ಕೆಲವರಿಗೆ ಒಳ್ಳೆಯ ಕೆಲಸ (Work), ಕೈ ತುಂಬಾ ಸಂಬಳ(Salary), ಇರೋದಕ್ಕೆ ಸ್ವಂತ ಮನೆ (House), ಓಡಾಡೋದಕ್ಕೆ ಕಾರು ಹೀಗೆ ಎಲ್ಲವೂ ಇರುತ್ತದೆ. ಆದರೆ ಅವರಿಗೆ ಜೀವನಕ್ಕೆ ಬೇಕಾಗಿರುವ ಸಂತೋಷ ಮತ್ತು ಮನಸ್ಸಿಗೆ ನೆಮ್ಮದಿಯೇ ಇರುವುದಿಲ್ಲ ಅಂತ ಹೇಳಬಹುದು. ಅದೇ ಇನ್ನೂ ಕೆಲವರಿಗೆ ಜೀವನದಲ್ಲಿ ಏನೂ ಐಷಾರಾಮಿ ಬಂಗಲೆ, ಕಾರು, ಒಳ್ಳೆಯ ಕೆಲಸ, ಸಂಬಳ ಇಲ್ಲದೆ ಹೋದರೂ ಮನಸ್ಸಿಗೆ ನೆಮ್ಮದಿ ಇರುತ್ತದೆ ಅಂತ ಹೇಳಬಹುದು. ಒಟ್ಟಿನಲ್ಲಿ ಹೇಳುವುದಾದರೆ ತುಂಬಾ ದುಡ್ಡಿರುವವರು ಮನಸ್ಸಿಗೆ ನೆಮ್ಮದಿ, ಸಂತೋಷವನ್ನು ಹುಡುಕುವ ದಾರಿಯಲ್ಲಿದ್ದರೆ, ಮನಸ್ಸಿಗೆ ನೆಮ್ಮದಿ, ಸಂತೋಷವಿರುವವರ ಬಳಿ ದುಡ್ಡಿರುವುದಿಲ್ಲ.
ಅದರಲ್ಲೂ ಬಹಳಷ್ಟು ಜನರು ತಮ್ಮ ವೃತ್ತಿಜೀವನದಿಂದ ಅಷ್ಟೊಂದು ಸಂತೋಷವಾಗಿರುವುದಿಲ್ಲ ಮತ್ತು ಇದು ಜೀವನದಲ್ಲಿ ಉಳಿದೆಲ್ಲದ್ದಕ್ಕೂ ಕಾರಣವಾಗುತ್ತದೆ. ಎಂದರೆ ಕೆಲಸ ಸರಿ ಇಲ್ಲದಾಗ ವ್ಯಕ್ತಿಗೆ ತನ್ನ ಕೆಲಸದಲ್ಲಿಯಾಗಲಿ, ವೈಯುಕ್ತಿಕ ಜೀವನದಲ್ಲಿ ಆ ನೆಮ್ಮದಿ ಮತ್ತು ಸಂತೋಷ ತುಂಬಾನೇ ಮಿಸ್ ಮಾಡಿಕೊಳ್ಳುತ್ತಾರೆ.
ಕೆಲ ಬಿಲಿಯನೇರ್ ಗಳು ತಮ್ಮ ಜೀವನದಲ್ಲಿ ಹೇಗೆ ಉಳಿದವರಿಗಿಂತ ಭಿನ್ನವಾಗಿ ಸಂತೋಷ ಮತ್ತು ಹಣವನ್ನು ಹೊಂದಿರುತ್ತಾರೆ. ಅವರನ್ನು ನೋಡಿದಾಗ ನಮಗೆ ಮೊದಲು ಅನ್ನಿಸುವುದು ಅವರ ಬಳಿ ದುಡ್ಡಿರುವುದರಿಂದಲೇ ಸಂತೋಷವಾಗಿದ್ದಾರೆ ಅಂತ.
ಆದರೆ ಅವರು ತಮ್ಮ ಜೀವನದಲ್ಲಿ ಒಂದು ಸರಳವಾದ ಮಂತ್ರವನ್ನು ಅಳವಡಿಸಿಕೊಂಡಿರುತ್ತಾರೆ. ಅದೇನೆಂದರೆ ಜೀವನದಲ್ಲಿ ಅವರು ಈ ಐದು ಪದಗಳನ್ನು ಜೋಡಿಸಿರುವ ವಾಕ್ಯವನ್ನು ನಂಬಿರುತ್ತಾರೆ. ಇದು ಅವರ ಜೀವನದಲ್ಲಿ ಸುಸ್ಥಿರ ಸಂತೋಷಕ್ಕೆ ಕಾರಣವಾಗುತ್ತದೆ ಅಂತ ಹೇಳಬಹುದು.
ಆ ಐದು ಪದಗಳ ವಾಕ್ಯ ಯಾವುವು?
‘ನೀವು ಇಷ್ಟಪಡುವ ಕೆಲಸಗಳನ್ನು ಮಾತ್ರ ಮಾಡಿ’ ಈ ಐದು ಪದಗಳು ಒಟ್ಟಿಗೆ ಸೇರಿದ ವಾಕ್ಯವನ್ನು ನಾವೆಲ್ಲಾ ಪಾಲಿಸಿದರೆ ಮಾತ್ರ ನಮ್ಮ ಮತ್ತು ನಿಮ್ಮ ಜೀವನದಲ್ಲಿ ಸುಸ್ಥಿರ ಸಂತೋಷ ನೆಲೆಸುವುದು.
ಬಿಲಿಯನೇರ್ ವಾರೆನ್ ಬಫೆಟ್ ಅವರು ಸಂತೋಷದ ಕೀಲಿ ಕೈ ಎಂದರೆ "ನಿಮ್ಮ ಜೀವನದುದ್ದಕ್ಕೂ ನೀವು ಆನಂದಿಸುವ ಕೆಲಸವನ್ನು ಮಾಡುವುದು" ಎಂದು ಹೇಳಿದ್ದಾರೆ.
"ನೀವು ಇಷ್ಟಪಡುವ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಾನು ನಿಮ್ಮನ್ನು ಒತ್ತಾಯಿಸುತ್ತೇನೆ. ನೀವು ಇಷ್ಟಪಡದ ಕೆಲಸಗಳನ್ನು ನೀವು ಮುಂದುವರಿಸಿದರೆ ಅದು ನಿಮ್ಮ ರೆಸ್ಯೂಮ್ ನಲ್ಲಿ ಉತ್ತಮವಾಗಿ ಕಾಣುತ್ತದೆ, ಆದರೆ ನಿಮ್ಮ ಮನಸ್ಸಿಗೆ ಅದು ನೆಮ್ಮದಿಯನ್ನು ಕೊಡುವುದಿಲ್ಲ” ಎಂದು ಹೇಳಿದ್ದರು.
ಆ ಕನಸಿನ ಕೆಲಸ ಅಥವಾ ವೃತ್ತಿಜೀವನವನ್ನು ಬೆನ್ನಟ್ಟುವಲ್ಲಿ ಅನೇಕ ತೊಡಕುಗಳು ಎದುರಾಗಬಹುದು. ನೀವು ಕೇವಲ ಒಂದು ದಿನ ಇದನ್ನು ಅರ್ಥ ಮಾಡಿಕೊಂಡು ನಿಮಗೆ ಇಷ್ಟವಿರುವ ಕೆಲಸವನ್ನು ಮತ್ತು ವ್ಯವಹಾರವನ್ನು ಶುರು ಮಾಡುವುದು ಎಂದರ್ಥವಲ್ಲ.
ಪ್ರತಿದಿನ ಬೆಳಿಗ್ಗೆ ನಿಮ್ಮನ್ನು ಹಾಸಿಗೆಯಿಂದ ಎಬ್ಬಿಸುತ್ತದೆ ನಿಮಗೆ ಇಷ್ಟವಿರುವ ಆ ಕೆಲಸ. ಅಂತಹ ಒಂದು ಕೆಲಸವನ್ನು ನೀವು ಕಂಡುಕೊಂಡಾಗ ಅದು ಸಂಪೂರ್ಣವಾಗಿ ಮೌಲ್ಯಯುತವಾಗಿರುತ್ತದೆ.
ಇದನ್ನೂ ಓದಿ: ಗಂಡಸರು ಅಳಲೇಬಾರದಾ? ಕಣ್ಣೀರನ್ನು ಎಂದಿಗೂ ತಡಯಬಾರದಂತೆ!
ಇಷ್ಟವಿರುವ ಕೆಲಸ ನಿಮಗೆ ನಿರ್ದಿಷ್ಟವಾದ ಉದ್ದೇಶವನ್ನು ನೀಡುತ್ತದೆ
ನೀವು ಇಷ್ಟಪಡುವದನ್ನು ನೀವು ಮಾಡಿದಾಗ, ನಿಮ್ಮ ಕೆಲಸ, ನಿಮ್ಮ ಮೌಲ್ಯಗಳು ಮತ್ತು ನಿಮಗೆ ಉದ್ದೇಶವನ್ನು ತರುವ ವಿಷಯಗಳ ನಡುವೆ ನೀವು ಹೊಂದಾಣಿಕೆಯನ್ನು ಸೃಷ್ಟಿಸುತ್ತೀರಿ.
ಉತ್ಸಾಹವಿಲ್ಲದೆ ನೀವು ಉದ್ದೇಶವನ್ನು ಹೊಂದಲು ಸಾಧ್ಯವಿಲ್ಲ, ಇದು ನಿಮ್ಮ ಗ್ರಾಹಕರಿಗೆ, ನಿಮ್ಮ ವ್ಯವಹಾರಕ್ಕೆ ಅಥವಾ ಜಗತ್ತಿಗೆ ಬದಲಾವಣೆಯನ್ನು ಮಾಡುವ ಬಯಕೆಯಿಂದ ಬರುತ್ತದೆ.
ಇಷ್ಟವಿರುವ ಕೆಲಸಗಳಲ್ಲಿ ನಿಮ್ಮ ಪ್ರತಿಭೆಯನ್ನು ತೋರಿಸುತ್ತೀರಿ
ನೀವು ಇಷ್ಟಪಡುವ ಮತ್ತು ಆನಂದಿಸುವ ಕೆಲಸವನ್ನು ಮಾಡುವುದು ಬಹುಶಃ ನೀವು ಕಾರ್ಯಗಳನ್ನು ನಿರ್ವಹಿಸುತ್ತಿದ್ದೀರಿ, ವಿಷಯಗಳನ್ನು ನಿರ್ಮಿಸುತ್ತಿದ್ದೀರಿ ಮತ್ತು ನೀವು ನಿಜವಾಗಿಯೂ ಉತ್ತಮವಾಗಿರುವ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದೀರಿ ಎಂದರ್ಥ.
ಇದರರ್ಥ ನೀವು ಯಾವುದೇ ಅರ್ಥ ಅಥವಾ ಉದ್ದೇಶವಿಲ್ಲದ 9 ರಿಂದ 5 ಗಂಟೆಯವರೆಗೆ ಮಾಡುವ ಕೆಲಸಕ್ಕಿಂತ ಭಿನ್ನವಾಗಿ, ದೇವರು ನಿಮಗೆ ನೀಡಿದ ಪ್ರತಿಭೆಗಳನ್ನು ನಿಮ್ಮ ಅತ್ಯುತ್ತಮವಾಗಿ ಬಳಸಿಕೊಳ್ಳುತ್ತೀರಿ ಎಂದರ್ಥ.
ನೀವು ಇಷ್ಟಪಡುವದನ್ನು ಮಾಡುವುದು ಎಂದರೆ ನೀವು ಕೇವಲ ನಿಮ್ಮ ಕೌಶಲ್ಯಗಳನ್ನು ಪ್ರಯೋಗಿಸುತ್ತಿದ್ದೀರಿ ಎಂದರ್ಥ.
ಹೀಗೆ ಮಾಡುವುದರಿಂದ ನೀವು ಇನ್ನಷ್ಟು ಆಶಾವಾದಿಯಾಗುತ್ತೀರಿ
ನಮಗೆ ಇಷ್ಟವಾದ ಕೆಲಸ ಮಾಡುವುದರಿಂದ ನಮ್ಮ ಭವಿಷ್ಯದ ಬಗ್ಗೆ ನಮಗೆ ಹೆಚ್ಚು ಗಮನವನ್ನು ಹರಿಸಲು, ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿಕೊಳ್ಳಲು, ಬರುವ ಅಡೆತಡೆಗಳನ್ನು ಸಮರ್ಥವಾಗಿ ಎದುರಿಸುವ ಧೈರ್ಯವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ವಿಟಮಿನ್ ಡಿ ಕೊರತೆ ಆದ್ರೆ ಏನಾಗುತ್ತೆ? ಮೂಳೆಗಳ ರಕ್ಷಣೆಗೆ ಏನು ಮಾಡಬೇಕು?
ನೀವು ಮಾಡುವ ಕೆಲಸವನ್ನು ಪ್ರೀತಿಸುವುದರಿಂದ ನೀವು ಮಾಡಲು ಬಯಸುವ ಕೆಲಸವನ್ನು ಇನ್ನಷ್ಟು ಚೆನ್ನಾಗಿ ಮಾಡಲು ನಿಮ್ಮನ್ನು ಹೆಚ್ಚು ಪ್ರೇರೇಪಿಸುತ್ತದೆ.
ಕೊನೆಯಲ್ಲಿ, ನೀವು ಮಾಡುವ ಕೆಲಸವನ್ನು ನೀವು ಪ್ರೀತಿಸಿದಾಗ, ಅದು ಕೆಲಸವೆಂದು ಅನಿಸುವುದಿಲ್ಲ. ನೀವು ಇಷ್ಟಪಡುವುದನ್ನು ಮಾಡುವುದು ಜೀವನದಲ್ಲಿ ನಿಜವಾದ ಸಂತೋಷಕ್ಕೆ ಪ್ರಮುಖ ಕೊಡುಗೆ ನೀಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ