Honey Face pack: ಜೇನುತುಪ್ಪದ ಫೇಸ್​ ಪ್ಯಾಕ್ ಬಳಸಿ ನೋಡಿ, ನಿಮ್ಮ ಮುಖ ಆಗುತ್ತೆ ಸಖತ್ ಗ್ಲೋಯಿಂಗ್..!

ಕಚ್ಚಾ ಜೇನುತುಪ್ಪವು ನೈಸರ್ಗಿಕ ಎಕ್ಸ್‌ಪೋಲಿಯೇಟರ್ ಆಗಿದ್ದು, ನಿಮ್ಮ ಚರ್ಮದಲ್ಲಿರುವ ನಿರ್ಜಿವ ಜೀವಕೋಶಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ . ಅದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ, ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಜೇನುತುಪ್ಪ

ಜೇನುತುಪ್ಪ

  • Share this:
ಜೇನುತುಪ್ಪವು(Honey) ಚರ್ಮದ ಹಲವಾರು ಸಮಸ್ಯೆಗಳ ವಿರುದ್ಧ ಹೋರಾಡಬಲ್ಲ ನೈಸರ್ಗಿಕ ಚರ್ಮ ರಕ್ಷಕ. ಯುಎಸ್(US) ಮೂಲದ ನ್ಯಾಶನಲ್ ಲೈಬ್ರೆರಿ ಆಫ್ ಮೆಡಿಸಿನ್‍(National Library of Medicine)ನ ಸಂಶೋಧನಾ ವರದಿಯ ಪ್ರಕಾರ, ಜೇನು ತುಪ್ಪದಲ್ಲಿ ಪ್ರೋಟೀನ್, ಅಮಿನೋ ಆಮ್ಲ, ವಿಟಮಿನ್‍, ಎನ್ಜೈಮ್‌, ಮಿನರಲ್‍ ಮತ್ತು ಚರ್ಮರೋಗ ಚಿಕಿತ್ಸೆಯಲ್ಲಿ ಪ್ರಮುಖವಾಗಿರುವ ಆ್ಯಂಟಿ ಮೈಕ್ರೋಬಿಯಲ್ ಗುಣಲಕ್ಷಣಗಳು ಇವೆ. ಜೇನುತುಪ್ಪ, ಮೊಡವೆ(Acne), ಕಲೆಗಳು(Marks) ಅಥವಾ ಇತರ ಕೆಲವು ಚರ್ಮದ ಸಮಸ್ಯೆ(Skin problems)ಗಳನ್ನು ನಿವಾರಿಸಬಲ್ಲದು. ಕಚ್ಚಾ ಜೇನುತುಪ್ಪವು ನೈಸರ್ಗಿಕ ಎಕ್ಸ್‌ಪೋಲಿಯೇಟರ್ ಆಗಿದ್ದು, ನಿಮ್ಮ ಚರ್ಮದಲ್ಲಿರುವ ನಿರ್ಜಿವ ಜೀವಕೋಶಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ . ಅದು ಚರ್ಮವನ್ನು ಹೈಡ್ರೇಟ್(Skin Hydrate) ಮಾಡುತ್ತದೆ, ಮೊಡವೆಗಳನ್ನು ನಿವಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪ(Glowing Skin)ನ್ನು ನೀಡುತ್ತದೆ.

ಜೇನುತುಪ್ಪವನ್ನು ಉಪಯೋಗಿಸಿ ಮಾಡುವ 5 ಫೇಸ್‍ಪ್ಯಾಕ್‍ಗಳ ಮಾಹಿತಿ ಇಲ್ಲಿದೆ.



1. ಮೊಡವೆಗಳ ನಿವಾರಣೆಗೆ ಜೇನುತುಪ್ಪ , ಲಿಂಬೆ ಹಣ್ಣು ಮತ್ತು ಬೇಕಿಂಗ್ ಸೋಡಾ ಫೇಸ್ ಮಾಸ್ಕ್

ಈ ಫೇಸ್ ಮಾಸ್ಕ್ ತಯಾರಿಸಲು ನಿಮಗೆ ಬೇಕಾಗಿರುವುದು ಒಂದು ಚಮಚ ಲಿಂಬೆ ರಸ, ಒಂದು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಬೇಕಿಂಗ್ ಸೋಡ. ಎಲ್ಲವನ್ನು ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದನ್ನು ಕಣ್ಣಿನ ಸುತ್ತಲಿನ ಭಾಗ ಹೊರತುಪಡಿಸಿ , ಮುಖದ ಎಲ್ಲಾ ಭಾಗಗಳಿಗೂ ಹಚ್ಚಿರಿ. 15 ನಿಮಿಷ ಬಿಟ್ಟು ತೊಳೆಯಿರಿ. ಬೇಕಿಂಗ್ ಸೋಡಾದಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಗುಣಗಳು ಇವೆ. ಲಿಂಬೆಯ ಎಕ್ಸ್‌ಫೋಲಿಯೇಟಿಂಗ್ ಗುಣ ಮತ್ತು ಜೇನು ತುಪ್ಪದ ಮಾಯಿಶ್ಚರೈಸಿಂಗ್ ಗುಣಗಳನ್ನು ಹೊಂದಿರುವ ಈ ಫೇಸ್‍ಫ್ಯಾಕ್ ಮೊಡವೆಗಳ ವಿರುದ್ಧ ಹೋರಾಡುತ್ತದೆ.

2. ಸೂಕ್ಷ್ಮ ಚರ್ಮಕ್ಕಾಗಿ ಜೇನುತುಪ್ಪ, ಗ್ರೀನ್ ಟೀ ಮತ್ತು ಬಾದಾಮಿ ಎಣ್ಣೆಯ ಫೇಸ್‍ಪ್ಯಾಕ್

ಈ ಫೇಸ್‍ಪ್ಯಾಕ್ ತಯಾರಿಸಲು ನಿಮಗೆ ಬೇಕಾಗಿರುವುದು ಒಂದು ಚಮಚ ಜೇನುತುಪ್ಪ, ಒಂದು ಚಮಚ ಗ್ರೀನ್ ಟೀ ಮತ್ತು ಒಂದು ಚಮಚ ಬಾದಾಮಿ ಎಣ್ಣೆ. ಮೂರನ್ನೂ ಒಂದು ಬಟ್ಟಲಿನಲ್ಲಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ. 15 ನಿಮಿಷಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಗ್ರೀನ್ ಟೀ ಮತ್ತು ಜೇನು ತುಪ್ಪದಲ್ಲಿ, ಫ್ರೀ ರ‍್ಯಾಡಿಕಲ್ಸ್ ವಿರುದ್ಧ ಹೋರಾಡುವ ಮತ್ತು ಹಾನಿಗೊಂಡ ಚರ್ಮವನ್ನು ರಿಪೇರಿ ಮಾಡುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಗುಣಗಳು ಇವೆ.

3. ಜೇನುತುಪ್ಪ, ಲಿಂಬೆ ರಸ, ಮೊಸರು ಮತ್ತು ಅರಿಶಿನ ಫೇಸ್‍ಪ್ಯಾಕ್

ಈ ಫೇಸ್‍ಪ್ಯಾಕ್ ತಯಾರಿಸಲು ನಿಮಗೆ ಬೇಕಾಗಿರುವುದು ಒಂದು ಚಮಚ ಜೇನುತುಪ್ಪ, ಒಂದು ಚಮಚ ಲಿಂಬೆರಸ, ಒಂದು ಚಮಚ ಮೊಸರು ಮತ್ತು ಕಾಲು ಚಮಚ ಅರಿಶಿನ ಪುಡಿ. ಅವೆಲ್ಲವನ್ನು ಒಂದು ಬಟ್ಟಲಿನಲ್ಲಿ ಹಾಕಿ ದಪ್ಪಗಿನ ಪೇಸ್ಟ್ ಆಗುವವರೆಗೆ ಮಿಶ್ರ ಮಾಡಿ. ಅದನ್ನು ಮುಖಕ್ಕೆ ಹಚ್ಚಿ , 20 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಅರಶಿನದಲ್ಲಿ ಇರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಅಂಶಗಳು ಚರ್ಮಕ್ಕೆ ಹೊಳಪನ್ನು ನೀಡುತ್ತದೆ. ಜೇನುತುಪ್ಪ ಚರ್ಮಕ್ಕೆ ಹದವಾದ ಬ್ಲೀಚಿಂಗ್ ಪರಿಣಾಮ ನೀಡಿದರೆ, ಮೊಸರು ಮತ್ತು ಲಿಂಬೆರಸ ನಿರ್ಜೀವ ಚರ್ಮ ಹೋಗಲಾಡಿಸಿ, ಚರ್ಮ ಹೊಸ ಜೀವಕೋಶಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

4. ಪೌಷ್ಟಿಕ ಚರ್ಮಕ್ಕಾಗಿ ಜೇನುತುಪ್ಪ ಮತ್ತು ದಾಲ್ಚಿನ್ನಿ ಫೇಸ್‍ಪ್ಯಾಕ್

ಈ ಫೇಸ್‍ಪ್ಯಾಕ್‍ಗಾಗಿ ನಿಮಗೆ ಬೇಕಾಗಿರುವುದು ಒಂದು ಟೇಬಲ್ ಚಮಚ ದಾಲ್ಚಿನ್ನಿ ಪುಡಿ ಮತ್ತು ಎರಡು ಟೇಬಲ್ ಚಮಚ ಜೇನುತುಪ್ಪ. ಇವುಗಳ ಮಿಶ್ರಣವನ್ನು ಮುಖಕ್ಕೆ ಹಚ್ಚಿ , 10 ನಿಮಿಷಗಳ ಬಳಿಕ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ದಾಲ್ಚಿನ್ನಿಯಲ್ಲಿ ಆ್ಯಂಟಿ ಮೇಕ್ರೋಬಿಯಲ್, ಆ್ಯಂಟಿ-ಪ್ಯಾರಸೈಟಿಕ್ , ಆ್ಯಂಟಿ ಆಕ್ಸಿಡೆಂಟ್ ಮತ್ತು ಆ್ಯಂಟಿ ಇನ್‍ಫಲ್ಮೇಟರಿ ಅಂಶಗಳಿವೆ. ಹಾಗಾಗಿ ಜೇನು ತುಪ್ಪ ಮತ್ತು ದಾಲ್ಚಿನ್ನಿ ಪ್ಯಾಕ್ ನಿಮ್ಮ ಮುಖಕ್ಕೆ ಹೊಳಪನ್ನು ನೀಡುತ್ತದೆ.

5. ಚರ್ಮದ ನಿರ್ಜಿವ ಜೀವಕೋಶಗಳನ್ನು ತೆಗೆಯಲು ಜೇನುತುಪ್ಪ ಮತ್ತು ಓಟ್ಸ್ ಫೇಸ್‍ಪ್ಯಾಕ್

ಈ ಫೇಸ್‍ಪ್ಯಾಕ್ ತಯಾರಿಸಲು ನಿಮಗೆ ಬೇಕಾಗಿರುವುದು ಜೇನುತುಪ್ಪ ಮತ್ತು ಒಂದು ಚಮಚ ಹಸಿ ಓಟ್ಸ್. ಎರಡನ್ನು ಮಿಶ್ರ ಮಾಡಿ, ಆ ಪ್ಯಾಕನ್ನು ಮುಖಕ್ಕೆ ಹಚ್ಚಿ. 15 ನಿಮಿಚಗಳ ಬಳಿಕ ಬೆಚ್ಚಗಿನ ನೀರಿನಲ್ಲಿ ಅದ್ದಿದ ಬಟ್ಟೆಯಲ್ಲಿ ಒರೆಸಿ ತೆಗೆಯಿರಿ. ಓಟ್ಸ್‌ನಲ್ಲಿರುವ ಸಪೋನಿನ್ ಎಂಬ ಸಂಯುಕ್ತ ಚರ್ಮದಲ್ಲಿರುವ ಹೆಚ್ಚುವರಿ ಎಣ್ಣೆಯನ್ನು ತೆಗೆಯುತ್ತದೆ ಮತ್ತು ಅದರಲ್ಲಿರುವ ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಅಂಶಗಳು ಚರ್ಮದ ನಿರ್ಜೀವ ಜೀವಕೋಶಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಈ ಫೇಸ್ ಚರ್ಮದ ರಂಧ್ರಗಳನ್ನು ಮುಚ್ಚುವ ಕೊಳಕು ಮತ್ತು ಎಣ್ಣೆಯನ್ನು ತೆಗೆಯಲು ಸಹಾಯ ಮಾಡುತ್ತದೆ.
Published by:Latha CG
First published: