Water Falls: ಕರ್ನಾಟಕದಲ್ಲಿ ಒಮ್ಮೆಯಾದರೂ ನೀವು ನೋಡಲೇಬೇಕಾದ ಅದ್ಭುತ ಜಲಪಾತಗಳಿವು

ಜಲಪಾತಗಳ ಬಗ್ಗೆ ನೋಡುವುದಾದರೆ ಕರ್ನಾಟಕದ ಜಿಲ್ಲೆಗಲ್ಲಿ ಸಾಕಷ್ಟು ಜಲಪಾತಗಳಿವೆ. ಮಳೆಗಾಲದ ಸಂದರ್ಭದಲ್ಲಿ ಮಳೆ ಪ್ರೇರಿತ ಸಣ್ಣ ಸಣ್ಣ ಜಲಪಾತಗಳು ಸಹ ಕಂಡುಬರುತ್ತವೆ. ಉತ್ತರಕನ್ನಡ ಜಿಲ್ಲೆಯಂತೂ ಜಲಪಾತಗಳ ತವರೂರು ಎಂದೇ ಪ್ರಸಿದ್ಧಿಯಾಗಿದೆ. ಹಾಗಿದ್ದರೆ ನಾವಿಲ್ಲಿ ರಾಜ್ಯದ ಅದ್ಭುತ ಜಲಪಾತಗಳ ಬಗ್ಗೆ ತಿಳಿಯೋಣ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಕರ್ನಾಟಕ ಕಾಡು, ನಿಸರ್ಗ, ಜಲಪಾತ, ನದಿ, ಸಮುದ್ರ, ವನ್ಯಜೀವಿಗಳಿಂದ ಸಮೃದ್ಧವಾದ ರಾಜ್ಯ. ಮಳೆಗಾಲದ (Rainy Season) ಸಂದರ್ಭದಲ್ಲಂತೂ ಕರ್ನಾಟಕದಲ್ಲಿ ಸ್ವರ್ಗವೇ ಧರೆಗಳಿದಂತೆ ಭಾಸವಾಗುತ್ತದೆ. ಅಷ್ಟರ ಮಟ್ಟಿಗೆ ಹಸಿರು ತುಂಬಿದ ಪ್ರಕೃತಿ, ಭೋರ್ಗರೆಯುವ ಜಲಪಾತ (Water Falls), ತುಂಬಿ ಹರಿಯುತ್ತಿರುವ ನದಿಗಳು ಹೀಗೆ ಸಾಕಷ್ಟು ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಜಲಪಾತಗಳ ಬಗ್ಗೆ ನೋಡುವುದಾದರೆ ಕರ್ನಾಟಕದ (Karnataka) ಜಿಲ್ಲೆಗಲ್ಲಿ ಸಾಕಷ್ಟು ಜಲಪಾತಗಳಿವೆ. ಮಳೆಗಾಲದ ಸಂದರ್ಭದಲ್ಲಿ ಮಳೆ ಪ್ರೇರಿತ ಸಣ್ಣ ಸಣ್ಣ ಜಲಪಾತಗಳು ಸಹ ಕಂಡುಬರುತ್ತವೆ. ಉತ್ತರಕನ್ನಡ (Uttara Kannada) ಜಿಲ್ಲೆಯಂತೂ ಜಲಪಾತಗಳ ತವರೂರು ಎಂದೇ ಪ್ರಸಿದ್ಧಿಯಾಗಿದೆ. ಹಾಗಿದ್ದರೆ ನಾವಿಲ್ಲಿ ರಾಜ್ಯದ ಅದ್ಭುತ ಜಲಪಾತಗಳ ಬಗ್ಗೆ ತಿಳಿಯೋಣ.

1) ಕಲ್ಹತ್ತಿ ಪಾಲ್ಸ್
ಚಿಕ್ಕಮಗಳೂರಿನಿಂದ ಸುಮಾರು 80 ಕಿ.ಮೀ ದೂರದಲ್ಲಿರುವ ಈ ಜಲಪಾತ ಸ್ವಲ್ಪ ವಿಶೇಷವಾಗಿದೆ. ಸುಂದರ ಜಲಪಾತ ಮತ್ತು ವೀರಭದ್ರೇಶ್ವರ ದೇವಸ್ಥಾನ ಎರಡೂ ಅಕ್ಕಪಕ್ಕದಲ್ಲಿಯೇ ಇದ್ದು, ಆನೆ ಮುಖವಿರುವ ಬಂಡೆಯ ಮೇಲಿಂದ ಧುಮ್ಮಿಕ್ಕುವ ನೀರು ನೋಡುಗರನ್ನು ಕೈಬೀಸಿ ಕರೆಯುತ್ತದೆ. 400 ಅಡಿ ಎತ್ತರವಿರುವ ಈ ಜಲಪಾತದಲ್ಲಿ ಸ್ನಾನ ಮಾಡಲು, ಮಕ್ಕಳಿಗೆ ನೀರಾಟವಾಡಲು ಹೇಳಿ ಮಾಡಿಸಿದಂತಿದೆ. ಮಳೆಗಾಲದಲ್ಲಿ ನೀರಿನ ಹರಿವು ಹೆಚ್ಚಾಗಿರುವುದರಿಂದ ಎಚ್ಚರ ವಹಿಸಬೇಕು.

2) ಜೋಗ ಜಲಪಾತ
ಸ್ಥಳೀಯವಾಗಿ ಗೆರ್ಸೊಪ್ಪಾ ಜಲಪಾತ ಎಂದು ಕರೆಯಲ್ಪಡುವ ಜೋಗ ಜಲಪಾತ ದೇಶದ ಎರಡನೇ ಅತಿ ಎತ್ತರದ ಮತ್ತು ಸುಂದರವಾದ ಜಲಪಾತವಾಗಿದೆ. ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಗಡಿಯಲ್ಲಿರುವ ಇದು ಬಂಡೆಗಳ ನಡುವಿಂದ 253 ಮೀಟರ್ ಎತ್ತರದಿಂದ ಕೆಳಗೆ ನೀರು ಬೀಳುತ್ತದೆ. ಈ ಜಲಪಾತವು ಶರಾವತಿ ನದಿಯಿಂದ ರೂಪುಗೊಂಡಿದೆ ಮತ್ತು ರಾಜಾ, ರಾಣಿ, ರಾಕೆಟ್ ಮತ್ತು ರೋರರ್ ಎಂಬ ನಾಲ್ಕು ಕಿರು ಜಲಪಾತಗಳಾಗಿ ಬಂಡೆಗಳ ಮೇಲಿಂದ ಧುಮುಕುತ್ತದೆ. ಹಲವಾರು ಸಿನಿಮಾ ಶೂಟಿಂಗ್ ಕೂಡ ಇಲ್ಲಿ ನಡೆದಿವೆ.

ಇದನ್ನೂ ಓದಿ:  National Park: ಬೆಂಗಳೂರಿಗೆ ಹತ್ತಿರವಿರುವ ನ್ಯಾಷನಲ್ ಪಾರ್ಕ್‍ಗಳಿವು, ನೀವೊಮ್ಮೆ ವಿಸಿಟ್​ ಮಾಡಿ

3) ಉಂಚಳ್ಳಿ ಪಾಲ್ಸ್
ಜಲಪಾತಗಳ ತವರೂರು ಜಿಲ್ಲೆ ಉತ್ತರಕನ್ನಡದಲ್ಲಿ ಕಾಣ ಸಿಗುವ ಈ ಜಲಪಾತ 1845 ರಲ್ಲಿ ಬೆಳಕಿಗೆ ಬಂತು. ಲಶಿಂಗ್ಟನ್ ಜಲಪಾತ ಎಂದೂ ಕರೆಯಲ್ಪಡುವ ಉಂಚಳ್ಳಿ ಜಲಪಾತವು ಶಿರಸಿ ಬಳಿ ಇದೆ. ದಟ್ಟ ಕಾಡುಗಳಿಂದ ಆವೃತವಾಗಿರುವ ಈ ಜಲಪಾತ ಅಘಾನಶಿನಿ ನದಿಯ ಒಂದು ಭಾಗವಾಗಿದೆ. ಈ ಜಲಪಾತವನ್ನು ತಲುಪಲು ಪ್ರವಾಸಿಗರು ಹೆಗ್ಗರಣೆ ಗ್ರಾಮದ ಮೇಲೆ ಸುಮಾರು 5 ಕಿ.ಮೀ ನಡೆದು ಟ್ರೆಕ್ಕಿಂಗ್ ರೀತಿ ಹೋಗಬೇಕು.

4) ಶಿವನ ಸಮುದ್ರ ಜಲಪಾತ
ಬೆಂಗಳೂರಿಗರಿಗೆ ಹತ್ತಿರವಿರುವ ಈ ಜಲಪಾತ ವಾರಾಂತ್ಯ ಪ್ರವಾಸಕ್ಕೆ ಹೇಳಿ ಮಾಡಿಸಿದಂತಿದೆ. ಒಂದೇ ಸ್ಥಳದಿಂದ ಬರುವ ಜಲಪಾತವು ಎರಡು ತೊರೆಗಳಾಗಿ ವಿಭಜನೆಯಾಗುತ್ತದೆ, ಮತ್ತು ಅವು ಬೇರೆ ಬೇರೆ ದಿಕ್ಕುಗಳಿಂದ ಧುಮುಕಿ, ಅವಳಿ ಜಲಪಾತಗಳಂತೆ ಗೋಚರಿಸುತ್ತವೆ, ಒಂದನ್ನು ಗಗನ ಚುಕ್ಕಿ ಎಂದು ಕರೆಯಲಾಗುತ್ತದೆ ಮತ್ತು ಇನ್ನೊಂದನ್ನು ಭರ ಚುಕ್ಕಿ ಎಂದು ಕರೆಯಲಾಗುತ್ತದೆ. ಮಳೆಗಾಲದಲ್ಲಿ ಭೋರ್ಗರೆವ ಈ ಜಲಪಾತಗಳು ಕಣ್ಣಿಗೆ ಹಬ್ಬ ಎನ್ನಬಹುದು.

5) ಸಾತೋಡಿ ಪಾಲ್ಸ್
ಕರ್ನಾಟಕದಲ್ಲಿ ತಪ್ಪದೇ ನೋಡಬೇಕಾದ ಮತ್ತೊಂದು ಜಲಪಾತವೆಂದರೆ ಅದು ಸಾತೋಡಿ ಪಾಲ್ಸ್. ಹಲವಾರು ಝರಿಗಳು ಸೇರಿ ಉಂಟಾಗಿರುವ ಜಲಪಾರ 50 ಅಡಿ ಎತ್ತರ ಇದೆ. ಈ ಜಲಪಾತ ಕೂಡ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಸುಮಾರು 32 ಕಿ.ಮೀ ದೂರದಲ್ಲಿದೆ. ಇದು ಕಲ್ಲಿನ ಗುಹೆಗಳು ಮತ್ತು ದಟ್ಟವಾದ ಕಾಡುಗಳಿಂದ ಆವೃತವಾದ ಸಣ್ಣ ಜಲಪಾತವಾಗಿದ್ದು, ನೋಡಲು ಸುಂದರವಾಗಿದೆ.

ಇದನ್ನೂ ಓದಿ:  Holiday Plan: ನಿಮ್ಮ ಫ್ರೆಂಡ್ಸ್ ಜೊತೆ ಟ್ರಿಪ್ ಹೋಗೋ ಪ್ಲ್ಯಾನ್ ಇದ್ರೆ ಈ ಸ್ಥಳಗಳು ಬೆಸ್ಟ್ ಅಂತೆ ನೋಡಿ

6) ಕುಡ್ಲು ತೀರ್ಥ ಪಾಲ್ಸ್
ಮಲೆನಾಡಿನ ಅತಿ ಸುಂದರ ಜಲಪಾತಗಳಲ್ಲಿ ಆಗುಂಬೆ ಬಳಿ ಇರುವ ಕೂಡ್ಲು ತೀರ್ಥ ಕೂಡ ಒಂದು. ಪಶ್ಚಿಮ ಘಟ್ಟಗಳ ಮಧ್ಯದಲ್ಲಿ ನೆಲೆಗೊಂಡಿರುವ ಕೂಡ್ಲು ತೀರ್ಥ ಜಲಪಾತ ಅತ್ಯಂತ ಸುಂದರವಾಗಿದೆ. 300 ಅಡಿ ಮೇಲಿನಿಂದ ಬೀಳುವ ಈ ಪಾಲ್ಸ್ ನೊಡಲು ನಯನಮನೋಹರವಾಗಿದೆ.

7) ಹೆಬ್ಬೆ ಪಾಲ್ಸ್
ಹೆಬ್ಬೆ ಜಲಪಾತವು ಚಿಕ್ಕಮಗಳೂರು ಜಿಲ್ಲೆಯ ಅತ್ಯಂತ ಜನಪ್ರಿಯ ಜಲಪಾತವಾಗಿದೆ. ಹೆಬ್ಬೆ ಜಲಪಾತದಲ್ಲಿ 168 ಮೀಟರ್ ಎತ್ತರದಿಂದ ನೀರು ಧುಮುಕುತ್ತದೆ. ಆಗಸ್ಟಿನಿಂದ ಜನವರಿವರೆಗೆ ಹೆಬ್ಬೆ ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯವಾಗಿದೆ.
Published by:Ashwini Prabhu
First published: