• Home
  • »
  • News
  • »
  • lifestyle
  • »
  • Lungs Cancer: ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರತ್ತೆ!

Lungs Cancer: ಧೂಮಪಾನ ಮಾಡದಿದ್ದರೂ ಶ್ವಾಸಕೋಶದ ಕ್ಯಾನ್ಸರ್ ಬರತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೀವಕೋಶಗಳು ಬೆಳೆದಂತೆ ಗಡ್ಡೆಯಂತೆ ಕಾಣುವ ಜೀವಕೋಶಗಳ ಸಮೂಹ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹಲವು ವರ್ಷಗಳ ಅವಧಿಯಲ್ಲಿ ಬೆಳೆಯುವ ಸಂಭವ ಹೆಚ್ಚು. ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ ಮುಖ್ಯ ಕಾರಣವಾಗಿದೆ.

  • Share this:

    ಇತ್ತೀಚಿನ ದಿನಗಳಲ್ಲಿ (Now a Days) ವಿಶ್ವಾದ್ಯಂತ (World) ಸಾವಿಗೆ (Deaths) ಪ್ರಮುಖ ಕಾರಣಗಳಲ್ಲಿ (Causes) ಕ್ಯಾನ್ಸರ್ (Cancer) ಒಂದಾಗಿದೆ. ಇತರ ರೀತಿಯ ಕ್ಯಾನ್ಸರ್‌ನಂತೆ ಶ್ವಾಸಕೋಶದ ಕ್ಯಾನ್ಸರ್ (Lungs Cancer) ಕೋಶ ವಿಭಜನೆ ಮತ್ತು ಬೆಳವಣಿಗೆಯ ಸಾಮಾನ್ಯ ಪ್ರಕ್ರಿಯೆಗೆ ಅಡ್ಡಿಪಡಿಸಿ ಬೆಳವಣಿಗೆಯಾಗುತ್ತಾ ಹೋಗುತ್ತದೆ. ಇದು ಅಸಹಜ ಮತ್ತು ಅನಿಯಂತ್ರಿತ ಬೆಳವಣಿಗೆಗೆ ಕಾರಣ ಆಗುತ್ತದೆ. ಜೀವಕೋಶಗಳು ಬೆಳೆದಂತೆ ಗಡ್ಡೆಯಂತೆ ಕಾಣುವ ಜೀವಕೋಶಗಳ ಸಮೂಹ ಬೆಳವಣಿಗೆ ಆಗುತ್ತಾ ಹೋಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಹೇಗೆ ಉಂಟಾಗುತ್ತದೆ? ಶ್ವಾಸಕೋಶದ ಕ್ಯಾನ್ಸರ್ ಹಲವು ವರ್ಷಗಳ ಅವಧಿಯಲ್ಲಿ ಬೆಳೆಯುವ ಸಂಭವ ಹೆಚ್ಚು. ಶ್ವಾಸಕೋಶದ ಕ್ಯಾನ್ಸರ್‌ಗೆ ಧೂಮಪಾನ ಮುಖ್ಯ ಕಾರಣವಾಗಿದೆ.


    ಶ್ವಾಸಕೋಶ ಕ್ಯಾನ್ಸರ್ ಗೆ ಕಾರಣವಾಗುತ್ತದೆ ಸಿಗರೇಟ್


    ಸಿಗರೇಟ್ ಸೇದುವ ಅಭ್ಯಾಸ ಹೊಂದಿರುವ ಅಥವಾ ಅಂತಹ ಜನರೊಂದಿಗೆ ಸಂಪರ್ಕ ಹೊಂದುವ ಅನೇಕ ಜನರು ದೀರ್ಘ ಕಾಲದವರೆಗೆ ಸಿಗರೇಟ್ ವಾಸನೆ ಮತ್ತು ಸೇದುವುದು ವ್ಯಕ್ತಿಯ ಶ್ವಾಸಕೋಶದಲ್ಲಿ ರೋಗಶಾಸ್ತ್ರೀಯ ಬದಲಾವಣೆ ಉಂಟು ಮಾಡುತ್ತವೆ. ಈ ಬದಲಾವಣೆಗಳು ಶ್ವಾಸಕೋಶದಲ್ಲಿ ಕ್ಯಾನ್ಸರ್ ಗಡ್ಡೆ ಉಂಟು ಮಾಡಬಹುದು.


    ದೆಹಲಿಯ ಅಪೋಲೋ ಕ್ಯಾನ್ಸರ್ ಸೆಂಟರ್ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯ ವೈದ್ಯಕೀಯ ಆಂಕೊಲಾಜಿಯ ಹಿರಿಯ ಸಲಹೆಗಾರರಾದ ಡಾ.ಪಿ.ಕೆ.ದಾಸ್ ಅವರು ಶ್ವಾಸಕೋಶದ ಕ್ಯಾನ್ಸರ್ ಹೇಗೆ ತಡೆಯುವುದು ಮತ್ತು ಅವುಗಳನ್ನು ಆರೋಗ್ಯಕರ ಮತ್ತು ಬಲಶಾಲಿಯಾಗಿಸುವುದು ಹೇಗೆ ಎಂದು ಹೇಳಿದ್ದಾರೆ ಇಲ್ಲಿ ನೋಡೋಣ.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಧೂಮಪಾನ ಮಾಡದಿದ್ದರೂ ಶ್ವಾಸಕೋಶ ಕ್ಯಾನ್ಸರ್ ಉಂಟಾಗುತ್ತದೆ?


    ಪ್ರಪಂಚದಾದ್ಯಂತ ಅಧ್ಯಯನಗಳು, ಧೂಮಪಾನ ಮಾಡದ 25 ಪ್ರತಿಶತ ಜನರು ಶ್ವಾಸಕೋಶದ ಕ್ಯಾನ್ಸರ್ ಗೆ ತುತ್ತಾಗುತ್ತಾರೆ ಎಂದು ಹೇಳಿದೆ. 65 ವರ್ಷಕ್ಕಿಂತ ಮೇಲ್ಪಟ್ಟ ಮೂವರಲ್ಲಿ ಇಬ್ಬರಿಗೆ ಶ್ವಾಸಕೋಶ ಕ್ಯಾನ್ಸರ್ ಇರುವುದು ಪತ್ತೆ ಆಗಿದೆ. ವ್ಯಕ್ತಿಯ ಜೀವಕ್ಕೆ ಅಪಾಯ ಕಡಿಮೆ ಮಾಡಲು ಸರಿಯಾದ ಸ್ಕ್ರೀನಿಂಗ್ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಅನ್ನು ಆದಷ್ಟು ಬೇಗ ಪತ್ತೆ ಹಚ್ಚಬೇಕಾಗುತ್ತದೆ.


    ಶ್ವಾಸಕೋಶ ಪರೀಕ್ಷೆ ಅಗತ್ಯ


    ಶ್ವಾಸಕೋಶದ ಪರೀಕ್ಷೆ ಮಾಡಿಸುವುದು ಸಾವಿನ ಸಂಖ್ಯೆ ಕಡಿಮೆ ಮಾಡಬಹುದು. ಅದರ ಚಿಕಿತ್ಸೆಯು ಸಾಧ್ಯವಾದಾಗ ಒಂದು ಹಂತದಲ್ಲಿ ರೋಗ ಪತ್ತೆಹಚ್ಚಲು ಇದು ಸಹಕಾರಿ ಆಗಿದೆ. 80 ಪ್ರತಿಶತ ಪ್ರಕರಣಗಳಲ್ಲಿ ಶ್ವಾಸಕೋಶ ಕ್ಯಾನ್ಸರ್ ನ್ನು ಆರಂಭಿಕ ಹಂತದಲ್ಲಿ ಕಂಡು ಹಿಡಿಯಬಹುದು. ಸ್ಕ್ರೀನಿಂಗ್‌ ಕ್ಯಾನ್ಸರ್‌ ಆರಂಭಿಕದಲ್ಲಿ ಪತ್ತೆ ಮಾಡುವುದು ಮತ್ತು ಪೀಡಿತ ವ್ಯಕ್ತಿಯ ಚಿಕಿತ್ಸೆ ಸಾಧ್ಯವಾಗಿಸುತ್ತದೆ.


    ಚಿಕಿತ್ಸೆ ವಿಳಂಬ ಮಾಡಬೇಡಿ


    ಶ್ವಾಸಕೋಶದ ಕ್ಯಾನ್ಸರ್ ರೋಗ ನಿರ್ಣಯ ಮಾಡಲು ಆರಂಭಿಕ ಚಿಕಿತ್ಸೆಯು ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಯ ಅಗತ್ಯ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಬೆಳವಣಿಗೆಯ ಅಪಾಯ ಗಣನೀಯವಾಗಿ ಕಡಿಮೆ ಮಾಡುವ ಅಥವಾ ರೋಗದ ತೀವ್ರತೆ ಅರಿಯಲು ತೊಂದರೆ ಉಂಟು ಮಾಡುವ ಅಪಾಯಕಾರಿ ಪದಾರ್ಥಗಳಿಂದ ದೂರವಿರಬಹುದು.


    ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ


    ಶ್ವಾಸಕೋಶದ ಕ್ಯಾನ್ಸರ್ ಜೀವಕ್ಕೆ ಅಪಾಯ ಉಂಟು ಮಾಡುವ ಸಾಧ್ಯತೆ ಹೆಚ್ಚು. ಆದರೆ ರೋಗವನ್ನು ಮೊದಲೇ ಹೊಂದಿರುವ ಜನರು ಬದುಕುಳಿಯುವ ಸಾಧ್ಯತೆಗಳು ಬಹಳ ಹೆಚ್ಚು. ಶ್ವಾಸಕೋಶದ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯ ಹೊಂದಿರುವ ಜನರು


    ತಮ್ಮ ಪರೀಕ್ಷೆಗಳನ್ನು ಕಾಲಕಾಲಕ್ಕೆ ಮಾಡಬೇಕು. ಇದು ರೋಗಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಲು ಸಹಕಾರಿಯಾಗಿದೆ. ಮತ್ತು ಕ್ಯಾನ್ಸರ್ ಹರಡುವ ಮೊದಲು ಚಿಕಿತ್ಸೆ ಮಾಡಬಹುದು.


    ಆಹಾರದಲ್ಲಿ ಈ ಪದಾರ್ಥಗಳನ್ನು ಸೇರಿಸಿ


    ಶ್ವಾಸಕೋಶದ ಆರೋಗ್ಯಕ್ಕೆ ಆರೋಗ್ಯಕರ ಜೀವನಶೈಲಿ ನಡೆಸುವುದು ಬಹಳ ಮುಖ್ಯ. ಬೆರಿಹಣ್ಣುಗಳು, ಶತಾವರಿ, ಸೇಬುಗಳು ಮತ್ತು ಬೊರೊಕ್ಲಿಯಂತಹ ಆಂಟಿಆಕ್ಸಿಡೆಂಟ್‌ಗಳಲ್ಲಿ ಹೆಚ್ಚಿನ ಆಹಾರ ಸೇವಿಸುವುದು ವಿಷ ಹೊರಹಾಕಲು ಮತ್ತು ಶ್ವಾಸಕೋಶ ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.


    ವ್ಯಾಯಾಮ ಮಾಡಿ


    ವ್ಯಾಯಾಮ ಮಾಡುವ ಸಮಯ ಹೆಚ್ಚಿಸಿ. ವ್ಯಾಯಾಮವು ಸಂಪೂರ್ಣ ಹೃದಯ-ಉಸಿರಾಟ ವ್ಯವಸ್ಥೆ ಬಲಪಡಿಸುತ್ತದೆ. ಇದು ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಉಸಿರಾಡಲು ಸುಲಭವಾಗುತ್ತದೆ ಮತ್ತು ಹೆಚ್ಚು ಆಮ್ಲಜನಕ ತೆಗೆದುಕೊಳ್ಳಲು ಸಹಕಾರಿ.


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಮದ್ಯಪಾನ ಮತ್ತು ಧೂಮಪಾನ ತಪ್ಪಿಸಿ


    ಸಿಗರೇಟ್ ಸೇದುವುದು ಶ್ವಾಸಕೋಶ ಕ್ಯಾನ್ಸರ್ ಅಪಾಯವನ್ನು ಪುರುಷರಲ್ಲಿ ಶೇಕಡಾ 90 ಮತ್ತು ಮಹಿಳೆಯರಲ್ಲಿ ಶೇಕಡಾ 70 ರಿಂದ 80 ರಷ್ಟು ಹೆಚ್ಚಿಸುತ್ತದೆ. ಹಾಗಾಗಿ ಧೂಮಪಾನ ತ್ಯಜಿಸಿ. ನಿರಂತರ ಧೂಮಪಾನ ವ್ಯಕ್ತಿಯಲ್ಲಿ ಹೃದಯಾಘಾತದ ಅಪಾಯ ಹೆಚ್ಚಿಸುತ್ತದೆ.

    Published by:renukadariyannavar
    First published: