Summer Recipe: ಬೇಸಿಗೆಗೆ ಸೂಕ್ತವಾದ 7 ಬಗೆಯ ಸರಳ ರೆಸಿಪಿಗಳು; ಒಮ್ಮೆ ಟ್ರೈ ಮಾಡಿ

ಬೇಸಿಗೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಸೂಕ್ತ. ಹಾಗಾದರೆ ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬ ಬಗ್ಗೆ ಗೊಂದಲವಿದ್ದರೆ, ಕೆಲವೊಂದು ತಿನಿಸುಗಳ ರೆಸಿಪಿ ಇಲ್ಲಿ ನೀಡಿದ್ದೇವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೇಸಿಗೆಯಲ್ಲಿ (Summer) ಹೇರಳವಾಗಿ ಹಣ್ಣು ಮತ್ತು ತರಕಾರಿಗಳು (Fruits and Vegetable) ಸಿಗುತ್ತವೆ. ಅವುಗಳನ್ನೇನೋ ಚೆನ್ನಾಗಿ ತಿನ್ನಬಹುದು. ಆದರೆ, ಸಾಮಾನ್ಯವಾಗಿ ಹೆಚ್ಚಿನವರಿಗೆ ಸುಡು ಬಿಸಿಲೆಗೆ ಮಸಾಲೆಯುಕ್ತ ಅಥವಾ ಭರ್ಜರಿ ಊಟ ಮಾಡಲು ಕಷ್ಟವಾಗುತ್ತದೆ. ಮಸಾಲೆಯುಕ್ತ ಆಹಾರಗಳಿಂದ ನಮಗೆ ಅಸಿಡಿಟಿ ಉಂಟು ಮಾಡುತ್ತವೆ ಮಾತ್ರವಲ್ಲ, ತಿಂದದ್ದು ಕರಗಿಯೇ ಇಲ್ಲವೆಂಬಂತೆ ಹೊಟ್ಟ ಭಾರ ಎನಿಸುತ್ತದೆ. ಹಾಗಾಗಿ, ಬೇಸಿಗೆಯ ಋತುವಿನಲ್ಲಿ (Summer Season) ಸರಳವಾದ, ಸಾದಾ ಮತ್ತು ಆರೋಗ್ಯಕರ ಆಹಾರವನ್ನು (Healthy Food) ಸೇವಿಸುವುದು ಸೂಕ್ತ. ಹಾಗಾದರೆ, ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬ ಬಗ್ಗೆ ಗೊಂದಲವಿದ್ದರೆ, ಕೆಲವೊಂದು ತಿನಿಸುಗಳ ರೆಸಿಪಿಗಳನ್ನು (Recipe) ಇಲ್ಲಿ ನೀಡಿದ್ದೇವೆ.

ಈ ವಿಶೇಷ ಖಾದ್ಯಗಳು ಬೇಸಿಗೆಯಲ್ಲಿ ಚೆನ್ನಾಗಿ ಜೀರ್ಣವಾಗುತ್ತವೆ. ಇವು ತಿನ್ನಲು ರುಚಿ ಮತ್ತು ಮಾಡುವುದು ಸುಲಭ. ಎಲ್ಲದಕ್ಕಿಂತ ಒಳ್ಳೆಯ ಸಂಗತಿ ಎಂದರೆ, ಇವುಗಳನ್ನು ಬೇಯಿಸಲು ಹೆಚ್ಚು ಸಮಯ ಬೇಕಿಲ್ಲ. ನಿತ್ಯದ ಪದಾರ್ಥಗಳನ್ನೇ ಹಾಕಿ ತಯಾರಿಸಬಹುದು ಕೂಡ.

1. ಕಡಿ

ಕಡಿ ಒಂದು ಸರಳವಾಗಿ ಮಾಡಬಹುದಾದ ಆಹಾರ. ಕಡಲೆ ಹಿಟ್ಟು ಮತ್ತು ಮಜ್ಜಿಗೆಗೆ ಕೆಲವು ಮಸಾಲೆಗಳನ್ನು ಸೇರಿಸಿ ತಯಾರಿಸುವಂತದ್ದು. ಬೇಸಿಗೆಗೆ ಇದು ಸೂಕ್ತ ಆಹಾರ. ನೀವು ಇದನ್ನು ರೋಟಿಗಳ ಜೊತೆಗೂ ತಿನ್ನಬಹುದು , ಇಲ್ಲವೇ ಅನ್ನದೊಂದಿಗೂ ಸವಿಯಬಹುದು. ಕಡಿಯನ್ನು ಬೇರೆ ಬೇರೆ ರೀತಿಯಲ್ಲಿ ಮಾಡಬಹುದು. ದಕ್ಷಿಣ ಭಾರತದಲ್ಲಿ ಇದನ್ನು ಮಜ್ಜಿಗೆ ಹುಳಿ ಎನ್ನುತ್ತಾರೆ (ಕಡಲೆ ಹಿಟ್ಟು ಸೇರಿಸುವುದಿಲ್ಲ ). ಆದಷ್ಟು ಸರಳವಾಗಿ ತಯಾರಿಸಬೇಕೆಂದರೆ, ರಾಜಸ್ಥಾನಿ ಶೈಲಿಯ ಕಡಿ ತಯಾರಿಸಿ.

ಇದನ್ನೂ ಓದಿ: BreakFast Recipe: ಬೆಳಗಿನ ಉಪಹಾರಕ್ಕೆ ಫಟಾಫಟ್ ಅಂತ ಮಾಡಿ ಅವಲಕ್ಕಿ ಒಗ್ಗರಣೆ

2. ಕುರುಕುರಿ ಮೊಸರು ಟಿಕ್ಕಿ

ಕುರುಕುರಿ ಮೊಸರು ಟಿಕ್ಕಿಯನ್ನು, ಗಟ್ಟಿ ಮೊಸರು, ಒಂದಿಷ್ಟು ಮಸಾಲೆ ಮತ್ತು ನಿಮ್ಮಿಷ್ಟದ ತರಕಾರಿಗಳನ್ನು ಹಾಕಿ ತಯಾರಿಸಬಹುದು. ಇದರ ಟಿಕ್ಕಿಗಳನ್ನು ಎಣ್ಣೆಯಲ್ಲಿ ಕರಿದೇ ತಯಾರಿಸಬೇಕೆಂದಿಲ್ಲ, ಕಾವಲಿಯಲ್ಲೂ ಕಾಯಿಸಬಹುದು. ಆ ಟಿಕ್ಕಿಗಳು ಒಳಗಡೆ ಮೃದುವಾಗಿರುತ್ತವೆ ಮತ್ತು ಹೊರಗೆ ಗರಿಗರಿಯಾಗಿ ಇರುತ್ತವೆ.

3. ತುಂಬಿಸಿದ ಸೋರೆಕಾಯಿ (ಸ್ಟಫ್‍ಡ್ ಲೌಕಿ)

ಸೋರೆಕಾರಿ ಜನಪ್ರಿಯ ಮತ್ತು ಪೌಷ್ಟಿಕಾಂಶಯುಕ್ತ ತರಕಾರಿ. ಅದನ್ನು ಒಂದು ವಿಭಿನ್ನ ಟ್ವಿಸ್ಟ್‌ನೊಂದಿಗೆ ತಯಾರಿಸಬೇಕು ಎಂದರೆ ಹೀಗೆ ಮಾಡಿ- ಸೋರೆಕಾಯಿಯ ಮಧ್ಯೆ ತೂತು ಮಾಡಿ, ಅದರೊಳಗೆ ಲಿಂಬೆಹಣ್ಣು, ಪನ್ನೀರ್‌ ಮಿಶ್ರಣವನ್ನು ತುಂಬಿಸಿ, ಬೇಯಿಸಿ (ಬಿಲ್ಲೆಯಾಕಾರಕ್ಕೆ ಕತ್ತರಿಸಿ). ರುಚಿಕರ ಸ್ಟಫ್ಡ್‌ ಲೌಕಿ, ಅಂದರೆ ತುಂಬಿಸಿದ ಸೋರೆಕಾಯಿ ಸಿದ್ಧವಾಗುತ್ತದೆ.

4. ನುಚ್ಚಿನುಂಡೆ

ದಕ್ಷಿಣ ಭಾರತದಲ್ಲಿ ಇದು ಅತ್ಯಂತ ಜನಪ್ರಿಯ ಬೆಳಗ್ಗಿನ ಉಪಾಹಾರದ ತಿನಿಸಾಗಿದೆ. ಎರಡು ರೀತಿಯ ಬೇಳೆಗಳಿಗೆ ಕೆಲವು ಮಸಾಲೆ ಪದಾರ್ಥಗಳನ್ನು ಸೇರಿಸಿ, ಹಬೆಯಲ್ಲಿ ಚೆನ್ನಾಗಿ ಬೇಯಿಸಿ ಮಾಡುವ ಆರೋಗ್ಯಕರ ತಿನಿಸು ಇದು.

5. ಮಾವಿನ ದಾಲ್

ಮಾವಿನಕಾಯಿ, ತೊಗರಿಬೇಳೆ ಮತ್ತು ಭಾರತೀಯ ಮಸಾಲೆಗಳನ್ನು ಸೇರಿಸಿ ತಯಾರಿಸುವ ಈ ಖಾದ್ಯವಿದು. ಬಳಿಕ ಅದಕ್ಕೆ ಕೆಂಪು ಮೆಣಸಿನ ಕಾಯಿ, ಸಾಸಿವೆ ಕಾಳು ಮತ್ತು ಕರಿಬೇವಿನ ಸೊಪ್ಪಿನ ಒಗ್ಗರಣೆ ಹಾಕುತ್ತಾರೆ. ಮಾವಿನ ಕಾಯಿಯ ಹುಳಿ ಸ್ವಾದವುಳ್ಳ ಈ ದಾಲ್ ಬಿಸಿಬಿಸಿ ಅನ್ನದೊಂದಿಗೆ ತಿನ್ನಲು ಬಲು ರುಚಿ.

ಇದನ್ನೂ ಓದಿ: Sunday Special: ಮಂಗಳೂರು ಶೈಲಿಯಲ್ಲಿ ಚಿಕನ್​ ಗೀ ರೋಸ್ಟ್​ ಮಾಡೋದು ಹೀಗೆ..

6. ಸೌತೆಕಾಯಿ ಸೂಪ್

ಸೌತೆಕಾಯಿ ಎಲ್ಲಾ ಕಡೆ ಸಿಗುವ ತರಕಾರಿಯಾಗಿದ್ದು, ಬೇಸಗೆಯಲ್ಲಿ ಅದರ ಉಪಯೋಗ ಹೆಚ್ಚು. ಎಂದಿನಂತೆ, ಸಲಾಡ್, ಜ್ಯೂಸ್ ಮಾಡುವುದಕ್ಕಿಂತ ಒಮ್ಮೆ ಸೌತೆಕಾಯಿಗಳ ಸೂಪ್ ತಯಾರಿಸಿ ನೋಡಿ. ಈ ಸೂಪನ್ನು ಮಾಡುವುದು ಸರಳ, ಸಾಮಾನ್ಯವಾಗಿ ಸೂಪ್‍ಗೆ ಬಳಸುವ ಸಾಮಾಗ್ರಿಗಳನ್ನು ಬಳಸಿ, 10 ನಿಮಿಷದಲ್ಲಿ ತಯಾರಿಸಬಹುದು.

7. ಅಲಹಾಬಾದಿ ತೆಹರಿ

ಸುವಾಸನೆ ಭರಿತ ಮಸಾಲೆಗಳನ್ನು ಹಾಕಿ ತಯಾರಿಸಿದ ಹಳದಿ ಬಣ್ಣದ ಅನ್ನದ ಖಾದ್ಯವಿದು. ನಿಮಗಿಷ್ಟದ ತರಕಾರಿಗಳನ್ನು (ಬೇಕಿದ್ದರೆ ಒಣ ಹಣ್ಣುಗಳನ್ನು) ಕೂಡ ಇದಕ್ಕೆ ಸೇರಿಸಬಹುದು. ಈ ಖಾದ್ಯ ತುಂಬಾ ರುಚಿಕರವಾಗಿರುತ್ತದೆ.
Published by:Pavana HS
First published: