• Home
  • »
  • News
  • »
  • lifestyle
  • »
  • Groundnut In Winter: ಟೈಂ ಪಾಸ್​ ಕಡ್ಲೆಕಾಯಿ ಚಳಿಗಾಲದ ಆರೋಗ್ಯಕ್ಕೆ ಬೆಸ್ಟ್​ ಅಂತೆ

Groundnut In Winter: ಟೈಂ ಪಾಸ್​ ಕಡ್ಲೆಕಾಯಿ ಚಳಿಗಾಲದ ಆರೋಗ್ಯಕ್ಕೆ ಬೆಸ್ಟ್​ ಅಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Groundnut Benefits: ಈ ಕಡಲೆ ಕಾಳುಗಳು ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಸಿಗುತ್ತದೆ.

  • Share this:

ಚಳಿಗಾಲದಲ್ಲಿ (Winter) ನಮ್ಮ ಆರೋಗ್ಯದ (Health) ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.  ಚಳಿಗಾಲದಲ್ಲಿ ನಾವು ಆಹಾರ ಮತ್ತು ಪಾನೀಯಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು ಆಗ ಮಾತ್ರ ಆರೋಗ್ಯ ಚೆನ್ನಾಗಿರಲು ಸಾಧ್ಯ. ಸೀಸನ್​ ಹಣ್ಣುಗಳು ಮತ್ತು ತರಕಾರಿಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯಕವಾಗಬಹುದು. ಈ ಸಮಯದಲ್ಲಿ ಕಡಲೆ ಕಾಯಿಗಳೂ ಹೇರಳವಾಗಿ ದೊರೆಯುತ್ತವೆ. ಈ ಕಡಲೆ ಕಾಯಿಗಳು (Groundnut ) ಅಥವಾ ಶೇಂಗಾ ಅನೇಕ ಜೀವಸತ್ವಗಳು ಮತ್ತು ಪೋಷಕಾಂಶಗಳ ಸಮೃದ್ಧ ಮೂಲವಾಗಿದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳು ಸಿಗುತ್ತದೆ.


ಪ್ರಯಾಣ ಮಾಡುವಾಗ ಅಥವಾ ಮನೆಯಲ್ಲಿ ವಿಶ್ರಾಂತಿ ಪಡೆಯುವಾಗ ನಾವು ಕಡಲೆ ಕಾಯಿಗಳನ್ನು ತಿನ್ನಲು ಇಷ್ಟಪಡುತ್ತೇವೆ. ಅನೇಕ ಜನರು ವರ್ಕ್ ಔಟ್ ಮಾಡುವಾಗ ಈ ಕಡಲೆಕಾಯಿ ಅಥವಾ ಅದರ ಬೆಣ್ಣೆ ಬಯಸುತ್ತಾರೆ. ನಿಮಗೆ ಗೊತ್ತೆ ಕಡಲೆಕಾಯಿಯನ್ನು ತಿನ್ನುವುದರಿಂದ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ. ಕಡಲೆಕಾಯಿಯು ವಿಟಮಿನ್-ಡಿ ಯ ಉತ್ತಮ ಮೂಲವಾಗಿದೆ, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಲು ಅಗತ್ಯವೆಂದು ಪರಿಗಣಿಸಲಾಗಿದೆ. ಇದಿಷ್ಟೇ ಅಲ್ಲದೇ, ಇದರ ಪ್ರಯೋಜನಗಳು ಹಲವಾರಿದ್ದು, ಅವುಗಳ ಲಿಸ್ಟ್ ಇಲ್ಲಿದೆ.

ಕಡಲೆ ಕಾಯಿಗಳನ್ನು ತಿನ್ನುವುದರಿಂದ ಆಗುವ ಪ್ರಯೋಜನಗಳು


ತೂಕ ಇಳಿಕೆಗೆ ಸಹಾಯ ಮಾಡುತ್ತದೆ


ತಜ್ಞರ ವರದಿಯ ಪ್ರಕಾರ, ಕಡಲೆ ಕಾಯಿಗಳು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿವೆ. ಇವುಗಳಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ಶೇಂಗಾ ಕಾಳುಗಳು ದೇಹವನ್ನು ಫಿಟ್ ಆಗಿಟ್ಟುಕೊಂಡು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತವೆ. ಹಾಗಾಗಿ ಕಡಲೆಯನ್ನು ನಿಮ್ಮ ಪ್ರತಿನಿತ್ಯದ ಆಹಾರದಲ್ಲಿ ನಿಯಮಿತವಾಗಿ ಸೇವಿಸುವುದು ಉತ್ತಮ ಎನ್ನಲಾಗುತ್ತದೆ.


ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ


ನೆಲಗಡಲೆಯು ಹೃದಯವನ್ನು ಆರೋಗ್ಯವಾಗಿಡಲು ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ದ್ವಿದಳ ಧಾನ್ಯಗಳಲ್ಲಿ ಅಪರ್ಯಾಪ್ತ ಕೊಬ್ಬುಗಳು ಅಧಿಕವಾಗಿದ್ದು, ಇದು ಹೃದಯವನ್ನು ಆರೋಗ್ಯಕರವಾಗಿಡಲು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ: ನಂಬಿದ್ರೆ ನಂಬಿ ಈ ಆಹಾರಗಳು ಕೂಡ ನಿಮ್ಮ ತೂಕ ಇಳಿಸುತ್ತೆ, ಆಶ್ಚರ್ಯವಾದ್ರೂ ಸತ್ಯ


ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹ ಪ್ರಯೋಜನಕಾರಿಯಾಗಿದೆ. ನೆಲಗಡಲೆಯಲ್ಲಿರುವ ಪೋಷಕಾಂಶಗಳು ರಕ್ತ ಹೆಪ್ಪುಗಟ್ಟುವುದನ್ನು ತಡೆಯುತ್ತದೆ, ಇದರಿಂದಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.


ಚಳಿಗಾಲದಲ್ಲಿ ಸಾಮಾನ್ಯವಾಗಿ ಹೃದಯದ ಸಮಸ್ಯೆಗಳು ಹೆಚ್ಚಿರುತ್ತದೆ. ನಮ್ಮ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈನಲ್ಲಿದೆ. ಹಾಗಾಗಿ ಸಾಧ್ಯವಾದಷ್ಟು ಚಳಿಗಾಲದಲ್ಲಿ ಕಡಲೆಕಾಯಿಯನ್ನು ತಿನ್ನಿ.




ಕಡಲೆಕಾಯಿ ಮೂಳೆಗಳಿಗೆ ಪ್ರಯೋಜನಕಾರಿ


ವಿಟಮಿನ್ ಡಿ ನಮ್ಮ ಮೂಳೆಗಳಿಗೆ ಬಹಳ ಮುಖ್ಯ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳಲು ಪ್ರಾರಂಭಿಸುವುದರಿಂದ, ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಆಹಾರದಲ್ಲಿ ಸೇವಿಸುವುದು ಮುಖ್ಯ. ಕಡಲೆ ಕಾಯಿಗಳು ವಿಟಮಿನ್ ಡಿ ಯ ಸಮೃದ್ಧ ಮೂಲವಾಗಿದೆ. ಇದರಲ್ಲಿ ಮ್ಯಾಂಗನೀಸ್ ಮತ್ತು ಫಾಸ್ಫರಸ್ ಕೂಡ ಇದೆ, ಇದು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.


ವಯಸ್ಸಾದವರಿಗೆ ಚಳಿಯ ಕಾರಣದಿಂದ ಶಕ್ತಿ ಕಡಿಮೆ ಇರುತ್ತದೆ. ಈ ಸಮಯದಲ್ಲಿ ಶಕ್ತಿ ಹೆಚ್ಚಿಸಿಕೊಳ್ಳಲು ನಾವು ಆಹಾರವನ್ನು ಅವಲಂಭಿಸಬೇಕಾಗುತ್ತದೆ. ನಿಮ್ಮ ಶಕ್ತಿ ಹೆಚ್ಚಿಸಿಕೊಳ್ಳಲು ಈ ಕಡಲೆಕಾಯಿ ಸಹಾಯ ಮಾಡುತ್ತದೆ.


ಇದನ್ನೂ ಓದಿ: ಮಹಿಳೆಯರೇ, ಪಿರಿಯಡ್ಸ್​ ಸಮಯದಲ್ಲಿ ಈ ತಪ್ಪುಗಳನ್ನು ಮಾಡ್ಲೇಬೇಡಿ


ಮೆದುಳಿಗೆ ಸಹ ಪ್ರಯೋಜನಕಾರಿ


ಕಡಲೆಕಾಯಿಯು ವಿಟಮಿನ್ ಬಿ 1, ನಿಯಾಸಿನ್ ಮತ್ತು ಫೋಲೇಟ್‌ನಂತಹ ಪೋಷಕಾಂಶಗಳನ್ನು ಹೊಂದಿರುತ್ತದೆ, ಇದು ನಿಮ್ಮ ಮೆದುಳನ್ನು ಆರೋಗ್ಯಕರವಾಗಿ ಮತ್ತು ಚುರುಕಾಗಿಡಲು ಸಹಾಯ ಮಾಡುತ್ತದೆ. ಕಡಲೆಕಾಯಿ ಅಥವಾ ಶೇಂಗಾ ತಿನ್ನುವುದರಿಂದ ಮೆದುಳು ಹೆಚ್ಚು ಸಕ್ರಿಯ ಮತ್ತು ಚುರುಕಾಗಿರುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಇವುಗಳಲ್ಲಿರುವ ನಿಯಾಸಿನ್ ಮತ್ತು ವಿಟಮಿನ್ ಬಿ1 ಆಲ್ಝೈಮರ್ಸ್‌ನಂತಹ ಕಾಯಿಲೆಗಳನ್ನು ತಡೆಯಲು ಸಹಕಾರಿಯಾಗಿದೆ.

Published by:Sandhya M
First published: