• Home
  • »
  • News
  • »
  • lifestyle
  • »
  • Monsoon Food System: ಮಳೆಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಹೀಗಿದ್ದರೆ ಅನಾರೋಗ್ಯದ ಬಗ್ಗೆ ಚಿಂತೆಯೇ ಬೇಡ

Monsoon Food System: ಮಳೆಗಾಲದಲ್ಲಿ ನಿಮ್ಮ ಆಹಾರ ಪದ್ಧತಿ ಹೀಗಿದ್ದರೆ ಅನಾರೋಗ್ಯದ ಬಗ್ಗೆ ಚಿಂತೆಯೇ ಬೇಡ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಳೆಗಾಲದಲ್ಲಿ ಸೋಂಕು, ಬ್ಯಾಕ್ಟರಿಯಾಗಳು ತಾಗಿದಾಗ ಕಾಯಿಲೆ ಬೀಳುವುದು ಅಧಿಕ. ಈ ಕಾಲದಲ್ಲಿ ಆಹಾರ ಪದ್ಧತಿ ಮೇಲೂ ಸಾಕಷ್ಟು ನಿಗಾ ಹೊಂದಿರಬೇಕು ಹಾಗಿದ್ರೆ ಮಳೆಗಾಲದಲ್ಲಿ ಆಹಾರ ಪದ್ಧತಿ ಹೇಗಿರಬೇಕು? ಇಲ್ಲಿದೆ ಮಾಹಿತಿ...

  • Share this:

    ಜೂನ್‌ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗುವ ಜೊತೆಗೆ ಇಡೀ ವಾತಾವರಣವೇ ಬದಲಾಗಲಿದೆ. ಮಳೆಗಾಲ (Monsoon) ಬಂದರೆ ಪ್ರಕೃತ್ತಿಯ ಚಿತ್ರವೇ ಬದಲಾಗುವುದು. ಎಲ್ಲೆಲ್ಲಿಯೂ ಹಸಿರು, ಕೊಳ, ನದಿಗಳು ತುಂಬಿ ಹರಿಯುವುದು. ಇನ್ನು ಆರೋಗ್ಯದಲ್ಲೂ (Health) ಅನೇಕ ಬದಲಾವಣೆಗಳಾಗುತ್ತವೆ. ನಮ್ಮ ಜೀರ್ಣಶಕ್ತಿ (Digestion) ಸಾಮರ್ಥ್ಯ ಮಳೆಗಾಲದಲ್ಲಿ ಸ್ವಲ್ಪ ಕಡಿಮೆಯೇ ಇರುತ್ತದೆ. ಜೊತೆಗೆ ರೋಗ ನಿರೋಧಕ ಶಕ್ತಿಯೂ (Immunity) ಕಡಿಮೆಯಾಗುವುದು, ಹಾಗಾಗಿ ಮಳೆಗಾಲದಲ್ಲಿ ಸೋಂಕು, ಬ್ಯಾಕ್ಟರಿಯಾಗಳು ತಾಗಿದಾಗ ಕಾಯಿಲೆ ಬೀಳುವುದು ಅಧಿಕ. ಈ ಕಾಲದಲ್ಲಿ ಆಹಾರ ಪದ್ಧತಿ (Food Habit) ಮೇಲೂ ಸಾಕಷ್ಟು ನಿಗಾ ಹೊಂದಿರಬೇಕು, ಮಳೆಗಾಲಕ್ಕೆ ಹೊಂದಿಕೆಯಾಗುವ ಆಹಾರವನ್ನು ಸೇವಿಸಬೇಕು.


    ಮಾನ್ಸೂನ್ನಲ್ಲಿ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ 3 ಪ್ರಮುಖ ವಿಷಯಗಳಿವು


    ಮಳೆಗಾಲದ ದಿನಗಳಲ್ಲಿ ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಇದರೊಂದಿಗೆ ಕಾಮಾಲೆ, ಟೈಫಾಯಿಡ್, ಹೊಟ್ಟೆ, ಕರುಳಿನ ಕಾಯಿಲೆಗಳು ದೂರವಾಗುತ್ತವೆ. ನೀವು ಏನೇ ಸೇವಿಸಿದರೂ, ಮನೆಯಲ್ಲಿ ತಾಜಾ ಬೇಯಿಸಿದ ಆಹಾರವನ್ನು ಸೇವಿಸಿ. ಈ ಸಮಯದಲ್ಲಿ, ಹೊರಗಿನಿಂದ ಬರುವ ಹಣ್ಣುಗಳು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದ ನಂತರ ಮಾತ್ರವೇ ಬಳಸಿ.


    ಅಧಿಕ ಕೊಬ್ಬು ಅಥವಾ ಸಕ್ಕರೆಯ ಆಹಾರ ಕಡೆಗಣಿಸಿ


    ಮಳೆಗಾಲದಲ್ಲಿ ನಮಗೆ ಹೆಚ್ಚಾಗಿ ಕರಿದ ತಿನಿಸುಗಳು ತುಂಬಾ ಇಷ್ಟವಾಗುವುದು. ಆದರೆ ಮಳೆಗಾಲದಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ದುರ್ಬಲವಾಗಿರುವುದು. ಅಧಿಕ ಕೊಬ್ಬು ಮತ್ತು ಸಕ್ಕರೆ ಅಂಶವನ್ನು ಜೀರ್ಣಿಸಲು ಕಠಿಣವಾಗುವುದು.
    ಜೀರ್ಣಕ್ರಿಯೆಯು ತುಂಬಾ ನಿಧಾನವಾಗಿರುವ ಕಾರಣದಿಂದ ಅಜೀರ್ಣ ಸಮಸ್ಯೆಯು ಕಾಡಬಹುದು ಮತ್ತು ಇದರಿಂದಾಗಿ ಹೊಟ್ಟೆಯಲ್ಲಿ ಸೆಳೆತವು ಕಂಡುಬರುವುದು. ಇದರಿಂದ ಗ್ರಿಲ್ ಅಥವಾ ಬೇಯಿಸಿದ ಆಹಾರ ಸೇವನೆ ಮಾಡಿ.


    ಇದನ್ನೂ ಓದಿ: Mango: ಸಕ್ಕರೆ ಕಾಯಿಲೆ ಇರುವವರು ಮಾವಿನಹಣ್ಣುಗಳನ್ನು ತಿನ್ನುವ ಮೊದಲು ಈ ಸ್ಟೋರಿ ಓದಿ


    ದಾಲ್ ಅಥವಾ ಕಷಾಯಗಳು ಈ ಕಾಲದಲ್ಲಿ ಹೆಚ್ಚು ಹೊಂದುಕೊಳ್ಳುತ್ತವೆ


    ಇನ್ನು, ಮಳೆಗಾಲದಲ್ಲಿ ಚಳಿ ಸಹ ಹೆಚ್ಚಿರುತ್ತದೆ, ಈ ವೇಳೆ ದೇಹ ಬೆಚ್ಚಗಿನ ಆಹಾರವನ್ನು ಬಯಸುತ್ತಿರುತ್ತದೆ. ಹೀಗಾಗಿ, ಬಜ್ಜಿ, ಬೋಂಡಾದಂಥ ಎಣ್ಣೆಯುಕ್ತ ಪದಾರ್ಥ ತಿನ್ನುವ ಬದಲು ಸೂಪ್, ಮಸಾಲಾ ಚಹಾ, ಹಸಿರು ಚಹಾ, ರಸಂ, ದಾಲ್ ಅಥವಾ ಕಷಾಯಗಳು ಈ ಕಾಲದಲ್ಲಿ ಹೆಚ್ಚು ಹೊಂದುಕೊಳ್ಳುತ್ತವೆ. ಇದು ಆರೋಗ್ಯಕ್ಕೂ ಒಳ್ಳೆಯದು. ಇದರಿಂದ ಶೀತ, ಶ್ವಾಸಕೋಶದ ಸಮಸ್ಯೆ ಕಡಿಮೆಯಾಗುವ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.


    ಸೀಸನಲ್‌ ಹಣ್ಣುಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು


    ಮಳೆಗಾಲದಲ್ಲಿ ಸೀಸನಲ್‌ ಹಣ್ಣುಗಳನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು. ಪೀಚ್, ಪ್ಲಮ್, ಚೆರ್ರಿ, ದಾಳಿಂಬೆಯಂತಹ ಸೀಸನಲ್ ಹಣ್ಣುಗಳು ವಿಟಮಿನ್ ಎ ಮತ್ತು ಸಿ ಮತ್ತು ಫೈಬರ್, ಆಂಟಿ ಆಕ್ಸಿಡೆಂಟ್‌ಗಳನ್ನು ಅಧಿಕವಾಗಿ ಹೊಂದಿವೆ. ಇದರ ಜೊತೆಗೆ ಜಾಮೂನ್‌ ಸಹ ದೇಹಕ್ಕೆ ಒಳ್ಳೆಯದು. ಆದರೆ, ಸಕ್ಕರೆಯುಕ್ತ ಆಹಾರ ಪದಾರ್ಥಗಳನ್ನು ಆದಷ್ಟು ಕಡಿಮೆ ಮಾಡುವುದು ಒಳ್ಳೆಯದು. ಈ ಹಣ್ಣುಗಳ ತಾಜಾ ಜ್ಯೂಸ್‌ನನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ಒಳ್ಳೆಯದು.


    ಉಪ್ಪಿನಕಾಯಿ, ತರಕಾರಿಗಳಂತಹ ಪ್ರೋಬಯಾಟಿಕ್‌ಗಳನ್ನು ಸೇವಿಸಿ


    ಆರೋಗ್ಯಕರ ಕರುಳಿನ ಸಸ್ಯವರ್ಗವನ್ನು ಕಾಪಾಡಿಕೊಳ್ಳಲು ಮೊಸರು, ಮಜ್ಜಿಗೆ ಮತ್ತು ಉಪ್ಪಿನಕಾಯಿ, ತರಕಾರಿಗಳಂತಹ ಪ್ರೋಬಯಾಟಿಕ್‌ಗಳನ್ನು ಸೇವಿಸಿ. ಇವುಗಳು ಕರುಳಿನಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾಗಳ ರಚನೆಗೆ ಸಹಾಯ ಮಾಡುತ್ತವೆ, ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ರೋಗವನ್ನು ಉಂಟುಮಾಡುವ ಸೂಕ್ಷ್ಮಜೀವಿಗಳ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡುತ್ತವೆ.


    ಇದನ್ನೂ ಓದಿ: Benefits of Carrot: ವಾರಕ್ಕೆ ಮೂರು ಸಲವಾದ್ರೂ ಕ್ಯಾರೆಟ್ ತಿಂದ್ರೆ ಇಷ್ಟೆಲ್ಲಾ ಪ್ರಯೋಜನ ಸಿಗುತ್ತೆ ನೋಡಿ


    ಪ್ರೋಟಿನ್‌ಯುಕ್ತ ಪದಾರ್ಥ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿ


    ಬೆಣ್ಣೆ, ತುಪ್ಪ, ಇತರೆ ಪದಾರ್ಥಗಳನ್ನು ಸೇವಿಸಬಹುದು. ಇನ್ನು ಪ್ರೋಟಿನ್‌ ಮೂಲವಾದ ಬೇಳೆಕಾಳುಗಳು, ಚೋಲೆ, ರಾಜ್ಮಾ, ಸೋಯಾ, ಮೊಟ್ಟೆ ಮತ್ತು ಚಿಕನ್‌ಗಳನ್ನು ನಿಮ್ಮ ಊಟದಲ್ಲಿ ಸೇರಿಸುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.

    Published by:Swathi Nayak
    First published: