Immunity: ಮಳೆಗಾಲದಲ್ಲಿ ಇಮ್ಯೂನಿಟಿ ಹೆಚ್ಚಾಗಲು ತಿನ್ನಲೇಬೇಕಾದ 7 ಸೀಸನ್‌ ಹಣ್ಣುಗಳಿವು

ಈ ಮಳೆಗಾಲ ಬಂದರೆ ಸಾಕು ಅನೇಕ ರೋಗ-ರುಜಿನಗಳು ನಮ್ಮನ್ನು ಸುತ್ತುವರಿದು ಬಿಡುತ್ತವೆ. ಈ ವೈರಸ್‌ಗಳು ಸೈಲೆಂಟ್‌ ಆಗಿ ಬಂದು ನಮ್ಮ ದೇಹವನ್ನು ಸೇರಿ ಬಿಡುತ್ತವೆ. ಇದರಿಂದ ನಮ್ಮ ಆರೋಗ್ಯವು ಹದಗೆಡುತ್ತದೆ. ಹಾಗಾದರೆ ಈ ಮಳೆಗಾಲದಲ್ಲಿ ನಾವು ಹೇಗೆ ಈ ರೋಗ-ರುಜಿನಗಳಿಂದ ಪಾರಾಗಬೇಕು ಎಂಬ ಚಿಂತೆ ನಿಮಗೆ ಕಾಡುತ್ತಿದೆಯೇ, ನಾವು ಹೇಗೆ ಈ ವೈರಸ್‌ಗಳ ಜೊತೆ ಫೈಟ್‌ ಮಾಡಬೇಕು ಎಂದು ಯೋಚಿಸುತ್ತಿರುವಿರಾ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈ ಮಳೆಗಾಲ (Rainy Season) ಬಂದರೆ ಸಾಕು ಅನೇಕ ರೋಗ-ರುಜಿನಗಳು ನಮ್ಮನ್ನು ಸುತ್ತುವರಿದು ಬಿಡುತ್ತವೆ. ಈ ವೈರಸ್‌ಗಳು (Virus) ಸೈಲೆಂಟಾಗಿ ಬಂದು ನಮ್ಮ ದೇಹವನ್ನು ಸೇರಿ ಬಿಡುತ್ತವೆ. ಇದರಿಂದ ನಮ್ಮ ಆರೋಗ್ಯವು (Health) ಹದಗೆಡುತ್ತದೆ. ಹಾಗಾದರೆ ಈ ಮಳೆಗಾಲದಲ್ಲಿ ನಾವು ಹೇಗೆ ಈ ರೋಗ-ರುಜಿನಗಳಿಂದ ಪಾರಾಗಬೇಕು ಎಂಬ ಚಿಂತೆ ನಿಮಗೆ ಕಾಡುತ್ತಿದೆಯೇ, ನಾವು ಹೇಗೆ ಈ ವೈರಸ್‌ಗಳ ಜೊತೆ ಫೈಟ್‌ (Fight) ಮಾಡಬೇಕು ಎಂದು ಯೋಚಿಸುತ್ತಿರುವಿರಾ? ಈ ಮಳೆಗಾಲದಲ್ಲಿ ಹಣ್ಣುಗಳನ್ನು (Fruits) ತಾಜಾವಾಗಿ ಮತ್ತು ಸೂಕ್ತ ರೀತಿಯಲ್ಲಿ ನೀರಿನಲ್ಲಿ ತೊಳೆದು ತಿಂದರೆ ಯಾವ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ.

ತೊಳೆಯದೇ ಅಥವಾ ಬೀದಿ ಬದಿಯಲ್ಲಿ ಕತ್ತರಿಸಿ ಶೇಖರಿಸಿಟ್ಟ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ದೇಹಕ್ಕೆ ಬ್ಯಾಕ್ಟಿರಿಯಾಗಳು ಸುಲಭವಾಗಿ ಒಳಸೇರುತ್ತವೆ. ಇದರಿಂದಲೇ ಹಣ್ಣುಗಳು ಈ ಮಳೆಗಾಲದಲ್ಲಿ ಅಸುರಕ್ಷಿತ ಎಂದು ಹೇಳುತ್ತಾರೆ.

ಮಳೆಗಾಲದಲ್ಲಿ ಯಾವ ಹಣ್ಣುಗಳನ್ನು ಸೇವಿಸದರೆ ಉತ್ತಮ?
ಮಳೆಗಾಲದಲ್ಲಿ 7 ರೀತಿಯ ಸೀಸನ್‌ ಹಣ್ಣುಗಳನ್ನು ತಿನ್ನುವುದರಿಂದ ನಿಮ್ಮ ರೋಗ ನಿರೋಧಕ ಶಕ್ತಿ ಉತ್ತಮಗೊಂಡು, ನೀವು ಈ ರೋಗಗಳಿಂದ ದೂರವಿರಬಹುದು. ಹಾಗಿದ್ದರೆ ಈ ಹಣ್ಣುಗಳು ಯಾವುವು ಎಂಬ ಕುತೂಹಲ ನಿಮಗೆ ಬಂದಿರಬೇಕು ಅಲ್ವಾ, ಅವುಗಳ ಬಗ್ಗೆ ತಿಳಿಯೋಣ ಬನ್ನಿ.

1) ದಾಳಿಂಬೆ
ದಾಳಿಂಬೆಯಲ್ಲಿ ಹೇರಳವಾದ ಪೋಷಕಾಂಶಗಳು ಮತ್ತು ವೈರಸ್‌ಗಳನ್ನು ಇಲ್ಲವಾಗಿಸುವ ರೋಗ ನಿರೋಧಕ ಶಕ್ತಿ ಅಂಶಗಳು ಸಮೃದ್ಧವಾಗಿವೆ ಎಂದು ಹೇಳಬಹುದು. ಇದರಿಂದ ಅನಾರೋಗ್ಯವನ್ನು ತಡೆಯಬಹುದು ಮತ್ತು ಇದು ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ದಾಳಿಂಬೆ ಹಣ್ಣಿನಲ್ಲಿರುವ ವಿಟಮಿನ್ ಬಿ ಕೆಂಪು ರಕ್ತ ಕಣಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಲಭಗೊಳಿಸುತ್ತದೆ.

2) ಲಿಚಿ ಹಣ್ಣು
ಲಿಚಿ ಹಣ್ಣುಗಳಲ್ಲಿ ನಾರಿನಾಂಶವು ಸಮೃದ್ಧವಾಗಿದೆ, ಇದು ಅಸಿಡಿಟಿ ಮತ್ತು ಅಜೀರ್ಣದಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ನಮ್ಮನ್ನು ಕಾಪಾಡುತ್ತವೆ. ಲಿಚಿಯಲ್ಲಿನ ವಿಟಮಿನ್ ಸಿ ಸಾಮಾನ್ಯ ಶೀತವನ್ನು ಕೂಡ ಕಡಿಮೆ ಮಾಡುತ್ತದೆ. ಮುಖದಲ್ಲಿನ ಮೊಡವೆ ಮತ್ತು ಕಲೆಗಳಂತಹ ಮಾನ್ಸೂನ್ ಚರ್ಮದ ಸಮಸ್ಯೆಗಳ ವಿರುದ್ಧವೂ ಈ ಹಣ್ಣು ಹೋರಾಡುವಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ:  Cervical Cancer: ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್! ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ

3) ಪೇರಲ ಹಣ್ಣು
ಈ ಪೇರಲ ಹಣ್ಣುಗಳನ್ನು ಮಾನ್ಸೂನ್‌ ಡಯೆಟ್‌ ಹಣ್ಣು ಎಂದು ಕರೆಯುತ್ತಾರೆ. ಏಕೆಂದರೆ ಈ ಪೇರಲ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪ್ರಮುಖ ಪೋಷಕಾಂಶವಾಗಿದೆ. ಒಂದು ಪೇರಲ ಹಣ್ಣು ನಿಮ್ಮ ದಿನನಿತ್ಯದ ವಿಟಮಿನ್ ಸಿ ಪೋಷಕಾಂಶದ ಸುಮಾರು 12% ಅನ್ನು ಹೊಂದಿರುವುದರಿಂದ ಮಳೆಗಾಲದಲ್ಲಿ ಇದು ವಿಶೇಷವಾಗಿ ವೈರಾಣುಗಳಿಂದ ಹೋರಾಡಿ ಉತ್ತಮ ಆರೋಗ್ಯ ಪಡೆಯಲು ಸಹಾಯಕವಾಗಿದೆ.

4) ಸೇಬುಗಳು
ಸೇಬುಗಳು ವಿಟಮಿನ್ ಎ, ಬಿ 1, ಬಿ 2 ಮತ್ತು ಸಿ ಮತ್ತು ಫಾಸ್ಪರಸ್‌, ಅಯೋಡಿನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದಂತಹ ಖನಿಜಗಳ ಸಮೃದ್ಧ ಮೂಲವಾಗಿದೆ. ಮುಖ್ಯವಾಗಿ, ಈ ಹಣ್ಣನ್ನು ನೀವು ವರ್ಷಪೂರ್ತಿ ತಿಂದರೂ ಇದು ನಿಮ್ಮ ದೇಹವನ್ನು ಆರೋಗ್ಯವಾಗಿ ಇರಿಸುತ್ತದೆ.

5) ನೇರಳೆ ಅಥವಾ ಜಾಮೂನ್
ಈ ನೇರಳೆ ಹಣ್ಣುಗಳು ದೇಹದಲ್ಲಿ ಹೆಚ್ಚಿನ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಿದ್ದರೆ, ಅದನ್ನು ಕಡಿಮೆ ಮಾಡಲು ಸೂಕ್ತ ರೀತಿಯಲ್ಲಿ ಸಹಾಯ ಮಾಡುತ್ತವೆ. ಏಕೆಂದರೆ ಈ ಹಣ್ಣುಗಳು ಪೊಟ್ಯಾಸಿಯಮ್, ಫೋಲೇಟ್ ಮತ್ತು ಕಬ್ಬಿಣದಂತಹ ವಿಟಮಿನ್‌ ಮತ್ತು ಪೋಷಕಾಂಶಗಳನ್ನು ಹೊಂದಿರುತ್ತವೆ.

6) ಪ್ಲಮ್‌ ಹಣ್ಣು
ಈ ಪ್ಲಮ್ ಹಣ್ಣು ನಿಮ್ಮ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಮತ್ತು ಮಲಬದ್ಧತೆಯನ್ನು ತಡೆಯುವಲ್ಲಿ ಸಹಾಯಕಾರಿ. ಏಕೆಂದರೆ ಪ್ಲಮ್‌ ಹಣ್ಣಿನಲ್ಲಿ ಫೈಬರ್‌, ಕಾಪರ್‌, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಕೆ ಸಮೃದ್ಧವಾಗಿವೆ.

7) ಚೆರ್ರಿ ಹಣ್ಣು
ಈ ಚೆರ್ರಿಗಳು ಆಂಟಿಆಕ್ಸಿಡೆಂಟ್‌ ಅಂಶ ಸಮೃದ್ಧವಾಗಿರುವ ಮಾನ್ಸೂನ್‌ ಸೀಸನ್‌ನ ಹಣ್ಣು ಆಗಿದ್ದು, ಇದು ಸೋಂಕುಗಳ ವಿರುದ್ಧ ಹೋರಾಡಲು ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:  Health Tips: ಮಳೆಗಾಲದ ರೋಗ-ರುಜಿನಗಳನ್ನು ತಪ್ಪಿಸಲು ಈ 7 ಆರೋಗ್ಯ ಸಲಹೆಗಳನ್ನು ಪಾಲಿಸಿ

ಈ 7 ಸೀಸನ್‌ ಹಣ್ಣುಗಳನ್ನು ನೀವು ಹಾಗೆಯೇ ಸೇವಿಸಬಹುದು ಅಥವಾ ಜ್ಯೂಸ್‌ ಮಾಡಿ ಸಹ ಕುಡಿಯಬಹುದು. ಈ ಮಾನ್ಸೂನ್‌ನಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ರಕ್ಷಿಸಿಕೊಳ್ಳಬೇಕೆಂದರೆ ಮೊದಲು ನೀವು ನಿಮ್ಮ ರೋಗನಿರೋಧಕ ಶಕ್ತಿಯನ್ನು ಸುಧಾರಿಸಿಕೊಳ್ಳುವುದು ಉತ್ತಮ. ಆದ್ದರಿಂದ ಈ ಹಣ್ಣುಗಳನ್ನು ಸೇವಿಸಿ ರೋಗದಿಂದ ಮುಕ್ತಿ ಪಡೆಯಿರಿ ಹಾಗೆ ಈ ಮಾನ್ಸೂನ್ ಅನ್ನು ಎಂಜಾಯ್ ಮಾಡಿ.
Published by:Ashwini Prabhu
First published: