Healthy Food: 50ನೇ ವಯಸ್ಸಿನಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವ 10 ಸೂಪರ್ ಫುಡ್‍ಗಳಿವು

ನಾವು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸದಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ 50 ನೇ ವಯಸ್ಸಿನ ನಂತರ ನಮ್ಮ ಆಹಾರ ಕ್ರಮದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿಕೊಳ್ಳಬೇಕು ಮತ್ತು ನಮ್ಮ ಹೃದಯ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ನಿಗಾ ಇಡಬೇಕು. ಹಾಗೇ ಮಾಡಬೇಕೆಂದರೆ, ಅತ್ಯಧಿಕ ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ಸೂಪರ್ ಫೂಡ್‍ಗಳ ಸೇವನೆ ಅತ್ಯಗತ್ಯ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ವಯಸ್ಸಾದಂತೆ, ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡು ಬರುತ್ತವೆ. ದೇಹದ  ಸಾಮರ್ಥ್ಯ (Body strength)  ಕುಂಠಿತವಾಗಿ , ಕಾಯಿಲೆಗಳು ನಮ್ಮ ಹತ್ತಿರ ಸುಳಿಯಬಾರದು ಎಂದಾದಲ್ಲಿ, ನಾವು ಆರೋಗ್ಯದ (Health) ಕುರಿತು ಕಾಳಜಿ ವಹಿಸುವುದು ಬಹಳ ಅಗತ್ಯ. ನಾವು ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇವಿಸದಷ್ಟು ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ 50 ನೇ ವಯಸ್ಸಿನ ನಂತರ ನಮ್ಮ ಆಹಾರ (Food) ಕ್ರಮದ ಬಗ್ಗೆ ಇನ್ನಷ್ಟು ಕಾಳಜಿ ವಹಿಸಿಕೊಳ್ಳಬೇಕು ಮತ್ತು ನಮ್ಮ ಹೃದಯ ಆರೋಗ್ಯವನ್ನು (Heart Health) ಕಾಪಾಡಿಕೊಳ್ಳುವುದರ ಬಗ್ಗೆ ನಿಗಾ ಇಡಬೇಕು. ಹಾಗೇ ಮಾಡಬೇಕೆಂದರೆ, ಅತ್ಯಧಿಕ ಪೌಷ್ಟಿಕಾಂಶಗಳನ್ನು (Nutrition) ಒಳಗೊಂಡಿರುವ ಸೂಪರ್ ಫೂಡ್‍ಗಳ ಸೇವನೆ ಅತ್ಯಗತ್ಯ.

50 ನೇ ವಯಸ್ಸಿನಲ್ಲಿ ಹೃದಯದ ಆರೋಗ್ಯವನ್ನು ಕಾಪಾಡುವ ಸೂಪರ್ ಫುಡ್‍ಗಳು
1. ಧಾನ್ಯಗಳು
ಸಂಪೂರ್ಣ ಧಾನ್ಯಗಳು , ಸಂಸ್ಕರಿತ ಧಾನ್ಯಗಳ ತರಹ ಅಲ್ಲ, ಅವು ನಮ್ಮ ದೇಹಕ್ಕೆ ಅದರಲ್ಲೂ ಮುಖ್ಯವಾಗಿ ಹೃದಯಕ್ಕೆ ಹೆಚ್ಚು ಪ್ರಯೋಜನಗಳನ್ನು ನೀಡುತ್ತವೆ. ಬಿಳಿ ಬಣ್ಣದ ಸಂಸ್ಕರಿಸಿದ ಆಹಾರಗಳು ಹೃದಯದ ಕಾಯಿಲೆಯ ಅಪಾಯವನ್ನು ಹೆಚ್ಚು ಮಾಡುತ್ತವೆ.

2. ಡಾರ್ಕ್ ಚಾಕೋಲೇಟ್
ಆ್ಯಂಟಿಆಕ್ಸಿಡೆಂಟ್‍ಗಳನ್ನು ಒಳಗೊಂಡಿರುವ ಆಹಾರಗಳು ಎಷ್ಟು ಲಾಭದಾಯಕ ಎಂಬುವುದು ನಮಗೆಲ್ಲಾ ಗೊತ್ತೇ ಇದೆ. ಅವು ನಮ್ಮ ದೇಹ ಮಾತ್ರವಲ್ಲ, ಹೃದಯದ ಆರೋಗ್ಯವನ್ನು ಕೂಡ ಕಾಪಾಡುತ್ತವೆ, ನಮ್ಮ ಸುತ್ತಮುತ್ತ ಇರುವ ವಿಷಕಾರಕಗಳಿಂದ ನಮ್ಮನ್ನು ರಕ್ಷಿಸುತ್ತವೆ. ಡಾರ್ಕ್ ಚಾಕೋಲೇಟ್ ಕೂಡ ಅಂತಹ ಆಹಾರಗಳಲ್ಲಿ ಒಂದು. ಅದು ಆ್ಯಂಟಿಆಕ್ಸಿಡೆಂಟ್‍ನ ಖಜಾನೆಯಾಗಿದೆ ಮತ್ತು ಹೃದಯದ ಕಾರ್ಯಕ್ಷಮತೆಯನ್ನು ಸುಧಾರಿಸುವ ಅನೇಕ ಅಗತ್ಯ ಮಿನರಲ್‍ಗಳು ಡಾರ್ಕ್ ಚಾಕಲೇಟ್‍ನಲ್ಲಿವೆ.

3. ಹಸಿರು ಸೊಪ್ಪು ತರಕಾರಿಗಳು
ಲೆಟ್ಟಸ್, ಕ್ಯಾಬೇಜ್, ಪಾಲಕ್, ಬ್ರೊಕೋಲಿ, ಕಾಲಿಫ್ಲವರ್ ಮುಂತಾದ ಹಸಿರು ಸೊಪ್ಪು ತರಕಾರಿಗಳಲ್ಲಿ ಅತ್ಯಧಿಕ ಫೈಬರ್ ಇರುತ್ತದೆ. ಸ್ನಾಯುಗಳು ಉತ್ತಮವಾಗಿ ಕಾರ್ಯ ನಿರ್ವಹಿಸುವಂತೆ ಸಹಾಯ ಮಾಡುವ ಅನೇಕ ಪೌಷ್ಟಿಕಾಂಶಗಳು ಹಸಿರು ಸೊಪ್ಪು ತರಕಾರಿಗಳಲ್ಲಿ ಇವೆ.

4. ಕೊಬ್ಬುಳ್ಳ ಮೀನು
ಸಾಲ್ಮನ್ , ಟೂನಾ ಮುಂತಾದ ಕೊಬ್ಬುಳ್ಳ ಮೀನುಗಳು, ಪ್ರೊಟೀನ್ ಮತ್ತು ಆರೋಗ್ಯಕರ ಕೊಬ್ಬಿನ ಆಗರವಾಗಿದೆ. ದೇಹದ ವಿವಿಧ ಕೆಲಸಗಳಿಗೆ ಪ್ರೊಟೀನ್ ಅತ್ಯಗತ್ಯ. ಆರೋಗ್ಯಕರ ಕೊಬ್ಬುಗಳು, ದೇಹದ ಕಾರ್ಯಗಳು ಸರಿಯಾಗಿ ನಡೆಯಲು ಅಗತ್ಯವಿರುವ ಇತರ ವಿಟಮಿನ್‍ಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತವೆ.

5. ಒಣ ಬೀಜಗಳು
ಒಣ ಬೀಜಗಳು ಅತ್ಯಧಿಕ ಪೌಷ್ಟಿಕಾಂಶವನ್ನು ಹೊಂದಿರುವ ಸೂಪರ್‍ಫುಡ್‍ಗಳಲ್ಲಿ ಒಂದಾಗಿವೆ. ಅವುಗಳು ದೇಹದೊಳಗಿನ ಎಲ್ಲಾ ಕಾರ್ಯಗಳು ಸುಗಮವಾಗಿ ನಡೆಯಲು ಸಹಾಯ ಮಾಡುತ್ತವೆ. ವಾಲ್‍ನಟ್‍ಗಳು, ಪರಿಧಮನಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳ ವಿರುದ್ಧ ಹೋರಾಡುತ್ತವೆ ಎಂಬುವುದು ಅಧ್ಯಯನಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: Bones Sound: ಮೂಳೆಗಳಲ್ಲಿ ಕಿರ್ ಎಂಬ ಶಬ್ಧ ಉಂಟಾಗುವುದು ಏಕೆ? ಇದಕ್ಕೆ ಕಾರಣವೇನು?

6. ಟೊಮ್ಯಾಟೋಗಳು
ಮೊದಲೇ ತಿಳಿಸಿದಂತೆ, ಆ್ಯಂಟಿಆಕ್ಸಿಡೆಂಟ್‍ಗಳು ನಮ್ಮ ದೇಹವನ್ನು ಬಾಹ್ಯ ರ್ಯಾಡಿಕಲ್‍ಗಳು ಮತ್ತು ವಿಷಕಾರಕಗಳಿಂದ ರಕ್ಷಿಸುತ್ತವೆ. ಟೊಮ್ಯಾಟೋದಲ್ಲಿ ಹೇರಳ ಆ್ಯಂಟಿಆಕ್ಸಿಡೆಂಟ್‍ಗಳಿವೆ. ಟೊಮ್ಯಾಟೋ ಉರಿಯೂತವನ್ನು ಮತ್ತು ವಿವಿಧ ಪರಿಧಮನಿಯ ಕಾಯಿಲೆಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ ಎಂಬುವುದು ಸಾಬೀತಾಗಿದೆ.

7. ಆಲಿವ್ ಎಣ್ಣೆ
ಆಲಿವ್ ಎಣ್ಣೆ ಕೂಡ ಆ್ಯಂಟಿಆಕ್ಸಿಡೆಂಟ್‍ಗಳನ್ನು ಹೊಂದಿದೆ. ವಿವಿಧ ಎಣ್ಣೆಗಳ ಬಳಕೆಯಿಂದ ಫರಿಧಮಿನಿಯ ಕಾಯಿಲೆಗಳು ಬರುವ ಸಾಧ್ಯತೆ ಇರುತ್ತದೆ ಎಂಬುವುದು ತಿಳಿದ ವಿಷಯ. ಆದರೆ, ಆಲಿವ್ ಎಣ್ಣೆ ಹಾಗಲ್ಲ, ಅದು ಪರಿಧಮಿನಿಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ತಮ್ಮ ಆಹಾರ ಕ್ರಮದಲ್ಲಿ ಆಲಿವ್ ಎಣ್ಣೆಯನ್ನು ಸೇರಿಸಿಕೊಂಡಿರುವ ಜನರ ಹೃದಯದ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ.

8. ಪನೀರ್
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವ ಇಚ್ಚೆ ಇರುವವರು, ಪನೀರನ್ನು ತಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದು ಉತ್ತಮ. ನಮ್ಮ 35 ನೇ ವಯಸ್ಸಿನಲ್ಲಿ ಮೂಳೆ ಸಾಂದ್ರತೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. 50 ನೇ ವಯಸ್ಸಿನಲ್ಲಿಯೂ ಹೃದಯದ ಆರೋಗ್ಯ ಚೆನ್ನಾಗಿರಬೇಕು ಎಂದರೆ ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಿ.

9. ದ್ವಿದಳ ಧಾನ್ಯಗಳು
ಕೊಲೆಸ್ಟ್ರಾಲ್ ಸಂಬಂಧಿತ ಕಾಯಿಲೆ 50 ನೇ ವಯಸ್ಸು ದಾಟಿದ ಜನರಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಮಸೂರ, ಬೀನ್ಸ್ ಮತ್ತು ಕಡಲೆಗಳಂತಹ ದ್ವಿದಳ ಧಾನ್ಯಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಎಂಬುವುದು ಸಾಬೀತಾಗಿದೆ. ಅವುಗಳಲ್ಲಿ ಕಬ್ಬಿಣಾಂಶ, ಮೆಗ್ನೀಶಿಯಂ ಮತ್ತು ಪೊಟಾಶಿಯಂಗಳು ಯಥೇಚ್ಛವಾಗಿದೆ.

10. ಬೆರ್ರಿಗಳು
ಬೆರ್ರಿಗಳಲ್ಲಿ ಹೇರಳ ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‍ಗಳಿವೆ. ಅವು ಹೃದಯದ ಆರೋಗ್ಯ ನಿರ್ವಹಣೆ ಮತ್ತು ಸುಧಾರಣೆಗೆ ಸಹಕಾರಿ. 40 ನೇ ವಯಸ್ಸಿನ ನಂತರ ನಿಮ್ಮ ಆಹಾರ ಕ್ರಮದ ಬಗ್ಗೆ ತುಂಬಾ ಜಾಗರೂಕತೆ ವಹಿಸಬೇಕು. ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿಗಳು ಅತ್ಯಂತ ಆರೋಗ್ಯಕರ.

ಇದನ್ನೂ ಓದಿ:  Health Tips: ಮಳೆಗಾಲದ ರೋಗ-ರುಜಿನಗಳನ್ನು ತಪ್ಪಿಸಲು ಈ 7 ಆರೋಗ್ಯ ಸಲಹೆಗಳನ್ನು ಪಾಲಿಸಿ

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳ ಬಯಸುವವರು , ಉತ್ತಮ ಆಹಾರ ಸೇವನೆಯ ಜೊತೆ, ನಿತ್ಯವೂ ವ್ಯಾಯಾಮವನ್ನು ಮಾಡಬೇಕು.
Published by:Ashwini Prabhu
First published: