Jack Fruit Benefits: ಹಲಸಿನಹಣ್ಣನ್ನು ಸೇವಿಸುವುದರಿಂದ ಇದೆ ಆರೋಗ್ಯ ಲಾಭಗಳು

ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ ಆದ್ದರಿಂದಲೇ ಇದು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

ಹಲಸಿನ ಹಣ್ಣು

ಹಲಸಿನ ಹಣ್ಣು

  • Share this:
    ಹಲಸಿನಹಣ್ಣಿನ ಸೀಸನ್ ಈಗಾಗಲೇ ಬಂದಾಗಿದೆ. ಮೇಣಾ ಮುಳ್ಳು, ರಚ್ಚೆ ಇದೇ ಎಂದು ಹಲಸಿನ ಹಣ್ಣನ್ನು (Jack Fruit) ಕಂಡಾಗ ಮೂಗು ಮುರಿಯಬೇಡಿ. ನಾಲಿಗೆಗೆ ರುಚಿ ನೀಡುವ ಈ ಹಲಸಿನ ಹಣ್ಣಿನಲ್ಲಿ ಅತ್ಯದ್ಭುತವಾದ ಔಷಧೀಯ (Medicine) ಗುಣಗಳು ಕೂಡ ಅಡಗಿವೆ. ಪ್ರಕೃತಿಯು ನಮಗೆ ನೈಸರ್ಗಿಕವಾಗಿ ನೀಡುವ ಹಣ್ಣುಗಳಲ್ಲಿ ಹಲಸಿನ ಹಣ್ಣು ಕೂಡ ಒಂದು. ಹಿಂದೆ ಕೇವಲ ಹಳ್ಳಿಗಳಲ್ಲಿ ವಾಸಿಸುತ್ತಿರುವವರಿಗೆ ಮಾತ್ರ ಸೀಮಿತವಾಗಿದ್ದ ಹಲಸಿನ ಹಣ್ಣಿನ ಸೇವನೆ ಇದೀಗ ಪಟ್ಟಣಗಳಲ್ಲೂ ಸೂಪರ್ ಮಾರ್ಕೆಟ್ (Super Market) ನಲ್ಲಿ ದೊರಕುತ್ತದೆ. ಹಲಸಿನ ಹಣ್ಣಿನಲ್ಲಿ ವಿಟಮಿನ್ ಎ (Vitamin A) ಸಮೃದ್ಧವಾಗಿದೆ ಆದ್ದರಿಂದಲೇ ಇದು ಅನೇಕ ಸಮಸ್ಯೆಗಳಿಗೆ ರಾಮಬಾಣವಾಗಿ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

    ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

    ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಕೂಡ ಹೇರಳವಾಗಿ ಅಡಕವಾಗಿದೆ. ವಿಟಮಿನ್ ಸಿ ಯು ದೇಹದಲ್ಲಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಹಲಸಿನ ಹಣ್ಣಿನ ಸೇವನೆಯಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಹೀಗೆ ಹಲಸಿನ ಹಣ್ಣು ದೇಹಕ್ಕೆ ರೋಗ ನಿರೋಧಕ ಶಕ್ತಿ ವರ್ಧಕವಾಗಿ ಕೂಡ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.

    ಜೀರ್ಣಕಾರಿ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ

    ಸಂಶೋಧನೆ ಪ್ರಕಾರ ಹಲಸು ಫೈಬರ್ ನ ಉತ್ತಮ ಮೂಲವೆಂದು ಪರಿಗಣಿಸಲ್ಪಟ್ಟಿದೆ. ಆದ್ದರಿಂದ ಇದು ಜೀರ್ಣಕಾರಿ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ. ಹಲಸಿನ ಹಣ್ಣಿನಲ್ಲಿರುವ ನಾರಿನಂಶವು ಮಲಬದ್ಧತೆ ಸಮಸ್ಯೆಯನ್ನು ಕೂಡ ತಡೆಯುತ್ತದೆ ಮತ್ತು ಇದು ಸುಗಮ ಕರುಳಿನ ಚಲನೆಗೆ ಸಹಾಯ ಮಾಡುತ್ತದೆ. ನಿಮ್ಮ ದೇಹದಲ್ಲಿ ಹೆಚ್ಚುತ್ತಿರುವ ಸ್ಥೂಲಕಾಯತೆ ಯನ್ನು ತಡೆಯಲು ಹಲಸಿನ ಹಣ್ಣಿನಲ್ಲಿ ಅಡಕವಾಗಿರುವ ಉರಿಯೂತದ ಗುಣಲಕ್ಷಣಗಳು ಸಹಾಯ ಮಾಡುತ್ತದೆ. ಮಾಗಿದ ಹಲಸಿನ ಹಣ್ಣಿನಲ್ಲಿ ಉರಿಯೂತ ನಿವಾರಕ ಗುಣಗಳೂ ಇವೆ. ಇದು ನಿಮ್ಮ ದೇಹದಲ್ಲಿ ಹೆಚ್ಚುತ್ತಿರುವ ಬೊಜ್ಜನ್ನು ತಡೆಯಲು ಸಹಾಯ ಮಾಡುತ್ತದೆ.

    ಇದನ್ನೂ ಓದಿ: Diabetes Disease: ಮಧುಮೇಹ ರೋಗಿಗಳಿಗೆ ಅತ್ಯುತ್ತಮ ಡಯೆಟ್ ಪ್ಲಾನ್! ಇವಿಷ್ಟು ನಿಮ್ಮ ಪ್ಲೇಟ್​ನಲ್ಲಿರಲಿ

    ಅಧಿಕ  ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

    ಅಧಿಕ ರಕ್ತದೊತ್ತಡ ಕಡಿಮೆ ಮಾಡುವಲ್ಲಿ ಹಲಸಿನ ಹಣ್ಣಿನ ಪಾತ್ರ ಮಹತ್ವದ್ದಾಗಿದೆ. ಆದ್ದರಿಂದ ಬಿಪಿಯನ್ನು ನಿಯಂತ್ರಣದಲ್ಲಿಡಬೇಕು ಇಂದು ಬಯಸುವವರು ವೈದ್ಯರ ಸಲಹೆ ಮೇರೆಗೆ ಹಲಸಿನ ಹಣ್ಣನ್ನು ಸೇವಿಸುವುದು ಒಳ್ಳೆಯದು. ಹಾಗೆ ಹೃದಯ ಸಂಬಂಧಿತ ಕಾಯಿಲೆಗಳನ್ನು ತಡೆಯುವುದರಲ್ಲಿ ಹಣ್ಣಿನ ಪಾತ್ರವಿದೆ.

    ರಕ್ತಹೀನತೆಯ ಸಮಸ್ಯೆ ತಡೆಯಲು ಪ್ರಯೋಜನಕಾರಿ

    ದೇಹದಲ್ಲಿ ಕಬ್ಬಿಣದ ಕೊರತೆಯು ರಕ್ತಹೀನತೆಗೆ ಮುಖ್ಯ ಕಾರಣವೆಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಹಲಸು ಕಬ್ಬಿಣದಲ್ಲಿ ಸಮೃದ್ಧವಾಗಿದೆ. ಹಲಸಿನ ಹಣ್ಣನ್ನು ಸೇವಿಸುವುದರಿಂದ ರಕ್ತಹೀನತೆಯ ಸಮಸ್ಯೆಯನ್ನು ತಡೆಯಲು ಸಹ ಪ್ರಯೋಜನಕಾರಿ.   ಇದರ ಆಧಾರದ ಮೇಲೆ ನೋಡಿದರೆ, ರಕ್ತಹೀನತೆಯ ಆಹಾರ ಪಟ್ಟಿಯಲ್ಲಿ ಹಲಸಿನ ಹಣ್ಣುಗಳನ್ನು ಸೇರಿಸುವುದು ಪ್ರಯೋಜನಕಾರಿ.

    ಕಣ್ಣುಗಳಿಗೆ ಆರೋಗ್ಯಕರ ಪೋಷಣೆಯನ್ನು ಒದಗಿಸುತ್ತದೆ

    ವಿಟಮಿನ್ ಎ (ಬೀಟಾ-ಕ್ಯಾರೋಟಿನ್) ಯಲ್ಲಿ ಸಮೃದ್ಧವಾಗಿರುವ ಹಲಸು ನಮ್ಮ ಕಣ್ಣುಗಳಿಗೆ ಆರೋಗ್ಯಕರ ಪೋಷಣೆಯನ್ನು ಒದಗಿಸುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕಿನಿಂದ ಕಣ್ಣುಗಳನ್ನು ರಕ್ಷಿಸುತ್ತದೆ ಮತ್ತು ಹಾನಿಕಾರಕವಾದ ಸ್ವತಂತ್ರ ರಾಡಿಕಲ್ಗಳಿಂದ ಅವುಗಳನ್ನು ನಿವಾರಿಸುತ್ತದೆ. ಇದು ನೇರಳಾತೀತ ಕಿರಣಗಳಂತಹ ತೀವ್ರವಾದ ಮತ್ತು ಹಾನಿಕಾರಕ ಬೆಳಕಿನ ಅಲೆಗಳಿಂದ ಕಣ್ಣುಗಳನ್ನು ಉಳಿಸುತ್ತದೆ. ಇದು ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಪೊರೆ ಅಪಾಯವನ್ನು ಕಡಿಮೆ ಮಾಡುತ್ತದೆ.

    ಇದನ್ನೂ ಓದಿ: Skin Care: ಚರ್ಮದ ವಯಸ್ಸಾಗುವಿಕೆ ತಡೆಯಲು ಏನು ಮಾಡಬೇಕು? ಚರ್ಮ ರೋಗ ತಜ್ಞರ ಸಲಹೆ ಇಲ್ಲಿದೆ

    ಮೂಳೆಗಳನ್ನು ಬಲಪಡಿಸುತ್ತದೆ

    ಹಲಸಿನ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದೆ, ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಪೊಟ್ಯಾಸಿಯಮ್ ಮೂತ್ರಪಿಂಡಗಳ ಮೂಲಕ ಕ್ಯಾಲ್ಸಿಯಂ ನಷ್ಟವನ್ನು ಕಡಿಮೆ ಮಾಡುತ್ತದೆ. ಸಂಧಿವಾತದಂತಹ ಮೂಳೆ ಸಂಬಂಧಿತ ಅಸ್ವಸ್ಥತೆಗಳ ಲಕ್ಷಣಗಳನ್ನು ಹಲಸಿನ ಹಣ್ಣಿನ ಸೇವನೆಯಿಂದ ನಿಯಂತ್ರಿಸಬಹುದು.
    Published by:Swathi Nayak
    First published: