• Home
  • »
  • News
  • »
  • lifestyle
  • »
  • Monsoon Snacks: ಮಳೆಗಾಲದ ಈ ಚಳಿಗೆ ಜನರು ಇಷ್ಟಪಡುವ ವಿಧ-ವಿಧದ ಸ್ನ್ಯಾಕ್ಸ್‌

Monsoon Snacks: ಮಳೆಗಾಲದ ಈ ಚಳಿಗೆ ಜನರು ಇಷ್ಟಪಡುವ ವಿಧ-ವಿಧದ ಸ್ನ್ಯಾಕ್ಸ್‌

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ವಿಶೇಷವಾಗಿ ಕರಿದ ತಿಂಡಿಗಳು ಮತ್ತು ಚಹಾಗಾಗಿ ಮಳೆಗಾಲದಲ್ಲಿ ಯಾವಾಗಲೂ ಅವುಗಳನ್ನು ಸೇವಿಸಬೇಕೆಂದು ಮನಸ್ಸು ಒದ್ದಾಡುತ್ತಿರುತ್ತದೆ. ಅದರಲ್ಲೂ ಭಾರತದಲ್ಲಿ ಈ ಮಳೆಗಾಲದ ಸಮಯದಲ್ಲಿ ವಿಧ-ವಿಧವಾದ ಕರಿದ ಆಹಾರ ತಿಂಡಿಗಳನ್ನು ಚಹಾದ ಜೊತೆ ಸೇವಿಸುವುದು ವಾಡಿಕೆ ಆಗಿರುವುದು ಮಳೆಗಾಲಕ್ಕೂ ಭಾರತಕ್ಕೂ ಇರುವ ಅವಿನಾಭಾವ ಸಂಬಂದವನ್ನು ಸೂಚಿಸುತ್ತದೆ.

ಮುಂದೆ ಓದಿ ...
  • Share this:

ಮಳೆ ಬಂದಾಗ ಬಿಸಿ-ಬಿಸಿ ಒಂದು ಕಪ್‌ ಚಹಾ (Tea) ಜೊತೆ ಕೆಲವು ಕರಿದ ತಿಂಡಿಗಳು ಇದ್ದರೆ ಆ ಮಳೆಗಾಲವೇ ಒಂದು ಸೊಗಸಾಗಿ ಕಾಣುತ್ತದೆ. ಈ ತರಹದ ತಿಂಡಿಗಳನ್ನು (Snacks) ಭಾರತದಲ್ಲಿ ಅತಿ ಹೆಚ್ಚು ಬಳಸುತ್ತಾರೆ ಎಂಬುದು ಗೊತ್ತಿರುವ ವಿಚಾರವೇ ಆಗಿದೆ. ಕಪ್ಪು ಮೋಡಗಳು ತುಂಬಿದ ಆಕಾಶ ಮತ್ತು ಮನೆ ಕಿಟಕಿ ಗಾಜುಗಳ ಮೇಲೆ ಬೀಳುವ ಮಳೆಯು (Rain) ನಮ್ಮಲ್ಲಿ ಹೊಸ-ಹೊಸ ಆಹಾರ ಬಯಕೆಗಳನ್ನು ಹುಟ್ಟು ಹಾಕುತ್ತದೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಕರಿದ ತಿಂಡಿಗಳು ಮತ್ತು ಚಹಾಗಾಗಿ ಮಳೆಗಾಲದಲ್ಲಿ ಯಾವಾಗಲೂ ಅವುಗಳನ್ನು ಸೇವಿಸಬೇಕೆಂದು ಮನಸ್ಸು ಒದ್ದಾಡುತ್ತಿರುತ್ತದೆ. ಅದರಲ್ಲೂ ಭಾರತದಲ್ಲಿ ಈ ಮಳೆಗಾಲದ (Rainy Season) ಸಮಯದಲ್ಲಿ ವಿಧ-ವಿಧವಾದ ಕರಿದ ಆಹಾರ ತಿಂಡಿಗಳನ್ನು ಚಹಾದ ಜೊತೆ ಸೇವಿಸುವುದು ವಾಡಿಕೆ ಆಗಿರುವುದು ಮಳೆಗಾಲಕ್ಕೂ ಭಾರತಕ್ಕೂ (India) ಇರುವ ಅವಿನಾಭಾವ ಸಂಬಂದವನ್ನು ಸೂಚಿಸುತ್ತದೆ.


ಮಳೆಗಾಲದ ಸಮಯದಲ್ಲಿ ಸೇವಿಸುವ ಕೆಲವು ಆಹಾರಗಳನ್ನು ನಾವು ಇಲ್ಲಿ ಪಟ್ಟಿ ಮಾಡಿದ್ದೇವೆ:
ಖಿಚುರಿ
ಬೆಂಗಾಲಿಗಳು ಮಳೆಗಾಲದ ಸಮಯದಲ್ಲಿ ತಮ್ಮ ಇಷ್ಟವಾದ ಖಿಚುರಿ ತಿಂಡಿಯನ್ನು ತಿನ್ನಲು ಹೆಚ್ಚು ಇಷ್ಟ ಪಡುತ್ತಾರೆ. ಇದನ್ನು ಹೆಚ್ಚು ತುಪ್ಪ‌ ಬಳಸಿ ತಯಾರಿಸಲಾಗುತ್ತದೆ ಮತ್ತು ಹಿಲ್ಸಾದಂತಹ ಹುರಿದ ಮೀನಿನೊಂದಿಗೆ ಇದನ್ನು ಸೇವಿಸಲು ಕೊಡಲಾಗುತ್ತದೆ. ಮಳೆಗಾಲದ ತಣ್ಣನೆಯ ವಾತಾವರಣಕ್ಕೆ ಇದು ಬೆಚ್ಚನೆ ಅನುಭವವನ್ನು ನೀಡುತ್ತದೆ. ಇದನ್ನು ಹೆಸರು ಬೇಳೆ ಮತ್ತು ಅನ್ನದೊಂದಿಗೆ ತಯಾರಿಸಲಾಗುತ್ತದೆ. ಇದಕ್ಕೆ ಉತ್ತಮ ರುಚಿ ಬರಲೆಂದು ಕೆಲವೊಮ್ಮೆ ತರಕಾರಿಗಳನ್ನು ಸೇರಿಸಲಾಗುತ್ತದೆ. ಮಸಾಲೆಯುಕ್ತ ಉಪ್ಪಿನಕಾಯಿಗಳೊಂದಿಗೆ ಖಿಚುರಿಯನ್ನು ತಿಂದರೆ ನಾಲಿಗೆ ಮತ್ತೆ ಮತ್ತೆ ಚಪ್ಪರಿಸುತ್ತಿರುತ್ತದೆ.


ಇದನ್ನೂ ಓದಿ: Crab Sambar: ಮೈ ನಡುಗಿಸೋ ಮಳೆಯಲ್ಲಿ ಬಿಸಿ ಬಿಸಿ ಏಡಿ ಸಾರು ತಿನ್ನೋ ಮಜಾನೇ ಬೇರೆ! ರೆಸಿಪಿ ಇಲ್ಲಿದೆ ಓದಿ, ಇಂದೇ ಟ್ರೈ ಮಾಡಿ


ಸಮೋಸ
ಈ ಕುರುಕುಲು ಸಮೋಸಾಗಳು ಮಳೆಯ ವಾತಾವರಣಕ್ಕೆ ಸೂಕ್ತ ತಿಂಡಿ ಆಗಿರುತ್ತದೆ. ಈ ಮಳೆಗಾಲದಲ್ಲಿ ಬಿಸಿ-ಬಿಸಿ ಸಮೋಸಾವನ್ನು ತಿಂದು ಅದರಿಂದ ಹೊರ ಬರುವ ಹೊಗೆಯನ್ನು ನೋಡಿ ಆಸ್ವಾದಿಸುವುದು ಭಾರತ ಜನರ ನೆಚ್ಚಿನ ಚಟುವಟಿಕೆಯಾಗಿದೆ. ಒಂದು ಕಪ್ ಸಿಹಿ ಮಸಾಲಾ ಚಹಾದೊಂದಿಗೆ ಈ ಖಾರ- ಖಾರ ಸಮೋಸಾಗಳನ್ನು ತಿಂದರೆ ಸಮೋಸಾಗಳ ರುಚಿ ಮತ್ತಷ್ಟು ಹೆಚ್ಚಾಗುತ್ತದೆ.


ಮೆಕ್ಕೆಜೋಳ
ಈ ಮಳೆಯಲ್ಲಿ ಏನಾದರೂ ತಿನ್ನಬೇಕು ಅನಿಸ್ತಾ ಇದೀಯಾ? ಇದ್ದಿಲಿನ ಮೇಲೆ ಹುರಿದ ಹಸಿ-ಬಿಸಿ ಮೆಕ್ಕೆಜೋಳವನ್ನು ರಸ್ತೆ ಬದಿಯಲ್ಲಿ ಮಾರುತ್ತಿರುತ್ತಾರೆ. ಇದಕ್ಕೆ ಮಸಾಲೆಗಳು ಮತ್ತು ನಿಂಬೆ ರಸದ ಮಿಶ್ರಣವನ್ನು ಲೇಪಿಸಿ ಕೊಟ್ಟಾಗ ನೀವು ತಿಂದರೆ ಮತ್ತೆ ಇನ್ನೊಂದು ತಿನ್ನಬೇಕು ಎನಿಸುವಷ್ಟು ರುಚಿಯಾಗಿರುತ್ತದೆ ಮತ್ತು ಅರೋಗ್ಯಕ್ಕೂ ಇದು ತುಂಬಾ ಉತ್ತಮವಾಗಿದೆ.


ಮೊಮೊಸ್‌
ಟಿಬೆಟ್ ಮತ್ತು ಈಶಾನ್ಯ ಭಾರತದ ಮೆನುಗಳಲ್ಲಿ ಮತ್ತು ಬೀದಿ ಸ್ಟಾಲ್‌ಗಳಲ್ಲಿ ಮೊಮೊಗಳು ಮುಖ್ಯವಾಗಿ ಸಿಗುವ ಖಾದ್ಯಗಳಾಗಿವೆ. ಮಳೆಗಾಲದಲ್ಲಿ ದೇಶದಾದ್ಯಂತ ಜನರು ಈ ತಿಂಡಿಯನ್ನು ತಿನ್ನಲು ಹಾತೊರೆಯುತ್ತಾರೆ. ಬೀದಿ ಬದಿ ವ್ಯಾಪಾರಿಗಳು ಇದಕ್ಕೆ ಕೆಂಪು ಚಟ್ನಿಯನ್ನು ಸೇರಿಸಿ ತಿನ್ನಲು ಕೊಡುತ್ತಾರೆ. ಇದು ಮೆಮೊಸ್‌ಗಳ ರುಚಿಯನ್ನು ಮತ್ತಷ್ಟು ಸ್ಪೈಸಿ ಮಾಡುತ್ತದೆ.


ಮ್ಯಾಗಿ
ಅದು ಬಿಸಿಯಿರಲಿ ಅಥವಾ ಒಣಗಿರಲಿ, ಮ್ಯಾಗಿಯೆಂದರೆ ಎಲ್ಲರಿಗೂ ಅಚ್ಚುಮೆಚ್ಚಿನ ಸ್ನ್ಯಾಕ್ಸ್‌ ಎಂದು ಹೇಳಬಹುದು. ಈ ಮ್ಯಾಗಿಯ ರುಚಿ ಹೆಚ್ಚಿಸಲು ಇದಕ್ಕೆ ತರಕಾರಿ, ಚೀಸ್‌ ಸೇರಿಸುತ್ತಾರೆ. ಇನ್ನು ಬೀದಿ ಬದಿ ವ್ಯಾಪಾರಿಗಳು ಇದಕ್ಕೆ ಮೊಟ್ಟೆ ಸೇರಿಸಿ ಮ್ಯಾಗಿ ತಯಾರಿಸುವ ವಿಧಾನಕ್ಕೆ ಜನರು ಮುಗಿ ಬಿದ್ದು ಮ್ಯಾಗಿಯನ್ನು ತಮ್ಮ ಬಾಯಿಗೆ ಇಳಿಸಿಕೊಳ್ಳುತ್ತಾರೆ. ಮಳೆಗಾಲದಲ್ಲಿ ಹೊಟ್ಟೆ ಹಸಿದುಕೊಂಡ ಜನರು ಇದನ್ನು ಹೊಟ್ಟೆ ತುಂಬಾ ತಿಂದು ತೇಗುತ್ತಾರೆ.


ಇದನ್ನೂ ಓದಿ: Famous Food: ಮಳೆಗಾಲದಲ್ಲಿ ಕರ್ನಾಟಕದ ಕರಾವಳಿ ಭಾಗಗಳಿಗೆ ಹೋದ್ರೆ ಈ ಆಹಾರವನ್ನು ಮಾತ್ರ ಮಿಸ್ ಮಾಡ್ಲೇಬೇಡಿ!


ಪಕೋಡಾ
ಈ ಪಕೋಡಾಗಳು ಎಂದರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಮಳೆ ಪ್ರಾರಂಭವಾದ ತಕ್ಷಣ, ಭಾರತದಲ್ಲಿ ಜನರು ಪಕೋಡಾಗಳನ್ನು ತಯಾರಿಸಲು ಅಥವಾ ಅವುಗಳನ್ನು ವ್ಯಾಪಾರಿಗಳಲ್ಲಿ ಹೆಚ್ಚು ಕೇಳಲು ಪ್ರಾರಂಭಿಸುತ್ತಾರೆ. ಆಲೂಗಡ್ಡೆ, ಈರುಳ್ಳಿ ಮತ್ತು ಪನೀರ್‌ನಿಂದ ಹಿಡಿದು ಹಸಿರು ಮೆಣಸಿನಕಾಯಿ ಮತ್ತು ಎಲೆಕೋಸು ಇತ್ಯಾದಿಗಳನ್ನು ಬಳಸಿ ಕೆಚಪ್‌ ಅಥವಾ ಹಸಿರು ಚಟ್ನಿಯೊಂದಿಗೆ ತಿಂದರೆ ಆಹಾ! ಎಂಥ ರುಚಿ ಎನಿಸುತ್ತದೆ. ಇಷ್ಟು ಸ್ನ್ಯಾಕ್ಸ್‌ ಗಳ ಹೆಸರು ಓದಿದ ಮೇಲೆ ನಿಮಗೂ ಬಾಯಲ್ಲಿ ನೀರು ಬರ್ತಿದೆ ಅಲ್ವಾ?

Published by:Ashwini Prabhu
First published: