Diabetes Control: ಮಧುಮೇಹದ ನಿರ್ವಹಣೆಗೆ 5 ಆರೋಗ್ಯಕರ ಸಲಹೆಗಳು ನಿಮಗಾಗಿ

ದೇಶದಲ್ಲಿ ಅತ್ಯಧಿಕ ಪ್ರಚಲಿತದಲ್ಲಿರುವ ದೀರ್ಘಕಾಲಿಕ ಕಾಯಿಲೆಗಳ ಪಟ್ಟಿಗೆ ಮಧುಮೇಹವೂ ಕೂಡ ಸೇರಿದೆ. ಹಾಗಾಗಿ, ಅದರ ನಿರ್ವಹಣೆ ಮತ್ತು ಆ ಕಾಯಿಲೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಕಪೀವಾದಲ್ಲಿ ಆರ್ ಅಂಡ್ ಡಿ ಮುಖ್ಯಸ್ಥೆ ಆಗಿರುವ ಡಾ. ಕೃತಿ ಸೋನಿ ಅವರು, ಮಧುಮೇಹವನ್ನು ನಿರ್ವಹಿಸಲು 5 ಆರೋಗ್ಯಕರ ಮಾರ್ಗಗಳನ್ನು ತಿಳಿಸಿದ್ದಾರೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ನಮ್ಮ ನಿತ್ಯದ ಬದುಕಿನಲ್ಲಿ, ತಮಗೆ ಡಯಾಬಿಟೀಸ್ (Diabetes) ಇದೆ ಎಂದು ಹೇಳುವ ಒಬ್ಬರಾದರೂ ಸಿಕ್ಕೇ ಸಿಗುತ್ತಾರೆ. ಏಕೆಂದರೆ, ಎಲ್ಲಾ ಕಡೆ ಅತ್ಯಂತ ವ್ಯಾಪಕವಾಗಿ ಹರಡಿರುವ ಕೆಲವು ಆರೋಗ್ಯ ಸಮಸ್ಯೆಗಳಲ್ಲಿ (Health Problem) ಡಯಾಬಿಟೀಸ್ ಕೂಡ ಒಂದು. ಪ್ರಪಂಚದಾದ್ಯಂತ ಸುಮಾರು 400 ಮಿಲಿಯನ್ ಜನರು (People) ಈ ಕಾಯಿಲೆಯಿಂದ ನರಳುತ್ತಿದ್ದಾರೆ. ದೇಶದಲ್ಲಿ ಅತ್ಯಧಿಕ ಪ್ರಚಲಿತದಲ್ಲಿರುವ ದೀರ್ಘಕಾಲಿಕ ಕಾಯಿಲೆಗಳ ಪಟ್ಟಿಗೆ ಮಧುಮೇಹವೂ ಕೂಡ ಸೇರಿದೆ. ಹಾಗಾಗಿ, ಅದರ ನಿರ್ವಹಣೆ ಮತ್ತು ಆ ಕಾಯಿಲೆಯ (Disease) ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿದೆ. ಕಪೀವಾದಲ್ಲಿ ಆರ್ ಅಂಡ್ ಡಿ ಮುಖ್ಯಸ್ಥೆ ಆಗಿರುವ ಡಾ. ಕೃತಿ ಸೋನಿ ಅವರು, ಮಧುಮೇಹವನ್ನು ನಿರ್ವಹಿಸಲು 5 ಆರೋಗ್ಯಕರ ಮಾರ್ಗಗಳನ್ನು ತಿಳಿಸಿದ್ದಾರೆ.

1. ಆಯುರ್ವೇದ ಜ್ಯೂಸ್‍ಗಳು
ಅಧಿಕೃತ ಗಿಡಮೂಲಿಕೆಗಳ ಮಿಶ್ರಣವನ್ನು ಹೊಂದಿರುವ ಆಯುರ್ವೇದ ಗಿಡಮೂಲಿಕೆಗಳು ಮಧುವೇಹವನ್ನು ನೈಸರ್ಗಿಕವಾಗಿ ನಿರ್ವಹಣೆ ಮಾಡಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿ, ನೇರಳೆ ಹಣ್ಣಿನ ಬೀಜಗಳು ಮತ್ತು ಹಾಗಲಕಾಯಿ ರಸವನ್ನು ಹೊಂದಿರುವ ಜ್ಯೂಸ್‍ಗಳು ರಕ್ತದ ಸಕ್ಕರೆ ಮಟ್ಟವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತವೆ ಎಂದು ಪರಿಗಣಿಸಲ್ಪಟ್ಟಿವೆ.

ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸುವುದರ ಜೊತೆಗೆ, ಅವು ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ, ಕಾರ್ಬೋಹೈಡ್ರೇಟ್ ಚಯಾಪಚಯವನ್ನು ನಿಯಂತ್ರಿಸುತ್ತದೆ ಮತ್ತು ಒಟ್ಟಾರೆ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಅದೇನೇ ಇದ್ದರೂ, ಆಯುರ್ವೇದ ವೈದ್ಯರ ಜೊತೆ ಸಮಾಲೋಚನೆ ನಡೆಸಿದ ಬಳಿಕಷ್ಟೇ ಈ ಜ್ಯೂಸ್‍ಗಳನ್ನು ಸೇವಿಸಬೇಕು ಎಂಬುದನ್ನು ನೀವು ನೆನಪಿನಲ್ಲಿಡಿ.

2. ಆರೋಗ್ಯಕರ ತೂಕದ ನಿರ್ವಹಣೆ
ಟೈಪ್ -2 ಮಧುಮೇಹ ಹೊಂದಿರುವವರು ಆರೋಗ್ಯಕರ ತೂಕವನ್ನು ನಿರ್ವಹಿಸುವುದು ಬಹಳ ಮುಖ್ಯ. ಪೂರ್ವ ಮಧುಮೇಹ ಹೊಂದಿರುವ ಜನರು ಕೂಡ ಆರೋಗ್ಯಕರ ತೂಕವನ್ನು ಕಾಪಾಡಿ ಇಟ್ಟುಕೊಂಡರೆ, ಅವರು ಆ ರೋಗದ ಬೆಳವಣಿಗೆಯನ್ನು ತಡೆಯಲು ಸಹಾಯವಾಗುತ್ತದೆ. ತೂಕ ಕಡಿಮೆ ಮಾಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗುತ್ತದೆ ಮತ್ತು ಆ ಮೂಲಕ ಮಧುಮೇಹದ ಲಕ್ಷಣಗಳನ್ನು ತಗ್ಗಿಸಿಕೊಳ್ಳಬಹುದು.

ಇದನ್ನೂ ಓದಿ: Heart Attack: 50 ವರ್ಷದವರಿಗೆ ಹಾರ್ಟ್ ಅಟ್ಯಾಕ್ ಅಪಾಯ ಎದುರಾಗೋದು ಹೇಗೆ?

3. ಸರಿಯಾಗಿ ನಿದ್ರೆ ಮಾಡುವುದು
ಟೈಪ್ 2 ಮಧುಮೇಹ ಹೊಂದಿರುವ ಇಬ್ಬರಲ್ಲಿ, ಒಬ್ಬರಾದರೂ ನಿದ್ರೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಅಸ್ಥಿರ ರಕ್ತ ಸಕ್ಕರೆ ಮಟ್ಟಗಳು ಮತ್ತು ಮಧುಮೇಹ ಸಂಬಂಧಿತ ರೋಗ ಲಕ್ಷಣಗಳೇ ಇದಕ್ಕೆ ಕಾರಣವಿರುತ್ತದೆ. ಒಂದು ನಿಯಮಿತ ನಿದ್ರಾ ಸಮಯವನ್ನು ಅನುಸರಿಸುವುದು ಮಧುಮೇಹಿಗಳಿಗೆ ಹೆಚ್ಚು ಲಾಭದಾಯಕವಾಗಿ ಪರಿಣಮಿಸುತ್ತದೆ.

ಅನಿಯಮಿತ ನಿದ್ರೆಯ ಅಭ್ಯಾಸವನ್ನು ಹೊಂದಿರುವುದು ಮಧುಮೇಹಿಗಳಿಗೆ ಒಳ್ಳೆಯದಲ್ಲ ಎಂಬುವುದು ಅಧ್ಯಯನದಿಂದ ತಿಳಿದು ಬಂದಿದೆ. ಹಾಗಾಗಿ, ನಿತ್ಯವೂ 8 ಗಂಟೆಗಳ ಕಾಲ ನಿದ್ರಿಸುವುದನ್ನು ಖಚಿತ ಪಡಿಸಿಕೊಳ್ಳಿ.

4. ಆರೋಗ್ಯಕರ ಆಹಾರದ ಸೇವನೆ
ಆರೋಗ್ಯಕರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಪ್ರತಿಯೊಬ್ಬರಿಗೂ ಲಾಭದಾಯಕ. ಆದರೆ ಮಧುಮೇಹಿಗಳ ಆರೋಗ್ಯದ ವಿಷಯದಲ್ಲಂತೂ ಇದು ತುಂಬಾ ಪರಿಣಾಮಕಾರಿಯಾಗಿರುತ್ತದೆ. ಆಹಾರದ ಬದಲಾವಣೆಗಳು, ಕಡಿಮೆ ಗ್ಲೈಸಮಿಕ್ ಸೂಚ್ಯಾಂಕದೊಂದಿಗೆ ಆಹಾರವನ್ನು ಸೇವಿಸುವುದನ್ನು ಒಳಗೊಂಡಿರುತ್ತದೆ. ಆರೋಗ್ಯಕರ ಆಹಾರ ಪದ್ಧತಿಯು ಧಾನ್ಯಗಳು ಮತ್ತು ಆರೋಗ್ಯಕರ ಕೊಬ್ಬನ್ನು ಒಳಗೊಂಡಿರುತ್ತದೆ. ಆದರೆ ಮಧುಮೇಹಿಗಳು ಸಂಸ್ಕರಿಸಿದ ಸಕ್ಕರೆ ಪಾನೀಯಗಳು ಮತ್ತು ಕೆಂಪು ಮಾಂಸದಿಂದ ದೂರ ಇರಬೇಕು.

ಇದನ್ನೂ ಓದಿ: Cervical Cancer: ಮಹಿಳೆಯರನ್ನು ಸಾವಿನ ಕೂಪಕ್ಕೆ ತಳ್ಳುವ ಗರ್ಭಕಂಠದ ಕ್ಯಾನ್ಸರ್! ಲಕ್ಷಣಗಳ ಬಗ್ಗೆ ಎಚ್ಚರಿಕೆ ವಹಿಸಿ

5. ನಿತ್ಯ ವ್ಯಾಯಾಮ
ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ನಿತ್ಯದ ವ್ಯಾಯಾಮ ಅಗತ್ಯ. ನಮ್ಮ ಈ ಬಿಡುವಿಲ್ಲದ ಮತ್ತು ಒತ್ತಡದ ಜೀವನದಲ್ಲಿ, ಏಷ್ಟೇ ಕಷ್ಟವಾಗಲಿ, ನಿತ್ಯವೂ ವ್ಯಾಯಾಮ ಮಾಡುವುದು ಅಥವಾ ಒಂದು ಗಂಟೆಯ ಕಾಲ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಬಹಳ ಅಗತ್ಯ. ಹೀಗೆ ಮಾಡುವುದರಿಂದ ಮಧುಮೇಹದ ಆರಂಭಿಕ ಆಕ್ರಮವನ್ನು ನಿಧಾನಗೊಳಿಸಲು ಸಹಾಯವಾಗುತ್ತದೆ. ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮುಂತಾದ ಆರೋಗ್ಯ ಸಮಸ್ಯೆಗಳು ಬಾರದಂತೆ ತಡೆಯಲು ನಿತ್ಯವೂ ವ್ಯಾಯಾಮ ಮಾಡುವುದು ಬಹಳ ಅಗತ್ಯ.
Published by:Ashwini Prabhu
First published: