Face Serums: ಸಂತೂರ್​ ಮಮ್ಮಿಯಂತೆ ನಿಮ್ಮ ತ್ವಚೆ ಹೊಳೆಯಬೇಕಾ? ಈ ಸೀರಮ್‌ಗಳನ್ನು ಒಮ್ಮೆ ಟ್ರೈ ಮಾಡಿ

ನಿಮ್ಮ ರಾತ್ರಿಯ ಚರ್ಮದ ಆರೈಕೆಯ ದಿನಚರಿಗಾಗಿ ಸೀರಮ್‌ಗಳು ಅತ್ಯಗತ್ಯವಾಗಿರುತ್ತದೆ ಮತ್ತು ಈ ಸೀರಮ್‌ಗಳು ಎಷ್ಟು ಅದ್ಭುತವಾದ ಫಲಿತಾಂಶವನ್ನು ನೀಡುತ್ತವೆ ಎಂದು ನಮಗೆ ತಿಳಿದಿರುವುದಿಲ್ಲ. ನೀವು ನೈಸರ್ಗಿಕ ಹೊಳಪನ್ನು ಪಡೆಯಲು ಬಯಸುತ್ತೀರಾ ಅಥವಾ ಆ ಕಲೆಗಳನ್ನು ಇಲ್ಲವಾಗಿಸಲು ಬಯಸುತ್ತೀರಾ, ನಿಮ್ಮ ತ್ವಚೆಯು ಸುಂದರಗೊಳ್ಳಲು ಈ ಸೀರಮ್‌ಗಳು ಅತ್ಯವಶ್ಯಕವಾಗಿವೆ. ಕೆಲವು ಸೀರಮ್‌ಗಳ ಪಟ್ಟಿ ನಾವು ನಿಮಗೆ ನೀಡುತ್ತಿದ್ದೇವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಇತ್ತಿಚೀನ ದಿನಮಾನಗಳಲ್ಲಿ ಪ್ರತಿಯೊಬ್ಬರು ಕೂಡ ತಮ್ಮ ಸೌಂದರ್ಯಗಳ (Beauty) ಕಡೆಗೆ ಹೆಚ್ಚಿನ ಗಮನ ನೀಡುತ್ತಾರೆ. ಅನೇಕ ವಿಧದ ಉತ್ಪನ್ನಗಳನ್ನು (Products) ತಮ್ಮ ದೈನಂದಿನ ಚರ್ಮದ ಆರೈಕೆಗೆ (Skin Care) ಬಳಕೆ ಮಾಡುತ್ತಾರೆ. ಅದರಲ್ಲಿ ಮುಖ್ಯವಾಗಿ ಈಗ ಟ್ರೆಂಡ್‌ನಲ್ಲಿ (Trend) ಇರುವುದು ಸೌಂದರ್ಯವರ್ಧಕಗಳ ಸೀರಮ್‌ಗಳು (Cosmetics serum) ಆಗಿವೆ. ಆದ್ದರಿಂದ ಸೀರಮ್‌ಗಳನ್ನು ಆಯ್ಕೆಮಾಡುವಾಗ ಯಾವಾಗಲೂ ಒಂದು ಗೊಂದಲವಿದ್ದೆ ಇರುತ್ತದೆ. ನಾವು ನಮ್ಮ ತ್ವಚೆಯ ಆರೈಕೆಯನ್ನು ಮಾಡಿಕೊಳ್ಳುವಾಗ ಬೆಳಿಗ್ಗೆಯ ಆರೈಕೆಯ ಕಡೆಗೆ ಹೆಚ್ಚಿನ ಗಮನ ಕೊಡುತ್ತೇವೆ. ಆದರೆ ರಾತ್ರಿ ತ್ವಚೆಯ ಆರೈಕೆ ಬಗ್ಗೆ ಅಷ್ಟೊಂದು ಗಮನ ಕೊಡುವುದಿಲ್ಲ.

ಇಡೀ ದಿನ ದಣಿದಿರುವ ನಮ್ಮ ಚರ್ಮಕ್ಕೆ ರಾತ್ರಿ ಆರೈಕೆ ತುಂಬಾ ಮುಖ್ಯವಾಗುತ್ತದೆ. ಆದ್ದರಿಂದ ನಿಮ್ಮ ರಾತ್ರಿಯ ಚರ್ಮದ ಆರೈಕೆಯ ದಿನಚರಿಗಾಗಿ ಸೀರಮ್‌ಗಳು ಅತ್ಯಗತ್ಯವಾಗಿರುತ್ತದೆ ಮತ್ತು ಈ ಸೀರಮ್‌ಗಳು ಎಷ್ಟು ಅದ್ಭುತವಾದ ಫಲಿತಾಂಶವನ್ನು ನೀಡುತ್ತವೆ ಎಂದು ನಮಗೆ ತಿಳಿದಿರುವುದಿಲ್ಲ. ನೀವು ನೈಸರ್ಗಿಕ ಹೊಳಪನ್ನು ಪಡೆಯಲು ಬಯಸುತ್ತೀರಾ ಅಥವಾ ಆ ಕಲೆಗಳನ್ನು ಇಲ್ಲವಾಗಿಸಲು ಬಯಸುತ್ತೀರಾ, ನಿಮ್ಮ ತ್ವಚೆಯು ಸುಂದರಗೊಳ್ಳಲು ಈ ಸೀರಮ್‌ಗಳು ಅತ್ಯವಶ್ಯಕವಾಗಿವೆ. ಕೆಲವು ಸೀರಮ್‌ಗಳ ಪಟ್ಟಿ ನಾವು ನಿಮಗೆ ನೀಡುತ್ತಿದ್ದೇವೆ.

ಈ ಸೀರಮ್‌ಗಳನ್ನು ನಿಮ್ಮ ರಾತ್ರಿ ತ್ವಚೆಯ ಆರೈಕೆಗೆ ಬಳಸಬಹುದು:
ಎಸ್ಟೀ ಲಾಡರ್ ಮಿನಿ ಅಡ್ವಾನ್ಸ್‌ಡ್‌ ನೈಟ್‌ ರಿಪೀರ್‌ಸಿಂಕ್ರೊನೈಸ್ ಸೀರಮ್‌
ಎಸ್ಟೀ ಲಾಡರ್‌ನ ಈ ಮಿನಿ ಸೀರಮ್ ನಿಮ್ಮ ರಾತ್ರಿಯ ಆರೈಕೆಯ ದಿನಚರಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತದೆ, ಏಕೆಂದರೆ ಇದು ಚರ್ಮದಲ್ಲಿರುವ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಡಲ್‌ನೆಸ್‌ ಅನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ನಿಮಗೆ ಮೃದು ಚರ್ಮವನ್ನು ನೀಡುತ್ತದೆ.

ಇದನ್ನೂ ಓದಿ: Monsoon Fashion: ಮಳೆಗಾಲದಲ್ಲೂ ಅಂದವಾಗಿ ಕಾಣಿ; ಇಲ್ಲಿದೆ ಒಂದಿಷ್ಟು ಫ್ಯಾಷನ್ ಟಿಪ್ಸ್​​

ರೆಟಿನಾಲ್ ಆಂಟಿ ಏಜಿಂಗ್ ನೈಟ್ ಸೀರಮ್
ನಿಮ್ಮ ರಾತ್ರಿ ಆರೈಕೆ ದಿನಚರಿಯನ್ನು ನೀವಿಂದು ಅಪ್‌ಡೇಟ್‌ ಮಾಡುವ ಸಮಯ ಇದಾಗಿದೆ. ಈ ಸೀರಮ್‌ ನಿಮ್ಮ ಚರ್ಮದ ಆರೈಕೆಗೆ ಒಂದು ಶಕ್ತಿಯುತ ಆಂಟಿ ಏಜಿಂಗ್‌ನ ಆಗಿ ಕೆಲಸ ಮಾಡುತ್ತದೆ. ಈ ಸೀರಮ್ 0.3% ರಷ್ಟು ರೆಟಿನಾಲ್‌ ಅನ್ನು ಹೊಂದಿದೆ. ಮತ್ತು ಮುಖದಲ್ಲಿನ ಬೇಡವಾದ ಕಲೆಗಳು, ಸುಕ್ಕುಗಳು, ಜೋತು ಬಿದ್ದಿರುವ ಚರ್ಮ ಮತ್ತು ಚರ್ಮದ ಡಲ್‌ನೆಸ್‌ ಅನ್ನು ಉತ್ತಮಗೊಳಿಸಲು ಹೆಚ್ಚು ಸಹಾಯ ಮಾಡುತ್ತದೆ. ಇದು ಒಳಗಿನಿಂದ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ ಮತ್ತು ವಯಸ್ಸಾದ ಮತ್ತು ವಯಸ್ಸಿನ ಕಲೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.

ಆಯುರ್ವೇದಿಕ್‌ ಕುಂಕುಮಾದಿ ಥೈಲಂ
ಈ ಉತ್ಪನ್ನವು ದ್ರವ ಆಯುರ್ವೇದಿಕ್‌ ರಾತ್ರಿ ಸೀರಮ್ ಆಗಿದ್ದು, ಆಯುರ್ವೇದದ ಈ ರಾತ್ರಿಯ ಸೀರಮ್ ಹೆಚ್ಚಿನ ಹೈಡ್ರೇಷನ್‌ ಅನ್ನು ನೀಡುತ್ತದೆ. ಇದು ನಿಮ್ಮ ಚರ್ಮದ ಆರೈಕೆಯನ್ನು ವೇಗವಾಗಿ ಮಾಡುತ್ತದೆ ಮತ್ತು ಇದು ರಾತ್ರಿಯಲ್ಲಿ ನಿಮ್ಮ ಚರ್ಮವನ್ನು ಸರಿಪಡಿಸುತ್ತದೆ. ಇದು ಚರ್ಮದ ಡಲ್‌ನೆಸ್‌ ಅನ್ನು ನಿರ್ವಹಿಸಲು ಮತ್ತು ಚರ್ಮದ ಟೋನ್ ಅನ್ನು ಸರಿ ಮಾಡಲು ಸಹಾಯ ಮಾಡುತ್ತದೆ. ಈ ಸೀರಮ್‌ನೊಂದಿಗೆ ನೀವು ಮೃದುವಾದ ಮತ್ತು ಹೊಳೆಯುವ ಚರ್ಮವನ್ನು ಪಡೆದು ಸುಂದರವಾಗಿ ಕಾಣಬಹುದು.

ಇದನ್ನೂ ಓದಿ:   Beauty Tips: ಮಳೆಗಾಲದಲ್ಲಿ ಅಕ್ಕಿ ನೀರನ್ನು ಹೀಗೆ ಬಳಸಿದ್ರೆ ತ್ವಚೆಯ ಅಂದ ಹೆಚ್ಚಾಗುತ್ತೆ

ಈ ಎಲ್ಲ ಸೀರಮ್‌ಗಳ ಜೊತೆ ಉತ್ತಮ ಆರೋಗ್ಯ ಮತ್ತು ಜೀವನಶೈಲಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ನಾವು ಇನ್ನು ಸುಂದರವಾದ ತ್ವಚೆಯನ್ನು ಪಡೆಯಬಹುದು. ಈ ಸೀರಮ್‌ ಗಳ ಜೊತೆ ಮನೆಯಲ್ಲಿರುವ ಕೆಲವು ಮನೆ ಮದ್ದುಗಳನ್ನು ಬಳಸಿ ಮತ್ತಷ್ಟು ಚರ್ಮದ ಹೊಳಪನ್ನು ನೀವು ಪಡೆಯಬಹುದು. ಏನೇ ಇರಲಿ ನಿಮ್ಮ ಚರ್ಮದ ಆರೈಕೆ ಬಗ್ಗೆ ಗಮನ ಕೊಡುವುದು ಬಹಳ ಒಳ್ಳೆಯ ವಿಚಾರ. ನೀವು ಸುಂದರವಾಗಿದ್ದರೆ, ನಿಮ್ಮಲ್ಲಿ ಹೆಚ್ಚಿನ ಆತ್ಮವಿಸ್ವಾಸ ಮೂಡಿ, ನಿಮ್ಮ ಕೆಲಸಗಳು ಕೂಡ ಹೆಚ್ಚು ಯಶ್ವಸಿಯಾಗುತ್ತವೆ.
Published by:Ashwini Prabhu
First published: