• Home
  • »
  • News
  • »
  • lifestyle
  • »
  • Blood Sugar: ಈ ಅಭ್ಯಾಸಗಳು ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತಂತೆ

Blood Sugar: ಈ ಅಭ್ಯಾಸಗಳು ನಿಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡುತ್ತಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Blood Sugar Increasing: ಇಂದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಬಹುತೇಕರು ಸಕ್ಕರೆ ಕಾಯಿಲೆ ರೋಗಿಗಳು. ಅದರಲ್ಲೂ ಮಧ್ಯವಯಸ್ಸಿನವರಿಗೆ ಇದರ ಅಪಾಯ ಇನ್ನೂ ಹೆಚ್ಚು. ಒತ್ತಡದ ಜೀವನಶೈಲಿಯೇ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಷರು.

  • Share this:

ಇಂದು ಸಕ್ಕರೆ ಕಾಯಿಲೆಯು (Sugar Problem) ಅತ್ಯಂತ ಸಾಮಾನ್ಯ ಎಂತ ಅನ್ನಿಸಿದರೂ ಅದು ಅತ್ಯಂತ ಗಂಭೀರ ಆರೋಗ್ಯ ಸಮಸ್ಯೆಗಳಲ್ಲೊಂದು (Health Problem). ಇದು ನೇರವಾಗಿ ಹೃದಯ (Heart) ಅಥವಾ ಮೂತ್ರಪಿಂಡದ )Kidney)  ಕಾಯಿಲೆಗಳು, ಕಣ್ಣುಗಳಿಗೆ ಹಾನಿ ಮುಂತಾದ ಇತರ ಕಾಯಿಲೆಗಳಿಗೆ ಕಾರಣವಾಗುತ್ತದೆ. ಅಷ್ಟೇ ಅಲ್ಲ, ಅಸ್ತಿತ್ವದಲ್ಲಿರುವ ಯಾವುದೇ ಕಾಯಿಲೆಯು ಅಧಿಕ ರಕ್ತದ ಸಕ್ಕರೆಯಿಂದ ಉಲ್ಬಣಗೊಳ್ಳುತ್ತದೆ. ಅಲ್ಲದೇ, ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳು ದುಪ್ಪಟ್ಟು ನಿರ್ಣಾಯಕವಾಗುತ್ತವೆ. ಅದಕ್ಕಾಗಿಯೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಸಕ್ಕರೆ ಕಾಯಿಲೆಯಲ್ಲಿ ಆನುವಂಶಿಕತೆ ಪ್ರಮುಖವಾಗಿದ್ದು ಅದನ್ನು ನಾವು ನಿಯಂತ್ರಿಸಲು ಬರುವುದಿಲ್ಲ. ಆದ್ರೆ ಜೀವನಶೈಲಿಯಲ್ಲಿ ಬದಲಾವಣೆ ಮತ್ತು ಆರೋಗ್ಯಕರ ಅಭ್ಯಾಸಗಳು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.


ಹೆಚ್ಚಿನ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳು ಹೆಚ್ಚಿನ ಇನ್ಸುಲಿನ್ ಮಟ್ಟಕ್ಕೆ ನೇರವಾಗಿ ಸಂಬಂಧಿಸಿವೆ ಎಂದು ನಮಗೆ ತಿಳಿದಿದೆ. ಅದರಲ್ಲೂ ಸಕ್ಕರೆ, ಸಂಸ್ಕರಿಸಿದ ಆಹಾರ, ಕಾರ್ಬೋಹೈಡ್ರೇಟ್‌ಗಳ ಅತಿಯಾದ ಸೇವನೆ ಮುಂತಾದವುಗಳು ರಕ್ತದ ಸಕ್ಕರೆ ಕಾಯಿಲೆಗೆ ಸಾಮಾನ್ಯವಾದ ಕಾರಣಗಳು.


ಆದರೆ ಪ್ರತಿದಿನ ಹಲವಾರು ಸ್ಪಷ್ಟವಲ್ಲದ ಅಭ್ಯಾಸಗಳು ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಆದ್ರೆ ನಮ್ಮ ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಏಳು ಆಶ್ಚರ್ಯಕರ ವಿಷಯಗಳು ಯಾವವು ಅನ್ನೋದನ್ನು ನೋಡೋಣ.


ಕೃತಕ ಸಿಹಿಕಾರಕಗಳು: ಅವುಗಳನ್ನು ಸಕ್ಕರೆಗೆ ಮತ್ತು ಮಧುಮೇಹಿಗಳಿಗೆ "ಸುರಕ್ಷಿತ ಪರ್ಯಾಯ" ಎಂದು ಹೆಸರಿಸಲಾಗಿದೆ. ಆದರೆ ಹಲವಾರು ತಜ್ಞರು ಮತ್ತು ಅಧ್ಯಯನಗಳು ಅವು ನಿಜವಾಗಿ ಹಾನಿಕಾರಕವಾಗಬಹುದು ಮತ್ತು ರಕ್ತದಲ್ಲಿನ ಸಕ್ಕರೆಯ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ತೋರಿಸಿವೆ.


ಕಾಫಿ: ಕಪ್ಪು ಕಾಫಿ ಮತ್ತು ಸಕ್ಕರೆ ಇಲ್ಲದ ಕಾಫಿಯಲ್ಲೂ ಇದು ಸಂಭವಿಸಬಹುದು! ಕೆಫೀನ್‌ಗೆ ಹೆಚ್ಚು ಸಂವೇದನಾಶೀಲರಾಗಿರುವ ವ್ಯಕ್ತಿಗಳಿದ್ದಾರೆ ಮತ್ತು ಕಾಫಿಯ ಕಾರಣದಿಂದಾಗಿ ಅವರ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು.


ನಿದ್ರೆಯ ಕೊರತೆ: ಹೆಚ್ಚುತ್ತಿರುವ ಅಧ್ಯಯನಗಳು ನಿದ್ರೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿವೆ, ಕೆಲವಷ್ಟು ಚಟಗಳು ಹಾಗೂ ಒತ್ತಡದ ಕಾರಣದಿಂದಾಗಿ ಈಗೀಗ ಜನರು ಕಡಿಮೆ ನಿದ್ರೆ ಮಾಡುತ್ತಿದ್ದಾರೆ. ಆದರೆ ನಿಮಗೆ ತಿಳಿದಿರಲಿ, ಒಂದು ರಾತ್ರಿಯಾದರೂ ನಿದ್ರೆ ಸರಿಯಾಗಿ ಮಾಡದೇ ಹೋದಲ್ಲಿ ನಿಮ್ಮ ದೇಹವು ಕಡಿಮೆ ಇನ್ಸುಲಿನ್ ಅನ್ನು ಬಳಸುವುದಕ್ಕೆ ಕಾರಣವಾಗಬಹುದು ಮತ್ತು ಇದರಿಂದಾಗಿ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು.
ಬೆಳಗಿನ ಉಪಾಹಾರವನ್ನು ಬಿಟ್ಟುಬಿಡುವುದು: ನೀವು ಬೆಳಗಿನ ಉಪಾಹಾರವನ್ನು ತ್ಯಜಿಸಿದರೆ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಂತರ ರಕ್ತದಲ್ಲಿನ ಸಕ್ಕರೆ ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ನೀವು ಇಂಟರ್ ಮಿಟ್ಟಂಟ್ ಫಾಸ್ಟಿಂಗ್ ಅಥವಾ ಇತರ ಆಹಾರಕ್ಕಾಗಿ ಉಪಹಾರವನ್ನು ಬಿಟ್ಟುಬಿಡಲು ಯೋಜಿಸುವ ಮೊದಲು ನಿಮ್ಮ ವೈದ್ಯರನ್ನು ಪರೀಕ್ಷಿಸುವುದು ಒಳಿತು.


ಇದನ್ನೂ ಓದಿ: ಮಹಿಳೆಯರು ಈ ಆಹಾರಗಳನ್ನು ಮಿಸ್​ ಮಾಡದೇ ಸೇವನೆ ಮಾಡಬೇಕು


ನಸುಕಿನಲ್ಲಿ ಜರುಗುವ ಕ್ರಿಯೆ: ಮಧುಮೇಹ ಹೊಂದಿರುವ ಜನರಲ್ಲಿ ರಕ್ತದಲ್ಲಿನ ಸಕ್ಕರೆ ಅಂಶವು (ಗ್ಲೂಕೋಸ್) ಸಾಮಾನ್ಯವಾಗಿ ಬೆಳಗಿನ ಜಾವ 2 ರಿಂದ 8 ರವರೆಗೆ ಅಸಹಜವಾಗಿ ಹೆಚ್ಚಳವಾಗುತ್ತದೆ ಇದನ್ನೇ ಡಾವ್ನ್‌ ಅಫೇರ್ ಅಂತ ಕರೆಯುತ್ತೇವೆ. ಸಿಡಿಸಿ ವೆಬ್‌ಸೈಟ್ ಪ್ರಕಾರ, "ಮಧುಮೇಹ ಅಥವಾ ಇಲ್ಲದಿದ್ದರೂ ಜನರಲ್ಲಿ ಬೆಳಿಗಿನ ಸಮಯದಲ್ಲಿ ಹಾರ್ಮೋನ್‌ಗಳಲ್ಲಿ ಉಲ್ಬಣ ಉಂಟಾಗುತ್ತದೆ. ಇನ್ನು ಮಧುಮೇಹ ಹೊಂದಿರುವ ಜನರಿಗೆ ರಕ್ತದಲ್ಲಿನ ಸಕ್ಕರೆಯು ಹೆಚ್ಚಾಗಬಹುದು.


ವಸಡಿನ ಕಾಯಿಲೆ: ವಸಡಿನ ಕಾಯಿಲೆಗಳನ್ನು ಕ್ಷುಲ್ಲಕ ಎಂದು ನಿರ್ಲಕ್ಷಿಸಬೇಡಿ. ಸಕ್ಕರೆ ಯಾವಾಗಲೂ ಕಾರಣವಾಗಿರದಿದ್ದರೂ, ಒಸಡು ಕಾಯಿಲೆಗಳು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಹೆಚ್ಚಳಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಇದು ನಿಮಗೆ ಮಧುಮೇಹವಿದೆ ಎಂಬುದನ್ನು ತೋರಿಸುತ್ತದೆ.


ನಿರ್ಜಲೀಕರಣ: ನೀವು ನಿರ್ಜಲೀಕರಣಗೊಂಡಿದ್ದರೆ, ನಿಮ್ಮ ರಕ್ತದಲ್ಲಿನ ಸಕ್ಕರೆ ಹೆಚ್ಚು ಕೇಂದ್ರೀಕೃತವಾಗಿದೆ ಎಂದರ್ಥ.


ಇದನ್ನೂ ಓದಿ: ಗರ್ಭಿಣಿಯರು ಪ್ರತಿ ರಾತ್ರಿ ಈ ಜ್ಯೂಸ್​ಗಳನ್ನು ಕುಡಿಬೇಕಂತೆ


ಒಟ್ಟಾರೆ, ಇಂದು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಬಹುತೇಕರು ಸಕ್ಕರೆ ಕಾಯಿಲೆ ರೋಗಿಗಳು. ಅದರಲ್ಲೂ ಮಧ್ಯವಯಸ್ಸಿನವರಿಗೆ ಇದರ ಅಪಾಯ ಇನ್ನೂ ಹೆಚ್ಚು. ಒತ್ತಡದ ಜೀವನಶೈಲಿಯೇ ಇದಕ್ಕೆ ಕಾರಣ ಎನ್ನುತ್ತಾರೆ ತಜ್ಷರು. ಹಾಗಾಗಿ ಬಂದ ಮೇಲೆ ಅನುಭವಿಸುವುದಕ್ಕಿಂತ ಬರುವುದನ್ನೇ ತಡೆದರೆ ನೆಮ್ಮದಿಯಿಂದ ಆರೋಗ್ಯವಾಗಿ ಇರಬಹುದು.

Published by:Sandhya M
First published: