ಲೈಂಗಿಕ ಕ್ರಿಯೆ ನಡೆಸುವ ಮುನ್ನ ಬೆಡ್​ನಲ್ಲಿ ಪುರುಷರು ಈ ಐದು ಅಂಶ ಗಮನಿಸಲೇಬೇಕು!

ಸೆಕ್ಸ್​ ವಿಚಾರವನ್ನು ಕೆಲವರು ತುಂಬಾ ಮಂಡಿವಂತಿಕೆಯಿಂದ ಕಾಣುತ್ತಾರೆ. ಆರಂಭದಲ್ಲಿ ಹೆಂಡತಿ ಜೊತೆ ಈ ವಿಚಾರವನ್ನು ಮುಕ್ತವಾಗಿ ಮಾತನಾಡಲು ಅಂಜುವ ಅನೇಕ ಪುರುಷರಿದ್ದಾರೆ. ಆದರೆ, ಅದು ಸರಿ ಅಲ್ಲ ಎನ್ನುತ್ತಾರೆ ತಜ್ಞರು.

news18
Updated:September 6, 2019, 10:54 PM IST
ಲೈಂಗಿಕ ಕ್ರಿಯೆ ನಡೆಸುವ ಮುನ್ನ ಬೆಡ್​ನಲ್ಲಿ ಪುರುಷರು ಈ ಐದು ಅಂಶ ಗಮನಿಸಲೇಬೇಕು!
ಸಾಂದರ್ಭಿಕ ಚಿತ್ರ
  • News18
  • Last Updated: September 6, 2019, 10:54 PM IST
  • Share this:
ಭೂಮಿಯ ಮೇಲೆ ಜನಿಸಿದ ಪ್ರತಿ ಜೀವಿಯೂ ಲೈಂಗಿಕ ಸಂಪರ್ಕ ನಡೆಸುತ್ತದೆ. ಇದಕ್ಕೆ ಮನುಷ್ಯ ಜೀವಿ ಕೂಡ ಹೊರತಾಗಿಲ್ಲ. ಸಂತಾನ ಮುಂದುವರಿಸಲು, ದೈಹಿಕ ಸುಖಕ್ಕಾಗಿ ಪ್ರತಿ ಮನುಷ್ಯನೂ ಸೆಕ್ಸ್​ ಮಾಡುತ್ತಾನೆ. ಲೈಂಗಿಕ ಜೀವನ ಸರಿ ಇಲ್ಲದೆ ಮದುವೆ ಮುರಿದುಬಿದ್ದ ಸಾಕಷ್ಟು ಉದಾಹರಣೆಗಳಿವೆ.

ಸೆಕ್ಸ್​ ವಿಚಾರವನ್ನು ಕೆಲವರು ತುಂಬಾ ಮಂಡಿವಂತಿಕೆಯಿಂದ ಕಾಣುತ್ತಾರೆ. ಆರಂಭದಲ್ಲಿ ಹೆಂಡತಿ ಜೊತೆ ಈ ವಿಚಾರವನ್ನು ಮುಕ್ತವಾಗಿ ಮಾತನಾಡಲು ಅಂಜುವ ಅನೇಕ ಪುರುಷರಿದ್ದಾರೆ. ಆದರೆ, ಅದು ಸರಿ ಅಲ್ಲ ಎನ್ನುತ್ತಾರೆ ತಜ್ಞರು. ಸೆಕ್ಸ್​ ಮಾಡುವ ಮುನ್ನ ಪುರುಷರು ಕೆಲ ಅಂಶಗಳನ್ನು ಗಮನಿಸಲೇಬೇಕಾಗುತ್ತದೆ. ಲೈಂಗಿಕ ಸಂಪರ್ಕ ನಡೆಸುವ ಮುನ್ನ ಈ ವಿಚಾರವನ್ನು ಗಮನಿಸಿದರೆ ನಿಮ್ಮ ಲೈಂಗಿಕ ಜೀವನ ಮತ್ತಷ್ಟು ಖುಷಿಯಿಂದ ಇರಲಿದೆ. ಅದಕ್ಕೆ ಇಲ್ಲಿವೆ ಟಿಪ್ಸ್​.ನೇರವಾಗಿ ಸೆಕ್ಸ್​​ಗೆ ಇಳಿಯಬೇಡಿ

ಸೆಕ್ಸ್​ ಎಂಬುದು ಪ್ರತಿ ಜೀವಿಯ ಅಗತ್ಯತೆಗಳಲ್ಲಿ ಒಂದು. ಆದರೆ ಗಂಡನಾದವನು ಸೆಕ್ಸ್​ ಮಾಡುವ ಉದ್ದೇಶದಿಂದ  ಹಾಸಿಗೆ ಏರುತ್ತಿದ್ದಾನೆ ಎನ್ನುವ ಭಾವನೆ ನಿಮ್ಮ ಹೆಂಡತಿಗೆ ಬರಬಾರದು. ನೀವು ಹಾಸಿಗೆ ಏರಿದ ತಕ್ಷಣ ಅವಳನ್ನು ಯತೇಚ್ಛವಾಗಿ ಮುದ್ದಿಸಬೇಕು. ಈ ಉನ್ಮಾದದಲ್ಲೇ ಇಬ್ಬರೂ ಲೈಂಗಿಕ ಸಂಪರ್ಕ ಹೊಂದಬೇಕು. ಅಂದಾಗ ಮಾತ್ರ ಪುರುಷ ಲೈಂಗಿಕ ಜೀವನದಲ್ಲಿ ಯಶಸ್ಸು ಹೊಂದುತ್ತಾನೆ ಎಂಬುದು ತಜ್ಞರ ಸೂಚನೆ.

ಪರಾಕಾಷ್ಠೆ ತಲುಪಿ

ಸೆಕ್ಸ್​​ ಮಾಡುವಾಗ ಮಹಿಳೆಯನ್ನು ಪರಾಕಾಷ್ಠೆಗೆ ತಲುಪಿಸುವುದು ಪುರುಷನಗಿರುವ ಸವಾಲು ಎಂಬುದು ತಜ್ಞರ ಅಭಿಪ್ರಾಯ. ಕೆಲವೊಮ್ಮೆ ಮಹಿಳೆಯರು ಪರಾಕಾಷ್ಠೆ ತಲುಪಿದ ರೀತಿಯಲ್ಲೇ ನಟಿಸುತ್ತಾರೆ. ನಂತರ ಗೆಳತಿಯರ ಬಳಿ ಈ ಬಗ್ಗೆ ಹೇಳಿಕೊಂಡು ನಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಹೆಂಡತಿ ಪರಾಕಾಷ್ಠೆ ತಲುಪುವಂತೆ ನೀವು ನೋಡಿಕೊಳ್ಳಬೇಕಾಗುತ್ತದೆ!

ಗುಪ್ತಾಂಗ ಸ್ವಚ್ಛವಾಗಿರಲಿ!ನೀವು ಸೆಕ್ಸ್​ ಮಾಡುವ ವೇಳೆ ನಿಮ್ಮ ಗುಪ್ತಾಂಗ ಸ್ವಚ್ಛವಾಗಿಟ್ಟುಕೊಳ್ಳಲೇಬೇಕು ಎಂಬುದು ತಜ್ಞರ ಅಭಿಪ್ರಾಯ. ಲೈಂಗಿಕ ಸಂಪರ್ಕದ ವೇಳೆ ಮಹಿಳೆಯರು ಓರಲ್​ ಸೆಕ್ಸ್​​ಗೂ ಹೆಚ್ಚಿನ ಆದ್ಯತೆ ನೀಡುತ್ತಾರೆ. ಹಾಗಾಗಿ, ಈ ಸಂದರ್ಭದಲ್ಲಿ ಗುಪ್ತಾಂಗ ಸ್ವಚ್ಛವಾಗಿರದಿದ್ದರೆ ಹೆಂಡತಿಗೆ ಸೆಕ್ಸ್​ ಬಗ್ಗೆ ಅಸಹ್ಯ ಹುಟ್ಟ ಬಹುದು!

ಮುದ್ದಾಡಿ

ಸೆಕ್ಸ್​ ಮಾಡುವ ವೇಳೆ ನೀವು ಹೆಂಡತಿಯನ್ನು ಮುದ್ದಿಸಿ. ಅವಳನ್ನು ಎಷ್ಟಾಗುತ್ತದೆಯೋ ಅಷ್ಟು ಹೊಗಳಿ. ಅವಳು ಕೇವಲ ದೈಹಿಕವಾಗಿ ಮಾತ್ರವಲ್ಲ ಮಾನಸಿಕವಾಗಿಯೂ ಸಂತೃಪ್ತಿ ಹೊಂದುವಂತೆ ನೋಡಿಕೊಳ್ಳಿ.

ಸೆಕ್ಸ್​ ಆದಮೇಲೆ ಸುಮ್ಮನೆ ಕೂರಬೇಡಿ!

ಲೈಂಗಿಕ ಕ್ರಿಯೆ ಮುಗಿದ ನಂತರ ನೀವು ಬೆಡ್​ನಿಂದ ಎದ್ದು ದೂರ ಹೋಗುತ್ತೀರಾ? ಸಿನಿಮಾ ನೋಡುತ್ತಾ ಕೂತು ಬಿಡುತ್ತೀರಾ? ಹೀಗೆ ಮಾಡಲೇಬಾರದು ಎನ್ನುತ್ತಾರೆ ವೈದ್ಯರು. ಸೆಕ್ಸ್​ ಮಾಡುವಾಗ ನೀವು ನಿಮ್ಮ ಸಂಗಾತಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಿದ್ದರೋ ಅಷ್ಟೇ ಪ್ರಾಮುಖ್ಯತೆ ಸೆಕ್ಸ್​​ ಮಾಡಿದ ನಂತರವೂ ನೀಡಿ! ಅಂದಾಗ ನಿಮ್ಮ ಲೈಂಗಿಕ ಜೀವನ ತುಂಬಾ ಉತ್ತಮವಾಗಿರುತ್ತದೆ.

Published by: Rajesh Duggumane
First published: August 21, 2019, 1:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading