Fennel Seed Benefits: ಘಮ ಘಮಿಸೋ ಸೋಂಪು ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಆಯ್ಕೆ, ಮಿಸ್ ಮಾಡಬೇಡಿ

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. 

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. 

ಸಾಮಾನ್ಯವಾಗಿ ಹೋಟೆಲ್ ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. 

  • Share this:
    ಸಾಮಾನ್ಯವಾಗಿ ಹೋಟೆಲ್ (Hotel) ಗಳಲ್ಲಿ ಊಟ ಮುಗಿಸಿದ ಬಳಿಕ ಬಿಲ್ ಜೊತೆ ಸೋಂಪು ಕಾಳು (Fennel Seed) ಕೊಡುವುದನ್ನು ನೋಡಿದ್ದೇವೆ. ಆದರೆ ಅದರ ಹಿಂದಿರುವ ಉದ್ದೇಶ ಅಷ್ಟಾಗಿ ಯಾರಿಗೂ ತಿಳಿದಿಲ್ಲ. ಬಾಯಿ ವಾಸನೆ ಹೋಗಲಿ, ಜೀರ್ಣ ಕ್ರೀಯೆ (Digestion) ಚೆನ್ನಾಗಿ ಆಗಲಿ ಎನ್ನುವ ಉದ್ದೇಶದಿಂದ ಸೋಂಪು ತಿನ್ನುತ್ತಾರೆ. ಆದರೆ, ನಿಮಗೆ ಗೊತ್ತಿರಲಿ. ಸೋಂಪು ತಿಂದರೆ ಸಾಕಷ್ಟು ಆರೋಗ್ಯ ಲಾಭ (Health benefits) ಇದೆ. ಕೇವಲ ಬಾಯಿ ವಾಸನೆಗೆ ಅಥವಾ ಜೀರ್ಣಕ್ರಿಯೆ ಮಾತ್ರ ಅದರ ಲಾಭ ಅಲ್ಲ. ಕಾರಣ ತಿಳಿದರೆ ನೀವೂ ಪ್ರತಿ ದಿನ ಸೋಂಪು ಕಾಳು ಉಪಯೋಗಿಸುವುದರಲ್ಲಿ ಸಂಶಯವಿಲ್ಲ.

    ಸೋಂಪು ಕಾಳನ್ನು ಪ್ರತಿದಿನ ಊಟವಾದ ಬಳಿಕ ಒಂದೆರಡು ಚಮಚ ತಿನ್ನುವುದರಿಂದ ಅಜೀರ್ಣ ಸಮಸ್ಯೆ ಕಾಡುವುದಿಲ್ಲ. ಊಟದ ನಂತರ ತಿನ್ನುವುದರಿಂದ ಬಾಯ ವಾಸನೆಯೂ ಕಮ್ಮಿಯಾಗುತ್ತದೆ. ಸೋಂಪು ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ, ಬೆಳಗ್ಗೆ ಆ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ಕಣ್ಣಿನ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತವೆ.

    ಸೋಂಪನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್‌ ತಯಾರಿಸಿ ಕುಡಿಯುವುದರಿಂದ ಮಹಿಳೆಯರಲ್ಲಿ ಋುತುಚಕ್ರದ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆ ನೋವು ಮತ್ತು ಇತರ ತೊಂದರೆ ನಿವಾರಣೆಯಾಗುತ್ತದೆ. ಜೊತೆಗೆ ನಿಯಮಿತವಾಗಿ ಋುತುಚಕ್ರವಾಗುತ್ತದೆ.

    ದೇಹದ ಟಾಕ್ಸಿನ್ ಹೊರಗೆ ಹಾಕುತ್ತದೆ..!

    ಬೇರೆ ಬೇರೆ ಕಾರಣಕ್ಕೆ ನಮ್ಮ ದೇಹದಲ್ಲಿ ಟಾಕ್ಸಿನ್ ಅಂಶ ಉಂಟಾಗುತ್ತದೆ. ಇದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಟಾಕ್ಸಿನ್ ಅಂಶ ದೇಹದಿಂದ ಹೊರಗೆ ಹೋದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ಟಾಕ್ಸಿನ್ ದೇಹದಿಂದ ಹೊರ ತೆಗೆಯಲು ಸೋಂಪು ಕೂಡಾ ಬೆಸ್ಟ್ ಆಹಾರ ಕ್ರಮ. ಇದು ದೇಹದಲ್ಲಿ ವಿಷಯುಕ್ತ ಕೆಮಿಕಲ್ ಆಗಿರುವ ಟಾಕ್ಸಿನ್ ನನ್ನು ಹೊರತೆಗೆಯುತ್ತದೆ.

    ಇದನ್ನೂ ಓದಿ: Gram Flour: ಕಡಲೆ ಹಿಟ್ಟು ಅಡುಗೆಗೆ ಮಾತ್ರವಲ್ಲ ಸೌಂದರ್ಯಕ್ಕೂ ಬೆಸ್ಟ್, ಬಳಕೆ ಹೇಗೆ?

    ಅನಗತ್ಯ ಹಸಿವನ್ನು ತಡೆಯುತ್ತದೆ 

    ಕೆಲವೊಮ್ಮೆ ನಮಗೆ ಸಮಯ ಅಲ್ಲದ ಸಮಯದಲ್ಲಿ ಹಸಿವಾಗಿರುತ್ತದೆ. ಹಾಗಾಗಿ ಹೊತ್ತಲ್ಲದ ಹೊತ್ತಲ್ಲಿ ನಮಗೆ ಹಸಿವಾಗುತ್ತದೆ. ಸಿಕ್ಕಾಪಟ್ಟೆ ತಿನ್ನುತ್ತೇವೆ. ಸೋಂಪು ಇದನ್ನು ತಡೆಗಟ್ಟುತ್ತದೆ. ಊಟದ ಹೊತ್ತಿಗೆ ಹಸಿವನ್ನುಂಟು ಮಾಡುತ್ತದೆ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ.

    ಸೋಂಪಿನಲ್ಲಿದೆ ಅನೇಕ ಪೋಷಕ ತತ್ವ 

    ಸೋಂಪಿನಲ್ಲಿ ಅನೇಕ ಪೋಷಕಾಂಶಗಳಿರುತ್ತವೆ. ಸೋಂಪು ತಂಪು ಗುಣವನ್ನು ಹೊಂದಿರುತ್ತದೆ. ಹಾಗಾಗಿ ಬಿಸಿಲ ಬೇಗೆಗೆ ಇದನ್ನು ಸೇವಿಸಿದರೆ, ದೇಹ ತಂಪಾಗಿಡುತ್ತದೆ. ಅಲ್ಲದೆ, ಇದರಲ್ಲಿ ವಿಟಮಿನ್ ಸಿ, ಮಿನರಲ್, ಕ್ಯಾಲ್ಶಿಯಂ, ಸೋಡಿಯಂ, ಐರನ್, ಪೋಟಾಶಿಯಂ ಕೂಡಾ ಇರುತ್ತದೆ. ಹಾಗಾಘಿ ಇದರ ನೀರನ್ನು ಸೇವಿಸುವುದು ಆರೋಗ್ಯಕ್ಕೂ ಒಳ್ಳೆಯದು.

    ಇದನ್ನೂ ಓದಿ: Ginger Side Effects: ಶುಂಠಿಯ ಅತಿಯಾದ ಸೇವನೆಯಿಂದ ಏನಾಗುತ್ತದೆ ಗೊತ್ತಾ? ಒಳ್ಳೆಯದು ಎಂದು ತಿನ್ನುವ ಮೊದಲು ಇದನ್ನೊಮ್ಮೆ ಓದಿ

    ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ 

    ನಮ್ಮ ದೇಹದಲ್ಲಿ ಮೆಟಬಾಲಿಕ್ ರೇಟ್ ಕಡಿಮೆ ಆದಾಗ ಬೊಜ್ಜು ಉಂಟಾಗುತ್ತದೆ. ಆದರೆ, ಸೋಂಪು ದೇಹದ ಮೆಟಬಾಲಿಕ್ ರೇಟ್ ಹೆಚ್ಚಿಸುತ್ತದೆ. ಹಾಗಾಗಿ, ದೇಹದ ತೂಕ ಕಡಿಮೆ  ಆಗುತ್ತದೆ.

    ಋುತುಚಕ್ರದ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ

    ಸೋಂಪನ್ನು ನೀರಿನಲ್ಲಿ ಕುದಿಸಿ, ಅದರ ಡಿಕಾಕ್ಷನ್‌ ತಯಾರಿಸಿ ಕುಡಿಯುವುದರಿಂದ ಮಹಿಳೆಯರಲ್ಲಿ ಋುತುಚಕ್ರದ ದಿನಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹೊಟ್ಟೆ ನೋವು ಮತ್ತು ಇತರ ತೊಂದರೆ ನಿವಾರಣೆಯಾಗುತ್ತದೆ. ಜೊತೆಗೆ ನಿಯಮಿತವಾಗಿ ಋುತುಚಕ್ರವಾಗುತ್ತದೆ.

    ಮಕ್ಕಳಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ

    ಇದು ಮಕ್ಕಳಿಗೂ ಒಳ್ಳೆಯದು. ಮಕ್ಕಳಲ್ಲಿ ಉಂಟಾಗುವ ಉದರ ತೊಂದರೆಗಳ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಕ್ಕಳಲ್ಲಿ ಅಜೀರ್ಣ ಸಮಸ್ಯೆ ಕಾಡುತ್ತಿದ್ದರೆ ಒಂದು ಚಮಚ ಸೋಂಪು ಕಾಳುಗಳನ್ನು ಜಗಿಯಲು ನೀಡಬೇಕು. ಸೋಂಪು ಕಾಳುಗಳನ್ನು ಜಗಿದು ನುಂಗುವುದರಿಂದ ಪರಿಹಾರ ಸಿಗುತ್ತದೆ.
    Published by:Swathi Nayak
    First published: