Gum Cancer Symptoms: ಈ ಸಮಸ್ಯೆಗಳನ್ನು ಕಡೆಗಣಿಸಿದ್ರೆ ಮಾರಕ, ಒಸಡು​ ಕ್ಯಾನ್ಸರ್​ನ ಆರಂಭಿಕ ಲಕ್ಷಣವಿದು

Early Signs and Symptoms of Gum Cancer: ಗಮ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ, ಬೇಗ ಗುಣಪಡಿಸಬಹುದಾಗಿದೆ. ಹಾಗೆಯೇ, ಬಾಯಿಯನ್ನು ಆರೋಗ್ಯಕರವಾಗಿ ಮತ್ತು ತೇವವಾಗಿರಿಸಿಕೊಳ್ಳುವುದು ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಒಸಡುಗಳು (Gum) ಊದಿಕೊಂಡಾಗ ಮತ್ತು ಕೆಂಪು ಬಣ್ಣಕ್ಕೆ ಬಂದಾಗ ಭಯವಾಗುವುದು ಅಥವಾ ಆಶ್ಚರ್ಯವಾಗುವುದು ಸಾಮಾನ್ಯ.  ಅದರಲ್ಲೂ ಇದು ಕ್ಯಾನ್ಸರ್ (Cancer) ಇರಬಹುದೇ ಎನ್ನುವ ಅನುಮಾನ ಸಹ ಕಾಡುತ್ತದೆ. ಒಸಡುಗಳು ದುರ್ಬಲಗೊಳ್ಳುವುದರಿಂದ ಹೆಚ್ಚಿನ ರಕ್ತಸ್ರಾವ ಮತ್ತು ನೋವನ್ನು ಅನುಭವಿಸಬೇಕಾಗುತ್ತದೆ. ಇದು ಗಮ್ ಕ್ಯಾನ್ಸರ್ (Gum Cancer) ಎಂದು ಕರೆಯಲ್ಪಡುವ ಕ್ಯಾನ್ಸರ್‌ನ ಪ್ರಮುಖ ಲಕ್ಷಣಗಳಲ್ಲಿ ಒಂದು. ಎಲ್ಲಾ ಒಸಡುಗಳ ಊತ ಅಥವಾ ಕೆಂಪು ಬಣ್ಣವು ಕ್ಯಾನ್ಸರ್ ಅಲ್ಲ ಆದರೆ ಇದು 3-4 ವಾರಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ, ತಜ್ಞರನ್ನು ಭೇಟಿ ಮಾಡಬೇಕಾಗುತ್ತದೆ.  ಈ ಕ್ಯಾನ್ಸರ್​ನ ಆರಂಬಿಕ ಲಕ್ಷಣಗಳ ಬಗ್ಗೆ HCG EKO ಕ್ಯಾನ್ಸರ್ ಸೆಂಟರ್, ಕೋಲ್ಕತ್ತಾದಹೆಡ್ ಮತ್ತು ನೆಕ್ ಕ್ಯಾನ್ಸರ್ ಮತ್ತು ಥೈರಾಯ್ಡ್ ಸರ್ಜರಿಯ  HOD & ಸೀನಿಯರ್ ಸಲಹೆಗಾರರಾದ ಡಾ. ರಾಜೀವ್ ಶರಣ್ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಗಮ್ ಕ್ಯಾನ್ಸರ್ ಬಾಯಿಯ ಕ್ಯಾನ್ಸರ್​ನ ಒಂದು ರೂಪ. ಇದು ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ನ ಒಂದು ವಿಧವಾಗಿದ್ದು, ಮೇಲಿನ ಅಥವಾ ಕೆಳಗಿನ ಒಸಡುಗಳಲ್ಲಿನ ಜೀವಕೋಶಗಳು ನಿಯಂತ್ರಣದಿಂದ ಹೊರಬರಲು ಪ್ರಯತ್ನಿಸಿದಾಗ ಮತ್ತು ಗಾಯಗಳು ಅಥವಾ ಗೆಡ್ಡೆಗಳು ಕಾಣಿಸಿಕೊಂಡಾಗ ಇದು ಶುರುವಾಗುತ್ತದೆ. ಇದರ ಮೊದಲ ಲಕ್ಷಣಗಳೆಂದರೆ ಬಾಯಿಯೊಳಗೆ ಅಥವಾ ತುಟಿಗಳ ಮೇಲೆ ಬಿಳಿ ಅಥವಾ ಕೆಂಪು ಪ್ಯಾಚ್ ಉಂಟಾಗುವುದು. ಕೆಲವೊಮ್ಮೆ ಮೇಲಿರುವ ಚರ್ಮವು ದಪ್ಪವಾಗಿರುತ್ತದೆ. ಅಲ್ಲದೇ ನಿರಂತರವಾಗಿ ಹುಣ್ಣು ಅಥವಾ ಸವೆತ ಆಗಬಹುದು. ಅಲ್ಲದೇ, ಹೆಚ್ಚು ದಿನಗಳ ಕಾಲ ಹುಣ್ಣು ವಾಸಿಯಾಗದೇ ಇರುವುದು, ಆ ಜಾಗದಲ್ಲಿ ಹಲ್ಲುಗಳ ಸಮಸ್ಯೆ ಕಾಣಿಸಿಕೊಳ್ಳುವುದು ಹೀಗೆ ವಿವಿಧ ರೀತಿಯ ಲಕ್ಷಣಗಳನ್ನು ಇದು ಹೊಂದಿದೆ.

ಈ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ಜಿಂಗೈವಿಟಿಸ್ ಎಂದು ತಪ್ಪಾಗಿ ಡಿಟೆಕ್ಟ್​ ಮಾಡಿರುವ ಸಂದರ್ಭಗಳಿವೆ. ಜಿಂಗೈವಿಟಿಸ್ ಮತ್ತು ಗಮ್ ಕ್ಯಾನ್ಸರ್ ಎರಡೂ ಎರಡು ಬೇರೆ ಬೇರೆ ಸಮಸ್ಯೆಗಳು ಮತ್ತು ಎರಡನ್ನೂ ಗಂಭೀರವಾಗಿ ಪರಿಗಣಿಸಬೇಕು ಮತ್ತು ತಜ್ಞರ ಸಲಹೆ ಪಡೆಯುವುದು ಬಹಳ ಮುಖ್ಯ. ಸಿಗರೇಟ್ ಸೇದುವ ಅಭ್ಯಾಸವಿರುವ ಅಥವಾ ತಂಬಾಕು, ಗುಟ್ಕಾ, ಹುಕ್ಕಾ ಅಥವಾ ಶುಶ್ ಅನ್ನು ಸೇವನೆ ಮಾಡುವವರು ಈ ಕ್ಯಾನ್ಸರ್​ಗೆ  ತುತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಗಮ್ ಕ್ಯಾನ್ಸರ್​ನ ಆರಂಭಿಕ ಲಕ್ಷಣಗಳು

ಬಾಯಿ ಹುಣ್ಣು ಆರಂಭವಾದರೆ  3-4 ವಾರಗಳವರೆಗೆ ವಾಸಿಯಾಗುವುದಿಲ್ಲ

ಬಾಯಿಯೊಳಗೆ ಬಿಳಿ ಅಥವಾ ಕೆಂಪು ಬಣ್ಣದ ಪ್ಯಾಚ್​ ಕಾಣಿಸುತ್ತದೆ

ಹಲ್ಲುಗಳ ಸಮಸ್ಯೆ ಆರಂಭವಾಗುತ್ತದೆ

ಬಾಯಿಯೊಳಗೆ ಗಂಟು ಉಂಟಾಗಬಹುದು

ಬಾಯಿ ಮತ್ತು ಕಿವಿಯಲ್ಲಿ ನೋವು ಹೆಚ್ಚು ದಿನಗಳ ಕಾಲ ಕಾಡಿಸುತ್ತದೆ

ಆಹಾರ ಅಗಿಯಲು ಮತ್ತು ನುಂಗಲು ತೊಂದರೆಯಾಗುತ್ತದೆ

ತುಟಿಗಳು, ಒಸಡು ಸೇರಿದಂತೆ ಬಾಯಿಯೊಳಗಿನ ಇತರ ಪ್ರದೇಶಗಳಲ್ಲಿ ಊತ ಕಾಣಿಸಿಕೊಳ್ಳುವುದು

ಅತಿಯಾದ ರಕ್ತಸ್ರಾವ ಅಥವಾ ಮರಗಟ್ಟುವಿಕೆ, ಮುಖ, ಬಾಯಿ ಅಥವಾ ಕತ್ತಿನ ಯಾವುದೇ ಪ್ರದೇಶದಲ್ಲಿ ನೋವು

ಕಾರಣವಿಲ್ಲದೇ ತೂಕ ಇಳಿಕೆಯಾಗುವುದು

ಗಮ್ ಕ್ಯಾನ್ಸರ್​ನ ಹಂತಗಳು

TNM ವ್ಯವಸ್ಥೆಯನ್ನು ಬಾಯಿಯ ಕ್ಯಾನ್ಸರ್‌ನ ಹಂತವನ್ನು ಕಂಡು ಹಿಡಿಯಲು ಬಳಸಲಾಗುತ್ತದೆ, ಇದರಲ್ಲಿ T ಎಂಬುದು ಪ್ರಾಥಮಿಕ ಗೆಡ್ಡೆಯ ಗಾತ್ರ ಮತ್ತು ಸ್ಥಳವನ್ನು ಸೂಚಿಸುತ್ತದೆ, N ಗೆಡ್ಡೆಯು ದುಗ್ಧರಸ ಗ್ರಂಥಿಗಳಿಗೆ ಹರಡಿದೆಯೇ ಎಂದು ಸೂಚಿಸುತ್ತದೆ ಆದರೆ M ಗೆಡ್ಡೆಯು ಮೆಟಾಸ್ಟಾಸೈಸ್ ಆಗಿದೆಯೇ ಅಥವಾ ಇತರ ಭಾಗಕ್ಕೆ ಹರಡಿದೆಯೇ ಎಂದು ತಿಳಿಸುತ್ತದೆ.

ಕ್ಯಾನ್ಸರ್​ನ ಕೆಲವು ವಿಭಿನ್ನ ಹಂತಗಳು:

ಹಂತ 0 - ಇದನ್ನು ಕಾರ್ಸಿನೋಮ ಇನ್ ಸಿಟು ಎಂದೂ ಕರೆಯುತ್ತಾರೆ, ಇದು ಕ್ಯಾನ್ಸರ್ ಆಗಿ ಅಭಿವೃದ್ದಿ ಹೊಂದುವ ಸಾಧ್ಯವಿರುವ ತುಟಿಗಳ ಅಥವಾ ಬಾಯಿಯ  ಒಳಪದರದಲ್ಲಿ ಅಸಹಜ ಜೀವಕೋಶಗಳು ಕಂಡುಬಂದಾಗ ಉಂಟಾಗುತ್ತದೆ.

ಹಂತ 1 - ಜೀವಕೋಶಗಳ ಅಸಹಜ ಒಳಪದರವು ಕ್ಯಾನ್ಸರ್ ಕೋಶಗಳಾಗಿ ಮುಂದುವರೆಯುವ ಹಂತ ಇದು. ಇದು ಚಿಕ್ಕದಾಗಿರುತ್ತದೆ ಮತ್ತು ದೇಹದ ಇತರ ಭಾಗಗಳಿಗೆ ಹರಡುವುದಿಲ್ಲ.

ಹಂತ 2 - ಅಸಹಜ ಕ್ಯಾನ್ಸರ್ ಗೆಡ್ಡೆಗಳು ಇನ್ನೂ ದೊಡ್ಡದಾಗಿ ಬೆಳೆಯುತ್ತವೆ ಆದರೆ ದೇಹದ ಯಾವುದೇ ಭಾಗಕ್ಕೆ ಮತ್ತು ಗ್ರಂಥಿಗಳಿಗೆ ಹರಡುವುದಿಲ್ಲ.

ಹಂತ 3 - ಗೆಡ್ಡೆಗಳು 4 ಸೆಂ.ಮೀ ಕ್ಕಿಂತ ದೊಡ್ಡದಾಗಿ ಬೆಳೆಯುತ್ತದೆ ಮತ್ತು ಕುತ್ತಿಗೆಯ ದುಗ್ಧರಸ ಗ್ರಂಥಿಗಳನ್ನು ತಲುಪಿರುವ ಹಂತ ಇದು.

ಹಂತ 4 - ಗೆಡ್ಡೆಗಳು ದವಡೆ ಅಥವಾ ಬಾಯಿಯ ಇತರ ಭಾಗಗಳಿಗೆ ಮತ್ತು ಬಾಯಿಯ ಆಚೆಗಿನ ಶ್ವಾಸಕೋಶಗಳಿಗೆ ಸಹ ಈ ಹಂತದಲ್ಲಿ ಹರಡಿರುತ್ತದೆ.

ಇದನ್ನೂ ಓದಿ: ಬೆಂಗಳೂರಲ್ಲಿ ನಿಮ್ಮ ಮನೆ ಬಳಿಯೇ ಇರೋ ಈ ಅಂಗಡಿಗಳಲ್ಲಿ ಸಖತ್ ಸ್ವೀಟ್ಸ್ ಸಿಗುತ್ತಂತೆ ನೋಡಿ

 ಚಿಕಿತ್ಸೆ

ಯಾವ ರೀತಿ ಚಿಕಿತ್ಸೆ ಮಾಡಬೇಕು ಎಂದು ಹೇಳುವ ಮೊದಲು ವೈದ್ಯರು ಕ್ಯಾನ್ಸರ್ ಯಾವ ಹಂತದಲ್ಲಿ, ಎಷ್ಟು ಹರಡಿದೆ ಎಂಬುದನ್ನ ಪರೀಕ್ಷೆ ಮಾಡುತ್ತಾರೆ. ಜೊತೆಗೆ ಸಾಮಾನ್ಯ ಆರೋಗ್ಯ ಮತ್ತು ವಯಸ್ಸನ್ನು ಸಹ ಪರಿಗಣಿಸುತ್ತಾರೆ. ಇದರ ಆಧಾರದ ಮೇಲೆ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಮತ್ತು ಕೀಮೋಥೆರಪಿ ಹೀಗೆ ಯಾವುದನ್ನ ನೀಡಬೇಕು ಎಂದು ನಿರ್ಧರಿಸಲಾಗುತ್ತದೆ.

ಪ್ರಮುಖ ಚಿಕಿತ್ಸೆಗಳು:

ಮಂಡಿಬ್ಲ್ಯೂಕ್ಟಮಿ (Mandibulectomy) – ಇದು ದವಡೆಯ ಸುತ್ತಲಿನ ಕ್ಯಾನ್ಸರ್ ಗಾಯಗಳನ್ನು ತೆಗೆದುಹಾಕುವ ವಿಧಾನ, ರೋಗದ ವ್ಯಾಪ್ತಿಯನ್ನು ಅವಲಂಬಿಸಿ ಮಾಡಲಾಗುತ್ತದೆ.

ಪಾರ್ಷಿಯಲ್ ಮ್ಯಾಕ್ಸಿಲೆಕ್ಟಮಿ (Partial Maxillectomy ) - ಮೇಲಿನ ಒಸಡು ಅಥವಾ ಬಾಯಿಯ ಮೇಲಿನ ಕ್ಯಾನ್ಸರ್ ಅನ್ನು ತೆಗೆದುಹಾಕಲು ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ನೆಕ್ ಡಿಸೆಕ್ಷನ್ (Neck dissection) - ಕ್ಯಾನ್ಸರ್ ಕೋಶಗಳನ್ನು ಒಳಗೊಂಡಿರುವ ಕುತ್ತಿಗೆಯಲ್ಲಿರುವ ದುಗ್ಧರಸ ಗ್ರಂಥಿಗಳನ್ನು ತೆಗೆದುಹಾಕಲು ಈ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ.

ಇದನ್ನೂ ಓದಿ: ಮನೆಯಲ್ಲಿ ಬಾಲ ಗೋಪಾಲನ ವಿಗ್ರಹವಿದ್ದರೆ ತಪ್ಪದೇ ಈ ಕೆಲಸ ಮಾಡಿ

Jaw bone reconstruction - ಸೆಗ್ಮೆಂಟಲ್ ಮ್ಯಾಂಡಿಬುಲೆಕ್ಟಮಿಯ ಸಂದರ್ಭದಲ್ಲಿ, ಮೈಕ್ರೊವಾಸ್ಕುಲರ್ ಶಸ್ತ್ರಚಿಕಿತ್ಸೆಯ ಸಹಾಯದಿಂದ ದವಡೆಯ ಮೂಳೆಯನ್ನು ಲೆಗ್ ಬೋನ್ (ಫೈಬುಲಾ) ನೊಂದಿಗೆ ಪುನರ್ನಿರ್ಮಿಸಬಹುದು.

ಮೊದಲೇ ಲಕ್ಷಣಗಳನ್ನು ಗಮನಿಸಿ ಸಮಸ್ಯೆ ಕಂಡುಕೊಳ್ಳುವುದು, ಸರಳವಾದ ಶಸ್ತ್ರಚಿಕಿತ್ಸೆ, ಕಾಸ್ಮೆಸಿಸ್ ನಂತರದ ಚಿಕಿತ್ಸೆಯ ನಂತರ ಬದುಕುಳಿಯುವ ಅವಕಾಶ ಹೆಚ್ಚಿರುತ್ತದೆ. ಗಮ್ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿದರೆ, ಬೇಗ ಗುಣಪಡಿಸಬಹುದಾಗಿದೆ. ಹಾಗೆಯೇ, ಬಾಯಿಯನ್ನು ಆರೋಗ್ಯಕರವಾಗಿ ಮತ್ತು ತೇವವಾಗಿರಿಸಿಕೊಳ್ಳುವುದು, ಜೊತೆಗೆ ಹಲ್ಲುಗಳು ಮತ್ತು ಒಸಡುಗಳು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮುಖ್ಯ.
Published by:Sandhya M
First published: