Health Tips: ನಿಮ್ಮ ಅಡುಗೆ ಮನೆಯ ಮಸಾಲೆಗಳಲ್ಲಿದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ರಹಸ್ಯ

Immunity Booster: ಹೊರಗಿನ ಸುರಕ್ಷತಾ ಕ್ರಮಗಳ ಜೊತೆಗೆ, ಒಳಗಿನಿಂದ ದೇಹವನ್ನು ಬಲಪಡಿಸುವುದು ಸಮಾನವಾಗಿ ಮುಖ್ಯವಾಗಿದೆ. ಆದ್ದರಿಂದ ವೈರಸ್ ನಿಮ್ಮ ದೇಹದ ಮೇಲೆ ಪ್ರಭಾವ ಬೀರುವುದಿಲ್ಲ. ಓಮೈಕ್ರಾನ್‌ನಿಂದ ದೂರವಿರಲು ಉತ್ತಮ ರೋಗನಿರೋಧಕ ಶಕ್ತಿಯನ್ನು (Immunity Power) ಹೊಂದಿರುವುದು ಮುಖ್ಯ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಎರಡು ವರ್ಷಗಳಿಂದ ನಡೆಯುತ್ತಿರುವ ಕರೋನಾ ಬಿಕ್ಕಟ್ಟು (Corona) ಪ್ರಸ್ತುತ, ಕರೋನಾ ವೈರಸ್‌ನ ಹೊಸ ರೂಪಾಂತರವಾದ ಓಮೈಕ್ರಾನ್​ ಜೊತೆ ಹೆಚ್ಚು ಬೆಳೆಯುತ್ತಿದೆ. ಓಮೈಕ್ರಾನ್  (Omicron) ಬಗ್ಗೆ ಆತಂಕಕಾರಿ ಅಂಕಿಅಂಶಗಳು ಪ್ರಪಂಚದಾದ್ಯಂತ ಕೇಳಿ ಬರುತ್ತಿವೆ. ಓಮೈಕ್ರಾನ್ ಭಾರತದಲ್ಲಿ ಸಹ ಹರಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ಸಾಮಾನ್ಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಜರ್‌ಗಳನ್ನು ಬಳಸುವುದು ಮತ್ತು ಸಾಮಾಜಿಕ ಅಂತರವನ್ನು ಅನುಸರಿಸುವಂತಹ ಸುರಕ್ಷತಾ ಕ್ರಮಗಳನ್ನು ಬಳಸುವುದು ಉತ್ತಮ. ತಜ್ಞರ ಪ್ರಕಾರ, ಹೊರಗಿನ ಸುರಕ್ಷತಾ ಕ್ರಮಗಳ ಜೊತೆಗೆ, ಒಳಗಿನಿಂದ ದೇಹವನ್ನು ಬಲಪಡಿಸುವುದು ಸಮಾನವಾಗಿ ಮುಖ್ಯವಾಗಿದೆ. ಆದ್ದರಿಂದ ವೈರಸ್ ನಿಮ್ಮ ದೇಹದ ಮೇಲೆ ಪ್ರಭಾವ ಬೀರುವುದಿಲ್ಲ. ಓಮೈಕ್ರಾನ್‌ನಿಂದ ದೂರವಿರಲು ಉತ್ತಮ ರೋಗನಿರೋಧಕ ಶಕ್ತಿಯನ್ನು (Immunity Power) ಹೊಂದಿರುವುದು ಮುಖ್ಯ.  ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರಗಳು ಯಾವುವು ಎಂಬುದು ಇಲ್ಲಿದೆ.  

ಶುಂಠಿ

ಶುಂಠಿಯು ಆಂಟಿಮೈಕ್ರೊಬಿಯಲ್, ಆ್ಯಂಟಿಬಯೋಟಿಕ್ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಶುಂಠಿ ತಿನ್ನುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಶುಂಠಿಯನ್ನು ಹಾಲಿನೊಂದಿಗೆ ಬೆರೆಸಿ ಸೇವನೆ ಮಾಡುವುದು ಉತ್ತಮ.

ಗ್ರೀನ್​ ಟೀ ಜೊತೆ ಅರ್ಧ ಚಮಚ ಶುಂಠಿ ಪುಡಿಯನ್ನು ಸೇರಿಸಿ ಸೇವನೆ ಮಾಡುವುದು ಅಥವಾ ಜೇನುತುಪ್ಪದೊಂದಿಗೆ ಪೇಸ್ಟ್ ಮಾಡಿ ತಿನ್ನುವುದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಹಾಗೆಯೇ, ಇದನ್ನು ಮಾಡುವಾಗ ನೆನಪಿಡುವ ಮುಖ್ಯ ವಿಷಯವೆಂದರೆ ಹೆಚ್ಚು ಶುಂಠಿ ಸೇವನೆಯು ಆರೋಗ್ಯಕ್ಕೆ ಅಪಾಯಕಾರಿ ಎಂಬುದು.

ಅರಿಶಿನ

ಅಡುಗೆಯಲ್ಲಿ ಬಳಸುವ ಅರಿಶಿನ ಪ್ರತಿ ಮನೆಯ ಅಡುಗೆ ಮನೆಯಲ್ಲಿ ಯಾವಾಗಲೂ ಇರಬೇಕು. ಅರಿಶಿನ ಒಂದು ಮಸಾಲೆಯಾಗಿದ್ದರೂ ಸಹ  ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಶೀತ, ಕೆಮ್ಮುಗಳನ್ನು ನಿವಾರಿಸಲು ಯಾವುದೇ ಸಮಯದಲ್ಲಿ ಅರಿಶಿನವು ತುಂಬಾ ಪರಿಣಾಮಕಾರಿಯಾಗಿದೆ.

ಇದನ್ನೂ ಓದಿ:ಪೇಪರ್​ ಕಪ್​ನಲ್ಲಿ ಕಾಫಿ- ಟೀ ಕುಡಿಯೋದು ಆರೋಗ್ಯಕ್ಕೆ ಹಾನಿಕಾರಕ ಎಚ್ಚರ

ಜರ್ನಲ್ ಆಫ್ ಸೈನ್ಸ್ ಪ್ರಕಾರ, ಅರಿಶಿನವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ. ಆದ್ದರಿಂದ ಇದು ರೋಗನಿರೋಧಕ ಶಕ್ತಿ ಮತ್ತು ದೈಹಿಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಅರಿಶಿನವನ್ನು ಹಾಲು, ಕುದಿಯುವ ನೀರು ಅಥವಾ ಚಹಾದೊಂದಿಗೆ ಸೇವನೆ ಮಾಡಬಹುದು.

ನೆಲ್ಲಿಕಾಯಿ ಪುಡಿ

ಅರಿಶಿನದಂತೆ, ನೆಲ್ಲಿಕಾಯಿ ಪುಡಿ ಕೂಡ ಪ್ರತಿಯೊಂದು ಅಡುಗೆ ಮನೆಯಲ್ಲಿ ಇರಬೇಕಾದ ಪ್ರಮುಖ ವಸ್ತು. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ(Vitamin C) ಸಮೃದ್ಧವಾಗಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಶೋಧನೆಯ ಪ್ರಕಾರ, ಅಮೋಕ್ಸಿಸಿಲಿನ್ ಟ್ಯಾನಿನ್‌ಗಳಲ್ಲಿ ಅಧಿಕವಾಗಿದೆ. ಟ್ಯಾನಿನ್ ನಿಮ್ಮ ದೇಹದಿಂದ ವಿಷವನ್ನು ಹೋರ ಹಾಕಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಬಲಗೊಳ್ಳುತ್ತದೆ. ನೆಲ್ಲಿಕಾಯಿಯನ್ನು ಒಣಗಿಸಬಹುದು, ಊಟದ ಜೊತೆ ಸೇವನೆ ಮಾಡಬಹುದು ಅಥವಾ ಉಪ್ಪಿನಕಾಯಿ ತಯಾರಿಸಿ ತಿನ್ನಿ.

ದಾಲ್ಚಿನ್ನಿ

ದಾಲ್ಚಿನ್ನಿ ಭಾರತೀಯ ಪಾಕಪದ್ಧತಿಯಲ್ಲಿ ಕಂಡುಬರುವ ಪ್ರಮುಖ ಮಸಾಲೆಗಳಲ್ಲಿ ಒಂದಾಗಿದೆ. ಆಹಾರಕ್ಕೆ ಪರಿಮಳವನ್ನು ಸೇರಿಸುವ ದಾಲ್ಚಿನ್ನಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹ ತುಂಬಾ ಉಪಯುಕ್ತವಾಗಿದೆ. ಚಳಿಗಾಲದಲ್ಲಿ ಬರುವ ವಿವಿಧ ರೋಗಗಳನ್ನು ತಡೆಗಟ್ಟಲು ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ದಾಲ್ಚಿನ್ನಿಯನ್ನು ತಿನ್ನಬಹುದು. ದಾಲ್ಚಿನ್ನಿ ಕೂಡ ಕರೋನಾ ವೈರಸ್​ ಬರದಂತೆ ತಡೆಯಲು ಸಹಕಾರಿ ಎನ್ನಲಾಗುತ್ತದೆ. ದಾಲ್ಚಿನ್ನಿಯನ್ನು ಚಹಾದೊಂದಿಗೆ ಬೆರೆಸಿ ಸೇವನೆ ಮಾಡುವುದು ಉತ್ತಮ ಪ್ರಯೋಜನ ನೀಡುತ್ತದೆ.

ಮೆಣಸು 

ಕಾಳುಮೆಣಸಿನಲ್ಲಿ ಹಲವಾರು ಔಷಧೀಯ ಗುಣಗಳಿವೆ. ಮೆಣಸಿನ ಪುಡಿಯನ್ನು ಜೇನುತುಪ್ಪ ಅಥವಾ ಉಪ್ಪಿನ ಜೊತೆ ಸೇವಿಸಬಹುದು. ಕೆಲವರು ಈ ಪುಡಿಯನ್ನು ಮಸಾಲೆಯುಕ್ತ ಚಹಾದ ಜೊತೆ ಬೆರೆಸಿ ಕುಡಿಯುತ್ತಾರೆ. ಇದನ್ನು ಹಣ್ಣುಗಳು ಮತ್ತು ಸಲಾಡ್‌ಗಳಲ್ಲಿಯೂ ಸೇರಿಸಿ ಸೇವಿಸಬಹುದು.

ಇದನ್ನೂ ಓದಿ:ಸರಿಯಾದ ಸಮಯಕ್ಕೆ ಪಿರಿಯಡ್ಸ್​ ಆಗ್ತಿಲ್ವಾ? ಈ ಆಹಾರಗಳನ್ನು ಟ್ರೈ ಮಾಡಿ

ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮ.  ಮೇಲಿನ ಎಲ್ಲಾ ಐದು ಪದಾರ್ಥಗಳು ಸುಲಭವಾಗಿ ಲಭ್ಯವಿರುತ್ತದೆ. ಅವುಗಳನ್ನು ಬಳಸುವುದು ತುಂಬಾ ಸುಲಭ. ಆದ್ದರಿಂದ, ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸುವುದು ಬಹಳ ಪ್ರಯೋಜನ ನೀಡುತ್ತದೆ.
Published by:Sandhya M
First published: