Tourist Spots: ನೀವು ಪಕ್ಕಾ ವೆಜಿಟೆರಿಯನ್ ಟೂರಿಸ್ಟ್​​ಗಳಾ? ಹಾಗಿದ್ರೆ ಈ 5 ದೇಶಗಳಿಗೆ ಹೋಗಿ ಬನ್ನಿ

ಶಾಹಿದ್ ಮತ್ತು ಮೀರಾ ಅವರ ಪೋಸ್ಟ್ ನಿಮ್ಮ ರಜಾದಿನದ ಯೋಜನೆಗಳ ಬಗ್ಗೆ ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ ಮತ್ತು ಮನೆಯಿಂದ ಹೊರಡುವ ಮುನ್ನ ಅಲ್ಲಿ ಸಸ್ಯಾಹಾರ ಊಟ ಸಿಗುತ್ತದೆಯೋ, ಇಲ್ಲವೋ ಅಂತ ನೋಡಿಕೊಂಡು ಹೋಗುವುದಂತೂ ಗ್ಯಾರೆಂಟಿ. ಯಾವ ಯಾವ ದೇಶಗಳಲ್ಲಿ ಸಸ್ಯಾಹಾರ ಊಟ ಸಿಗುತ್ತದೆ ನೋಡೋಣ ಬನ್ನಿ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತೀಚೆಗೆ ಬಾಲಿವುಡ್ (Bollywood) ನಟ ಶಾಹಿದ್ ಕಪೂರ್ ಮತ್ತು ಅವರ ಹೆಂಡತಿ ಮೀರಾ ಕಪೂರ್ ಅವರು ಇಟಲಿಯ ದ್ವೀಪದಲ್ಲಿ ರಜಾದಿನಗಳನ್ನು ಕಳೆಯಲು ಹೋದಾಗ, ಅವರು ತಂಗಿದ್ದ ಸಿಸಿಲಿಯ ರೆಸಾರ್ಟ್ ನಲ್ಲಿ (Resorts) ನೀಡಲಾಗುವ ಆಹಾರದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು ಮತ್ತು ನಂತರ ಅದು ಒಂದು ಚರ್ಚೆಯ ವಿಷಯವಾಗಿದ್ದು ನಮಗೆ ಗೊತ್ತೇ ಇದೆ. ಈ ದಂಪತಿಗಳು ರೆಸಾರ್ಟ್ ನಲ್ಲಿ ಒಳ್ಳೆಯ ಸಸ್ಯಾಹಾರಿ (Vegetarian) ಆಹಾರ ಸೇವಿಸಲು ತುಂಬಾನೇ ಪ್ರಯತ್ನಿಸಿದರು. ಮೀರಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗಳಲ್ಲಿ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕೆಲವು ದೇಶಗಳಿಗೆ (Country) ನೀವು ಹೋದಾಗ ಅಲ್ಲಿ ಸಸ್ಯಾಹಾರ ಊಟ ಸಿಗುವುದೇ ಕಷ್ಟವಾಗುತ್ತದೆ. ಬಹುತೇಕವಾಗಿ ಬೇರೆ ಹೊರ ದೇಶಗಳಲ್ಲಿ ಮಾಂಸಹಾರಿಗಳಿಗೆ ಅನೇಕ ರೀತಿಯ ಆಯ್ಕೆಗಳು ಇರುವುದನ್ನು ನೋಡುತ್ತೇವೆ.

ಆದರೆ ಈಗ ಮತ್ತೆ ಜನರು ಹೆಚ್ಚಾಗಿ ಸಸ್ಯಾಹಾರದ ಕಡೆಗೆ ಮುಖ ಮಾಡುತ್ತಿದ್ದಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೀಗೆ ನಾವು ಬೇರೆ ದೇಶಕ್ಕೆ ಪ್ರವಾಸಕ್ಕೆ ಅಂತ ಹೋದಾಗ ಅಲ್ಲಿ ನಮಗೆ ಇಷ್ಟವಾದ ಆಹಾರ ಸಿಗದೇ ಹೋದರೆ ಏನು ಚೆನ್ನಾಗಿರುತ್ತದೆ ಹೇಳಿ? ಮೊದಲೇ ಆಹಾರದ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ಪ್ರವಾಸಕ್ಕೆ ಹೋಗುವುದು ಸೂಕ್ತ ಅಂತ ಹೇಳಬಹುದು.

ಶಾಹಿದ್ ಮತ್ತು ಮೀರಾ ಅವರ ಪೋಸ್ಟ್ ನಿಮ್ಮ ರಜಾದಿನದ ಯೋಜನೆಗಳ ಬಗ್ಗೆ ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ ಮತ್ತು ಮನೆಯಿಂದ ಹೊರಡುವ ಮುನ್ನ ಅಲ್ಲಿ ಸಸ್ಯಾಹಾರ ಊಟ ಸಿಗುತ್ತದೆಯೋ, ಇಲ್ಲವೋ ಅಂತ ನೋಡಿಕೊಂಡು ಹೋಗುವುದಂತೂ ಗ್ಯಾರೆಂಟಿ. ಯಾವ ಯಾವ ದೇಶಗಳಲ್ಲಿ ಸಸ್ಯಾಹಾರ ಊಟ ಸಿಗುತ್ತದೆ ನೋಡೋಣ ಬನ್ನಿ.

1. ಭಾರತ
ಭಾರತದಲ್ಲಿ ಅತಿಥಿಗಳನ್ನು ದೇವರು ಅಂತ ಹೇಳುತ್ತಾರೆ. ಅತಿಥಿಗಳಿಗಾಗಿ ಭಾರತದಲ್ಲಿ ಯಾವುದೇ ಆಹಾರಗಳನ್ನು ಮಾಡಿಕೊಡಲು ಸಿದ್ದರಿರುತ್ತಾರೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರರ್ಥ ನಾವು ಪ್ರಪಂಚದಾದ್ಯಂತದ ನಮ್ಮ ಪ್ರವಾಸಿಗರನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತ.

ಇದನ್ನೂ ಓದಿ: Monsoon Travel Tips: ಮಳೆಗಾಲದಲ್ಲಿ ಪ್ರವಾಸ ಹೊರಟಿದ್ದೀರಾ? ಹಾಗಿದ್ರೆ ಈ ವಿಚಾರ ನೆನಪಿನಲ್ಲಿರಲಿ

ಭಾರತದಲ್ಲಿ ಅನೇಕ ಬೇರೆ ಬೇರೆ ರೀತಿಯ ಆಹಾರಗಳನ್ನು ನೀವು ಪಡೆಯಬಹುದು. ಮುಖ್ಯವಾಗಿ ಸಸ್ಯಾಹಾರಿ ಆಹಾರವು ಅತ್ಯಂತ ಜನಪ್ರಿಯವಾಗಿದೆ ಮತ್ತು ಭಾರತದಾದ್ಯಂತ ವ್ಯಾಪಕವಾಗಿದೆ. ಹೆಚ್ಚಿನ ನಗರಗಳು ಮತ್ತು ಪಟ್ಟಣಗಳಲ್ಲಿ, ಸಂಪೂರ್ಣವಾಗಿ ಸಸ್ಯಾಹಾರಿ ಅಥವಾ ಜನಪ್ರಿಯ ಸಸ್ಯಾಹಾರಿ ಭಕ್ಷ್ಯಗಳನ್ನು ಪೂರೈಸುವ ರೆಸ್ಟೋರೆಂಟ್ ಗಳು ತುಂಬಾನೇ ಇವೆ. ನೀವು ಭಾರತಕ್ಕೆ ಬಂದು ಸಸ್ಯಾಹಾರಿ ಆಹಾರ ಸಿಗದೇ ಒದ್ದಾಡಿರುವ ಸಂದರ್ಭಗಳೇ ಇರುವುದಿಲ್ಲ.

2. ಥೈಲ್ಯಾಂಡ್
ಪ್ರಪಂಚದಾದ್ಯಂತದ ಜನರಿಗೆ ಅತ್ಯಂತ ಜನಪ್ರಿಯ ಪ್ರಯಾಣದ ತಾಣಗಳಲ್ಲಿ ಒಂದಾದ ಥೈಲ್ಯಾಂಡ್ ತಾಜಾ ಹಣ್ಣುಗಳು, ತರಕಾರಿಗಳು, ನೂಡಲ್ಸ್ ಮತ್ತು ರೈಸ್ ಭಕ್ಷ್ಯಗಳನ್ನು ಒದಗಿಸುತ್ತದೆ. ಇಲ್ಲಿ ನಿಮಗೆ ವೈವಿಧ್ಯಮಯ ಆಯ್ಕೆಗಳು, ಸಸ್ಯಾಹಾರಿ ಆಹಾರ ಪ್ರಿಯರಿಗೆ ಅನೇಕ ರೀತಿಯ ಭಕ್ಷ್ಯಗಳು ಸಹ ದೊರೆಯುತ್ತವೆ. ಆದರೆ ಫಿಶ್ ಸಾಸ್ ಅಥವಾ ಚಿಕನ್ ಸಾರುಗಳಲ್ಲಿ ತಯಾರಿಸಿದ ಸಸ್ಯ ಆಧಾರಿತ ಭಕ್ಷ್ಯಗಳ ಬಗ್ಗೆ ಸೇವಿಸುವ ಮುಂಚೆ ಸ್ವಲ್ಪ ಗಮನವಹಿಸಿರಿ.

3. ಇಸ್ರೇಲ್
ಈ ಬೆರಗುಗೊಳಿಸುವ ಕರಾವಳಿ ದೇಶವು ತನ್ನನ್ನು 'ವಿಶ್ವದ ಸಸ್ಯಾಹಾರಿ ರಾಜಧಾನಿ' ಎಂದು ಕರೆಯಲು ಪ್ರಾರಂಭಿಸಿದೆ ಎಂದು ನಿಮಗೆ ತಿಳಿದಿದೆಯೇ? ಹೌದು.. ಈ ದೇಶ ಈಗ ಸಸ್ಯಾಹಾರಿ ಆಹಾರದ ಕಡೆಗೆ ಹೆಚ್ಚು ಒಲವು ತೋರಿಸುತ್ತಿದೆ ಮತ್ತು ತನ್ನ ಪ್ರವಾಸಿಗರಿಗೆ ಸಸ್ಯಾಹಾರ ಆಹಾರವನ್ನು ಉಣಬಡಿಸಲು ಯಾವುದೇ ಅವಕಾಶಗಳನ್ನು ಬಿಡುತ್ತಿಲ್ಲ. ಈ ದೇಶದಲ್ಲಿ ನೀವು 100 ಪ್ರತಿಶತ ಸಂಪೂರ್ಣವಾಗಿ ಸಸ್ಯಾಹಾರಿ ಆಹಾರಗಳನ್ನು ಪಡೆಯಬಹುದು.

4. ತೈವಾನ್
ತೈವಾನ್ ಅನ್ನು ಪ್ರಾಥಮಿಕವಾಗಿ ಮಾಂಸಾಹಾರಿ ದೇಶ ಎಂಬ ಜನಪ್ರಿಯ ಕಲ್ಪನೆಗೆ ವ್ಯತಿರಿಕ್ತವಾಗಿ, ಪೇಟಾ ಕೂಡ ತೈವಾನ್ ಅನ್ನು ವಿಶ್ವದ ಅಗ್ರ 'ವೇಗನ್ ಸ್ನೇಹಿ ದೇಶಗಳಲ್ಲಿ' ಒಂದಾಗಿದೆ ಎಂದು ಶ್ಲಾಘಿಸಿದೆ ಎಂದು ಹೇಳಿದರೆ ನೀವು ಆಶ್ಚರ್ಯ ಪಡುತ್ತೀರಿ. ಈಗ ಈ ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮ ಎಂದರೆ ಅದು ಸಸ್ಯಾಹಾರಿ ರೆಸ್ಟೋರೆಂಟ್ ಗಳು ಎಂದು ಹೇಳಬಹುದು. ತೈವಾನ್ ಸಸ್ಯಾಹಾರಿಗಳ ಮೂರನೇ ಅತಿದೊಡ್ಡ ಜನಸಂಖ್ಯೆಯನ್ನು ಹೊಂದಿದೆ.

ಇದನ್ನೂ ಓದಿ:  Travel YouTubers: ಇವರೇ ನೋಡಿ ಭಾರತದ ಟಾಪ್ ಟ್ರಾವೆಲ್ ಯುಟ್ಯೂಬರ್​​ಗಳು

ಇದಕ್ಕೆ ಒಂದು ಪ್ರಮುಖ ಕಾರಣವೆಂದರೆ, ದೇಶದ 1/3 ಭಾಗವು ಬೌದ್ಧ ಧರ್ಮಕ್ಕೆ ಸೇರಿದವರಾಗಿದ್ದು, ಇವರು ಸಾಮಾನ್ಯವಾಗಿಯೇ ಸಸ್ಯಾಹಾರಿ ಜೀವನಶೈಲಿಯೊಂದಿಗೆ ಹೊಂದಿ ಕೊಳ್ಳುತ್ತಾರೆ.

5. ಶ್ರೀಲಂಕಾ
ಶ್ರೀಲಂಕಾದ ಪಾಕಪದ್ಧತಿಯು ಮಸಾಲೆಯುಕ್ತವಾಗಿರುವುದಕ್ಕೆ ಹೆಸರುವಾಸಿಯಾಗಿದೆ, ಆದರೆ ಇದು ಮೆಣಸಿನಕಾಯಿಯನ್ನು ಮೀರಿ, ಹಲಸಿನ ಪಲ್ಯ, ಬದನೆಕಾಯಿ, ಬೆಂಡೆಕಾಯಿ, ಬ್ರೆಡ್ ಫ್ರೂಟ್, ವಿವಿಧ ಸೋರೆಕಾಯಿ ಮತ್ತು ಅನಾನಸ್ ಸೇರಿದಂತೆ ಒಂದು ಡಜನ್ ಅಥವಾ ಹೆಚ್ಚಿನ ಸಸ್ಯಾಹಾರಿ ಭಕ್ಷ್ಯಗಳನ್ನು ಇಲ್ಲಿ ರೆಸ್ಟೋರೆಂಟ್ ಗಳಲ್ಲಿ ತಯಾರಿಸಲಾಗುತ್ತದೆ. ದಕ್ಷಿಣ ಭಾರತದ ವೈವಿಧ್ಯಮಯ ಭಕ್ಷ್ಯಗಳೊಂದಿಗೆ, ಶ್ರೀಲಂಕಾ ಸಸ್ಯಾಹಾರಿಗಳಿಗೆ ಸ್ವರ್ಗ ಅಂತ ಹೇಳಬಹುದು.
Published by:Ashwini Prabhu
First published: