Curl Hair: ಸುಂದರ ಸುರುಳಿ ಕೂದಲಿಗಾಗಿ ಈ 5 ವಿಧಾನಗಳನ್ನು ಅನುಸರಿಸಿ..

How To Curl Hair At Home: ಪರಿಣಿತರ ಸಹಾಯ ಇಲ್ಲದೇ ಮನೆಯಲ್ಲಿಯೇ ಕೂದಲುಗಳನ್ನು ಸುರುಳಿ ಮಾಡುವುದು ಹೇಗೆ ಅಂತೀರಾ..? ಅದಕ್ಕೆ ಸಂಬಂಧಿಸಿದ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

 ಸುರುಳಿ ಕೂದಲು/ Curl Hair

ಸುರುಳಿ ಕೂದಲು/ Curl Hair

  • Share this:
    Curl Hair At Home: ದಟ್ಟವಾದ , ಹೊಳೆಯುವ ಸುರುಳಿಗಳು ಯಾವುದೇ ಕೂದಲಿನ ಉದ್ದ, ಬಣ್ಣ ಮತ್ತು ವಿನ್ಯಾಸದಲ್ಲಿ ಸುಂದರವಾಗಿ ಕಾಣುತ್ತದೆ. ನಿಮಗೆ ಸಹಜವಾದ ಗುಂಗುರು ಕೂದಲುಗಳು ಇಲ್ಲದಿದ್ದರೂ, ಅದನ್ನು ಮಾಡಿಕೊಳ್ಳಲು ಸರಳ ಅಥವಾ ಸುಲಭವಾದ ಮಾರ್ಗಗಳಿವೆ. ಹಾಗಾಂತ ಕೂದಲನ್ನು ಸುರುಳಿ/ಕರ್ಲಿಂಗ್ ಮಾಡುವುದು ತಮಾಷೆಯ ವಿಷಯವಲ್ಲ, ಅದಕ್ಕೆ ಸಾಕಷ್ಟು ತಾಳ್ಮೆ, ಸಮಯ, ಉತ್ಪನ್ನ ಮತ್ತು ಉಪಕರಣಗಳು ಬೇಕಾಗುತ್ತವೆ. ಆದರೂ, ಮನೆಯಲ್ಲಿಯೇ ಸೂಕ್ತವಾದ ರೀತಿಯಲ್ಲಿ ಕೂದಲನ್ನು ಸುರುಳಿ ಮಾಡಿಕೊಳ್ಳುವುದನ್ನು ಕಲಿತುಕೊಳ್ಳುವುದು ಖುಷಿಕೊಂಡುವಂತಹ ಸಂಗತಿ. ಅದೇನೋ ಸರಿ, ಪರಿಣಿತರ ಸಹಾಯ ಇಲ್ಲದೇ ಮನೆಯಲ್ಲಿಯೇ ಕೂದಲುಗಳನ್ನು ಸುರುಳಿ ಮಾಡುವುದು ಹೇಗೆ ಅಂತೀರಾ..? ಅದಕ್ಕೆ ಸಂಬಂಧಿಸಿದ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

    ಸ್ಟೈಲಿಂಗ್ ಉಪಕರಣಗಳು ಇಲ್ಲದೆ ಕೂದಲನ್ನು ಸುರುಳಿ ಮಾಡುವುದು

    ಬಾಬ್ಬಿಪಿನ್ ವಿಧಾನ

    ಬಾಬ್ಬಿ ಪಿನ್ ಮೂಲಕ ಕೂದಲು ಸುರುಳಿ ವಿಧಾನ ಪ್ರಯತ್ನಿಸಿ. ಮೊದಲು ನಿಮ್ಮ ಕೂದಲುಗಳನ್ನು ವಿಭಜಿಸಿ, ಆ ವಿಭಜಿಸಿದ ಭಾಗಗಳನ್ನು ಮತ್ತೆ ಸಣ್ಣ ಭಾಗಗಳಾಗಿ ವಿಭಜಿಸಿ. ಮೇಲ್ಭಾಗದಿಂದ ಆರಂಭಿಸಿ, ಸಣ್ಣ ಭಾಗವನ್ನು ತೆಗೆದುಕೊಳ್ಳಿ ಮತ್ತು ಸುರುಳಿಯನ್ನು ಮಾಡುವ ಕೂದಲನ್ನು ತುದಿಯಿಂದ ಬುಡದವರೆಗೆ ಸುತ್ತಿ. ನೀವು ಬಾಬಿ ಪಿನ್ ಜೊತೆ ಬುಡವನ್ನು ತಲುಪಿದಾಗ ಅದನ್ನು ಭದ್ರಪಡಿಸಿ. ಕೂದಲನ್ನು ಕೆಲವು ಗಂಟೆಗಳವರೆಗೆ ಅದೇ ಸ್ಥಿತಿಯಲ್ಲಿ ಇರಲು ಬಿಡಿ. ಅಥವಾ ತಲೆಗೊಂದು ರೇಶ್ಮೆ ಸ್ಕಾರ್ಫ್ ಕಟ್ಟಿಕೊಂಡು ರಾತ್ರಿ ಇಡೀ ಹಾಗೆಯೇ ಮಲಗಿಕೊಳ್ಳಿ.

    ಸಾಕ್ ಕರ್ಲ್ ವಿಧಾನ

    ಈ ವಿಧಾನ ಟಿಕ್‍ಟಾಕ್‍ನಲ್ಲಿ ತುಂಬಾ ದೊಡ್ಡ ಟ್ರೆಂಡ್ ಆಗಿದ್ದು, ಬಹಳಷ್ಟು ಮಂದಿ ಇದನ್ನು ಅನುಸರಿಸುತ್ತಿದ್ದಾರೆ. ಈ ವಿಧಾನ ಒದ್ದೆ ಕೂದಲಿನ ಮೇಲೆ ಚೆನ್ನಾಗಿ ಕೆಲಸ ಮಾಡುತ್ತದೆ. ಕೂದಲನ್ನು 4 ಅಥವಾ ಅದಕ್ಕಿಂತ ಹೆಚ್ಚು ಭಾಗಗಳಾಗಿ ವಿಭಜಿಸಿ. ಸಾಕ್ಸನ್ನು ಕೂದಲ ವಿಭಜನೆಯ ಬುಡದಲ್ಲಿ ಇಟ್ಟು ಅದಕ್ಕೆ ಕೂದಲನ್ನು ತುದಿಯವರೆಗೆ ಸುತ್ತಿ ಅಥವಾ ಹೆಣೆಯಿರಿ ಮತ್ತು ತುದಿಯನ್ನು ಭದ್ರಪಡಿಸಿ. ಎಲ್ಲಾ ವಿಭಜನೆಗಳಲ್ಲೂ ಹೀಗೆ ಮಾಡಿ. ರಾತ್ರಿಯಿಡೀ ಕೂದಲನ್ನು ಅದೇ ಸ್ಥಿತಿಯಲ್ಲಿ ಇರಲು ಬಿಡಿ.

    ವೆಲ್ಕ್ರೋ ರೋಲರ್‌ಗಳು

    ವೆಲ್ಕ್ರೋ ರೋಲರ್‌ಗಳು ಕರ್ಲಿಂಗ್ ಸಾಧನಗಳಿಗೆ ಉತ್ತಮ ಪರ್ಯಾಯವಾಗಿದೆ. ಅದನ್ನು ಬಳಸಿದರೆ ಕೂದಲನ್ನು ಬಿಸಿ ಮಾಡಿಕೊಂಡು ಸುರುಳಿ ಮಾಡಿಕೊಳ್ಳುವ ಕಿರಿಕಿರಿಯಿಂದ ಮುಕ್ತರಾಗಬಹುದು. ನಿಮ್ಮ ದೇಹವನ್ನು ಬಿಸಿಯಿಂದ ರಕ್ಷಿಸುತ್ತವೆ. ಟವಲ್ ಬಳಸಿ ಒದ್ದೆ ಕೂದಿಲಿನಿಂದ ಹೆಚ್ಚುವರಿ ತೇವಾಂಶ ತೆಗೆಯಿರಿ. ರೋಲರ್‌ಗಳು ನಿಮ್ಮ ನೆತ್ತಿಯಲ್ಲಿ ಬಿಗಿಯಾಗಿ ಕುಳಿತುಕೊಳ್ಳುವವರೆಗೆ ಕೂದಲನ್ನು ಸುರುಳಿ ಸುತ್ತಿ. ಕೂದಲು ಸಂಪೂರ್ಣವಾಗಿ ಒಣಗುವವರೆಗೆ ಅವುಗಳನ್ನು ಹಾಗೆಯೇ ಬಿಡಿ. ಸುರುಳಿಗಳು ಹೆಚ್ಚು ಕಾಲ ಉಳಿಯುವಂತೆ ಮಾಡಲು ಸ್ಪ್ರೇ ಹಾಕಿ.

    ಸ್ಟೈಲಿಂಗ್ ಉಪಕರಣಗಳಿಂದ ಕೂದಲು ಸುರುಳಿ ಮಾಡುವುದು

    ಸ್ಟ್ರೈಟ್ನರ್ ಬಳಕೆ

    ನಿಮ್ಮ ಸ್ಟ್ರೈಟ್ನರ್‌ನಿಂದ ಕೂದಲನ್ನು ಸುರುಳಿ ಕೂಡ ಮಾಡಬಹುದು. ಒಂದು ಇಂಚು ಅಗಲದ ಕೂದಲನ್ನು ತೆಗೆದುಕೊಂಡು, ಅದನ್ನು ನಿಮ್ಮ ಸ್ಟ್ರೈಟ್ನರ್‌ನಲ್ಲಿ ಹುಬ್ಬಿನ ಮಟ್ಟದಲ್ಲಿ ಇಟ್ಟುಕೊಂಡು ಬಿಗಿಗೊಳಿಸಿ. ಬಳಿಕ ಕೂದಲನ್ನು ಎಸ್ ಆಕಾರದಲ್ಲಿ ತಿರುಗಿಸಿ. ಇಲ್ಲವಾದಲ್ಲಿ, ಸ್ಟ್ರೈಟ್ನರನ್ನು ಮುಖದಿಂದ ದೂರ ಟ್ವಿಸ್ಟ್ ಮಾಡಿ, ಕೂದಲ ತುದಿಯವರೆಗೆ ಎಳೆಯಿರಿ, ಕೂದಲ ತುದಿಗೆ ತಲುಪುವ ಮುನ್ನ ನಿಲ್ಲಿಸಿ.

    ಕರ್ಲಿಂಗ್ ಸಾಧನ

    ಕ್ಲಾಂಪ್ ಇಲ್ಲದ ಕರ್ಲಿಂಗ್ ಸಾಧನದ ಮೂಲಕ ಮನೆಯಲ್ಲಿಯೇ ಕೂದಲನ್ನು ಸುರುಳಿ ಮಾಡಬಹುದು. ಯಾವ ಕೈಯಲ್ಲಿ ಕರ್ಲಿಂಗ್ ಸಾಧನ ಹಿಡಿದಿಲ್ಲವೋ ಆ ಕೈಗೆ ಶಾಖ ನಿರೋಧಕ ಗ್ಲೌಸ್ ಧರಿಸಿ. ನಿಮ್ಮ ಕೂದಲನ್ನು ಸಿಕ್ಕಿಲ್ಲದಂತೆ ಬಾಚಿಕೊಳ್ಳಿ, ಅದನ್ನು ಒಂದು ಇಂಚಿನ ಭಾಗಗಳಾಗಿ ವಿಂಗಡಿಸಿ. ಕರ್ಲಿಂಗ್ ಸಾಧನವನ್ನು ಲಂಬವಾಗಿ ಹಿಡಿದು, ತುದಿಯನ್ನು ಕೆಳ ಮುಖವಾಗಿ ಹಿಡಿಯಿರಿ, ಸಾಧನದ ಕೆಳ ಭಾಗದ ಬ್ಯಾರೆಲ್‌ವರೆಗೂ ಸುತ್ತಿ, ನೀವು ತುದಿಯನ್ನು ತಲುಪುವವರೆಗೆ ಸುತ್ತಿ.
    First published: