ಅಪ್ಪಿತಪ್ಪಿಯೂ ತಡರಾತ್ರಿ ಈ ಆಹಾರ ಸೇವಿಸಬೇಡಿ: ಗಂಭೀರ ಸಮಸ್ಯೆ ಎದುರಿಸಬೇಕಾದೀತು

ತಡರಾತ್ರಿ ಹಸಿವಾಯಿತೆಂದು ಪಿಜ್ಜಾ ಸೇವಿಸುವ ಅನೇಕ ಮಂದಿ ಇರುತ್ತಾರೆ. ಆದರೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗುವ ಜತೆಗೆ ಹೃದಯ ಮತ್ತು ನಿದ್ದೆಯ ಸಮಸ್ಯೆಯೂ ಕಾಡುತ್ತದೆ.

ತಡರಾತ್ರಿ ಹಸಿವಾಯಿತೆಂದು ಪಿಜ್ಜಾ ಸೇವಿಸುವ ಅನೇಕ ಮಂದಿ ಇರುತ್ತಾರೆ. ಆದರೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗುವ ಜತೆಗೆ ಹೃದಯ ಮತ್ತು ನಿದ್ದೆಯ ಸಮಸ್ಯೆಯೂ ಕಾಡುತ್ತದೆ.

ತಡರಾತ್ರಿ ಹಸಿವಾಯಿತೆಂದು ಪಿಜ್ಜಾ ಸೇವಿಸುವ ಅನೇಕ ಮಂದಿ ಇರುತ್ತಾರೆ. ಆದರೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗುವ ಜತೆಗೆ ಹೃದಯ ಮತ್ತು ನಿದ್ದೆಯ ಸಮಸ್ಯೆಯೂ ಕಾಡುತ್ತದೆ.

 • Share this:
  ಹೊಟ್ಟೆ ಹಸಿವಾಯಿತು ಎಂದಾಗ ಯಾವ ಸಮಯ ಎಂಬುದನ್ನು ನೋಡದೆ ಸಿಕ್ಕಿ ಸಿಕ್ಕ ಆಹಾರ ತಿನ್ನುವ ಮಂದಿಯೇ ಹೆಚ್ಚು. ನಡುರಾತ್ರಿಯೇ  ಕೆಲವರು ಹಸಿವಾಯಿತೆಂದು ನಿದ್ದೆಯಿಂದ ಎದ್ದು ಮನೆಯ ಡಬ್ಬದಲ್ಲಿ ಅಥವಾ ಫ್ರಿಜ್​ನಲ್ಲಿ ಏನಾದರು ಇದೆಯೇ ಎಂದು ಹುಡುಕಿ ತಿನ್ನುತ್ತಾರೆ. ಆದರೆ ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ತಡರಾತ್ರಿ ಆಹಾರ ಸೇವಿಸುವ ಅಭ್ಯಾಸ ಇಟ್ಟುಕೊಳ್ಳಬೇಡಿ.

  ತಜ್ಞರು ನಡೆಸಿದ ಅಧ್ಯಯನದ ಪ್ರಕಾರ, ತಡ ರಾತ್ರಿ ಆಹಾರ ಸೇವಿಸುವ ಅಭ್ಯಾಸ ಇರುವವರು ನಿದ್ದೆಯ ಸಮಸ್ಯೆಯಿಂದ ಬಳಲುತ್ತಾರೆ. ಅಲ್ಲದೆ ಮುಂದೆ ಆರೋಗ್ಯ ಸಮಸ್ಯೆಯು ಕಾಡಬಹುದು ಎಂದು ತಿಳಿದುಬಂದಿದೆ.

  ತಡರಾತ್ರಿ ಆಹಾರ ಸೇವಿಸಿದರೆ ಹೊಟ್ಟೆಯಲ್ಲಿ ಅಜೀರ್ಣ, ಎದೆಯುರಿ, ಬೆವರುವಿಕೆ ಸೇರಿದಂತೆ ಕೆಲ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿ ತಪ್ಪಿಯು ತಡರಾತ್ರಿ ಹಸಿವಾಯಿತೆಂದು ಈ ಆಹಾರಗಳನ್ನು ಮಾತ್ರ ಸೇವಿಸಬೇಡಿ.

  ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಈ ಆಹಾರಗಳ ಸೇವನೆ ಜೀವಕ್ಕೆ ತಂದೀತು ಆಪತ್ತು

  ಸಿಹಿತಿಂಡಿ: ತಡರಾತ್ರಿ ಸಿಹಿತಿಂಡಿಗಳ ಸೇವನೆಯಿಂದ ನಿದ್ರಾಭಂಗವಾಗುತ್ತದೆ. ಅದರಲ್ಲೂ ಚಾಕೊಲೇಟ್ ಸೇವನೆ ಒಳ್ಳೆಯದಲ್ಲ. ಇದರಿಂದ ದೇಹದಲ್ಲಿ ಕೊಬ್ಬು ಸೇರಿ ಬೊಜ್ಜು ಬೆಳೆಯುತ್ತದೆ.

  ಮಸಾಲೆಯುಕ್ತ ಆಹಾರ: ಹೆಚ್ಚು ಮಸಾಲೆಯುಕ್ತ ಆಹಾರ ಅಥವಾ ಜಂಕ್ ಫುಡ್ ತಡರಾತ್ರಿ ಸೇವಿಸುವುದರಿಂದ ಎಸಿಡಿಟಿ, ಗ್ಯಾಸ್ಟಿಕ್ ಸಮಸ್ಯೆ ಎದುರಿಸ ಬೇಕಾಗುತ್ತದೆ.

   ಚಹಾ ಅಥವಾ ಕಾಫಿ ಸೇವನೆ: ತಡರಾತ್ರಿ ಮಲಗುವ ಸಮಯ ಅಥವಾ ನಡುರಾತ್ರಿ ಎದ್ದು ಚಹಾ ಅಥವಾ ಕಾಫಿ ಸೇವಿಸುವ ಅಭ್ಯಾಸ ಕೆಲವರಿಗೆ ಇರುತ್ತದೆ. ಆದರೆ ಇದನ್ನು ಸೇವಿಸುವುದರಿಂದ ನಿದ್ದೆ ಬರಲಾರದು. ಪದೇ ಪದೇ ಮೂತ್ರ ವಿಸರ್ಜಿಸಬೇಕಾಗಿ ಬರುತ್ತದೆ.

  ರೆಡ್ ಮಿಟ್: ಇದು ದೇಹದಲ್ಲಿ ನೈಸರ್ಗಿಕ ಪ್ರಕ್ರಿಯೆಯನ್ನು ಹೆಚ್ಚಿಸುವ ಕಾರಣ ತೀವ್ರ ಚಡಪಡಿಸುವಂತೆ ಮಾಡುತ್ತದೆ.

  ನಿಮ್ಮ ಪ್ರೇಮ ಸಂಬಂಧ ಮದುವೆಯವರೆಗೂ ತಲುಪುತ್ತಾ?; ಹೀಗೆ ತಿಳಿದುಕೊಳ್ಳಿ

  ಕೊಬ್ಬಿನಂಶದ ಆಹಾರ: ತಡರಾತ್ರಿ ಹಸಿವಾಯಿತೆಂದು ಪಿಜ್ಜಾ ಸೇವಿಸುವ ಅನೇಕ ಮಂದಿ ಇರುತ್ತಾರೆ. ಆದರೆ ಇದು ತೂಕ ಹೆಚ್ಚಳಕ್ಕೆ ಕಾರಣವಾಗುವ ಜತೆಗೆ ಹೃದಯ ಮತ್ತು ನಿದ್ದೆಯ ಸಮಸ್ಯೆಯೂ ಕಾಡುತ್ತದೆ. ಅಲ್ಲದೆ ಐಸ್ ಕ್ರೀಂ, ಕೇಕ್ ಅಥವಾ ಸ್ಯಾಂಡ್​ವಿಚ್ ಸೇವನೆ ಮಾಡಿದರೆ, ಇದರಲ್ಲಿ ಕೊಬ್ಬಿನಂಶ ಅಧಿಕವಿದ್ದು ಬೇಗನೆ ಜೀರ್ಣವಾಗುವುದಿಲ್ಲ.
  First published: