• Home
  • »
  • News
  • »
  • lifestyle
  • »
  • Anemia Symptoms: ರಕ್ತಹೀನತೆ ಬಗ್ಗೆ ನಿಮಗೆಷ್ಟು ಗೊತ್ತು? ಅನಿಮಿಯದ ಲಕ್ಷಣಗಳಿವು

Anemia Symptoms: ರಕ್ತಹೀನತೆ ಬಗ್ಗೆ ನಿಮಗೆಷ್ಟು ಗೊತ್ತು? ಅನಿಮಿಯದ ಲಕ್ಷಣಗಳಿವು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Symptoms of Anemia: ರಕ್ತಹೀನತೆ ಎಂಬುದು ಆನುವಂಶಿಕವಾಗಿ ನಿಮ್ಮ ಕುಟುಂಬದಲ್ಲಿದ್ದರೆ ಮಗುವನ್ನು ಹೊಂದುವ ಮೊದಲು ನೀವು ಆನುವಂಶಿಕ ಸಲಹೆಯನ್ನು ವೈದ್ಯರಿಂದ ಪಡೆಯುವುದು ಉತ್ತಮ.

  • Share this:

ಅನೆಮಿಯಾ (Anemia) ಎಂದು ಕರೆಯಲಾಗುವ ರಕ್ತಹೀನತೆಯು ಒಂದು ಆರೋಗ್ಯಕ್ಕೆ(Health Care)  ಸಂಬಂಧಿಸಿದ ಸಮಸ್ಯೆಯಾಗಿದೆ. ನಮಗೆ ಈಗಾಗಲೇ ಗೊತ್ತಿರುವಂತೆ ರಕ್ತದಲ್ಲಿ ಕೆಂಪು ಹಾಗೂ ಬಿಳಿ ರಕ್ತಕಣಗಳಿರುತ್ತವೆ. ಅದರಲ್ಲೂ ವಿಶೇಷವಗಿ ಕೆಂಪು ರಕ್ತ ಕಣಗಳ (Blood) ಜವಾಬ್ದಾರಿ ಮನುಷ್ಯನ ದೇಹದೊಳಗಿರುವ ಅಂಗಾಂಶಗಳಿಗೆ ಅವಶ್ಯಕವಾಗಿ ಬೇಕಾಗಿರುವ ಆಮ್ಲಜನಕವನ್ನು ಸರಬರಾಜು ಮಾಡುವುದಾಗಿದೆ. ಹೀಗೆ ದೇಹದ ಅಂಗಾಂಶಗಳಿಗೆ ಸಾಕಷ್ಟು ಆಮ್ಲಜನಕವನ್ನು (Oxygen) ಸಾಗಿಸಲು ಬೇಕಾದ ಸಾಕಷ್ಟು ಆರೋಗ್ಯಕರ ಕೆಂಪು ರಕ್ತ ಕಣಗಳ ಕೊರತೆಯಾಗಿರುವ ಸ್ಥಿತಿಯನ್ನೇ ರಕ್ತಹೀನತೆ ಎಂದು ಕರೆಯಲಾಗುತ್ತದೆ. ಕಡಿಮೆ ಹಿಮೋಗ್ಲೋಬಿನ್ ಎಂದೂ ಕರೆಯಲ್ಪಡುವ ರಕ್ತಹೀನತೆ ಸ್ಥಿತಿ ಬಂದಾಗ ದಣಿವು ಮತ್ತು ದುರ್ಬಲತೆ ಉಂಟಾಗುತ್ತದೆ.


ಹಾಗೆ ನೋಡಿದರೆ ರಕ್ತಹೀನತೆಯಲ್ಲಿ ಹಲವು ರೂಪಗಳಿದ್ದು ಪ್ರತಿಯೊಂದೂ ರೂಪವು ತನ್ನದೇ ಆದ ಕಾರಣವನ್ನು ಹೊಂದಿದೆ. ರಕ್ತಹೀನತೆ ತಾತ್ಕಾಲಿಕ ಅಥವಾ ದೀರ್ಘಾವಧಿಯದ್ದಾಗಿರಬಹುದು ಮತ್ತು ಸೌಮ್ಯದಿಂದ ಹಿಡಿದು ತೀವ್ರತರವಾದ  ಸ್ಥಿತಿಯವರೆಗೂ ಇರಬಹುದು. ಹೆಚ್ಚಿನ ಸಂದರ್ಭಗಳಲ್ಲಿ, ರಕ್ತಹೀನತೆ ಒಂದಕ್ಕಿಂತ ಹೆಚ್ಚು ಕಾರಣಗಳನ್ನು ಹೊಂದಿರುತ್ತದೆ. ನಿಮಗೆ ರಕ್ತಹೀನತೆ ಇದೆ ಎಂದು ನೀವು ಅನುಮಾನಿಸಿದರೆ ಕೂಡಲೇ ನಿಮ್ಮ ವೈದ್ಯರನ್ನು ಭೇಟಿ ಮಾಡಿ. ಇದು ಗಂಭೀರ ಕಾಯಿಲೆಯ ಎಚ್ಚರಿಕೆಯ ಸಂಕೇತವಾಗಿರಬಹುದು.


ಕಾರಣವನ್ನು ಅವಲಂಬಿಸಿರುವ ರಕ್ತಹೀನತೆಯ ಚಿಕಿತ್ಸೆಗಳು ಪೂರಕಗಳನ್ನು ತೆಗೆದುಕೊಳ್ಳುವುದರಿಂದ ಹಿಡಿದು ಹಲವು ವೈದ್ಯಕೀಯ ವಿಧಾನಗಳನ್ನು ಒಳಗೊಂಡಿರುತ್ತವೆ. ಆರೋಗ್ಯಕರ, ವೈವಿಧ್ಯಮಯ ಆಹಾರವನ್ನು ಸೇವಿಸುವ ಮೂಲಕ ನೀವು ಕೆಲವು ರೀತಿಯ ರಕ್ತಹೀನತೆಯನ್ನು ನಿಯಂತ್ರಿಸಲು ಸಾಧ್ಯವಾಗಬಹುದು.


ರಕ್ತಹೀನತೆಯ ಲಕ್ಷಣಗಳು


ರಕ್ತಹೀನತೆಯ ಲಕ್ಷಣಗಳು ಸಾಮಾನ್ಯವಾಗಿ ರಕ್ತಹೀನತೆಯ ಪ್ರಕಾರ, ಅದು ಉಂಟಾಗಿರುವುದಕ್ಕೆ ಕಾರಣ, ಅದರ ತೀವ್ರತೆ ಮತ್ತು ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಾದ ರಕ್ತಸ್ರಾವ, ಹುಣ್ಣುಗಳು, ಮುಟ್ಟಿನ ಸಮಸ್ಯೆಗಳು ಅಥವಾ ಕ್ಯಾನ್ಸರ್‌ ಮುಂತಾದವುಗಳಿಗೆ ಅನುಗುಣವಾಗಿ ಬದಲಾಗುತ್ತವೆ. ಆ ಸಮಸ್ಯೆಗಳ ನಿರ್ದಿಷ್ಟ ಲಕ್ಷಣಗಳನ್ನು ಮೊದಲು ಗಮನಿಸಬಹುದು. 


ದೇಹವು ಆರಂಭಿಕ ಹಂತದಲ್ಲಿ ರಕ್ತಹೀನತೆ ಉಂಟಾದಾಗ ಅದನ್ನು ಎದುರಿಸುವ ಅಥವಾ ಸರಿದೂಗಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದೆ. ನಿಮ್ಮ ರಕ್ತಹೀನತೆ ಸೌಮ್ಯವಾಗಿದ್ದರೆ ಅಥವಾ ದೀರ್ಘಕಾಲದವರೆಗೆ ಅಭಿವೃದ್ಧಿಗೊಂಡಿದ್ದರೆ, ನೀವು ಯಾವುದೇ ರೋಗಲಕ್ಷಣಗಳನ್ನು ಗಮನಿಸದೇ ಇರಬಹುದು. 


ಅನೇಕ ರೀತಿಯ ರಕ್ತಹೀನತೆ ಸಾಮಾನ್ಯವಾದ ಈ ಕೆಳಗೆ ನೀಡಿರುವ ರೋಗಲಕ್ಷಣಗಳನ್ನು ಒಳಗೊಂಡಿರುತ್ತವೆ:


ಸುಲಭ ಆಯಾಸ ಮತ್ತು ಶಕ್ತಿಯ ನಷ್ಟ : ರಕ್ತಹೀನತೆಯಿಂದ ಬಳಲುವವರು ಸಾಮಾನ್ಯದವರಿಗಿಂತ ಬಹು ಬೇಗನೆ ದಣಿವು ಅನುಭವಿಸುತ್ತಾರೆ, ಅವರಲ್ಲಿ ಶಕ್ತಿಯ ನಷ್ಟ ಉಂಟಾಗಿ ದೌರ್ಬಲ್ಯತೆಯನ್ನು ಅನುಭವಿಸುತ್ತಾರೆ.


ಅಸಾಮಾನ್ಯವಾದ ತ್ವರಿತವಾಗಿರುವ ಹೃದಯ ಬಡಿತ : ರಕ್ತಹೀನತೆಯಿಂದ ಬಳಲುವವರು ಅದರಲ್ಲೂ ವಿಶೇಷವಾಗಿ ವ್ಯಾಯಾಮಗಳನ್ನು ಮಾಡುವಾಗ ತ್ವರಿತವಾಗಿರುವಂತಹ ಅಸಂಜಸವಾದ ಹೃದಯ ಬಡಿತವನ್ನು ಅನುಭವಿಸುತ್ತಾರೆ.


ಉಸಿರಾಟದ ತೊಂದರೆ ಮತ್ತು ತಲೆನೋವು : ರಕ್ತಹೀನತೆಯಿಂದ ಬಳಲುವವರು ಅದರಲ್ಲೂ ವಿಶೇಷವಾಗಿ ವ್ಯಾಯಾಮಗಳನ್ನು ಮಾಡುವಾಗ ಉಸಿರಾಡಲು ಕಷ್ಟಪಡುತ್ತಾರೆ ಹಾಗೂ ಅವರಿಗೆ ತೀವ್ರವಾದ ತಲೆನೋವು ಕಾಣಿಸಬಹುದು.


ಕೇಂದ್ರೀಕರಿಸುವಲ್ಲಿ ತೊಂದರೆ : ರಕ್ತಹೀನತೆಯಿಂದ ಬಳಲುವವರು ಯಾವುದೇ ಒಂದು ವಸ್ತು/ವಿಷಯದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುವಲ್ಲಿ ವಿಫಲರಾಗುತ್ತಾರೆ.


ತಲೆತಿರುಗುವಿಕೆ : ರಕ್ತಹೀನತೆಯಿಂದ ಬಳಲುವವರು ತಲೆ ಸುತ್ತುವುದನ್ನು ಅನುಭವಿಸುತ್ತಾರೆ.       ತೆಳು ಚರ್ಮ : ಚರ್ಮವು ಅತಿ ಮೃದುವಾಗುವುದು, ಪದರಿನಂತೆ ತೆಳವಾಗುವುದನ್ನು ಇದು ಒಳಗೊಂಡಿದೆ.


ನಿದ್ರಾಹೀನತೆ : ದೇಹಕ್ಕೆ ಸಮರ್ಪಕವಾದ ಮಟ್ಟದಲ್ಲಿ ಬೇಕಾಗಿರುವ ನಿದ್ರೆಯನ್ನು ಮಾಡಲು ಸಾಧ್ಯವಾಗದೆ ಇರುವಿಕೆ. 


ಕೆಲವು ನಿರ್ದಿಷ್ಟ ರೂಪದ ರಕ್ತಹೀನತೆಯ ಲಕ್ಷಣಗಳು ಈ ಕೆಳಗಿನಂತಿವೆ


ಕಬ್ಬಿಣವು ದೇಹಕ್ಕೆ ಅವಶ್ಯಕವಾದ ಪೋಷಕ ತತ್ವವಾಗಿದೆ. ಇದರ ಕೊರತೆಯುಂಟಾದಾಗ ರಕ್ತಹೀನತೆ ಕಾಣಬಹುದು. ಕಬ್ಬಿಣಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆಯ ಲಕ್ಷಣಗಳು


ಕಾಗದ, ಮಂಜುಗಡ್ಡೆ ಅಥವಾ ಕಸ (ಪಿಕಾ ಎಂಬ ಸ್ಥಿತಿ) ದಂತಹ ವಿಚಿತ್ರ ಪದಾರ್ಥಗಳಿಗಾಗಿ ಹಸಿವು ಉಂಟಾಗುವುದು


 ಉಗುರುಗಳು ಮೇಲ್ಮುಖವಾಗಿ ವಕ್ರಗೊಳ್ಳುವುದು, ಇದನ್ನು ಕೊಯಿಲೋನಿಚಿಯಾಸ್ ಎಂದು ಕರೆಯಲಾಗುತ್ತದೆ


ಬಾಯಿಯ ಮೂಲೆಗಳಲ್ಲಿ ಬಿರುಕುಗಳೊಂದಿಗೆ ಬಾಯಿಯ ನೋವು


ವಿಟಮಿನ್ ಬಿ 12 ಕೊರತೆಯಿಂದ ಕೊರತೆಯಿಂದ ಉಂಟಾಗುವ ರಕ್ತಹೀನತೆಯ ಲಕ್ಷಣಗಳು


ಜುಮ್ಮೆನಿಸುವಿಕೆ, ಕೈಗಳು ಅಥವಾ ಪಾದಗಳಲ್ಲಿ "ಪಿನ್ಗಳು ಮತ್ತು ಸೂಜಿಗಳು" ಉಂಟು ಮಡುವಂತಹ ಸಂವೇದನೆಯಾಗುವುದು


ಸ್ಪರ್ಶದ ಅನುಭವ ಕಳೆದುಕೊಳ್ಳುವುದು


ಜೋಲಾಡುವ ನಡಿಗೆ ಮತ್ತು ನಡೆಯಲು ತೊಂದರೆ


ಕೈ ಮತ್ತು ಕಾಲುಗಳ ವಿಕಾರತೆ ಮತ್ತು ಬಿಗಿತ


ಬುದ್ಧಿಮಾಂದ್ಯತೆ


ದೀರ್ಘಕಾಲದ ಸೀಸದ ವಿಷದಿಂದ ಉಂಟಾಗುವ ರಕ್ತಹೀನತೆ


ದೀರ್ಘಕಾಲದ ಸೀಸದ ವಿಷವು ಈ ರೋಗಲಕ್ಷಣಗಳಿಗೆ ಕಾರಣವಾಗಬಹುದು:


ಒಸಡುಗಳ ಮೇಲೆ ನೀಲಿ-ಕಪ್ಪು ರೇಖೆ ಮೂಡುವುದು, ಇದನ್ನು ಸೀಸದ ರೇಖೆ ಎಂದು ಕರೆಯಲಾಗುತ್ತದೆ


ಹೊಟ್ಟೆ ನೋವು


 ಮಲಬದ್ಧತೆ


ವಾಂತಿ


ದೀರ್ಘಕಾಲದ ಕೆಂಪು ರಕ್ತ ಕಣಗಳ ನಾಶದಿಂದ ಉಂಟಾಗುವ ರಕ್ತಹೀನತೆಯ ಲಕ್ಷಣಗಳು


ದೀರ್ಘಕಾಲದ ಕೆಂಪು ರಕ್ತ ಕಣಗಳ ನಾಶದಿಂದ ಉಂಟಾಗುವ ರಕ್ತಹೀನತೆ ಈ ಕೆಳಗಿನ ರೋಗಲಕ್ಷಣಗಳನ್ನು ಒಳಗೊಂಡಿರಬಹುದು:


* ಕಾಮಾಲೆ (ಹಳದಿ ಚರ್ಮ ಮತ್ತು ಕಣ್ಣುಗಳು)


* ಕಂದು ಅಥವಾ ಕೆಂಪು ಮೂತ್ರ


* ಕಾಲಿನ ಹುಣ್ಣುಗಳು


* ಶೈಶವಾವಸ್ಥೆಯಲ್ಲಿ ಬೆಳೆಯಲು ವಿಫಲವಾಗುವಿಕೆ


* ಪಿತ್ತಗಲ್ಲುಗಳ ಲಕ್ಷಣಗಳು


ಮೂಳೆ ಮಜ್ಜೆಯ ಕಾಯಿಲೆಗೆ ಸಂಬಂಧಿಸಿದ ರಕ್ತಹೀನತೆ


ಲ್ಯುಕೇಮಿಯಾ ಮತ್ತು ಮೈಲೋಫಿಬ್ರೋಸಿಸ್ನಂತಹ ವಿವಿಧ ರೋಗಗಳು ನಿಮ್ಮ ಮೂಳೆ ಮಜ್ಜೆಯಲ್ಲಿ ರಕ್ತದ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಮೂಲಕ ರಕ್ತಹೀನತೆಗೆ ಕಾರಣವಾಗಬಹುದು. ಈ ರೀತಿಯ ಕ್ಯಾನ್ಸರ್ ಮತ್ತು ಕ್ಯಾನ್ಸರ್ ತರಹದ ಅಸ್ವಸ್ಥತೆಗಳ ಪರಿಣಾಮಗಳು ಸೌಮ್ಯದಿಂದ ಹಿಡಿದು ಜೀವಕ್ಕೆ-ಬೆದರಿಕೆ ಉಂಟು ಮಾಡುವವರೆಗಿನ ಲಕ್ಷಣಗಳನ್ನು ತೋರಿಸಬಹುದು.


ಸಿಕಲ್ ಸೆಲ್ ಅನೀಮಿಯ


ಸಿಕಲ್ ಸೆಲ್ ಅನೀಮಿಯದಿಂದ ಬಳಲುತ್ತಿರುವವರು ಈ ಕೆಳಗಿನ ಲಕ್ಷಣಗಳನ್ನು ಹೊಂದಿರಬಹುದು:


* ಆಯಾಸ


ಇದನ್ನೂ ಓದಿ: ಹಬ್ಬದ ಸಮಯದಲ್ಲಿ ಬಿಪಿ, ಶುಗರ್ ಲೆವೆಲ್ ಜಾಸ್ತಿಯಾಗೋ ಭಯಾನಾ? ಹಾಗಿದ್ರೆ ಅದನ್ನ ಕಂಟ್ರೋಲ್ ಮಾಡೋಕೆ ಇಲ್ಲಿದೆ ಟಿಪ್ಸ್


* ಸೋಂಕಿಗೆ ಒಳಗಾಗುವಿಕೆ


* ಮಕ್ಕಳಲ್ಲಿ ವಿಳಂಬವಾದ ಬೆಳವಣಿಗೆ 


* ತೀವ್ರವಾದ ನೋವಿನ ಸಂಚಿಕೆಗಳು, ವಿಶೇಷವಾಗಿ ಕೀಲುಗಳು, ಹೊಟ್ಟೆ ಮತ್ತು ಕೈಕಾಲುಗಳಲ್ಲಿ


ಹಠಾತ್ ಕೆಂಪು ರಕ್ತ ಕಣ ನಾಶದಿಂದ ಉಂಟಾಗುವ ರಕ್ತಹೀನತೆ


ಹಠಾತ್ ಕೆಂಪು ರಕ್ತ ಕಣ ನಾಶದಿಂದ ಉಂಟಾಗುವ ರಕ್ತಹೀನತೆಯ ಲಕ್ಷಣಗಳು ಇವುಗಳನ್ನು ಒಳಗೊಂಡಿರಬಹುದು:


* ಹೊಟ್ಟೆ ನೋವು


* ಕಂದು ಅಥವಾ ಕೆಂಪು ಮೂತ್ರ


* ಕಾಮಾಲೆ (ಹಳದಿ ಚರ್ಮ)


* ಚರ್ಮದ ಅಡಿಯಲ್ಲಿ ಸಣ್ಣ ಗಾಯಗಳು


* ಸೆಳೆತಗಳು (ಸೀಜರ್)


* ಮೂತ್ರಪಿಂಡ ವೈಫಲ್ಯದ ಲಕ್ಷಣಗಳು


ರಕ್ತಹೀನತೆಯ ಯಾವ ಲಕ್ಷಣಗಳು ಕಂಡುಬಂದಾಗ ನಿಮ್ಮ ವೈದ್ಯರಿಗೆ ಕರೆ ಮಾಬೇಕು?


ನೀವು ರಕ್ತಹೀನತೆಯ ಅಪಾಯಕಾರಿ ಅಂಶಗಳನ್ನು ಹೊಂದಿದ್ದರೆ ಅಥವಾ ರಕ್ತಹೀನತೆಯ ಈ ಕೆಳಗಿನ ಯಾವುದೇ ಚಿಹ್ನೆಗಳು ಅಥವಾ ರೋಗಲಕ್ಷಣಗಳನ್ನು ಗಮನಿಸಿದರೆ ನಿಮ್ಮ ವೈದ್ಯರನ್ನು ಕೂಡಲೇ ಸಂಪರ್ಕಿಸಿ:


* ನಿರಂತರ ಆಯಾಸ, ಉಸಿರಾಟದ ತೊಂದರೆ, ತ್ವರಿತ ಹೃದಯ ಬಡಿತ, ತೆಳು ಚರ್ಮ, ಅಥವಾ ರಕ್ತಹೀನತೆಯ ಯಾವುದೇ ಲಕ್ಷಣಗಳು 


* ಉಸಿರಾಟದ ತೊಂದರೆ ಅಥವಾ ನಿಮ್ಮ ಹೃದಯದಲ್ಲಾಗುವ ಅಸಮಂಜಸವಾದ ಹಾಗೂ ತ್ವರಿತವಾದ ಬಡಿತ ಕಾಣಿಸಿದಾಗ ತುರ್ತು ಆರೈಕೆಯನ್ನು ಪಡೆಯಿರಿ


* ಬೇಕಾದ ಜೀವಸತ್ವಗಳು ಮತ್ತು ಖನಿಜಗಳ ಆಹಾರಗಳ ಅಸಮರ್ಪಕ ಸೇವನೆ ಕಂಡುಬಂದಾಗ 


* ತುಂಬಾ ಭಾರವಾದ ಮುಟ್ಟಿನ ಅವಧಿ, ಅಂದರೆ ಅತಿಯಾದ ಪ್ರಮಾಣದ ರಕ್ತಸ್ರಾವ ಆದ ಸಂದರ್ಭ. 


ಇದನ್ನೂ ಓದಿ: ಈ ರೀತಿಯಾಗಿ ಕೊಲೆಸ್ಟ್ರಾಲ್ ಕಡಿಮೆ ಮಾಡ್ಕೊಂಡ್ರೆ ಹೃದಯಕ್ಕೆ ಒಳ್ಳೆಯದು


* ಹುಣ್ಣು, ಜಠರದುರಿತ, ಮೂಲವ್ಯಾಧಿ, ರಕ್ತಸಿಕ್ತ ಅಥವಾ ಕಪ್ಪಾದ ಮಲ ವಿಸರ್ಜನೆ, ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್ನ ಲಕ್ಷಣಗಳು


* ಸೀಸದ ಅಂಶ ನಿರಾಯಾಸವಾಗಿ ದೇಹ ಸೇರಿಕೊಳ್ಳುವಂತಹ ಪರಿಸರಕ್ಕೆ ನಿಮ್ಮನ್ನು ನೀವು ಒಡ್ಡಿಕೊಂಡಾಗ ಎಚ್ಚರದಿಂದಿರಬೇಕು.


* ರಕ್ತಹೀನತೆ ಎಂಬುದು ಆನುವಂಶಿಕವಾಗಿ ನಿಮ್ಮ ಕುಟುಂಬದಲ್ಲಿದ್ದರೆ ಮಗುವನ್ನು ಹೊಂದುವ ಮೊದಲು ನೀವು ಆನುವಂಶಿಕ ಸಲಹೆಯನ್ನು ವೈದ್ಯರಿಂದ ಪಡೆಯುವುದು ಉತ್ತಮ.

Published by:Sandhya M
First published: