Infertility: ಮಹಿಳೆಯರಲ್ಲಿ ಬಂಜೆತನಕ್ಕೆ ಕಾರಣವಾಗುವ 6 ಜೀವನಶೈಲಿಗಳಿವು, ಎಚ್ಚರವಹಿಸಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಜೀವನಶೈಲಿಯು ತಡವಾಗಿ ಮಕ್ಕಳಾಗುವಿಕೆಗೆ ಕಾರಣವಾಗಿದೆ. ಜೀವನಶೈಲಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಲು ಆರು ಕಾರಣಗಳನ್ನು ನಾವಿಲ್ಲಿ ಬಿಚ್ಚಿಡಲಿದ್ದೇವೆ. ಆ ಕಾರಣಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.

  • Share this:

ಮಹಿಳೆಯರಲ್ಲಿ ಬಂಜೆತನ (Infertility) ಮತ್ತು ವಿಳಂಬ ಗರ್ಭಧಾರಣೆ ಸಮಸ್ಯೆಯು ಇಂದಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಬಂಜೆತನವು ಪ್ರಪಂಚದಾದ್ಯಂತ ಸಂತಾನೋತ್ಪತ್ತಿ ವಯಸ್ಸಿನ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಅಂದಾಜಿನ ಪ್ರಕಾರ, ಜಾಗತಿಕವಾಗಿ 48 ಮಿಲಿಯನ್ ದಂಪತಿಗಳು (Couple) ಮತ್ತು 186 ಮಿಲಿಯನ್ ವ್ಯಕ್ತಿಗಳು ಬಂಜೆತನವನ್ನು ಎದುರಿಸುತ್ತಾರೆ. ಭಾರತದಲ್ಲಿ, (India) ಸುಮಾರು 27.5 ಮಿಲಿಯನ್ ದಂಪತಿಗಳು ಪ್ರೆಗ್ನೆನ್ಸಿಗಾಗಿ (Pregnancy) ಪ್ರಯತ್ನಿಸುತ್ತಿದ್ದಾರೆ. ವೈದ್ಯಕೀಯ ಕಾರಣಗಳ ಜೊತೆಗೆ ಇಂದಿನ ಜೀವನಶೈಲಿ, ಆಹಾರ ಕ್ರಮ ಇತ್ಯಾದಿಗಳು ಕೂಡ ಮಹಿಳೆಯರಲ್ಲಿ ಗರ್ಭಧಾರಣೆಯನ್ನು ವಿಳಂಬಗೊಳಿಸಬಹುದು. ಮಹಿಳೆಯರಲ್ಲಿ (Women's) ಅಂಡಾಣು ಉತ್ಪಾದನೆಯಲ್ಲಿ ಹೆಚ್ಚಿನ ತೊಂದರೆಗಳು, ಅನಿಯಮಿತ ಮುಟ್ಟಿನ ಚಕ್ರಗಳು, ಗರ್ಭಪಾತಗಳ (abortions) ಹೆಚ್ಚಳ ಮತ್ತು ಗರ್ಭಾವಸ್ಥೆಯ ತೊಂದರೆಗಳು, ತಡವಾದ ವಿವಾಹ ಹೀಗೆ ಅನೇಕ ಕಾರಣಗಳು ಬಂಜೆತನಕ್ಕೆ ನೇರವಾದ ಕಾರಣಗಳಾಗಿವೆ.


ಇದರ ಹೊರತಾಗಿ ಜೀವನಶೈಲಿಯು ತಡವಾಗಿ ಮಕ್ಕಳಾಗುವಿಕೆಗೆ ಕಾರಣವಾಗಿದೆ. ಜೀವನಶೈಲಿಗೆ ಸಂಬಂಧಿಸಿದಂತೆ ಮುಖ್ಯವಾಗಿ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಲು ಆರು ಕಾರಣಗಳನ್ನು ನಾವಿಲ್ಲಿ ಬಿಚ್ಚಿಡಲಿದ್ದೇವೆ. ಆ ಕಾರಣಗಳು ಯಾವುದು ಎಂದು ನೀವು ಈ ಲೇಖನದ ಮೂಲಕ ತಿಳಿದುಕೊಳ್ಳಬಹುದು.


ಜೀವನಶೈಲಿಗೆ ಸಂಬಂಧಿಸಿದ ಬಂಜೆತನದ ಕಾರಣಗಳು
1. ಕಳಪೆ ಜೀವನಶೈಲಿ
ಇತ್ತೀಚಿನ ದಿನಗಳಲ್ಲಿ ಜೀವನಶೈಲಿ ಆರೋಗ್ಯಕರ ಜೀವನಕ್ಕೆ ಪ್ರಮುಖವಾಗಿದೆ. ತಡವಾದ ಕೆಲಸದ ಸಮಯ, ರಾತ್ರಿ ಪಾಳಿಗಳು, ಅನಿಯಮಿತ ಮಲಗುವ ಸಮಯ, ಕಳಪೆ ನಿದ್ರೆ, ಒತ್ತಡ ಮತ್ತು ಆತಂಕದ ಜೀವನ ಶೈಲಿ ಹೀಗೆ ಈ ಎಲ್ಲಾ ವಿವಿಧ ಅಂಶಗಳು ಕಳಪೆ ಜೀವನ ಶೈಲಿಗೆ ಸಂಬಂಧಪಟ್ಟಿವೆ.


ಜಡ ಜೀವನಶೈಲಿ ಮತ್ತು ನಿಯಮಿತ ವ್ಯಾಯಾಮದ ಕೊರತೆಯಿಂದ ಸ್ಥೂಲಕಾಯತೆ, ಹಾರ್ಮೋನ್ ಅಸ್ವಸ್ಥತೆ ಉಂಟಾಗಬಹುದು. ಸ್ಥೂಲಕಾಯತೆಯು ಬಂಜೆತನಕ್ಕೆ ಕಾರಣವಾಗಿರುವ ಪ್ರಮುಖ ಅಂಶ. ಹೆಚ್ಚಿನ ತೂಕ ಸ್ತ್ರೀಯರಲ್ಲಿ ವೀರ್ಯವನ್ನು ಹಾನಿಗೊಳಿಸುತ್ತದೆ. ಮತ್ತು ಈಗಿನ ಮಹಿಳೆಯರು ಕೆಲಸಕ್ಕೆ ಹೆಚ್ಚು ಒತ್ತು ನೀಡುವುದರಿಂದ ಅದು ಕೂಡ ಒಂದು ಸಮಸ್ಯೆಯಾಗಿ ಪರಿಣಮಿಸುತ್ತದೆ.


ಇದನ್ನೂ ಓದಿ:  Uric Acid: ಯೂರಿಕ್ ಆಮ್ಲದಿಂದ ಬರಬಹುದು ಈ ಸಮಸ್ಯೆಗಳು, ಅದಕ್ಕೆ ಪರಿಹಾರ ಇಲ್ಲಿದೆ


ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವ ಸ್ರೀಯರಲ್ಲಿ ಉತ್ಪತ್ತಿಯಾಗುವ ಶಾಖವು ವೀರ್ಯದ ಮೇಲೆ ಪರಿಣಾಮ ಬೀರುವುದರಿಂದ ಫಲವತ್ತತೆ ವಿಫಲವಾಗುತ್ತದೆ.


2. ಕಳಪೆ ಆಹಾರದ ಆಯ್ಕೆ
ಜೀವನ ಶೈಲಿಗೆ ಸಂಬಂಧಿಸಿದಂತೆ ಕಳಪೆ ಆಹಾರ ಸೇವನೆ ಅತ್ಯಂತ ಕೆಟ್ಟ ಪದ್ಧತಿಯಾಗಿದೆ. ಉತ್ತಮ ಆರೋಗ್ಯಕ್ಕೆ ಉತ್ತಮ ಪೌಷ್ಠಿಕ ಆಹಾರ ಸೇವನೆ ಅತ್ಯಂತ ಪ್ರಮುಖವಾಗಿದೆ. ಇನ್ನು ಗರ್ಭದಾರಣೆಯ ವಿಷಯದಲ್ಲೂ ಇದು ನಿರ್ಣಾಯಕವಾಗಿದ್ದು, ಕಳಪೆ ಆಹಾರ ಸೇವನೆ ಬಂಜೆತನಕ್ಕೆ ಕಾರಣವಾಗಿದೆ.


ಹೆಚ್ಚು ಸಂಸ್ಕರಿಸಿದ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ಗಳೊಂದಿಗೆ ಹೆಚ್ಚು ಹೆಪ್ಪುಗಟ್ಟಿದ, ತ್ವರಿತ ಮತ್ತು ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ತಿನ್ನುವುದು ಮತ್ತು ಫೈಬರ್ ಭರಿತ ಆಹಾರ, ರಾಗಿ, ಹಣ್ಣುಗಳು ಮತ್ತು ತರಕಾರಿಗಳ ಕಡಿಮೆ ಸೇವನೆ ಬಂಜೆತನಕ್ಕೆ ಕಾರಣವಾಗುತ್ತದೆ.


ಕಳಪೆ ಆಹಾರಗಳು ಯೋನಿ, ಗರ್ಭಕಂಠದ ಮತ್ತು ಗರ್ಭಾಶಯದ ಸೋಂಕನ್ನು ತಡೆಗಟ್ಟುವಲ್ಲಿ ವೀಪಲವಾಗಿರುತ್ತವೆ. ವೀರ್ಯದ ಗುಣಮಟ್ಟವು ಆಹಾರ ಪದ್ಧತಿಯಿಂದ ನೇರವಾಗಿ ಪ್ರಭಾವಿತವಾಗಿರುತ್ತದೆ. ಮಹಿಳೆಯರಲ್ಲಿ, ಕಳಪೆ ಆಹಾರವು ಅಂಡೋತ್ಪತ್ತಿ ಅಪಸಾಮಾನ್ಯ ಕ್ರಿಯೆಗೆ ಕಾರಣವಾಗಬಹುದು ಮತ್ತು ಮುಟ್ಟಿನ ವಿಳಂಬಕ್ಕೆ ಕಾರಣವಾಗಬಹುದು, ಇದು ಅಂತಿಮವಾಗಿ ಬಂಜೆತನಕ್ಕೆ ಕಾರಣವಾಗುತ್ತದೆ ಎನ್ನುತ್ತಾರೆ ತಜ್ಞರು.


3. ಜ್ಞಾನದ ಕೊರತೆ
ಕಾಲಮಾನ ಎಷ್ಟೇ ಬದಲಾಗಿದ್ದರೂ ಲೈಂಗಿಕ ಕ್ರಿಯೆ ಮತ್ತು ಸಂತಾನೋತ್ಪತ್ತಿಯ ಬಗೆಗಿನ ಜ್ಞಾನದ ಬಗ್ಗೆ ಜನರಿಗೆ ಇನ್ನೂ ಅರಿವಿನ ಕೊರತೆ ಇದೆ. ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಶಿಕ್ಷಣದ ಕೊರತೆಯು ಲೈಂಗಿಕವಾಗಿ ಹರಡುವ ರೋಗಗಳಿಗೆ ಕಾರಣವಾಗಿದ್ದು, ಟ್ಯೂಬ್ ಸಮಸ್ಯೆಗಳಿಂದ ಬದಲಾಯಿಸಲಾಗದ ಬಂಜೆತನ ಉಂಟಾಗುವ ಸಾಧ್ಯತೆಗಳಿವೆ. ಲೈಂಗಿಕ ಕ್ರಿಯೆ ಮತ್ತು ಸಂತಾನೋತ್ಪತ್ತಿಯ ಬಗೆಗಿನ ಸರಿಯಾದ ಅರಿವಿಲ್ಲದಿರುವುದು ಸಹ ಬಂಜೆತನಕ್ಕೆ ಕಾರಣವಾಗಿದೆ.


ಇದನ್ನೂ ಓದಿ:  Cancer: ಯುವಜನರಲ್ಲಿಯೇ ಹೆಚ್ಚುತ್ತಿದ್ಯಂತೆ ಮಹಾಮಾರಿ ಕ್ಯಾನ್ಸರ್‌! ಹಾಗಿದ್ರೆ ಇದಕ್ಕೆ ಕಾರಣವೇನು?


4. ವಯಸ್ಸು
ಮದುವೆ ಮತ್ತು ಕುಟುಂಬ ಯೋಜನೆ ಮುಂದೂಡುವ ಮೂಲಕ ಆರ್ಥಿಕ ಸ್ಥಿರತೆಯನ್ನು ಹೊಂದಲು ಬಯಸುತ್ತಾರೆ. ವಯಸ್ಸಾದ ಬಳಿಕ ಗರ್ಭಧಾರಣೆಗೆ ಪ್ರಯತ್ನಿಸುವುದು ಸರಿಯಲ್ಲದ ವಿಧಾನ ಎನ್ನಬಹುದು. ಭಾರತೀಯ ಮಹಿಳೆಯರಲ್ಲಿ ಸಂತಾನೋತ್ಪತ್ತಿಯ ಅವಧಿಯು ಚಿಕ್ಕದಾಗಿದ್ದು, ಮಕ್ಕಳನ್ನು ಬಯಸುವವರು ವಯಸ್ಸಿನ ಮೊದಲೇ ಈ ಬಗ್ಗೆ ಯೋಚಿಸಬೇಕು. ಇಂದಿನ ಮಹಿಳೆಯರು ತಮ್ಮ ವೃತ್ತಿ ಜೀವನಕ್ಕೆ ಹೆಚ್ಚು ಒತ್ತು ಕೊಡುವ ಹಿನ್ನೆಲೆಯಲ್ಲಿ ಮದುವೆ ಹಿಂದೆ ಹಾಕುತ್ತಾ ಹೋಗುವರು. ಆದರೆ ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಲು ವಯಸ್ಸು ಕೂಡ ಪ್ರಮುಖ ಪಾತ್ರ ವಹಿಸುವುದು.


5. ಪರಿಸರ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು
ಪರಿಸರ ಮಾಲಿನ್ಯ ಅನೇಕ ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಅನ್ನು ಉಂಟುಮಾಡುತ್ತದೆ ಮತ್ತು ವೀರ್ಯಾಣುಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಕಡಿಮೆ ಮಾಡಿದೆ. ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನಮ್ಮ ದೇಹದ ವಿವಿಧ ಭಾಗಗಳಿಗೆ ಹಾನಿಯಾಗಿದೆ. ಬಾಲಕಿಯರಲ್ಲಿ 10 ವರ್ಷಗಳ ಮುಂಚೆಯೇ ಆರಂಭಿಕ ಋತುಬಂಧ ಅಥವಾ ಅಕಾಲಿಕ ಪ್ರೌಢಾವಸ್ಥೆಯು ವಾಯುಮಾಲಿನ್ಯ ಮತ್ತು ಆಹಾರ ಕಲಬೆರಕೆಗೆ ಸಂಬಂಧಿಸಿದೆ.


6. ಧೂಮಪಾನ ಮತ್ತು ಮದ್ಯಪಾನ
ಧೂಮಪಾನ ಮತ್ತು ಆಲ್ಕೋಹಾಲ್ ಸೇವನೆ, ಹಾಗೆಯೇ ಗ್ಯಾಜೆಟ್‌ಗಳಿಂದ ವಿದ್ಯುತ್ಕಾಂತೀಯ ವಿಕಿರಣವು ವೀರ್ಯಾಣು ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ ಮತ್ತು ವೀರ್ಯದ ಡಿಎನ್‌ಎಗೆ ಹಾನಿ ಮಾಡುತ್ತದೆ. ಮಹಿಳೆಯರು ಧೂಮಪಾನ ಮಾಡುವುದರಿಂದ ಅಂಡಾಶಯದ ಕಿರುಚೀಲಗಳ ಸಂಖ್ಯೆ ಕಡಿಮೆಯಾಗುತ್ತದೆ, AMH ಮಟ್ಟಗಳು ಕುಸಿಯುತ್ತವೆ ಮತ್ತು ಅಕಾಲಿಕ ಋತುಬಂಧದಲ್ಲಿ ಇಳಿಯಬಹುದು.


ಈ ಎಲ್ಲಾ ಮೇಲಿನ ಕಾರಣಗಳು ಬಂಜೆತನಕ್ಕೆ ಸಂಬಂಧಿಸಿವೆ. ಹೀಗಾಗಿ ಲೈಂಗಿಕ ಜೀವನವನ್ನು ಪ್ರಾರಂಭಿಸುವ ಮೊದಲು ಸಮಾಲೋಚನೆ, ಸುರಕ್ಷಿತ ಗರ್ಭನಿರೋಧಕ ಸಮಾಲೋಚನೆ, ಪ್ರಸವಪೂರ್ವ ಸಲಹೆಯನ್ನು ಪಡೆಯುವುದು ಈ ಸಮಸ್ಯೆಗಳನ್ನು ಕಡಿಮೆ ಮಾಡಲು ಮತ್ತು ಅನೇಕ ದಂಪತಿಗಳಲ್ಲಿ ಫಲವತ್ತತೆಯನ್ನು ಪುನಃಸ್ಥಾಪಿಸಲು ಸಾಧ್ಯವಾಗುತ್ತದೆ.


ಇದನ್ನೂ ಓದಿ:  Digestion Problem: ದೇಹದಲ್ಲಿ ಚಯಾಪಚಯ ಕ್ರಿಯೆ ಏರುಪೇರಾದರೆ ಯಾವ ಸಮಸ್ಯೆಗಳು ಕಾಡುತ್ತವೆ?


ಯುವ ಪೀಳಿಗೆಯು ತಮ್ಮ ಫಲವತ್ತತೆಗೆ ಅಪಾಯವನ್ನುಂಟುಮಾಡುವ ಈ ಅಂಶಗಳ ಬಗ್ಗೆ ತಿಳಿದಿರಬೇಕು ಮತ್ತು ಗರ್ಭಧಾರಣೆಯನ್ನು ಯೋಜಿಸುವಾಗ ಸರಿಯಾದ ಸಲಹೆಯನ್ನು ಪಡೆಯಬೇಕು.

top videos
    First published: