Body Detox: ದೇಹವನ್ನು ಹಾನಿಕಾರಕ ಅಂಶಗಳಿಂದ ನಿರ್ವಿಷಗೊಳಿಸಲು ಈ ರೀತಿ ಮಾಡಿ ಸಾಕು

ನಾವು ಸೇವಿಸುವ ಆಹಾರ ಮತ್ತು ನಾವು ಉಸಿರಾಡುವ ಗಾಳಿಯಿಂದ ಹೀಗೆ ಅನೇಕ ಮಾರ್ಗಗಳ ಮೂಲಕ ನಮ್ಮ ದೇಹವನ್ನು ಈ ವಿಷ ವಸ್ತುಗಳು ಪ್ರವೇಶಿಸುತ್ತವೆ. ಹೀಗೆ ಈ ವಿಷ ವಸ್ತುಗಳು ನಮ್ಮ ದೇಹವನ್ನು ಸೇರಿಕೊಂಡ ನಂತರ ನಮ್ಮನ್ನು ಅನೇಕ ಅನಾರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹೇಗೆ ಈ ವಿಷ ವಸ್ತುಗಳನ್ನು ನಮ್ಮ ದೇಹದಿಂದ ಹೊರ ಹಾಕುವುದು ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು ಅಲ್ಲವೇ? ಆಯುರ್ವೇದದಲ್ಲಿ ಇದಕ್ಕೆ ಕೆಲವು ಸಲಹೆಗಳಿವೆ.

ದೇಹದಿಂದ ಹಾನಿಕಾರಕ ಅಂಶಗಳನ್ನು ನಿರ್ವಿಷಗೊಳಿಸುವ ಆಹಾರ

ದೇಹದಿಂದ ಹಾನಿಕಾರಕ ಅಂಶಗಳನ್ನು ನಿರ್ವಿಷಗೊಳಿಸುವ ಆಹಾರ

  • Share this:
ಈಗಂತೂ ನಮ್ಮ ದೇಹದ ಒಳಗೆ ಈ ವಿಷ ವಸ್ತುಗಳು ತುಂಬಾನೇ ಸುಲಭವಾಗಿ ಸೇರುತ್ತವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಏಕೆಂದರೆ ಈಗ ನಾವು ಸೇವಿಸುವ ಆಹಾರ (Food) ಮತ್ತು ನಾವು ಉಸಿರಾಡುವ ಗಾಳಿಯಿಂದ ಹೀಗೆ ಅನೇಕ ಮಾರ್ಗಗಳ ಮೂಲಕ ನಮ್ಮ ದೇಹವನ್ನು (Body) ಈ ವಿಷ ವಸ್ತುಗಳು ಪ್ರವೇಶಿಸುತ್ತವೆ. ಹೀಗೆ ಈ ವಿಷ ವಸ್ತುಗಳು ನಮ್ಮ ದೇಹವನ್ನು ಸೇರಿಕೊಂಡ ನಂತರ ನಮ್ಮನ್ನು ಅನೇಕ ಅನಾರೋಗ್ಯ ಸಮಸ್ಯೆಗಳಿಗೆ (Illness problem) ದಾರಿ ಮಾಡಿಕೊಡುತ್ತದೆ. ಹೇಗೆ ಈ ವಿಷ ವಸ್ತುಗಳನ್ನು ನಮ್ಮ ದೇಹದಿಂದ ಹೊರ ಹಾಕುವುದು ಎಂದು ನಿಮಗೆ ಪ್ರಶ್ನೆಯೊಂದು ಕಾಡಬಹುದು ಅಲ್ಲವೇ? ಆಯುರ್ವೇದದಲ್ಲಿ (Ayurveda) ಇದಕ್ಕೆ ಕೆಲವು ಸಲಹೆಗಳಿವೆ.

ಡಿಟಾಕ್ಸ್ ನ ಪ್ರಯೋಜನಗಳೇನು ?
ಡಿಟಾಕ್ಸ್ ಕರುಳು, ಚರ್ಮ, ಶ್ವಾಸಕೋಶ ಮತ್ತು ಮೂತ್ರಪಿಂಡಗಳನ್ನು ಶುದ್ಧೀಕರಿಸುವುದಾಗಿರುತ್ತದೆ. ಆಹಾರ ಮತ್ತು ಗಾಳಿಯ ಸೇವನೆಯನ್ನು ಶುದ್ಧೀಕರಿಸಲು ಮಾನವ ಎಂಜಿನ್ ನ ಕಾರ್ಬ್ಯುರೇಟರ್ ಆಗಿರುವ ಯಕೃತ್ತನ್ನು ಶುದ್ಧೀಕರಿಸುವುದು ಸಹ ಇದರ ಕೆಲಸವಾಗಿರುತ್ತದೆ.

ದೇಹವನ್ನು ಹಾನಿಕಾರಕ ಅಂಶಗಳಿಂದ ನಿರ್ವಿಷಗೊಳಿಸಲು ಈ ಆಹಾರ ಫಾಲೋ ಮಾಡಿ
ಆತ್ಮಾಂತನ್ ವೆಲ್ನೆಸ್ ಸೆಂಟರ್ ನ ವೈದ್ಯಕೀಯ ನಿರ್ದೇಶಕ ಮತ್ತು ಸಿಇಒ ಡಾ.ಮನೋಜ್ ಕುಟ್ಟೇರಿ ಅವರು "ನಮ್ಮ ದೇಹವನ್ನು ನಿರ್ವಿಷಗೊಳಿಸುವ ವಿವಿಧ ಮಾರ್ಗಗಳೆಂದರೆ ಫೈಬರ್, ವಿಟಮಿನ್ ಸಿ, ಗಂಧಕ, ಉತ್ಕರ್ಷಣ ನಿರೋಧಕಗಳು, ಪ್ರೋಬಯಾಟಿಕ್ ಗಳು, ಪ್ರಿಬಯಾಟಿಕ್ ಗಳು ಮತ್ತು ಪ್ರಕೃತಿಯಲ್ಲಿ ಹೈಡ್ರೇಟಿಂಗ್ ಹೆಚ್ಚಿಸುವ ಅಂಶಗಳನ್ನು ಹೊಂದಿರುವ ಆಹಾರಗಳನ್ನು ಒಳಗೊಂಡಿರುವ ಸರಿಯಾದ ಆಹಾರ ಪದ್ಧತಿಯನ್ನು ಅನುಸರಿಸುವುದು. ನಾವು ಮೊದಲೇ ಪ್ಯಾಕ್ ಮಾಡಿದ, ಸಂಸ್ಕರಿಸಿದ ಆಹಾರಗಳಿಂದ ಆದಷ್ಟು ದೂರವಿರುವುದು ಮತ್ತು ಸಕ್ಕರೆ ಮತ್ತು ಉಪ್ಪಿನ ಸೇವನೆಯನ್ನು ಕಡಿಮೆ ಮಾಡಬೇಕು.

ಮೂತ್ರಪಿಂಡದ ಕಾರ್ಯಗಳನ್ನು ಸುಧಾರಿಸುವ ಹಣ್ಣು ಹಾಗೂ ತರಕಾರಿಗಳು
ಇದಲ್ಲದೆ ಮೂತ್ರಪಿಂಡದ ಕಾರ್ಯಗಳನ್ನು ಸಕ್ರಿಯಗೊಳಿಸಲು ಮತ್ತು ಎಲ್ಲಾ ಚಯಾಪಚಯಗಳನ್ನು ಸುಲಭಗೊಳಿಸಲು ಜಲಸಂಚಯನವು ಮುಖ್ಯವಾಗಿದೆ. ಸೆಲೆರಿ, ಬೂದುಗುಂಬಳಕಾಯಿ, ಎಳನೀರು, ವೀಟ್ ಗ್ರಾಸ್, ಕಲ್ಲಂಗಡಿ ಮುಂತಾದ ಕೆಲವು ಹಣ್ಣುಗಳು ಮೂತ್ರಪಿಂಡದ ಕಾರ್ಯಗಳನ್ನು ಸುಧಾರಿಸುತ್ತವೆ.

ಚರ್ಮದ ನಿರ್ವಿಷೀಕರಣವನ್ನು ದೂರ ಮಾಡಲು ಏನು ಮಾಡಬೇಕು 
ಒಣ ಮತ್ತು ಒದ್ದೆಯಾದ ಉಗಿ, ಇನ್ಫ್ರಾ-ರೆಡ್ ಸೌನಾ, ಸನ್ ಬಾತ್ ಮತ್ತು ಎಕ್ಸ್ಫೋಲಿಯೇಶನ್ ಅಭ್ಯಾಸಗಳು ಮತ್ತು ಚರ್ಮದ ಕಾರ್ಯಗಳನ್ನು ಹೆಚ್ಚಿಸಲು ಏರೋಬಿಕ್ ವ್ಯಾಯಾಮಗಳಂತಹ ಬೆವರುವ ಕ್ರಮಗಳಿಂದ ಚರ್ಮದ ನಿರ್ವಿಷೀಕರಣವನ್ನು ಸುಧಾರಿಸಬಹುದು.

ಇದನ್ನೂ ಓದಿ: Kitchen Hacks: ಅಡುಗೆ ಮನೆಯ ಕೆಲಸದ ಸುಸ್ತು ಹೋಗ್ಬೇಕಾ? ಹಾಗಾದ್ರೆ ಈ ಸರಳ ಸಲಹೆ ಫಾಲೋ ಮಾಡಿ

ವಿವಿಧ ಉಸಿರಾಟದ ವ್ಯಾಯಾಮಗಳು ಮತ್ತು ಪ್ರಾಣಾಯಾಮ ಅಭ್ಯಾಸಗಳು ಶ್ವಾಸಕೋಶದಿಂದ ಕಲ್ಮಶಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ಸೆಲ್ಯುಲಾರ್ ಶುದ್ಧೀಕರಣವನ್ನು ಸಹ ಒದಗಿಸುತ್ತದೆ. ಇವುಗಳಲ್ಲದೆ, ಸಕಾರಾತ್ಮಕ ಆಲೋಚನೆಗಳ ಮೇಲೆ ಕೇಂದ್ರೀಕರಿಸುವ ಮೂಲಕ ಮತ್ತು ನಮ್ಮ ಮನಸ್ಸಿನ ಎಲ್ಲಾ ನಕಾರಾತ್ಮಕ ತೊಂದರೆಗಳನ್ನು ತೆಗೆದು ಹಾಕುವ ಮೂಲಕ ಭಾವನಾತ್ಮಕ ಶುದ್ಧೀಕರಣವನ್ನು ಸಹ ಅಭ್ಯಾಸ ಮಾಡಬೇಕು.

ಬರಿಗಾಲಿನಲ್ಲಿ ನಡೆಯುವುದು ಕೂಡ ಒಳ್ಳೆಯದಂತೆ
ವಿರೂಟ್ಸ್ ವೆಲ್ನೆಸ್ ಸೊಲ್ಯೂಷನ್ಸ್ ನ ಸ್ಥಾಪಕ ಮತ್ತು ಅಧ್ಯಕ್ಷ ಸಜೀವ್ ನಾಯರ್ ಅವರು "ಮಧ್ಯಂತರ ಉಪವಾಸವು ಸತ್ತ ಕೋಶಗಳು ಅಥವಾ ಜೊಂಬಿ ಕೋಶಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಅರ್ಥಿಂಗ್ ಅಂತಹ ಮತ್ತೊಂದು ಸರಳ ಮಾರ್ಗವಾಗಿದೆ ಎಂದರೆ ಮಣ್ಣಿನ ಮೇಲೆ ಬರಿಗಾಲಿನಲ್ಲಿ ನಡೆಯುವುದು” ಎಂದು ಸಲಹೆ ನೀಡಿದರು.

ಆರೋಗ್ಯವನ್ನು ಸುಧಾರಿಸಲು ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ದೇಹದಿಂದ ಕೆಟ್ಟ ಮತ್ತು ಹಾನಿಕಾರಕ ಅಂಶಗಳನ್ನು ನಿರ್ವಿಷಗೊಳಿಸುವುದು ತುಂಬಾನೇ ಮುಖ್ಯವಾಗುತ್ತದೆ. ಉತ್ತಮ ಮತ್ತು ಪ್ರಮುಖ ಪೋಷಕಾಂಶಗಳು ಮತ್ತು ಖನಿಜಗಳ ಸೇವನೆಯಲ್ಲಿ ನಮಗೆ ಯಾವುದೇ ಕೊರತೆಯಾಗದಂತೆ ನಾವು ನೋಡಿಕೊಳ್ಳಬೇಕು ಎಂದು ಸಾತ್ವಿಕ ಮೂಮೆಂಟ್ ನ ಸಹ-ಸಂಸ್ಥಾಪಕರಾದ ಸುಬಾ ಸರಾಫ್ ಅವರು ಹೇಳಿದರು. ಇನ್ನೂ ಕೆಲವು ಸಲಹೆಗಳನ್ನು ಇವರು ನೀಡಿದ್ದಾರೆ ನೋಡಿ.

ಆಹಾರ ಸೇವನೆ ಕ್ರಮ ಹೀಗಿರಲಿ
ರಾತ್ರಿ 7 ಗಂಟೆಯ ಮೊದಲು ಅಥವಾ ಮಲಗುವ 4 ರಿಂದ 5 ಗಂಟೆಗಳ ಮೊದಲೆ ಬೇಗನೆ ಊಟ ಮಾಡಿ, ಈ ರೀತಿಯಾಗಿ ಮಾಡಿದ್ದಲ್ಲಿ ನಿಮ್ಮ ದೇಹವು ಆಹಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ತರಕಾರಿ ರಸ (ಬೂದುಗುಂಬಳಕಾಯಿ, ಸೌತೆಕಾಯಿ ಇತ್ಯಾದಿ) ನಂತಹ ಡಿಟಾಕ್ಸ್ ರಸಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ನಿಮ್ಮ ದೇಹವನ್ನು ನಿರ್ವಿಷಗೊಳಿಸುವುದು ಎಂದರೆ ಪ್ರಮುಖ ಅಂಗಗಳು ವಿಷದಿಂದ ತಮ್ಮನ್ನು ತಾವು ಶುದ್ಧೀಕರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಅವುಗಳನ್ನು ವಿಸರ್ಜಿಸುವಲ್ಲಿ ಯಕೃತ್ತು ಸೂಕ್ತವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ:  Masala Ingredients: ಚಯಾಪಚಯ ಹೆಚ್ಚಿಸಲು ಮಸಾಲೆಯುಕ್ತ ಪದಾರ್ಥಗಳು ಬಹಳ ಒಳ್ಳೆಯದಂತೆ

ವಾರಕ್ಕೊಮ್ಮೆ ಉಪವಾಸ ಮಾಡಿ, ಬರೀ ದ್ರವಗಳನ್ನು ಅಷ್ಟೇ ಸೇವಿಸಿರಿ. ದ್ರವರೂಪದ ಉಪವಾಸವನ್ನು ಮಾಡುವುದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ನಿಮ್ಮ ಜೀರ್ಣಾಂಗ ಕ್ರಿಯೆಗೆ ವಿಶ್ರಾಂತಿ ನೀಡಿದಂತೆ ಆಗುತ್ತದೆ. ಈ ದ್ರವ ಆಹಾರವು ನಿಮಗೆ ಸಾಕಷ್ಟು ಕ್ಯಾಲೋರಿಗಳು ಮತ್ತು ಪೋಷಕಾಂಶಗಳನ್ನು ಒದಗಿಸಲು ಸಾಧ್ಯವಿಲ್ಲದ ಕಾರಣ, ಅದನ್ನು ಕೆಲವು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿಸಬಾರದು.
Published by:Ashwini Prabhu
First published: