Healthy Drinks: ಹಾಳುಮೂಳು ಸೇವಿಸಬೇಡಿ! ರಜಾದಿನಗಳಲ್ಲಿ ಇಂತಹ ಆರೋಗ್ಯಕರ ಪಾನೀಯಗಳನ್ನು ಸೇವಿಸಿ

ಆಹಾರ ಪದಾರ್ಥಗಳನ್ನು ಆಯ್ಕೆಮಾಡುವಾಗ ಜಾಗರೂಕರಾಗಿರುವುದು ಮುಖ್ಯವಾಗಿರುತ್ತದೆ, ಅಂತೆಯೇ ಹಿತಮಿತವಾದ ಆಹಾರ ಸೇವನೆಗೆ ಆದ್ಯತೆ ನೀಡುವುದೂ ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಯಾವ ರೀತಿಯ ಆಹಾರ ಇಲ್ಲವೇ ಪಾನೀಯ ನಿಮಗೆ ಅತ್ಯುತ್ತಮ ಎಂಬ ಗೊಂದಲ ನಿಮ್ಮಲ್ಲಿದ್ದಲ್ಲಿ ಪೌಷ್ಟಿಕಾಂಶ ತಜ್ಞರಾದ ನ್ಮಾಮಿ ಅಗರ್ವಾಲ್ ಅವರು ರಜಾದಿನಗಳಲ್ಲಿ ಸೇವಿಸಬಹುದಾದ ಪಾನೀಯಗಳ ಕುರಿತು ಮಾಹಿತಿಯನ್ನು ನೀಡಿದ್ದಾರೆ ನೋಡಿ

ಎಳನೀರು

ಎಳನೀರು

  • Share this:
ಒತ್ತಡ ಭರಿತ ಜೀವನದಲ್ಲಿ ಮನಸ್ಸು ಆಹ್ಲಾದಕತೆಯನ್ನು ಬಯಸುವುದು ಸರ್ವೇ ಸಾಮಾನ್ಯವಾಗಿದೆ. ಈ ರೀತಿಯ ನಿರಾಳತೆಯನ್ನು ಒದಗಿಸುವುದೇ ರಜಾದಿನಗಳಾಗಿವೆ. ರಜಾದಿನಗಳಲ್ಲಿ (Holidays) ಯಾವುದಾದರೂ ಸ್ಥಳಕ್ಕೆ ಭೇಟಿ ನೀಡುವುದು, ಅಲ್ಲಿ ಸಮಯ ಕಳೆಯುವುದು, ಸ್ಮರಣೆಗಳನ್ನು ನಿರ್ಮಿಸಿಕೊಳ್ಳುವುದು, ಬಗೆ ಬಗೆಯ ತಿನಿಸುಗಳನ್ನು (Snacks) ಸವಿಯುವುದು ಹೀಗೆ ಹತ್ತು ಹಲವು ಚಟುವಟಿಕೆಗಳನ್ನು ನಡೆಸುವುದು ಒಂದು ರೀತಿಯ ಸಂತಸವನ್ನು ಒದಗಿಸುತ್ತದೆ. ಒಂದು ರೀತಿಯಲ್ಲಿ ನಿರಾಳವಾಗಿ ಯಾವುದೇ ಚಿಂತೆ, ಒತ್ತಡವಿಲ್ಲದೆ (Stress) ಆರಾಮವಾಗಿರುವುದು. ರಜಾದಿನಗಳೆಂದರೆ ವೈವಿಧ್ಯಭರಿತ ಖಾದ್ಯ ತಿನಿಸುಗಳನ್ನು ಸವಿಯುವುದು. ತಿಂಡಿ ತಿನಿಸುಗಳು ಇಲ್ಲ ಎಂದಾದರೆ ಆ ರಜಾದಿನಗಳು ವ್ಯರ್ಥವೆಂದೇ ಹೇಳಬಹುದು. ಅದಾಗ್ಯೂ ರಜಾದಿನಗಳಲ್ಲೂ ನೀವು ಹಿತಮಿತವಾಗಿ ತಿನ್ನಬೇಕು ಎಂದುಕೊಂಡಲ್ಲಿ ಸ್ಥಳೀಯವಾಗಿ ದೊರೆಯುವ ಆಹಾರಗಳಿಗೆ (Food) ಆದ್ಯತೆ ಕೊಡುವುದು ಪ್ರಮುಖವಾಗಿರುತ್ತದೆ.

ಒಮ್ಮೊಮ್ಮೆ ಅತಿಯಾದ ಕರಿದ ಪದಾರ್ಥ ಇಲ್ಲವೇ ಸಿಹಿ ಪಾನೀಯಗಳು ನಿಮ್ಮ ರಜೆಯ ಮಜವನ್ನು ಹಾಳುಮಾಡಬಹುದು. ಹಾಗಾಗಿ ಆಹಾರ ಪದಾರ್ಥಗಳನ್ನು ಆಯ್ಕೆಮಾಡುವಾಗ ಜಾಗರೂಕರಾಗಿರುವುದು ಮುಖ್ಯವಾಗಿರುತ್ತದೆ, ಅಂತೆಯೇ ಹಿತಮಿತವಾದ ಆಹಾರ ಸೇವನೆಗೆ ಆದ್ಯತೆ ನೀಡುವುದೂ ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ. ಯಾವ ರೀತಿಯ ಆಹಾರ ಇಲ್ಲವೇ ಪಾನೀಯ ನಿಮಗೆ ಅತ್ಯುತ್ತಮ ಎಂಬ ಗೊಂದಲ ನಿಮ್ಮಲ್ಲಿದ್ದಲ್ಲಿ ಪೌಷ್ಟಿಕಾಂಶ ತಜ್ಞರಾದ ನ್ಮಾಮಿ ಅಗರ್ವಾಲ್ ಅವರು ರಜಾದಿನಗಳಲ್ಲಿ ಸೇವಿಸಬಹುದಾದ ಪಾನೀಯಗಳ ಕುರಿತು ಮಾಹಿತಿಯನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ರಜಾದಿನಗಳಲ್ಲಿಯೂ ಸಹ ಜಾಗರೂಕರಾಗಿರಲು ಮತ್ತು ಆರೋಗ್ಯಕರ ಆಹಾರ ಪರ್ಯಾಯಗಳ ಮೇಲೆ ಹೆಚ್ಚು ಗಮನಹರಿಸಲು ನ್ಮಾಮಿ ತಿಳಿಸಿದ್ದಾರೆ.

ರಜಾದಿನಗಳಲ್ಲಿ ನೀವು ಆಯ್ಕೆಮಾಡಿಕೊಳ್ಳಬಹುದಾದ ಕೆಲವೊಂದು ಪಾನೀಯ ವಿಧಗಳು ಹೀಗಿವೆ
ಎಳನೀರು
ನ್ಮಾಮಿಯ ಪ್ರಕಾರ ಎಳನೀರು ಪೊಟಾಶಿಯಂ ಭರಿತವಾಗಿದೆ. ಹಾಗೂ ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದೆ. ಇದು ದೇಹಕ್ಕೆ ಅಗತ್ಯವಾಗಿರುವ ಸಾಮರ್ಥ್ಯವನ್ನು ಒದಗಿಸುತ್ತದೆ. ಅಂತೆಯೇ ದಿನಪೂರ್ತಿ ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆ ಹಾಗೂ ಸಂಪೂರ್ಣ ಆರೋಗ್ಯದ ಕಾಳಜಿಯನ್ನು ಎಳನೀರು ನಿರ್ವಹಿಸುತ್ತದೆ.

ಇದನ್ನೂ ಓದಿ:  Kitchen Hacks: ಹಣ್ಣುಗಳ ಹತ್ರ ನೊಣ ಬರ್ಬಾರ್ದು ಅಂದ್ರೆ ಇಷ್ಟು ಮಾಡಿ ಸಾಕು

ನಿಂಬೆ ಮತ್ತು ಪುದೀನ ನೀರು
ನೀವು ರಜಾದಿನಗಳನ್ನು ಆಸ್ವಾದಿಸುತ್ತಿರುವಾಗ ಈ ಪಾನೀಯವನ್ನು ಸವಿಯಬಹುದಾಗಿದೆ. ಪೌಷ್ಟಿಕ ತಜ್ಞರು ಅಭಿಪ್ರಾಯಪಟ್ಟಿರುವಂತೆ ಇದು ವಿಟಮಿನ್ ಸಿ ಅಂಶವನ್ನು ಒಳಗೊಂಡಿದೆ ಅಂತೆಯೇ ದೇಹಕ್ಕೆ ಪೋಷಣೆಯನ್ನು ಒದಗಿಸಿ ಹೈಡ್ರೇಟ್ ಮಾಡುತ್ತದೆ.

ಸ್ಮೂಥಿಗಳು ಹಾಗೂ ಹರ್ಬಲ್ ಚಹಾ
ನ್ಮಾಮಿಯ ಪ್ರಕಾರ ಕೆಫೇನ್ ಭರಿತ ಪಾನೀಯಗಳ ಸೇವನೆಯ ಬದಲಿಗೆ ಕೆಫೇನ್ ರಹಿತ ಪಾನೀಯಗಳಿಗೆ ಆದ್ಯತೆ ನೀಡಿ ಎಂದಾಗಿದೆ. ಇನ್ನು ಆಲ್ಕೋಹಾಲ್ ಭರಿತ ಪಾನೀಯಗಳು ನಿಮ್ಮ ಆಯ್ಕೆ ಎಂದಾದಲ್ಲಿ ಅದನ್ನು ಸೇವಿಸಬಹುದು ಎಂಬುದು ನ್ಮಾಮಿಯ ಹೇಳಿಕೆಯಾಗಿದೆ. ನಿಮಗೆ ವೈನ್ ಬೇಕು ಎಂದಾದಲ್ಲಿ ಅದನ್ನು ಸೇವಿಸಿ ಇದರೊಂದಿಗೆ ನೀರು ಇಲ್ಲವೇ ಸೋಡಾ ಬೆರೆಸಿಕೊಳ್ಳಿ ಜೊತೆಗೆ ಪುದೀನಾ, ಶುಂಠಿ, ಸೌತೆಕಾಯಿ, ಲಿಂಬೆಯನ್ನು ಸೇರಿಸಿಕೊಳ್ಳಿ ಎಂಬುದು ಅವರ ಸಲಹೆಯಾಗಿದೆ.

ಪ್ರೋಟೀನ್ ಕೊರತೆ ನೀಗಿಸಿಕೊಳ್ಳುವುದು ಹೇಗೆ?
ಪೌಷ್ಟಿಕತಜ್ಞೆಯಾಗಿರುವ ನ್ಮಾಮಿ ಅಗರ್ವಾಲ್ ಆಹಾರ ಮತ್ತು ಆರೋಗ್ಯ ಕುರಿತಾದ ಹಲವಾರು ಮಾಹಿತಿಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ದೈನಂದಿನ ಜೀವನದಲ್ಲಿ ಬರೀ ಬೇಳೆ ಮಾತ್ರ ಪ್ರೋಟೀನ್ ಅಗತ್ಯವನ್ನು ಸರಿದೂಗಿಸುವುದಿಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬೇಳೆ ಪ್ರೋಟೀನ್‌ನ ಉತ್ತಮ ಮೂಲ ಎಂದೆನಿಸಿದರೂ ಇದು ಸಂಪೂರ್ಣ ಪ್ರೋಟೀನ್ ಆಗಿಲ್ಲ. ನಿಮ್ಮ ದೇಹಕ್ಕೆ ಸಂಪೂರ್ಣ ಪ್ರೋಟೀನ್ ಬೇಕು ಎಂದಾದಲ್ಲಿ ಬೇಳೆಯನ್ನು ಚಪಾತಿ ಇಲ್ಲವೇ ಅನ್ನದೊಂದಿಗೆ ಸರಿದೂಗಿಸಿಕೊಳ್ಳಬೇಕು ಎಂಬುದಾಗಿ ನ್ಮಾಮಿ ಸಲಹೆ ನೀಡುತ್ತಾರೆ.

ಇದನ್ನೂ ಓದಿ: Weight Loss Diet: ತೂಕ ಇಳಿಸೋಕೆ ಅನಾನಸ್ ಡಯಟ್ ಮಾಡ್ಬೇಕಂತೆ, ಏನಿದು ಅಂತೀರಾ? ಇಲ್ಲಿದೆ ನೋಡಿ

ನಮ್ಮ ದೇಹಕ್ಕೆ ಪ್ರೋಟೀನ್ ಅಗತ್ಯವು ದಿನಕ್ಕೆ 45-65 ಗ್ರಾಮ್ ಆಗಿದ್ದು ಇದನ್ನು ಪರಿಪೂರ್ಣಗೊಳಿಸಲು ಒಬ್ಬ ವ್ಯಕ್ತಿಯು ಊಟದಲ್ಲಿ ನಾಲ್ಕರಿಂದ ಐದು ಬಟ್ಟಲಿನಷ್ಟು ಬೇಳೆಯನ್ನು ಸೇವಿಸಬೇಕು ಎಂದು ತಿಳಿಸಿದ್ದಾರೆ. ಇದನ್ನು ಹೀಗೆ ಸೇವಿಸುವುದು ಸಾಧ್ಯವಿಲ್ಲದಿರುವುದರಿಂದ ಬೇರೆ ಬೇರೆ ಆಯ್ಕೆಗಳಾದ ಸೋಯಾ, ಕಡಲೆ, ಧಾನ್ಯಗಳು, ಒಣಹಣ್ಣುಗಳನ್ನು ಸೇವಿಸುವು ಮೂಲಕ ಪ್ರೋಟೀನ್ ಕೊರತೆಯನ್ನು ನೀಗಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.
Published by:Ashwini Prabhu
First published: