• Home
  • »
  • News
  • »
  • lifestyle
  • »
  • Piles Remedy: ಸರ್ಜರಿ ಇಲ್ಲದೇ ಪೈಲ್ಸ್​ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್

Piles Remedy: ಸರ್ಜರಿ ಇಲ್ಲದೇ ಪೈಲ್ಸ್​ ಸಮಸ್ಯೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Piles Treatment Without Surgery: ಒಂದೇ ಭೇಟಿಯಲ್ಲಿ ಅನೇಕ ಪೈಲ್ಸ್ ಗಳಿಗೆ ಎಲೆಕ್ಟ್ರೋಥೆರಪಿಯನ್ನು ನೀಡಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ತಡೆದುಕೊಳ್ಳಬಹುದಾದ ಅಥವಾ ಸೌಮ್ಯವಾದ ನೋವು ಸಾಮಾನ್ಯವಾಗಿದೆ ಮತ್ತು ಚಿಕಿತ್ಸೆಯ ನಂತರ ಆರಂಭಿಕ ದಿನಗಳಲ್ಲಿ ಮಲ ವಿಸರ್ಜನೆಯಾಗುವಾಗ ರಕ್ತವನ್ನು ಕಾಣಬಹುದು

ಮುಂದೆ ಓದಿ ...
  • Share this:

ಗುದದ್ವಾರ ಮತ್ತು ಗುದನಾಳದ ಕೆಳಭಾಗದಲ್ಲಿ ಸಿರೆಗಳ ಉಬ್ಬುವಿಕೆಯ ಪರಿಣಾಮವನ್ನೇ ಸಾಮಾನ್ಯವಾಗಿ ಪೈಲ್ಸ್ (Piles) ಎಂದೆ ಎಲ್ಲೆಡೆ ಕರೆಯುತ್ತಾರೆ. ಪೈಲ್ಸ್ ಅಥವಾ ಮೂಲವ್ಯಾಧಿಯು ಬಹಳಷ್ಟು ಜನರು ಅನುಭವಿಸುವ ಒಂದು ಆರೋಗ್ಯ ಸಮಸ್ಯೇಯೇ (Health Problem) ಆಗಿದೆ. ಈ ಸಂದರ್ಭದಲ್ಲಿ ರಕ್ತನಾಳಗಳು ಉಬ್ಬಿ, ಅದರ ಗೋಡೆಗಳು ಹಿಗ್ಗುತ್ತವೆ, ಇದರಿಂದ ಕಿರಿಕಿರಿ ಹಾಗೂ ನೋವುಂಟಾಗುವುದಲ್ಲದೆ ರಕ್ತಸ್ರಾವವೂ (Bleeding) ಆಗುತ್ತದೆ. ಮನುಷ್ಯನು ಮಲ ವಿಸರ್ಜಿಸುವ ಮಾರ್ಗವಾದ ಗುದ ದ್ವಾರದ ಒಳ ಭಾಗದಲ್ಲಿ ಶೇಖರಣೆಗೊಳ್ಳುವ ಉರಿಯುತದ, ಬಾವು ಬಂದಂತಿರುವ ಅಂಗಾಂಶಗಳನ್ನೇ ಪೈಲ್ಸ್ ಅಥವಾ ಮೂಲವ್ಯಾಧಿ ಎಂದು ಕರೆಯುತ್ತಾರೆ. 


ಪೈಲ್ಸ್ ಅನ್ನು ಆಂತರಿಕ ಮತ್ತು ಬಾಹ್ಯ ಮೂಲವ್ಯಾಧಿ ಎಂದು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಹೆಸರೇ ಸೂಚಿಸುವಂತೆ, ಗುದ ಕಾಲುವೆಯೊಳಗೆ ಆಂತರಿಕ ಮೂಲವ್ಯಾಧಿ ಸಂಭವಿಸುತ್ತವೆ. ಆಂತರಿಕವಾಗಿರುವ ಪೈಲ್ಸ್ ಒಳಭಾಗದಲ್ಲೇ ಬೆಳೆಯಬಹುದು ಮತ್ತು ಕೆಲವು ಬಾರಿ ಗುದದ್ವಾರದಿಂದ ಹೊರಬರಬಹುದು. ಬಾಹ್ಯವಾಗಿ ಉಂಟಾಗುವ ಮೂಲವ್ಯಾಧಿ ಗುದದ್ವಾರದ ಕೊನೆಯಲ್ಲಿ ಅಥವಾ ಗುದದ್ವಾರದ ಅಂಚುಗಳಲ್ಲಿ ಬೆಳೆಯುತ್ತವೆ. ಮಲ ವಿಸರ್ಜನೆಗೆ ಸಂಬಂಧಿಸಿದಂತೆ ಇದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ.  


ಇದರ ಲಕ್ಷಣಗಳು


ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಜನರಲ್ಲಿ ಮೂಲವ್ಯಾಧಿ ಕಾಣಿಸಿಕೊಂಡರೂ ಸಹ ಅದು ಅಷ್ಟೊಂದು ಗಂಭೀರ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ. ಕೆಲದಿನಗಳ ಬಳಿಕ ತಾನಾಗಿಯೇ ಅದು ಮಾಯವಾಗಿ ಹೋಗಿ ಬಿಡುತ್ತದೆ. ಆದರೆ, ಅದು ಉಲ್ಬಣಗೊಂಡಾಗ ಮಾತ್ರ ಮನುಷ್ಯ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಆದಾಗ್ಯೂ ಪೈಲ್ಸ್ ಇರುವಂತೆ ಸೂಚಿಸುವ ಕೆಲ ಲಕ್ಷಣಗಳು ಈ ಕೆಳಗಿನಂತಿವೆ.


* ಗುದದ್ವಾರದ ಬಳಿ ಗಟ್ಟಿಯಾದ ಹಾಗೂ ನೋವಿನಿಂದ ಕೂಡಿರುವ ಗಂಟಿನ ಉಪಸ್ಥಿತಿಯನ್ನು ಮನುಷ್ಯ ಅನುಭವಿಸುತ್ತಾನೆ. ಇಂತಹ ಗಂಟಿನಲ್ಲಿ ರಕ್ತವಿದ್ದರೆ ಇದನ್ನು ಥ್ರೊಂಬೋಸ್ಡ್ ಎಕ್ಸ್ಟರ್ನಲ್ ಹ್ಯುಮರಾಯಿಡ್ಸ್ ಎಂದು ಕರೆಯುತ್ತಾರೆ.  


* ಮೂಲವ್ಯಾಧಿಯಿಂದ ಬಳಲುವ ಮನುಷ್ಯ ಮಲ ವಿಸರ್ಜಿಸಿದ ನಂತರವೂ ಅವನಲ್ಲಿ ಪೂರ್ಣವಗಿ ವಿಸರ್ಜಿತವಾಗಿದೆ ಎಂಬ ಸಮಾಧಾನ ಅಥವಾ ತೃಪ್ತಿ ಎಂಬುದು ಇರುವುದಿಲ್ಲ.


* ಮಲದ ಜೊತೆ ರಕ್ತದ ಹನಿಗಳು ವಿಸರ್ಜಿತವಾಗುವುದು.


* ಮಲ ವಿಸರ್ಜನವಾಗುವ ಗುದ ದ್ವಾರದ ಬಳಿ ಕೆರೆತದ ಅನುಭವ, ಕೆಂಪಾಗುವಿಕೆ ಹಾಗೂ ಬಾವು ಕಾಣುವುದು.


* ಮಲ ವಿಸರ್ಜನೆಯ ಸಂದರ್ಭದಲ್ಲೂ ನೋವು ಉಂಟಾಗುವುದು.


ಚಿಕಿತ್ಸೆ


ಪೈಲ್ಸ್ ಚಿಕಿತ್ಸೆಯನ್ನು ಅದರ ಪ್ರಕಾರವನ್ನು ಅವಲಂಬಿಸಿ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯಲ್ಲದ ಆಯ್ಕೆಗಳೊಂದಿಗೆ ಮಾಡಬಹುದು. ಆದರೆ ನಾವಿಲ್ಲಿ ಶಸ್ತ್ರ ಚಿಕಿತ್ಸೆಗಳಿಲ್ಲದೆಯೆ ಮನೆಮದ್ದುಗಳ ಮೂಲಕ ಪೈಲ್ಸ್ ಅನ್ನು ಹೇಗೆ ನಿರ್ವಹಿಸಬಹುದು ಎಂಬುದರ ಕುರಿತು ತಿಳಿಯೋಣ. 
ಪೈಲ್ಸ್ ರೋಗಲಕ್ಷಣಗಳನ್ನು ನಿವಾರಿಸಲು ಮನೆ ಚಿಕಿತ್ಸೆಗಳು


ಪೈಲ್ಸ್ ಗಳಿಗೆ ನಾವು ಬಹು ಸಂದರ್ಭಗಳಲ್ಲಿ ಮನೆಯಲ್ಲೇ ಚಿಕಿತ್ಸೆ ನೀಡಬಹುದಾಗಿದ್ದರೂ ವೈದ್ಯರ ಸಲಹೆ ಪಡೆಯುವುದು ಸಹ ಅಗತ್ಯವಾಗಿರುತ್ತದೆ. 


* ಸಾಮಯಿಕ ಕ್ರೀಮ್‌ಗಳು ಮತ್ತು ಮುಲಾಮುಗಳು - ಹೈಡ್ರೋಕಾರ್ಟಿಸೋನ್ ಹೊಂದಿರುವ ಕ್ರೀಮ್‌ಗಳು ಅಥವಾ ಸಪೊಸಿಟರಿಗಳನ್ನು ಪೀಡಿತ ಜಾಗದಲ್ಲಿ ಹಚ್ಚಿಕೊಳ್ಳಬಹುದು. ಇದು ತ್ವರಿತವಾಗಿ ನೋವಿನಿಂದ ತಾತ್ಕಾಲಿಕ ಪರಿಹಾರವನ್ನು ನೀಡುವ ನಿಶ್ಚೇಷ್ಟಿತ ಏಜೆಂಟ್ ಆಗಿ ಕೆಲಸ ನಿರ್ವಹಿಸುತ್ತದೆ. ವಿಚ್ ಹ್ಯಾಝೆಲ್ ಅನ್ನು ಹೊಂದಿರುವ ಪ್ಯಾಡ್‌ಗಳು ಸಹ ಲಭ್ಯವಿದೆ, ಅದನ್ನು ನೋವಿನಿಂದ ಪರಿಹಾರವನ್ನು ನೀಡಲು ಬಳಸಬಹುದು.


* ಐಸ್ ಪ್ಯಾಕ್ಗಳನ್ನು ಇಟ್ಟುಕೊಳ್ಳುವುದು - ಮೂಲವ್ಯಾಧಿಯಿಂದ ಉಂಟಾದ ಊತವನ್ನು ಕಡಿಮೆ ಮಾಡಲು ಪೀಡಿತ ಜಾಗದಲ್ಲಿ ಐಸ್ ಪ್ಯಾಕ್ಗಳನ್ನು ಇಟ್ಟುಕೊಳ್ಳಬಹುದು.


* ಬೆಚ್ಚಗಿನ ನೀರಿನಿಂದ ಸಿಟ್ಜ್ ಸ್ನಾನ - ಸಿಟ್ಜ್ ಸ್ನಾನದಲ್ಲಿ ಪಾತ್ರೆಯಂತಹ ವಸ್ತುವೊಂದನ್ನು ಶೌಚ ಗುಂಡಿಯ ಮೇಲಿರಿಸಿರಲಾಗಿರುತ್ತದೆ. ಬೆಚ್ಚಗಿನ ನೀರಿನಿಂದ ಅದನ್ನು ತುಂಬಿಸಿ ಮತ್ತು ಅದರ ಮೇಲೆ ಕುಳಿತುಕೊಳ್ಳುವುದು. ಇದರಿಂದ ಉರಿ ಮತ್ತು ತುರಿಕೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ.


* ತೇವಾಂಶವುಳ್ಳ ಟವೆಲ್‌ಗಳನ್ನು ಬಳಸುವುದು - ಬಹುತೇಕ ವಿದೇಶಿಗರು ಅಥವಾ ಆ ರೀತಿಯ ಅಭ್ಯಾಸವಿರುವ ಕೆಲವು ಭಾರತೀಯರು ಪೈಲ್ಸ್‌ನಿಂದ ಬಳಲುತ್ತಿರುವಾಗ ತಮ್ಮ ಕೆಳಭಾಗವನ್ನು ಒರೆಸಲು ಒಣ ಕಾಗದವನ್ನು ಬಳಸುತ್ತಾರೆ, ಅದು ಬಹಳ ನೋವಿನಿಂದ ಕೂಡಿರುತ್ತದೆ. ಹಾಗಾಗಿ ಅದನ್ನು ಮಾಡದೆ ತೇವಾಂಶವುಳ್ಳ ಟವೆಲ್ ಬಳಸುವುದು ಉತ್ತಮ. ಅದರಿಂದ ನೋವು ಉಪಶಮನವಾಗುತ್ತದೆ. 


* ನೋವು ನಿವಾರಕಗಳನ್ನು ಬಳಸುವುದು - ಇಬುಪ್ರೊಫೇನ್, ಅಸೆಟಾಮಿನೋಫೆನ್ ಮುಂತಾದ ಔಷಧಿಗಳು ನೋವು ನಿವಾರಕ ಮಾತ್ರೆಗಳಾಗಿದ್ದು ವೈದ್ಯರ ಸಲಹೆ ಮೆರೆಗೆ ಇವುಗಳನ್ನು ಬಳಸುವ ಮೂಲ್ಕವೂ ಮೂಲವ್ಯಾಧಿಯ ನೋವಿನಿಂದ ಪರಿಹಾರವನ್ನು ಪಡೆಯಬಹುದು.


ರಬ್ಬರ್ ಬ್ಯಾಂಡ್ ಬಂಧನ (ಲಿಗೇಶನ್)


ಪೈಲ್ಸ್ ಚಿಕಿತ್ಸೆಗಾಗಿ ರಬ್ಬರ್ ಬ್ಯಾಂಡ್ ಬಂಧನವು ಮತ್ತೊಂದು ಶಸ್ತ್ರಚಿಕಿತ್ಸೆಯಲ್ಲದ ವಿಧಾನವಾಗಿದೆ. ಆದರೆ ಇದನ್ನು ಆಂತರಿಕ ಮೂಲವ್ಯಾಧಿಗಳಿಗೆ ಮಾತ್ರ ಅನ್ವಯಿಸಬಹುದು. ಈ ವಿಧಾನವು ಪೈಲ್ಸ್ ಗಳ ತಳದಲ್ಲಿ ರಬ್ಬರ್ ಬ್ಯಾಂಡ್ ಒಂದನ್ನು ಕಟ್ಟುವುದನ್ನು ಒಳಗೊಂಡಿರುತ್ತದೆ. ಇದು ಮೂಲವ್ಯಾಧಿಗೆ ರಕ್ತದ ಹರಿವನ್ನು ಕಡಿತಗೊಳಿಸುತ್ತದೆ ಮತ್ತು ಪರಿಣಾಮವಾಗಿ, ಅದು ಕುಗ್ಗುತ್ತದೆ ಅಥವಾ ಒಣಗುತ್ತದೆ,ಕ್ರಮೇಣ ಇದು ಹೊರ ಬೀಳುತ್ತದೆ.


ರಬ್ಬರ್ ಬ್ಯಾಂಡ್ ಬಂಧನ ವಿಧಾನವನ್ನು 'ಅನೋಸ್ಕೋಪ್' ಎಂಬ ಕ್ಯಾಮೆರಾದೊಂದಿಗೆ ಸಣ್ಣ ಟ್ಯೂಬ್ ಬಳಸಿ ಮಾಡಲಾಗುತ್ತದೆ. ಇದನ್ನು ರೋಗಿಯ ಗುದದ್ವಾರಕ್ಕೆ ಸೇರಿಸಲಾಗುತ್ತದೆ. ಹೆಮೊರಾಯಿಡ್ ಪತ್ತೆಯಾದ ನಂತರ, ಅದನ್ನು ಸೂಕ್ಷ್ಮವಾಗಿ ಗಮನಿಸಿ ನಂತರ ನಿಶ್ಚಿತ ತಳ ಭಾಗದಲ್ಲಿ ರಬ್ಬರ್ ಬ್ಯಾಂಡ್ ಅನ್ನು ಕಟ್ಟಲಾಗುತ್ತದೆ. ಸಾಮಾನ್ಯವಾಗಿ ಒಂದು ವಾರದ ಅವಧಿಯಲ್ಲಿ ಈ ಬ್ಯಾಂಡೆಡ್ ಮೂಲಕ ಪೈಲ್ಸ್ ಬೀಳುತ್ತವೆ. ಈ ಸಂದರ್ಭದಲ್ಲಿ ಬ್ಯಾಂಡೆಡ್ ಕಟ್ಟಲಾದ ಸ್ಥಳದಲ್ಲಿ ಕಲೆಯೊಂದು ಮೂಡಿ ಅಲ್ಲಿ ರಕ್ತನಾಳಗಳು ಗುದ ಕಾಲುವೆಗೆ ಉಬ್ಬಿಕೊಳ್ಳದಂತೆ ತಡೆಯುತ್ತದೆ.


ಇದು ಶಸ್ತ್ರ ಚಿಕಿತ್ಸೆ ಅಲ್ಲ, ಬದಲಾಗಿ ಹೊರರೋಗಿ ವಿಧಾನವಾಗಿ ಈ ಕ್ರಮವನ್ನು ಮಾಡಲಾಗುತ್ತದೆ. ವಿಶಿಷ್ಟವಾಗಿ ಒಂದು ಅಥವಾ ಎರಡು ಹೆಮೊರಾಯಿಡ್‌ಗಳನ್ನು ರಬ್ಬರ್ ಬ್ಯಾಂಡ್‌ಗಳಿಂದ ಕಟ್ಟಲಾಗುತ್ತದೆ. ಒಂದು ವೇಳೆ ಹೆಚ್ಚಿನ ಸಂಖ್ಯೆಯಲ್ಲಿರುವ ಪೈಲ್ಸ್ ಗಳಿಗೆ ರಬ್ಬರ್ ಬ್ಯಾಂಡ್ ಕಟ್ಟಬೇಕಾದಾಗ ರೋಗಿಗೆ ಸಾಮಾನ್ಯ ಅರಿವಳಿಕೆ ನೀಡಿ ಕಟ್ಟಲಾಗುತ್ತದೆ. ಒಂದು ತಿಂಗಳ ಅಂತರದಲ್ಲಿ ಹಂತ ಹಂತವಾಗಿ ವೈದ್ಯರು ಚಿಕಿತ್ಸೆ ನೀಡಬಹುದು. ಈ ಸಂದರ್ಭದಲ್ಲಿ ಬ್ಯಾಂಡ್ ತುಂಬಾ ಬಿಗಿಯಾಗಿದ್ದರೆ, ಪೈಲ್ಸ್ ಇರುವ ಸ್ಥಳದಲ್ಲಿ ಮರಗಟ್ಟುವಿಕೆ ಇಂಜೆಕ್ಷನ್ ಅನ್ನು ರೋಗಿಗೆ ನೀಡಬಹುದು. ಇದರ ನಂತರವೂ ಪೈಲ್ಸ್ ಹೋಗದಿದ್ದರೆ ಶಸ್ತ್ರಚಿಕಿತ್ಸೆ ಅನಿವಾರ್ಯವಾಗುತ್ತದೆ.


ಇದನ್ನೂ ಓದಿ: ದಿನ ಬೆಳಗಾದ್ರೆ ತಿನ್ನೋ ದೋಸೆಗೂ ಇದ್ಯಂತೆ ಹಿಸ್ಟ್ರಿ! ಈ ಜನಪ್ರಿಯ ಉಪಹಾರ ಹುಟ್ಟಿದ್ದು ಹೇಗೆ ಗೊತ್ತಾ?


ಸ್ಕ್ಲೆರೋಥೆರಪಿ


ಸ್ಕ್ಲೆರೋಥೆರಪಿಯೂ, ಮೂಲವ್ಯಾಧಿಗೆ ರಕ್ತ ಪೂರೈಕೆಯನ್ನು ಕಡಿತಗೊಳಿಸುವ ಉದ್ದೇಶ ಹೊಂದಿದೆ. ಈ ಕಾರ್ಯವಿಧಾನದಲ್ಲಿ, ಗಟ್ಟಿಯಾಗಿಸುವ ರಾಸಾಯನಿಕ ದ್ರಾವಣವನ್ನು ಪೈಲ್ಸ್ ಇರುವ ಜಾಗದಲ್ಲಿ ಇರಿಸಲಾಗುತ್ತದೆ. ಅದರಿಂದ ಅಂಗಾಂಶಗಳಿಗೆ ಗಾಯವಾಗಿ ರಕ್ತ ಪೂರೈಕೆ ಕಡಿತಗೊಳ್ಳುತ್ತದೆ. ರಕ್ತ ಪೂರೈಕೆಯು ಸ್ಥಗಿತಗೊಂಡಂತೆ, ಪೈಲ್ಸ್ ಕುಗ್ಗಲಾರಂಭಿಸುತ್ತವೆ. ಒಂದೇ ಸಮಯದಲ್ಲಿ ಅನೇಕ ಪೈಲ್ಸ್ ಗಳಿಗೆ ಈ ವಿಧಾನವನ್ನು ಅನುಸರಿಸಬಹುದು. ಇದು ತುಲನಾತ್ಮಕವಾಗಿ ಸುರಕ್ಷಿತ ಮತ್ತು ಕಡಿಮೆ ನೋವಿನ ವಿಧಾನವಾಗಿದೆ. ಚಿಕಿತ್ಸೆಯ ನಂತರ ಮೊದಲ ಎರಡು ದಿನಗಳಲ್ಲಿ ರೋಗಿಯು ತನ್ನ ಮಲದಲ್ಲಿ ಸ್ವಲ್ಪ ರಕ್ತವನ್ನು ನೋಡಬಹುದು. 


ರಬ್ಬರ್ ಬ್ಯಾಂಡ್ ಬಂಧನ ವಿಧಾನವನ್ನು ಬಳಸಲಾಗದಿದ್ದಾಗ ಸ್ಕ್ಲೆರೋಥೆರಪಿಯನ್ನು ಪರಿಗಣಿಸಲಾಗುತ್ತದೆ. ಏಕೆಂದರೆ, ರಬ್ಬರ್ ಬ್ಯಾಂಡ್ ಬಂಧನಕ್ಕಾಗಿ, ಬ್ಯಾಂಡ್ ಅನ್ನು ಹಾಕಲು ಪೈಲ್ ಗಾತ್ರವು ಸಾಕಷ್ಟು ದೊಡ್ಡದಾಗಿರಬೇಕು. ಸಣ್ಣ ಪೈಲ್ಸ್ ಗಳಿಗೆ ಚಿಕಿತ್ಸೆ ನೀಡಲು ಸ್ಕ್ಲೆರೋಥೆರಪಿಯನ್ನು ಬಳಸಬಹುದು.


ಎಲೆಕ್ಟ್ರೋಥೆರಪಿ


ರಬ್ಬರ್ ಬ್ಯಾಂಡಿಂಗ್‌ ಮಾಡಲು ಅರ್ಹವಾಗಿರದ ಸಣ್ಣ ಸಣ್ಣ ಪೈಲ್ಸ್ ಚಿಕಿತ್ಸೆಗಾಗಿ ಎಲೆಕ್ಟ್ರೋಥೆರಪಿಯನ್ನು ಬಳಸಲಾಗುತ್ತದೆ. ಈ ವಿಧಾನದಲ್ಲಿ ಪೈಲ್ಸ್ ಅನ್ನು ನಾಶಪಡಿಸಲು ವಿದ್ಯುತ್ ಪ್ರವಾಹ ಮಾಡಲಾಗುತ್ತದೆ. ಈ ಕ್ರಿಯೆಯನ್ನು ಪೈಲ್ಸ್ ಪತ್ತೆಹಚ್ಚಲು ಬಳಸಲಾಗುವ 'ಪ್ರೊಕ್ಟೋಸ್ಕೋಪ್' ಎಂಬ ಉಪಕರಣದ ಸಹಾಯದಿಂದ ಮಾಡಲಾಗುತ್ತದೆ. ಇದರಲ್ಲಿ ವಿದ್ಯುತ್ ಪ್ರವಾಹವನ್ನು ಪೈಲ್ಸ್ ಇರುವ ಸ್ಥಳದಲ್ಲಿ ಪ್ರವಹಿಸಲು ಮತ್ತೊಂದು ಸಾಧನವನ್ನು ಬಳಸಲಾಗುತ್ತದೆ. ವಿದ್ಯುತ್ ಪ್ರವಾಹದಿಂದಾಗಿ ಪೈಲ್ಸ್ ನಲ್ಲಿರುವ ರಕ್ತವು ದಪ್ಪವಾಗಿ, ಯಾವುದೇ ಹೆಚ್ಚಿನ ರಕ್ತದ ಪೂರೈಕೆ ಕಡಿತವಾಗುತ್ತದೆ. ಪರಿಣಾಮ, ಪೈಲ್ಸ್ ಕುಗ್ಗಲಾರಂಭಿಸುತ್ತವೆ. 


ಇದನ್ನೂ ಓದಿ: ಪೆಸ್ಟ್ರಿ ಎಲ್ಲಿದೆ ಅಂತ ಅಲ್ಲಿ ಇಲ್ಲಿ ಹುಡುಕ್ತಿರಾ? ಹಾಗಿದ್ರೆ ಇಲ್ಲೇ ಇವೆ ನೋಡಿ ಬೆಸ್ಟ್ ಬೇಕರಿಗಳು


ಒಂದೇ ಭೇಟಿಯಲ್ಲಿ ಅನೇಕ ಪೈಲ್ಸ್ ಗಳಿಗೆ ಎಲೆಕ್ಟ್ರೋಥೆರಪಿಯನ್ನು ನೀಡಬಹುದಾಗಿದೆ. ಈ ಪ್ರಕ್ರಿಯೆಯಲ್ಲಿ ತಡೆದುಕೊಳ್ಳಬಹುದಾದ ಅಥವಾ ಸೌಮ್ಯವಾದ ನೋವು ಸಾಮಾನ್ಯವಾಗಿದೆ ಮತ್ತು ಚಿಕಿತ್ಸೆಯ ನಂತರ ಆರಂಭಿಕ ದಿನಗಳಲ್ಲಿ ಮಲ ವಿಸರ್ಜನೆಯಾಗುವಾಗ ರಕ್ತವನ್ನು ಕಾಣಬಹುದು

Published by:Sandhya M
First published: