Hair Pack: ಕೂದಲ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಹಾಗಾದ್ರೆ ಈ ಹಣ್ಣುಗಳನ್ನು ಹೀಗೆ ಬಳಸಿ

Hair care: ಹಣ್ಣುಗಳು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ ಅದು ನಿಮ್ಮ ಕೂದಲ ಆರೋಗ್ಯಕ್ಕೆ ಉತ್ತಮ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹಣ್ಣುಗಳು ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ ಮತ್ತು ಪ್ರತಿಯೊಬ್ಬರ ಆಹಾರದಲ್ಲಿ ಇದು  ಪ್ರಮುಖ ಅಂಶವೆಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಹಣ್ಣುಗಳು ನಿಮ್ಮ ಕೂದಲಿಗೆ ಪ್ರಯೋಜನಗಳನ್ನು ನೀಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಹಣ್ಣುಗಳು ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ ಅದು ನಿಮ್ಮ ಕೂದಲು ಮತ್ತು ನೆತ್ತಿಯ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಹೌದು, ಕೂದಲ ಆರೈಕೆಯಲ್ಲಿ ಹಣ್ಣುಗಳು ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.

ಬಾಳೆಹಣ್ಣು

ಬಾಳೆಹಣ್ಣುಗಳಲ್ಲಿ ವಿಟಮಿನ್ ಎ, ಬಿ, ಸಿ ಮತ್ತು ಇ, ಬಯೋಟಿನ್ ಮತ್ತು ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂನಂತಹ ಖನಿಜಗಳು ಸಮೃದ್ಧವಾಗಿದೆ. ಬಯೋಟಿನ್ ಕೊರತೆಯು ಕೂದಲು ತೆಳುವಾಗಲು ಕಾರಣವಾಗಬಹುದು ಮತ್ತು ಬಾಳೆಹಣ್ಣುಗಳಲ್ಲಿ ಈ ವಿಟಮಿನ್  ಹೆಚ್ಚಿರುವ ಕಾರಣ, ಕೂದಲಿನ ಬೆಳವಣಿಗೆಗೆ ಸಹಕಾರಿ. ಬಾಳೆಹಣ್ಣು ಅತ್ಯಂತ ಪೌಷ್ಟಿಕವಾಗಿದೆ ಮತ್ತು ಆದ್ದರಿಂದ ಉತ್ತಮವಾದ ಕಂಡೀಷನರ್ ಆಗಿ ಕೆಲಸ ಮಾಡಬಲ್ಲದು. ಅದು ಶುಷ್ಕ ಕೂದಲು ಮತ್ತು ಒಡೆದ ತುದಿಗಳನ್ನು  ಸರಿ ಮಾಡುವಲ್ಲಿ ಸಹಾಯ ಮಾಡುತ್ತದೆ.

ಒಂದು ಬಟ್ಟಲಿನಲ್ಲಿ ಒಂದು ಬಾಳೆಹಣ್ಣನ್ನು ತೆಗೆದುಕೊಂಡು ಪೇಸ್ಟ್  ಮಾಡಿ ಮತ್ತು ಮೂರು ಚಮಚ ಆಲಿವ್ ಎಣ್ಣೆಯನ್ನು  ಸೇರಿಸಿ ಮಿಶ್ರಣ ಮಾಡಿ ನಯವಾದ ಪೇಸ್ಟ್ ಮಾಡಿ. ಈ ಮಿಶ್ರಣವನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ ಮತ್ತು 45 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ನೀವು ಅದನ್ನು ಶಾಂಪೂ ಮತ್ತು ಕಂಡೀಷನರ್‌ನಿಂದ  ತೊಳೆಯಿರಿ. ಗುಂಗುರು ಕೂದಲಿಗೆ  ಇದು ಹೆಚ್ಚು ಸೂಕ್ತವಾಗಿದೆ. ಅಲ್ಲದೇ ಕೂದಲು ಉದುರುವ ಸಮಸ್ಯೆಯನ್ನು ಹೋಗಲಾಡಿಸಲು ಇದು ಉತ್ತಮ ಆಯ್ಕೆ.

ಅಲ್ಲದೆ, ಒಂದು ಬಾಳೆಹಣ್ಣುನ್ನು ಮ್ಯಾಶ್ ಮಾಡಿ ಮತ್ತು ಒಂದು ಚಮಚ ಜೇನುತುಪ್ಪ ಮತ್ತು ತೆಂಗಿನ ಎಣ್ಣೆಯಿಂದ ನಯವಾದ ಪೇಸ್ಟ್ ತಯಾರಿಸಿ. ಇದನ್ನು ನಿಮ್ಮ ನೆತ್ತಿ ಮತ್ತು ಕೂದಲಿಗೆ ಮಸಾಜ್ ಮಾಡಿ ಮತ್ತು ನಂತರ ನಿಮ್ಮ ಕೂದಲನ್ನು ಒದ್ದೆಯಾದ ಬಿಸಿ ಟವಲ್ ನಿಂದ ಕಟ್ಟಿಕೊಳ್ಳಿ. 30 ನಿಮಿಷಗಳ ನಂತರ ತಲೆ ಸ್ನಾನ ಮಾಡಿ.

ಇದನ್ನೂ ಓದಿ: ಶುಂಠಿ ಸಿಪ್ಪೆ ತೆಗೆಯೋಕೆ ಸಖತ್ ಸುಲಭ ವಿಧಾನ.. ಐದು ಸೆಕೆಂಡ್​ನಲ್ಲಿ ಸಿಪ್ಪೆ ಕ್ಲಿಯರ್!

ಪಪ್ಪಾಯಿ

ಪಪ್ಪಾಯಿಗಳಲ್ಲಿ ಆ್ಯಂಟಿ ಆಕ್ಸಿಡೆಂಟ್, ವಿಟಮಿನ್ ಎ, ಬಿ, ಮತ್ತು ಸಿ, ಮತ್ತು ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಂನಂತಹ ಖನಿಜಗಳು ಹೆಚ್ಚಿವೆ. , ಇದು ಆರೋಗ್ಯಕರ ದೇಹಕ್ಕೆ ಅವಶ್ಯಕವಾಗಿದೆ ಮತ್ತು ಇವುಗಳ  ಕೊರತೆಯಾದಾಗ  ಕೂದಲು ಉದುರಲು ಪ್ರಾರಂಭವಾಗುತ್ತದೆ. ಪೊಟ್ಯಾಸಿಯಮ್ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ವಿಟಮಿನ್ ಎ ಉತ್ತಮ ಕೂದಲು ಮತ್ತು ನೆತ್ತಿಯ ಕಂಡೀಶನರ್ ಆಗಿ ಕೆಲಸ ಮಾಡುತ್ತದೆ, ಪಪ್ಪಾಯಿಯಲ್ಲಿರುವ ಫೋಲಿಕ್ ಆಮ್ಲವು ನೆತ್ತಿಯಲ್ಲಿ ರಕ್ತ ಪರಿಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಈ ಹಣ್ಣಿನಲ್ಲಿ ಹೆಚ್ಚಿನ ನೀರಿನ ಅಂಶವು ಕೂದಲನ್ನು ಹೆಚ್ಚು ಕಾಲ ತೇವಾಂಶದಿಂದ  ಇರಲು ಸಹಾಯ ಮಾಡುತ್ತದೆ.

ಅರ್ಧ ಪಪ್ಪಾಯಿಯ ತಿರುಳನ್ನು ತೆಗೆದುಕೊಂಡು ಮತ್ತು ಮೂರು ಚಮಚ ಮೊಸರು ಸೇರಿಸಿ, ಒಂದು ಬಟ್ಟಲಿನಲ್ಲಿ ಸರಿಯಾಗಿ  ಮಿಶ್ರಣ ಮಾಡಿ. ಮಿಶ್ರಣವನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ ನಂತರ  45 ನಿಮಿಷಗಳ ಕಾಲ ಬಿಡಿ. ಈ ಮಾಸ್ಕ್ ತಲೆಹೊಟ್ಟು ನಿವಾರಣೆಗೆ ಸಹಾಯ ಮಾಡುತ್ತದೆ.

ಆರು ಚಮಚ ಪಪ್ಪಾಯ ತಿರುಳನ್ನು ಮೂರು ಚಮಚ ತೆಂಗಿನೆಣ್ಣೆಯೊಂದಿಗೆ ಬೆರೆಸಿ ನೆತ್ತಿಗೆ ಮತ್ತು ಕೂದಲಿಗೆ ಮಸಾಜ್ ಮಾಡಿ. ಅದನ್ನು 30 ನಿಮಿಷಗಳ ಕಾಲ ಹೀರಿಕೊಳ್ಳಲು ಬಿಡಿ ಮತ್ತು ನಂತರ ತೊಳೆಯಿರಿ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
Published by:Sandhya M
First published: