೆ ಕಾರಣರಾಗಿರುವ ಇತರರ ಕೊಡುಗೆಗಳನ್ನು ಗುರುತಿಸುವುದು.

  • ನಿಮ್ಮ ಬಳಿ ಏನಿದೆಯೋ ಅದರಲ್ಲಿ ತೃಪ್ತಿ ಹೊಂದುವುದು ಇತರರ ಬಳಿ ಇರುವುದು ನಮ್ಮ ಬಳಿ ಇಲ್ಲವೆಂದು ಕೊರಗದಿರುವುದು.


2) ಉಪಯೋಗಕಾರಿ ನಂಬಿಕೆಗಳು
ನಮ್ಮ ನಂಬಿಕೆಗಳು ಸತ್ಯವೆಂದೇ ಹೆಚ್ಚಿನವರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಅದು ಊಹೆಗಳ ಗುಂಪಾಗಿದೆ. ನಾವು ಅವುಗಳನ್ನು ಪ್ರಯೋಗಕ್ಕೆ ಒಳಪಡಿಸಬಹುದು, ತನಿಖೆ ನಡೆಸಬಹುದು, ಸವಾಲು ಹಾಕಬಹುದು ಅಂತೆಯೇ ಹೊಸದನ್ನು ಯೋಚಿಸಲು ಪ್ರಯತ್ನಿಸಬಹುದು. ಈ ಸಹಕಾರಿಯಾಗಿರುವ ದೃಷ್ಟಿಕೋನಗಳನ್ನು ನೀವು ಅಳವಡಿಸಿಕೊಳ್ಳಲೇಬೇಕು.

ಇದನ್ನೂ ಓದಿ: Self-Confidence: ನಿಮ್ಮಲ್ಲಿ ಆತ್ಮವಿಶ್ವಾಸದ ಕೊರತೆಯೇ? ಈ ಅಂಶಗಳನ್ನು ಅಳವಡಿಸಿಕೊಂಡರೆ ನಿಮಗಿದೆ ಸಕ್ಸಸ್

  • ಸಹಕಾರಿ ದೃಷ್ಟಿಕೋನ: ಇನ್ನೊಬ್ಬರ ಗೆಲುವಿನಲ್ಲಿ ಸಂತೋಷ ಕಾಣುವುದು.

  • ಸಂಭಾವ್ಯ ದೃಷ್ಟಿಕೋನ: ಅಡೆತಡೆಗಳು, ಸಮಸ್ಯೆಗಳು ಅಥವಾ ಅನುಮಾನಗಳನ್ನು ಬದಿಗಿಟ್ಟು ಆದರ್ಶ ಫಲಿತಾಂಶವನ್ನು ಕಲ್ಪಿಸುವ ಸ್ವಾತಂತ್ರ್ಯವನ್ನು ನೀಡುತ್ತದೆ.

  • ಅವಕಾಶ ದೃಷ್ಟಿಕೋನ: ಸಂಘರ್ಷದ ಸಮಯದಲ್ಲಿ ಪರಿಸ್ಥಿತಿಗಳನ್ನು ಎದುರಿಸಲು ಅವಕಾಶಗಳನ್ನು ಹೇಗೆ ಕಂಡುಕೊಳ್ಳಬಹುದು ಎಂಬುದಾಗಿ ನಮ್ಮನ್ನು ನಾವೇ ಪ್ರಶ್ನಿಸುವುದು


3) ಆತ್ಮಾವಲೋಕನ
ನಿಮ್ಮ ಆಂತರಿಕ ಸ್ಥಿತಿಯನ್ನು ನೀವು ನಿಖರವಾಗಿ ಮೌಲ್ಯಮಾಪನ ಮಾಡಬಹುದೇ? ಅಂದರೆ ನಿಮ್ಮ ಮನಸ್ಸಿನಲ್ಲಿ ಓಡುತ್ತಿರುವ ವಿಚಾರಗಳು, ನೀವು ಅನುಭವಿಸುವ ಮನಸ್ಥಿತಿಗಳು ಮತ್ತು ಭಾವನೆಗಳು ಹಾಗೂ ದೈಹಿಕ ಸಂವೇದನೆಗಳು. ನಿಮ್ಮ ಕೆಟ್ಟ ಮನಸ್ಥಿತಿಯಲ್ಲಿ ಕೂಡ ಸ್ವಯಂ-ಮೌಲ್ಯಮಾಪನ ಅಂದರೆ ಆತ್ಮಾವಲೋಕನ ಮಾಡಿಕೊಂಡಲ್ಲಿ ನಿರಾಶೆ, ಕೋಪ ಮತ್ತು ಆತಂಕವನ್ನು ಅನುಭವಿಸುತ್ತಿದ್ದೀರಿ ಎಂದರ್ಥ.  ಇಂತಹ ಭಾವನೆಗಳನ್ನು ಮತ್ತು ಪ್ರಚೋದಕಗಳಿಗೆ ಪ್ರತಿಕ್ರಿಯೆಗಳನ್ನು ನಿರ್ವಹಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಉತ್ತಮವಾಗಿರುವುದು ಗುರಿಯಾಗಿದೆ.

4) ಹೆಚ್ಚಿನ ದೃಷ್ಟಿಕೋನಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು
ನೀವು ಹೆಚ್ಚಿನ ಜನರಂತಿದ್ದರೆ ನಿಮ್ಮ ಸ್ಥಾನ ಸರಿಯಾಗಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ಗಮನ ಹರಿಸುತ್ತೀರಿ. ನೀವು ಅನೇಕ ವಿಭಿನ್ನ ದೃಷ್ಟಿಕೋನಗಳನ್ನು ನೋಡಲು ಸಾಧ್ಯವಾದಾಗ, ನಿಮ್ಮೊಂದಿಗೆ ಹೊಂದಿಕೆಯಾಗದ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಪರಿಗಣಿಸುವ ಸಾಮರ್ಥ್ಯವನ್ನು ನೀವು ಹೊಂದಿರುತ್ತೀರಿ.

ಸರಿ ತಪ್ಪು, ಕಪ್ಪು/ಬಿಳುಪು ಹೀಗೆ ಸರಳತೆಯನ್ನು ಮೀರಿ ತೀರ್ಮಾನಿಸಿ.

5) ನಿಮ್ಮ ಶರೀರಶಾಸ್ತ್ರವನ್ನು ಶಾಂತಗೊಳಿಸುವುದು
ನಾವು ಯಾವುದೇ ರೀತಿಯಲ್ಲಿ ತೊಂದರೆಗೊಳಗಾದಾಗ ಅಥವಾ ಅಸಮಾಧಾನಗೊಂಡಾಗ ಮತ್ತು ಸಾಮಾನ್ಯವಾಗಿ ಅದನ್ನು ಹೇಗೆ ಬದಲಾಯಿಸುವುದು ಎಂದು ನಾವು ನಮ್ಮ ದೈಹಿಕ ಸ್ಥಿತಿಯ ಮೇಲೆ ಹೊಂದಿರುವ ಅಪಾರ ಶಕ್ತಿಯನ್ನು ಕಡಿಮೆ ಅಂದಾಜು ಮಾಡುತ್ತೇವೆ. ಈ ಸಮಯದಲ್ಲಿ ನಮ್ಮ ನರಮಂಡಲದ ಮೇಲೆ ನಾವು ಪ್ರಭಾವ ಬೀರಬಹುದು ಮತ್ತು ನಮ್ಮನ್ನು ನಾವು ಶಾಂತಗೊಳಿಸಬಹುದು.

ಇದನ್ನೂ ಓದಿ:  Relationships: ಸಂಬಂಧಗಳಲ್ಲಿ ವಯಸ್ಸಿನ ಅಂತರ ಕೂಡ ಮುಖ್ಯವಂತೆ, ಈ ವಿಚಾರ ನಿಮಗೆ ತಿಳಿದಿರಲೇಬೇಕು

ಉಸಿರಾಟದ ವ್ಯಾಯಾಮಗಳು ಮತ್ತು ಸ್ನಾಯುಗಳ ವಿಶ್ರಾಂತಿಯಂತಹ ಅನೇಕ ಪರಿಣಾಮಕಾರಿ ತಂತ್ರಗಳಿವೆ. ನೀವು ಪ್ರಚೋದನೆಗೊಳಗಾದಾಗ ಅಥವಾ ಹೆದರಿಕೆಯನ್ನು ಅನುಭವಿಸಿದಾಗ ನಿಮ್ಮ ದೈಹಿಕ ಸ್ಥಿತಿಯನ್ನು ತ್ವರಿತವಾಗಿ ಬದಲಾಯಿಸಲು ನೀವು ಬಳಸಬಹುದು.
Published by:Ashwini Prabhu
First published: