ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ (Carrot) ಅಗ್ರಸ್ಥಾನ ನೀಡಬಹುದು. ಕ್ಯಾರೆಟ್ ಬಣ್ಣದಲ್ಲಿ ಆಕರ್ಷಕ, ತಿನ್ನಲು ರುಚಿಕರ, ಪೋಷಕಾಂಶಗಳ ಆಗರ. ಅದನ್ನು ಇಷ್ಟಪಡಲು ಇನ್ನೇನು ಕಾರಣಬೇಕು ಅಲ್ಲವೇ? ನಮ್ಮ ಆರೋಗ್ಯ(Health) ಮತ್ತು ಸೌಂದರ್ಯಕ್ಕೆ (Beauty) ಕ್ಯಾರೆಟ್ ಸದಾ ಸಹಕಾರಿ. ಮಕ್ಕಳ ಆರೋಗ್ಯಕ್ಕಂತೂ ಕ್ಯಾರೆಟ್ ಬಹಳ ಅಗತ್ಯ. ಆದರೆ ಕ್ಯಾರೆಟ್‌ನಲ್ಲಿರುವ ಫೈಬರ್ (Fiber) ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂಯತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಅವುಗಳು ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ನೊಂದಿಗೆ ಶ್ರೀಮಂತವಾಗಿರುತ್ತದೆ. ಮುದುಕರಿಂದ ಮಕ್ಕಳ ವರೆಗೆ ಅಚ್ಚುಮೆಚ್ಚಿನ ತರಕಾರಿ ಕ್ಯಾರೆಟ್ ಬೆಳೆಯಲು ಸುಲಭ ಮತ್ತು ಆರೋಗ್ಯಕ್ಕೂ ಲಾಭದಾಯಕ. ಯಾಕಂತೀರಾ? ಇಲ್ಲಿದೆ ಒಂದಿಷ್ಟು ಮಾಹಿತಿ.
ಕ್ಯಾರೆಟ್‌ನ ನೈಸರ್ಗಿಕ ಖನಿಜಗಳು
ಸಸ್ಯ ಆಧಾರಿತ ಆಹಾರಗಳು ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ನಂಬುತ್ತಾರೆ. ಅರಲ್ಲಿ ಮುಖ್ಯವಾಗಿ ಕ್ಯಾರೆಟ್. ಕ್ಯಾರೆಟ್‌ನಲ್ಲಿ ನೈಸರ್ಗಿಕವಾಗಿ ಖನಿಜಗಳು, ವಿಟಮಿನ್‌ಗಳು, ಕರಗುವ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳು ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ
ನಿಮ್ಮೆಲ್ಲರಿಗೆ ತಿಳಿದಿರುವ ಹಾಗೆ ಕ್ಯಾರೆಟ್ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಇದು ದೃಷ್ಟಿಯನ್ನು ಸುಧಾರಿಸಲು ಮತ್ತು ದೃಷ್ಟಿ ದೋಷಗಳಿಂದ ಪಾರಾಗಲು ಇದು ಬಹಳ ಪ್ರಯೋಜನಕಾರಿ. ಮುಖ್ಯವಾಗಿ ಕ್ಯಾರೆಟ್ ನಲ್ಲಿ ಲುಟೀನ್ ಮತ್ತು ಲೈಕೋಪೀನ್ ಸಮೃದ್ಧವಾಗಿದೆ. ಬಹುತೇಕರು ರಾತ್ರಿಯ ವೇಳೆ ದೃಷ್ಟಿ ದೋಷವನ್ನು ಹೊಂದಿರುತ್ತಾರೆ.
ಈ ಸಮಸ್ಯೆಯನ್ನು ಕೂಡ ಕ್ಯಾರೆಟ್ ಸಂಪೂರ್ಣವಾಗಿ ಹೋಗಲಾಡಿಸುತ್ತದೆ.
ಅಲ್ಲದೆ, ಇದರಲ್ಲಿರುವ ವಿಟಮಿನ್ ಎ ಆರೋಗ್ಯಕರವಾದ ದೃಷ್ಟಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Betel Leaves Benefits: ಬಾಯಿ ಕೆಂಪು ಮಾಡುವ ವೀಳ್ಯದೆಲೆಯಲ್ಲಿ ಇಷ್ಟೆಲ್ಲಾ ಔಷಧೀಯ ಗುಣಗಳಿವೆಯೇ?
ಕ್ಯಾರೆಟ್ ಗಳಲ್ಲಿದೆ ಕರಗುವ ನಾರು
ಕ್ಯಾರೆಟ್ ಗಳಲ್ಲಿ ಕರಗುವ ನಾರು ಹೆಚ್ಚಿನ ಪ್ರಮಾಣದಲ್ಲಿದ್ದು ಇವುಗಳ ಸೇವನೆಯಿಂದ ಸಕ್ಕರೆ ಹಾಗೂ ಪಿಷ್ಟದ ಜೀರ್ಣಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತದೆ ಹಾಗೂ ಈ ಮೂಲಕ ರಕ್ತದಲ್ಲಿ ಸಕ್ಕರೆಯನ್ನು ನಿಧಾನವಾಗಿ ಪ್ರವಹಿಸಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲ, ಕ್ಯಾರೆಟ್ಟುಗಳಲ್ಲಿ ಉತ್ತಮ ಪ್ರಮಾಣದ ಕರಗದ ನಾರು ಸಹಾ ಇದೆ. ಇವುಗಳು ಮಲಬದ್ದತೆಯಾಗದಂತೆ ನೆರವಾಗುತ್ತವೆ ಹಾಗೂ ಕರುಳುಗಳಲ್ಲಿ ಆಹಾರದ ಚಲನೆ ಸುಲಭವಾಗಿಸಿ ಆರೋಗ್ಯ ವೃದ್ದಿಸುತ್ತವೆ. ಅಲ್ಲದೇ ಇವುಗಳು ನಿಧಾನವಾಗಿ ಸಕ್ಕರೆಯನ್ನು ರಕ್ತಕ್ಕೆ ಸೇರಿಸುವುದರಿಂದ ಇವುಗಳ ಗ್ಲೈಸೆಮಿಕ್ ಕೋಷ್ಟಕದ ಮಟ್ಟವೂ ಕಡಿಮೆಯೇ ಇದೆ.
ಕೊಲೆಸ್ಟ್ರಾಲ್‌ನ್ನು ಹೇಗೆ ಕಡಿಮೆ ಮಾಡುತ್ತದೆ
ನ್ಯೂಟ್ರಿಯೆಂಟ್ಸ್ ಸ್ಟೇಟ್ಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಕ್ಯಾರೆಟ್‌ಗಳು ಕರಗದ ಮತ್ತು ಕರಗುವ ಆಹಾರದ ಫೈಬರ್‌ನಿಂದ ತುಂಬಿರುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರಕ್ತದೊತ್ತಡ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಕ್ಯಾರೆಟ್ ವಿಟಮಿನ್ ಎ ಯಿಂದ ಕೂಡಿದೆ, ಇದು ನೈಸರ್ಗಿಕವಾಗಿ ಕಣ್ಣಿನ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಮ್ಯಾಕ್ಯುಲರ್ ಡಿಜೆನರೇಶನ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Nail Care Tips: ಅಂದದ ಉಗುರಿನ ಪಾಲನೆಗೆ ಇಲ್ಲಿದೆ ಚೆಂದದ ಟಿಪ್ಸ್ ಫಾಲೋ ಮಾಡಿ ನೋಡಿ
ಹೃದಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ
ತಜ್ಞರ ಪ್ರಕಾರ, ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ಎಂಬ ಉತ್ಕರ್ಷಣ ನಿರೋಧಕವು ದೀರ್ಘಕಾಲದ ಹೃದಯ ಕಾಯಿಲೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ, ಉತ್ಕರ್ಷಣ ನಿರೋಧಕಗಳ ಉಪಸ್ಥಿತಿಯು ಜೀವಕೋಶದ ಪುನರುತ್ಪಾದನೆಯಲ್ಲಿ ಸಹಾಯ ಮಾಡುತ್ತದೆ ಮತ್ತು ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ.
ಬೇಯಿಸಿದ ಕ್ಯಾರೆಟ್ಟುಗಳೇ ಹೆಚ್ಚು ಪೌಷ್ಟಿಕ
ಬೇಯಿಸಿದ ಕ್ಯಾರೆಟ್ಟುಗಳೇ ಹೆಚ್ಚು ಪೌಷ್ಟಿಕ ಸಾಮಾನ್ಯವಾಗಿ ಹಸಿ ತರಕಾರಿ ಹೆಚ್ಚು ಪೌಷ್ಟಿಕ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ಕ್ಯಾರೆಟ್ಟುಗಳ ಜೀವಕೋಶಗಳ ಹೊರಕೋಶ ಹೆಚ್ಚು ದೃಢವಾಗಿದ್ದು ಒಳಗಿನ ಪೋಷಕಾಂಶಗಳನ್ನು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಕ್ಯಾರೆಟ್ಟುಗಳನ್ನು ಬೇಯಿಸುವ ಮೂಲಕ ಈ ಪದರ ಮೃದುವಾಗಿ ಕರಗಿ ಹೋಗುತ್ತದೆ, ತನ್ಮೂಲಕ ಪೋಷಕಾಂಶಗಳನ್ನು ಜೀರ್ಣೀಸಿಕೊಳ್ಳಲು ಸುಲಭವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ