Healthy Food: ಹೆಚ್ಚು ಪ್ರೋಟೀನ್ ಇರುವ ಈ 5 ಆರೋಗ್ಯಕರ ಪದಾರ್ಥಗಳನ್ನು ಮನೆಯಲ್ಲಿಯೇ ಟ್ರೈ ಮಾಡಿ

ವ್ಯಾಯಾಮ ಮತ್ತು ಪ್ರೊಟೀನ್ ಯುಕ್ತ ಆಹಾರ ತೂಕ ಇಳಿಕೆಗೆ ಪ್ರಯೋಜನಕಾರಿ. ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಯಾವ ಭಾರತೀಯ ಆಹಾರವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿದೆಯೇ? ಹಾಗಾದರೆ ನಿಮಗಾಗಿ ಇಲ್ಲಿದೆ ಐದು ಭಾರತೀಯ ಖಾದ್ಯಗಳ ಪಟ್ಟಿ.

ಪ್ರೊಟೀನ್ ಉಳ್ಳ ಆರೋಗ್ಯಕರ ತಿನಿಸು

ಪ್ರೊಟೀನ್ ಉಳ್ಳ ಆರೋಗ್ಯಕರ ತಿನಿಸು

  • Share this:
ತೂಕ ಇಳಿಸಬೇಕೆಂಬ (Weight Loss) ಯೋಜನೆ ರೂಪಿಸುವಾಗ, ಊಟದ ಮೆನುವನ್ನು (Food Menu) ಸಿದ್ಧಪಡಿಸಿಕೊಳ್ಳುತ್ತಿದ್ದೀರಿ ಎಂದುಕೊಳ್ಳಿ, ಯಾವೆಲ್ಲಾ ಆರೋಗ್ಯಕರ ತಿನಿಸುಗಳು (Healthy eats) ಮನಸ್ಸಿಗೆ (Mind) ಬರುತ್ತವೆ? ಅತ್ಯಧಿಕ ಪ್ರೊಟೀನ್ (Highest protein) ಉಳ್ಳ ತಿನಿಸುಗಳು ಸೂಕ್ತ ಎನ್ನುತ್ತಾರೆ ತಜ್ಞರು (Experts). ವ್ಯಾಯಾಮ ಮತ್ತು ಪ್ರೊಟೀನ್ ಯುಕ್ತ ಆಹಾರ (Food) ತೂಕ ಇಳಿಕೆಗೆ ಪ್ರಯೋಜನಕಾರಿ. ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಯಾವ ಭಾರತೀಯ ಆಹಾರವನ್ನು (Indian Food) ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲವಿದೆಯೇ? ಹಾಗಾದರೆ ನಿಮಗಾಗಿ ಇಲ್ಲಿದೆ ಐದು ಭಾರತೀಯ ಖಾದ್ಯಗಳ (Indian dishes) ಪಟ್ಟಿ.

1. ದಲಿಯಾ ಖಿಚಡಿ 
ಇದು ಅತ್ಯಧಿಕ ಪ್ರೊಟೀನ್ ಅನ್ನು ಹೊಂದಿದ್ದು, ಬೆಳಗ್ಗಿನ ಉಪಹಾರ ಮತ್ತು ಮಧ್ಯಾಹ್ನದ ಊಟವಾಗಿ ಸೇವಿಸಬಹುದು.

ಮಾಡುವ ವಿಧಾನ:
• ಕುಕ್ಕರಿನಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ, ಶುಂಠಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಹಾಕಿ ಒಂದು ನಿಮಿಷ ಬಾಡಿಸಿ.
• ಬಳಿಕ ಕತ್ತರಿಸಿದ ಈರುಳ್ಳಿಗಳನ್ನು ಹಾಕಿ, ಹೊಂಬಣ್ಣ ಬರುವ ವರೆಗೆ ಬಾಡಿಸಿ.
• ನಂತರ ಕತ್ತರಿಸಿದ ತರಕಾರಿಗಳನ್ನು ಹಾಕಿ, 2 ರಿಂದ ಮೂರು ನಿಮಿಷ ಬೇಯಿಸಿ.
• ಮಸಾಲೆಗಳನ್ನು ಹಾಕಿ, ಚೆನ್ನಾಗಿ ತಿರುವಿರಿ.
• ಈಗ ತೊಳೆದ ದಲಿಯಾವನ್ನು ಹಾಕಿ, ಚೆನ್ನಾಗಿ ಕಲಸಿ.
• ನೀರು ಸೇರಿಸಿ, ಕುಕ್ಕರ್ ಮುಚ್ಚಿ.
• 2 ರಿಂದ ಮೂರು ನಿಮಿಷ ಬೇಯಿಸಿ.
• 1 ಟೇಬಲ್ ಚಮಚ ಲಿಂಬೆ ರಸ ಸೇರಿಸಿ.
• ನುಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಬಡಿಸಿ.

2. ಪನೀರ್ ಬುರ್ಜಿ
ಇದು ಎಲ್ಲರೂ ಇಷ್ಟಪಡುವ ದಿಢೀರ್ ರೆಸಿಪಿ. ಪನೀರಿನಲ್ಲಿ ಅತ್ಯಧಿಕ ಪ್ರೊಟೀನ್ ಮತ್ತು ಕ್ಯಾಲ್ಸಿಯಂ ಇದೆ. ಸ್ವಲ್ಪ ಕಾರ್ಬೋಹೈಡ್ರೇಟ್‍ಗಳು ಮತ್ತು ಕ್ಯಾಲೋರಿಗಳು ಕೂಡ ಇವೆ.

ಮಾಡುವ ವಿಧಾನ :
• ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಿ, ಜೀರಿಗೆ ಹಾಕಿ.
• ಬಳಿಕ ಈರುಳ್ಳಿಯನ್ನು ಹಾಕಿ, ಹೊಂಬಣ್ಣ ಬರುವ ವರೆಗೆ ಹುರಿಯಿರಿ ಮತ್ತು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ.
• ನುಣ್ಣಗೆ ಕತ್ತರಿಸಿ ಟೊಮ್ಯಾಟೋ, ಉಪ್ಪು ಮತ್ತು ಅರಶಿನವನ್ನು ಸೇರಿಸಿ.
• ಗರಂ ಮಸಾಲಾ ಮತ್ತು ಅಚ್ಚಖಾರದ ಪುಡಿಯನ್ನು ಹಾಕಿ.
• ಕೊನೆಯಲ್ಲಿ ಪುಡಿ ಮಾಡಿದ ಪನೀರ್ ಹಾಕಿ, ಚೆನ್ನಾಗಿ ಕಲಸಿ.
• ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

3. ಓಟ್ಸ್ ಉಪ್ಪಿಟ್ಟು
ಅತ್ಯಧಿಕ ಫೈಬರ್ ಹೊಂದಿರುವ ಓಟ್ಸ್ ಉಪ್ಪಿಟ್ಟು, ತೂಕ ಇಳಿಸಲು ಅತ್ಯಂತ ಪ್ರಯೋಜನಕಾರಿ.

ಇದನ್ನೂ ಓದಿ: Food Recipe: ನೀವು ಡಿಫರೆಂಟ್ ಆಗಿ ಏನಾದ್ರೂ ತಿಂಡಿ ತಯಾರಿಸಬೇಕೇ? ಹಾಗಿದ್ರೆ ಈ ಬನ್ ದೋಸೆ ಒಮ್ಮೆ ಟ್ರೈ ಮಾಡಿ

ಮಾಡುವ ವಿಧಾನ :
• ಪ್ಯಾನ್ ಬಿಸಿ ಮಾಡಿ, ಓಟ್ಸನ್ನು ಎರಡು ನಿಮಿಷ ಹುರಿಯಿರಿ.
• ಬಳಿಕ ಅದನ್ನು ಪ್ಯಾನ್‍ನಿಂದ ತೆಗೆದು, ಬದಿಗಿಡಿ.
• ಪ್ಯಾನ್‍ನಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಹಾಕಿ, ಅದು ಸಿಡಿಯಲು ಆರಂಭಿಸಿದ ಬಳಿಕ, ಕರಿ ಬೇವಿನ ಸೊಪ್ಪು, ಹಸಿ ಮೆಣಸಿನಕಾಯಿ, ಶುಂಠಿ ಸೇರಿಸಿ.
• ಕತ್ತರಿಸಿಟ್ಟುರುವ ಎಲ್ಲಾ ತಕರಾರಿಗಳನ್ನು ಹಾಕಿ, ಮಧ್ಯಮ ಉರಿಯಲ್ಲಿ , 3 ರಿಂದ 4 ನಿಮಿಷ ಬಾಡಿಸಿ.
• ಬಳಿಕ ನೀರು ಮತ್ತು ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ, ಕುದಿಸಿ.
• ಬಳಿಕ ಹುರಿದ ಓಟ್ಸ್ ಅನ್ನು ಹಾಕಿ, ಕಲಸುತ್ತಲೇ ಇರಿ.
• ಓಟ್ಸ್ ಚೆನ್ನಾಗಿ ಬೆಂದು, ನೀರು ಇಂಗುವ ವರೆಗೆ ಮಂದ ಉರಿಯಲ್ಲಿ ಬೇಯಿಸಿ.
• ಸ್ವಲ್ಪ ಲಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ.
• ಒಲೆಯಿಂದ ತೆಗೆದು, 2-3 ನಿಮಿಷದ ಬಳಿಕ ಬಡಿಸಿ.

4. ಪ್ರೊಟೀನ್‍ಯುಕ್ತ ಸಲಾಡ್
ಕಪ್ಪು ಕಡಲೆ ಸಲಾಡ್ ಅತ್ಯಧಿಕ ಪ್ರೊಟೀನ್ ಉಳ್ಳ ತಿನಿಸು.

ಮಾಡುವ ವಿಧಾನ :
• ಕಡಲೇಕಾಳನ್ನು 6 -8 ಗಂಟೆಗಳ ವರೆಗೆ ನೀರಿನಲ್ಲಿ ನೆನೆಸಿ.
• ಬಳಿಕ ಅದನ್ನು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, 6-8 ವಿಸಲ್ ಬರುವ ವರೆಗೆ ಬೇಯಿಸಿ.
• ಬಳಿಕ ನೀರನ್ನು ಬಸಿದು, ಕಾಳುಗಳನ್ನು ಒಂದು ದೊಡ್ಡ ಬೌಲ್‍ಗೆ ಹಾಕಿ.
• ಕತ್ತರಿಸಿದ ಈರುಳ್ಳಿ, ಟೊಮ್ಯಾಟೋ, ಸೌತೆಕಾಯಿ, ಸ್ಪ್ರಿಂಗ್ ಆನಿಯನ್, ಹಸಿ ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
• ಬ್ಲಾಕ್ ಸಾಲ್ಟ್, ಚಾಟ್ ಮಸಾಲ ಮತ್ತು 1-2 ಟೇಬಲ್ ಸ್ಪೂನ್ ಲಿಂಬೆ ರಸ ಸೇರಿಸಿ.
• ಎಲ್ಲವನ್ನು ಚೆನ್ನಾಗಿ ಕಲಸಿ, ಕಡಲೇಕಾಳು ಸಲಾಡ್ ಸಿದ್ಧವಾಗುತ್ತದೆ.

5. ಕಡಿಮೆ ಕೊಬ್ಬುಳ್ಳ ಚಿಕನ್ ಶವರ್ಮ
ಇದು, ಸಣ್ಣದಾಗಿ ಕತ್ತರಿಸಿದ ಚಿಕನ್ ತುಂಡುಗಳು, ಟೊಮ್ಯಾಟೋ, ಈರುಳ್ಳಿ, ಮೆಣಸಿನಕಾಯಿ ಮತ್ತು ಮೊಸರಿನ ಬೇಸ್ ಉಳ್ಳ ಸಾಸ್ ಅನ್ನು ಹೊಂದಿರುವ ಅತ್ಯಧಿಕ ಪ್ರೊಟೀನ್ ಉಳ್ಳ ಆರೋಗ್ಯಕರ ಖಾದ್ಯ.

ಇದನ್ನೂ ಓದಿ:  Veg Omelette: ನೀವು ಮೊಟ್ಟೆ ಆಮ್ಲೆಟ್ ತಿನ್ನಲ್ವಾ? ಹಾಗಿದ್ರೆ ಇಲ್ಲಿದೆ ನಿಮಗಾಗಿ ಸಿಂಪಲ್ ವೆಜ್ ಎಗ್‌ಲೆಸ್ ಆಮ್ಲೆಟ್

ಮಾಡುವ ವಿಧಾನ:
• ಚಿಕನ್ ತುಂಡುಗಳನ್ನು ಮ್ಯಾರಿನೆಟ್ ಮಾಡಿ. ಕನಿಷ್ಟ ನಾಲ್ಕು ಗಂಟೆಗಳ ವರೆಗೆ ಇಡಿ.
• ಚಿಕನ್ ಚೆನ್ನಾಗಿ ಒಣಗುವ ವರೆಗೆ ಬೇಯಿಸಿ. ಬಳಿಕ ಅದನ್ನು ಪೀಟಾ ಬ್ರೆಡ್ ಜೊತೆ ಅಥವಾ ಟೊಮ್ಯಾಟೋ, ಲೆಟ್ಟಸ್, ಕತ್ತರಿಸಿದ ಈರುಳ್ಳಿ, ಹಸಿರು ಮೆಣಸಿನಕಾಯಿ, ಪಾಸ್ರ್ಲೆ ಮತ್ತು ಸಾಸ್ ಜೊತೆ ರೋಲ್ ಮಾಡಿ, ಬಡಿಸಿ.
Published by:Ashwini Prabhu
First published: